ಯಶಸ್ಸಿನ ಚುಕ್ಕಾಣಿ, ಉದಾಹರಣೆಯೊಂದಿಗೆ ಮಾರ್ಗದರ್ಶನ
ಹಣಕಾಸನ್ನು ಅಕ್ಸೆಸ್ ಮಾಡುವ ಮೂಲಕ ಮತ್ತು ರಾಷ್ಟ್ರದ ಬೆಳವಣಿಗೆಯ ಕಥೆಯಲ್ಲಿ ಪರಿಣಾಮ ಬೀರುವ ಮೂಲಕ ನಿಮ್ಮನ್ನು ಸಶಕ್ತಗೊಳಿಸಲು ನಮಗೆ ಸ್ಫೂರ್ತಿ ನೀಡುವ ನಮ್ಮ ದೂರದೃಷ್ಟಿಯ ನಾಯಕರನ್ನು ಭೇಟಿ ಮಾಡಿ.
ರಿಟೇಲ್ ಅಸೆಟ್ಗಳು, ಇನ್ಶೂರೆನ್ಸ್, ಕಾರ್ಡ್ಗಳು ಮತ್ತು ವೆಲ್ತ್ ಮ್ಯಾನೇಜ್ಮೆಂಟ್ನಂತಹ ವೈವಿಧ್ಯಮಯ ಹಣಕಾಸು ಡೊಮೇನ್ಗಳಲ್ಲಿ 25 ವರ್ಷಗಳಿಗಿಂತ ಹೆಚ್ಚಿನ ಅನುಭವದೊಂದಿಗೆ, ನಮ್ಮ ಸಿಇಒ, ಆಶಿಷ್ ಸಪ್ರಾ ವಿಸ್ತಾರವಾದ ಡಿಜಿಟೈಸೇಶನ್, ವರ್ಧಿತ ಗ್ರಾಹಕರ ಸ್ವಾಧೀನ ಮತ್ತು ಸಮಗ್ರ ಬೆಳವಣಿಗೆಯ ಪರಿವರ್ತನಾತ್ಮಕ ಹಂತವಾಗಿ ಟಿವಿಎಸ್ ಕ್ರೆಡಿಟ್ ಅನ್ನು ಮುನ್ನಡೆಸುತ್ತಿದ್ದಾರೆ. ಲಾಭ ಮತ್ತು ನಷ್ಟ (ಪಿ&ಎಲ್) ನಿರ್ವಹಣೆ, ಡಿಜಿಟಲ್ ತೊಡಗುವಿಕೆಗಳು, ಹಿರಿಯ ಪಾಲುದಾರ ನಿರ್ವಹಣೆ ಮತ್ತು ಲಾಭಕ್ಕಾಗಿ ವ್ಯವಹಾರಗಳಿಗೆ ಮಾರ್ಗದರ್ಶನ ನೀಡುವಲ್ಲಿ ಅವರ ವಿಶಾಲ ಅನುಭವವು ಟಿವಿಎಸ್ ಕ್ರೆಡಿಟ್ ಉಜ್ವಲ ಭವಿಷ್ಯದ ಪಥವನ್ನು ರೂಪಿಸುತ್ತಿದೆ. ಅವರ ಮಾರ್ಗದರ್ಶನದ ಅಡಿಯಲ್ಲಿ, ಸಂಸ್ಥೆಯ ಒಟ್ಟು ಆದಾಯವು ಹಿಂದಿನ ವರ್ಷಕ್ಕಿಂತ 23 ನೆ ಹಣಕಾಸು ವರ್ಷದಲ್ಲಿ 51% ರಷ್ಟು ಹೆಚ್ಚಾಗಿದೆ. ಕಾರ್ಯಸ್ಥಳದ ಸಂಸ್ಕೃತಿ ಮೌಲ್ಯಮಾಪನದಲ್ಲಿ 'ಚಿನ್ನದ ಗುಣಮಟ್ಟ' ಎಂಬ ಉತ್ತಮ ಸ್ಥಳದಿಂದ ಕಾರ್ಯ ಸಂಸ್ಥೆಗೆ 'ಕೆಲಸ ಮಾಡಲು ಉತ್ತಮ ಸ್ಥಳ' ಎಂದು ಸಂಸ್ಥೆಯನ್ನು ಗುರುತಿಸಲಾಗಿದೆ.
ನಮ್ಮೊಂದಿಗೆ ಸೇರಿಕೊಳ್ಳುವ ಮೊದಲು, ಆಶಿಷ್ ಅವರು ಬಜಾಜ್ ಗ್ರೂಪ್ಗೆ 14 ವರ್ಷಗಳ ಪರಿಣತಿಯೊಂದಿಗೆ, ಹೌಸಿಂಗ್ ಫೈನಾನ್ಸ್, ಜನರಲ್ ಇನ್ಶೂರೆನ್ಸ್ ಮತ್ತು ಎನ್ಬಿಎಫ್ಸಿ ವಲಯಗಳಲ್ಲಿ ಪ್ರಮುಖ ಕಾರ್ಯಾಚರಣೆಗಳಿಗೆ ಕೊಡುಗೆ ನೀಡಿದ್ದಾರೆ. ಅವರ ವೃತ್ತಿಪರ ಪ್ರಯಾಣವು ಅಮೆರಿಕನ್ ಎಕ್ಸ್ಪ್ರೆಸ್ ಮತ್ತು ಎಚ್ಎಸ್ಬಿಸಿ ಯಲ್ಲಿ ಮೌಲ್ಯಯುತ ಅನುಭವಗಳನ್ನು ಒಳಗೊಂಡಿದೆ. ಅವರು ಇನ್ಸೀಡ್, ಫೌಂಟೇನ್ಬ್ಲೂನಿಂದಲೂ ಸುಧಾರಿತ ಮ್ಯಾನೇಜ್ಮೆಂಟ್ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ್ದಾರೆ.
ರೂಪಾ ಸಂಪತ್ ಕುಮಾರ್ ಅಕೌಂಟಿಂಗ್ ಪರಿವರ್ತನೆಗಳು, ಟ್ರೆಜರಿ ಮ್ಯಾನೇಜ್ಮೆಂಟ್, ಸಂಸ್ಥೆಯನ್ನು ಕಟ್ಟುವುದು, ಆಡಳಿತ ಮತ್ತು ಪಾಲುದಾರರ ತೊಡಗುವಿಕೆಯನ್ನು ನಿರ್ವಹಿಸುವಲ್ಲಿ ಪರಿಣತಿ ಹೊಂದಿರುವ ಅನುಭವಿ ಹಣಕಾಸು ವೃತ್ತಿಪರರಾಗಿದ್ದಾರೆ.
ರೂಪಾ ಅವರು ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು, ಭಾರತದಲ್ಲಿ 20 ವರ್ಷಗಳ ಅನುಭವವನ್ನು ಹೊಂದಿದ್ದಾರೆ ಮತ್ತು ಯು.ಎಸ್.ಎ ಯಲ್ಲಿ ಪ್ರಮಾಣೀಕೃತ ಪಬ್ಲಿಕ್ ಅಕೌಂಟೆಂಟ್ ಆಗಿದ್ದರು. ಈ ಮೊದಲು, ಅವರು ಹಿಂದುಜಾ ಹೌಸಿಂಗ್ ಫೈನಾನ್ಸ್ ಮತ್ತು ಹಿಂದುಜಾ ಲೇಲ್ಯಾಂಡ್ ಫೈನಾನ್ಸ್ ಲಿಮಿಟೆಡ್ನಲ್ಲಿ ಹಣಕಾಸಿನ ಮುಖ್ಯಸ್ಥರಾಗಿದ್ದರು, ಅಲ್ಲಿ ಅವರು ಹಣಕಾಸು ಮತ್ತು ಟ್ರಜರಿಯನ್ನು ನಿರ್ವಹಿಸಿದ್ದರು. ಅವರು ಪ್ರೈಸ್ ವಾಟರ್ಹೌಸ್ (ಪಿಡಬ್ಲ್ಯೂಸಿ) ಮತ್ತು ಐಸಿಐಸಿಐ ಬ್ಯಾಂಕಿನೊಂದಿಗೆ ಕೂಡ ಕೆಲಸ ಮಾಡಿದ್ದಾರೆ.
ಅನಂತಕೃಷ್ಣನ್ ಆರ್ ಅವರು ಉತ್ಸಾಹಿ ಮತ್ತು ಅನುಭವಿ ಹಣಕಾಸು ಸೇವಾ ವೃತ್ತಿಪರರಾಗಿದ್ದು, ವಿವಿಧ ಭೌಗೋಳಿಕ ಪ್ರದೇಶಗಳು ಮತ್ತು ವಿಭಾಗಗಳಲ್ಲಿ ರಿಟೇಲ್ ಕನ್ಸ್ಯೂಮರ್ ಸಾಲ ನೀಡುವಿಕೆಯಲ್ಲಿ 25 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಆರಂಭದಿಂದ ಅವರು ಟಿವಿಎಸ್ ಕ್ರೆಡಿಟ್ನ ಭಾಗವಾಗಿದ್ದಾರೆ, ಚಿಲ್ಲರೆ ಮತ್ತು ಕನ್ಸ್ಯೂಮರ್ ಬಿಸಿನೆಸ್ ಕ್ರೆಡಿಟ್ ಮುಖ್ಯಸ್ಥರಾಗಿ ಮತ್ತು ಲಾಭದಾಯಕ ಬಿಸಿನೆಸ್ನ ವರ್ಟಿಕಲ್ಗಳ ಸ್ಥಾಪನೆ, ಸ್ಕೇಲಿಂಗ್ ಆಪರೇಶನ್ಗಳು, ನಮ್ಮ ಪೋರ್ಟ್ಪೋಲಿಯೋವನ್ನು ಬೆಳೆಸುವುದು ಮತ್ತು ನಮ್ಮ ಹೆಜ್ಜೆಗುರುತನ್ನು ವಿಸ್ತರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶ್ರೀ ಅನಂತಕೃಷ್ಣನ್ ಅವರು ನಮ್ಮ ಕ್ರೆಡಿಟ್ ಮತ್ತು ರಿಸ್ಕ್ ಪ್ರಕ್ರಿಯೆಗಳು ಮತ್ತು ಕಾರ್ಯಾಚರಣೆಗಳನ್ನು ಉತ್ತಮಗೊಳಿಸಿದ್ದಾರೆ, ಕ್ರಾಸ್-ಸೆಲ್ಲಿಂಗ್ ಮತ್ತು ಡಿಜಿಟಲ್ ಫಸ್ಟ್ ಬಿಸಿನೆಸ್ಗಳನ್ನು ಉತ್ತೇಜಿಸಿದ್ದಾರೆ.
ಟಿವಿಎಸ್ ಕ್ರೆಡಿಟ್ನಲ್ಲಿ, ಶ್ರೀ ಅನಂತಕೃಷ್ಣನ್ ವಿವಿಧ ಪ್ರಾಡಕ್ಟ್ ಕೆಟಗರಿಗಳಲ್ಲಿ ಬಿಸಿನೆಸ್ ಸ್ಕೇಲ್-ಅಪ್ಗಳನ್ನು ನಿರ್ವಹಿಸಿದ್ದಾರೆ ಅವುಗಳೆಂದರೆ - ಟೂ ವೀಲರ್ ಲೋನ್ಗಳು, ತ್ರಿ ವೀಲರ್ ಲೋನ್ಗಳು, ಗೃಹೋಪಯೋಗಿ ವಸ್ತುಗಳ ಲೋನ್ಗಳು, ಬಳಸಿದ ಕಾರು ಲೋನ್ಗಳು ಮತ್ತು ಪರ್ಸನಲ್ ಲೋನ್ಗಳು. ಟಿವಿಎಸ್ ಕ್ರೆಡಿಟ್ಗೆ ಸೇರುವ ಮೊದಲು, ಅವರು ಬಜಾಜ್ ಫಿನ್ಸರ್ವ್ ಮತ್ತು ಚೋಲಾ ಡಿಬಿಎಸ್ ನೊಂದಿಗೆ ಸಹಭಾಗಿಯಾಗಿದ್ದರು. ಅವರು ಭಾರತೀಯರ್ ವಿಶ್ವವಿದ್ಯಾಲಯದಿಂದ ಎಂಬಿಎ ಮತ್ತು ಗ್ರೇಟ್ ಲೇಕ್ಸ್ ಮತ್ತು ಎಕ್ಸ್ಎಲ್ಆರ್ಐ ನಿಂದ ವಿಶ್ಲೇಷಣಾ ಪ್ರಮಾಣಪತ್ರವನ್ನು ಹೊಂದಿದ್ದಾರೆ.
ಟೂ ವೀಲರ್ ಮತ್ತು ಬಳಸಿದ ಕಾರುಗಳ ರಿಟೇಲ್ ಬಿಸಿನೆಸ್ ವಿಂಗ್ ಅನ್ನು ಮುನ್ನಡೆಸುವ ಮುರಳೀಧರ್ ಶ್ರೀಪತಿ ಅವರು 15 ಪ್ರಮುಖ ಭಾರತೀಯ ರಾಜ್ಯಗಳಲ್ಲಿ 30 ವರ್ಷಗಳಿಗಿಂತ ಹೆಚ್ಚು ಕಾರ್ಯನಿರ್ವಹಣೆಯ ಪರಿಣತಿಯನ್ನು ಹೊಂದಿರುವ ಅನುಭವಿ ಮತ್ತು ಬಹುಮುಖ ವೃತ್ತಿಪರರಾಗಿದ್ದಾರೆ. ಈ ಮೊದಲು ಅವರು ಸುಂದರಂ ಫೈನಾನ್ಸ್ ಚೋಲಾ ವಿಎಫ್ ಮತ್ತು ಬಿಎಎಫ್ಎಲ್ ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಸೇಲ್ಸ್, ಸಂಗ್ರಹಣೆಗಳು, ಕ್ರೆಡಿಟ್, ಬಿಸಿನೆಸ್ ಕಮರ್ಷಿಯಲ್ ವಾಹನಗಳು, ಹೊಸ ಕಾರುಗಳು, ಬಳಸಿದ ಕಾರುಗಳು, ಟೂ ವೀಲರ್ಗಳು, ಕಾರ್ಪೊರೇಟ್ ಲೀಸಿಂಗ್, ಗೃಹೋಪಯೋಗಿ ವಸ್ತುಗಳು, ಆಫೀಸ್ ಆಟೋಮೇಶನ್ ಉಪಕರಣಗಳು ಮತ್ತು ವೈದ್ಯಕೀಯ ಉಪಕರಣಗಳಿಗೆ ಹಣಕಾಸು ಒದಗಿಸುವುದು ಇತ್ಯಾದಿ ಅವರು ತಮ್ಮ ಕೈಯಾರೆ ಪ್ರಯತ್ನಿಸಿದ ಕೆಲವು ಕಾರ್ಯಗಳಾಗಿವೆ.
ಅವರ ಪ್ರಾಥಮಿಕ ಸಾಮರ್ಥ್ಯಗಳು ಕ್ರೈಸಿಸ್ ಮ್ಯಾನೇಜ್ಮೆಂಟ್, ಸ್ಟಾರ್ಟಪ್ ಮತ್ತು ನಿರ್ಮಾಣ ಕಾರ್ಯಗಳನ್ನು ಒಳಗೊಂಡಿವೆ. ಮದ್ರಾಸ್ ವಿಶ್ವವಿದ್ಯಾಲಯದ ಪದವೀಧರರಾಗಿ, ಅವರು ಚೆನ್ನೈನ ಗ್ರೇಟ್ ಲೇಕ್ಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಿಂದ ಬಿಸಿನೆಸ್ ಅನಾಲಿಟಿಕ್ಸ್ ಸರ್ಟಿಫಿಕೇಶನ್ ಅನ್ನು ಕೂಡ ಹೊಂದಿದ್ದಾರೆ.
ಸೌಜನ್ಯ ಅಲೂರಿ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ನಿಂದ ತನ್ನ ಎಂಬಿಎ ಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ಪ್ರಮುಖ ತಂತ್ರಜ್ಞಾನ ದೃಷ್ಟಿಕೋನ ಮತ್ತು ಕಾರ್ಯತಂತ್ರದಲ್ಲಿ 25 ವರ್ಷಗಳ ಅನುಭವವನ್ನು ಹೊಂದಿದ್ದಾರೆ, ಅಲ್ಲದೆ ಪ್ರಾಡಕ್ಟ್ ನಿರ್ವಹಣೆ, ಎಂಜಿನಿಯರಿಂಗ್, ಕಾರ್ಯಾಚರಣೆಗಳು, ಚುರುಕಾದ ಟ್ರಾನ್ಸ್ಫಾರ್ಮೇಶನ್, ಕ್ಲೌಡ್ ಮತ್ತು ಸೈಬರ್ ಭದ್ರತೆಯಂತಹ ಅನೇಕ ತಾಂತ್ರಿಕ ವಿಭಾಗಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಅವರು ಕಂಪ್ಯೂಟರ್ ಅಪ್ಲಿಕೇಶನ್ಸ್ನಲ್ಲಿ ಮಾಸ್ಟರ್ ಆಫ್ ಸೈನ್ಸ್ ಅನ್ನು ಕೂಡ ಹೊಂದಿದ್ದಾರೆ.
ಟಿವಿಎಸ್ ಕ್ರೆಡಿಟ್ನಲ್ಲಿ ಸೌಜನ್ಯ ಅವರು ಕಂಪನಿಯ ಟೆಕ್ ಮತ್ತು ಡಿಜಿಟಲ್ ತಂತ್ರ ರಚನೆ ಮೇಲ್ವಿಚಾರಕರಾಗಿದ್ದಾರೆ. ಟಿವಿಎಸ್ ಕ್ರೆಡಿಟ್ಗೆ ಸೇರುವ ಮೊದಲು, ಅವರು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್ಪಿಸಿಐ) ನಲ್ಲಿ ಡಿಜಿಟಲ್ ತಂತ್ರಜ್ಞಾನದ ಮುಖ್ಯಸ್ಥರಾಗಿದ್ದರು, ಅಲ್ಲಿ ಅವರು ಮೊಬೈಲ್ ಪಾವತಿ ವೇದಿಕೆಗಳು, ಡೇಟಾ ವೇದಿಕೆಗಳು, ಎಐ ಮಾದರಿಗಳು, ಕ್ಲೌಡ್ ಟ್ರಾನ್ಸ್ಫಾರ್ಮೇಶನ್ ಮತ್ತು ಬ್ಲಾಕ್ ಚೈನ್ ಸೆಟಲ್ಮೆಂಟ್ ವ್ಯವಸ್ಥೆಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಅವರು ಜಿಇ ಡಿಜಿಟಲ್, ಸಿಫೈ ಮತ್ತು ಅಕ್ಸೆಂಚರ್ನೊಂದಿಗೆ ಕೂಡ ಕೆಲಸ ಮಾಡಿದ್ದಾರೆ. ಅವರ ವೈಯಕ್ತಿಕ ಆಸಕ್ತಿಗಳು ಪರಿಸರ ಮತ್ತು ಸುಸ್ಥಿರತೆಯ ಸುತ್ತ ಇದೆ ಮತ್ತು ಓದುವುದು ಕೂಡ ಆಗಿದೆ.
ಶೆಲ್ವಿನ್ ಮ್ಯಾಥ್ಯೂಸ್ ಒಬ್ಬರು ಚಾರ್ಟರ್ಡ್ ಅಕೌಂಟೆಂಟ್ (ಐಸಿಎಐ) ಮತ್ತು ವೆಚ್ಚ ಮತ್ತು ನಿರ್ವಹಣಾ ಅಕೌಂಟೆಂಟ್ (ಐಸಿಎಂಎಐ) ಆಗಿದ್ದು, ಹಣಕಾಸು ಸೇವೆಗಳ ಉದ್ಯಮದಲ್ಲಿ 21 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಅವರು ಟಿವಿಎಸ್ ಕ್ರೆಡಿಟ್ನಲ್ಲಿ ಬಲವಾದ ಉದ್ಯಮ ಮಟ್ಟದ ಅಪಾಯ ನಿರ್ವಹಣಾ ಚೌಕಟ್ಟನ್ನು ಅಭಿವೃದ್ಧಿಪಡಿಸುವುದನ್ನು ಮುನ್ನಡೆಸುತ್ತಿದ್ದಾರೆ. ಅವರ ಪ್ರಮುಖ ಅನುಭವದ ಕ್ಷೇತ್ರಗಳೆಂದರೆ ಸಾಲ ನೀಡುವ ಉದ್ಯಮಕ್ಕಾಗಿ ಉದ್ಯಮ ಅಪಾಯ ನಿರ್ವಹಣೆ (ಇಆರ್ಎಂ) ಚೌಕಟ್ಟನ್ನು ಅಭಿವೃದ್ಧಿಪಡಿಸುವುದು, ಕೆವೈಸಿ-ಎಎಂಎಲ್ನಿಯಮಗಳನ್ನು ಅನುಷ್ಠಾನಗೊಳಿಸುವುದು ಮತ್ತು ಎನ್ಬಿಎಫ್ಸಿ ಗಳಿಗಾಗಿ ಆರ್ಬಿಐ ಮಾರ್ಗಸೂಚಿಗಳೊಂದಿಗೆ ಅಪಾಯ ನಿರ್ವಹಣಾ ಅಭ್ಯಾಸಗಳನ್ನು ಒಟ್ಟುಗೂಡಿಸುವುದು ಸೇರಿವೆ. ಅವರು ಐಐಎಂ ಬೆಂಗಳೂರಿನಿಂದ ಉದ್ಯಮ ಅಪಾಯ ನಿರ್ವಹಣಾ ಸರ್ಟಿಫಿಕೇಶನ್ ಅನ್ನು ಪಡೆದುಕೊಂಡಿದ್ದಾರೆ. ಅವರು ಐಎಸ್ಒ 27001 (ಮಾಹಿತಿ ಭದ್ರತಾ ನಿರ್ವಹಣಾ ವ್ಯವಸ್ಥೆಗಳು) ಮತ್ತು ಐಎಸ್ಒ 22301 (ಬಿಸಿನೆಸ್ ಮುಂದುವರಿಕೆ ನಿರ್ವಹಣಾ ವ್ಯವಸ್ಥೆಗಳು) ಇದರ ಪ್ರಮಾಣೀಕೃತ ಆಂತರಿಕ ಆಡಿಟರ್ ಆಗಿದ್ದಾರೆ. ಅವರು ಉಗ್ರೋ ಕ್ಯಾಪಿಟಲ್ ಲಿಮಿಟೆಡ್, ಐಸಿಐಸಿಐ ಬ್ಯಾಂಕ್,ಎಲ್&ಟಿ ಫೈನಾನ್ಸ್ ಮತ್ತು ರಿಲಾಯನ್ಸ್ ಕಮರ್ಷಿಯಲ್ ಫೈನಾನ್ಸ್ (ರಿಲಾಯನ್ಸ್ ಕ್ಯಾಪಿಟಲ್ನ ಅಂಗಸಂಸ್ಥೆ) ನಂತಹ ನಿಗಮಗಳಿಗೆ ಅಪಾಯ ನಿರ್ವಹಣೆಯ ಹಲವಾರು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಪ್ರಶಾಂತ್ ಅವರು ಸಿವಿಲ್ ಇಂಜಿನಿಯರಿಂಗ್ನಲ್ಲಿ ಪದವಿ ಮತ್ತು ಪುಣೆಯ ಸಿಂಬಯೋಸಿಸ್ ಇನ್ಸ್ಟಿಟ್ಯೂಟ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ನಿಂದ (ಎಸ್ಐಬಿಎಂ) ಎಂಬಿಎ ಪದವಿ ಪಡೆದಿದ್ದಾರೆ. ಅವರು ಅಮೆರಿಕಾದ ಎಚ್ಆರ್ ಮ್ಯಾನೇಜ್ಮೆಂಟ್ ಸೊಸೈಟಿಯಿಂದ ಎಸ್ಸಿಪಿ (ಸೀನಿಯರ್ ಸರ್ಟಿಫೈಡ್ ಪ್ರೊಫೆಷನಲ್) ಪ್ರಮಾಣೀಕರಣವನ್ನು ಹೊಂದಿದ್ದಾರೆ.
ಅವರು ಪ್ಲಾಂಟ್ ಎಚ್ಆರ್, ಬಿಸಿನೆಸ್ ಎಚ್ಆರ್ ಪಾಲುದಾರ, ಪ್ರಾಕ್ಟೀಸ್ ಲೀಡ್ ಎಚ್ಆರ್ನಿಂದ ಹಿಡಿದು ಉತ್ಪಾದನೆ, ಐಟಿ ವಿತರಣೆ, ಬ್ಯಾಂಕಿಂಗ್, ಜನರಲ್ ಇನ್ಶೂರೆನ್ಸ್, ನಾನ್-ಬ್ಯಾಂಕಿಂಗ್ ಫೈನಾನ್ಸ್ ಕಂಪನಿ (ಎನ್ಬಿಎಫ್ಸಿ) ಮತ್ತು ಹೋಮ್ ಫೈನಾನ್ಸ್ ಕಂಪನಿ (ಎಚ್ಎಫ್ಸಿ) ಮುಂತಾದ ವೈವಿಧ್ಯಮಯ ಬಿಸಿನೆಸ್ಗಳಲ್ಲಿ 25 ವರ್ಷಗಳಕ್ಕೂ ಹೆಚ್ಚು ಅವಧಿಯ ವೈವಿಧ್ಯಮಯ ವೃತ್ತಿಪರ ಅನುಭವವನ್ನು ಹೊಂದಿದ್ದಾರೆ. ಅವರು ಅನೇಕ ಸಂಸ್ಥೆಗಳಲ್ಲಿ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿಯಾಗಿ 18 ವರ್ಷಗಳಿಗಿಂತ ಹೆಚ್ಚು ಕಾಲ ಉದ್ಯೋಗಿಗಳನ್ನು ಮುನ್ನಡೆಸಿದ್ದಾರೆ ಮತ್ತು ವಿವಿಧ ಬದಲಾವಣೆ ನಿರ್ವಹಣೆ ಮತ್ತು ನಾಯಕತ್ವದ ತೊಡಗುವಿಕೆಗಳನ್ನು ಮುನ್ನಡೆಸಿದ್ದಾರೆ. ಸೂಕ್ತ ಉದ್ಯೋಗಿಗಳ ಪರಿಸರವನ್ನು ರಚಿಸುವ ಮೂಲಕ ಮತ್ತು ಗ್ರಾಹಕ ಕೇಂದ್ರಿತ ಬಿಸಿನೆಸ್ನತ್ತ ಜನರನ್ನು ಮುನ್ನಡೆಸುವ ಮೂಲಕ ವ್ಯವಹಾರದ ಕಾರ್ಯಕ್ಷಮತೆಗೆ ಸಹಾಯ ಮಾಡುವಲ್ಲಿ ಅವರು ಹೆಮ್ಮೆಪಡುತ್ತಾರೆ.
ಅವರು ದಿಲೀಪ್ ಪಿರಾಮಲ್ ಗ್ರೂಪ್ನಲ್ಲಿ ಕೆಲಸ ಮಾಡಿದ್ದು, ಅಲ್ಲಿ ಅವರು ಪ್ಲಾಂಟ್ ಎಚ್ಆರ್ ಆಗಿ ಪ್ರಾಥಮಿಕ ಅನುಭವವನ್ನು ಪಡೆದುಕೊಂಡರು ಮತ್ತು ನಂತರ ಗೋದ್ರೇಜ್ ಗ್ರೂಪ್ ಮತ್ತು ಐಸಿಐಸಿಐ ಬ್ಯಾಂಕ್ಗೆ ಸೇರಿದರು. ನಮ್ಮೊಂದಿಗೆ ಸೇರುವ ಮೊದಲು, ಅವರು 18 ವರ್ಷಗಳಿಗಿಂತ ಹೆಚ್ಚು ಕಾಲ ರಿಲಯನ್ಸ್ ಕ್ಯಾಪಿಟಲ್ ಗ್ರೂಪ್ನಲ್ಲಿ ಕೆಲಸ ಮಾಡಿದ್ದಾರೆ. ರಿಲಯನ್ಸ್ ಕ್ಯಾಪಿಟಲ್ ಗ್ರೂಪ್ನಲ್ಲಿ, ಅವರು ರಿಲಯನ್ಸ್ ಜನರಲ್ ಇನ್ಶೂರೆನ್ಸ್, ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್, ರಿಲಯನ್ಸ್ ಹೋಮ್ ಫೈನಾನ್ಸ್ ಮತ್ತು ಕೊನೆಯದಾಗಿ ಗ್ರೂಪ್ ಮಟ್ಟದಲ್ಲಿ ಎಚ್ಆರ್ ನಾಯಕತ್ವದ ಹುದ್ದೆಗಳನ್ನು ನಿಭಾಯಿಸಿದ್ದಾರೆ.
ಟಿವಿಎಸ್ ಕ್ರೆಡಿಟ್ನಲ್ಲಿ ಚರಣ್ದೀಪ್ ಸಿಂಗ್ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ (ಸಿಎಂಒ) ಆಗಿದ್ದಾರೆ. ಅವರು ಪಂಜಾಬ್ ಕೃಷಿ ವಿಶ್ವವಿದ್ಯಾಲಯದಿಂದ ಕೃಷಿ ಎಂಜಿನಿಯರಿಂಗ್ನಲ್ಲಿ ಬಿ.ಟೆಕ್ ಹೊಂದಿದ್ದಾರೆ ಮತ್ತು ಮುಂಬೈನ ನರ್ಸೀ ಮೊಂಜೀ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್ನಿಂದ ಮಾರ್ಕೆಟಿಂಗ್ನಲ್ಲಿ ಎಂಬಿಎ ಹೊಂದಿದ್ದಾರೆ. ಬಿಎಫ್ಎಸ್ಐ ಮತ್ತು ಆಟೋಮೋಟಿವ್ ಉದ್ಯಮಗಳಲ್ಲಿ 18 ವರ್ಷಗಳಿಗಿಂತ ಹೆಚ್ಚು ಮಾರ್ಕೆಟಿಂಗ್, ಸೇಲ್ಸ್, ಸಿಆರ್ಎಂ ಮತ್ತು ಕಾರ್ಯತಂತ್ರದ ಪರಿಣತಿಯೊಂದಿಗೆ, ಅವರು ಬ್ರ್ಯಾಂಡ್ ಕಮ್ಯುನಿಕೇಶನ್, ಮಾರುಕಟ್ಟೆ ಸಂಶೋಧನೆ, ಡಿಜಿಟಲ್ ವ್ಯವಹಾರ, ವಿಶ್ಲೇಷಣೆ ಮತ್ತು ಗ್ರಾಹಕ ಸಂಬಂಧ ನಿರ್ವಹಣೆಯಲ್ಲಿ ಹಲವಾರು ತೊಡಗುವಿಕೆಗಳನ್ನು ನಿರ್ವಹಿಸಿದ್ದಾರೆ ಮತ್ತು ನೇತೃತ್ವ ವಹಿಸಿದ್ದಾರೆ. ಕಂಪನಿಯ ವೆಬ್ಸೈಟ್ಗಳು ಮತ್ತು ಮೊಬೈಲ್ ಆ್ಯಪ್ಗಳ ರಚನೆ ಮತ್ತು ಅನೇಕ ಪ್ರಶಸ್ತಿ-ವಿಜೇತ ಮಾರ್ಕೆಟಿಂಗ್ ಕ್ಯಾಂಪೇನ್ಗಳನ್ನು ಒಳಗೊಂಡಂತೆ ಅವರು ವಿವಿಧ ಪರಿವರ್ತನಾತ್ಮಕ ಪ್ರಯತ್ನಗಳನ್ನು ಮುನ್ನಡೆಸಿದ್ದಾರೆ. ಅವರು ಗ್ರಾಹಕರ ತೊಡಗುವಿಕೆ ಮತ್ತು ಅನುಭವವನ್ನು ಸುಧಾರಿಸುವ ಕಾರ್ಯಕ್ರಮಗಳನ್ನು ಕೂಡ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ್ದಾರೆ.
ಟಿವಿಎಸ್ ಕ್ರೆಡಿಟ್ನ ಹೊಸ ಬ್ರ್ಯಾಂಡ್ ಗುರುತನ್ನು ಸ್ಥಾಪಿಸುವಲ್ಲಿ ಅವರು ಪ್ರಮುಖ ಪಾತ್ರವನ್ನು ವಹಿಸಿದ್ದಾರೆ, ಇದು ಬದಲಾಗುತ್ತಿರುವ ಬಿಸಿನೆಸ್ ಅವಶ್ಯಕತೆಗಳಿಗೆ ಪ್ರತಿಕ್ರಿಯೆಯಾಗಿ ಹೊಸ ಗುರುತು ನೀಡುವ ಸಿಸ್ಟಮ್ ಮತ್ತು ಬ್ರ್ಯಾಂಡ್ ಮರುಸ್ಥಾಪನೆಗೆ ಕಾರಣವಾಯಿತು. ಅವರ ಮಾರ್ಗದರ್ಶನದ ಅಡಿಯಲ್ಲಿ, ಪ್ರಸಿದ್ಧ ಆರ್ಎಂಎಐ ಫ್ಲೇಮ್ ಅವಾರ್ಡ್ಸ್ ಏಷ್ಯಾ 2018 ರಲ್ಲಿ ವರ್ಷದ ಅತ್ಯುತ್ತಮ ಗೋಚರತೆ ಮತ್ತು ವಿಶ್ಯುಯಲ್ ಅಭಿಯಾನವನ್ನು ಒಳಗೊಂಡಂತೆ ವಿವಿಧ ಮಾರ್ಕೆಟಿಂಗ್ ತೊಡಗುವಿಕೆಗಳಿಗೆ ಸಂಸ್ಥೆಯು ಹಲವಾರು ಅವಾರ್ಡ್ಗಳನ್ನು ಪಡೆದಿದೆ. 2020 ಗಾಗಿ ಸಿಎಂಎಸ್ - ಏಷ್ಯಾದ ಟಾಪ್ ಕಂಟೆಂಟ್ ಮೊಗಲ್, 2018 ಗಾಗಿ ಅಡೋಬ್ ಡಿಜಿ100 ಯಿಂದ ಟಾಪ್ 100 ಡಿಜಿಟಲ್ ಮಾರ್ಕೆಟರ್ಗಳು ಮತ್ತು 2018 ಗಾಗಿ ಲಿಂಕ್ಡ್ಇನ್ನಿಂದ ಟಾಪ್ 50 ಕಂಟೆಂಟ್ ಮಾರ್ಕೆಟಿಂಗ್ ಲೀಡರ್ಗಳು ಸಹ ಅವರನ್ನು ಗುರುತಿಸಿದ್ದಾರೆ. ಹೆಚ್ಚುವರಿಯಾಗಿ, ಎಂಎಂಎಫ್ಎಸ್ಎಲ್ ನಲ್ಲಿ, ಅವರಿಗೆ 2017 ಗ್ರಾಮೀಣ ಮಾರ್ಕೆಟಿಂಗ್ ಪ್ರಶಸ್ತಿಗಳಲ್ಲಿ ವರ್ಷದ ಯುವ ಸಾಧಕರು ಎಂದು ಹೆಸರಿಸಲಾಯಿತು.
ಕಸ್ತೂರಿರಂಗನ್ ಪಿವಿ ಅವರು ಚಾರ್ಟರ್ಡ್ ಅಕೌಂಟೆಂಟ್ ಮತ್ತು ಕಾಸ್ಟ್ ಮತ್ತು ಮ್ಯಾನೇಜ್ಮೆಂಟ್ ಅಕೌಂಟೆಂಟ್ ಆಗಿದ್ದು, ವಿವಿಧ ಹಣಕಾಸು ವಿಭಾಗಗಳಲ್ಲಿ 25 ವರ್ಷಗಳಿಗಿಂತ ಹೆಚ್ಚಿನ ಅನುಭವವನ್ನು ಹೊಂದಿದ್ದಾರೆ. ಟಿವಿಎಸ್ ಕ್ರೆಡಿಟ್ನ ಮುಖ್ಯ ಟ್ರೆಜರಿ ಅಧಿಕಾರಿಯಾಗಿ, ಅವರು ಆಸ್ತಿ ಹೊಣೆಗಾರಿಕೆ ನಿರ್ವಹಣಾ ಸಮಿತಿಯ ಮೇಲ್ವಿಚಾರಣೆಯ ಅಡಿಯಲ್ಲಿ ಟ್ರೆಜರಿ ನಿರ್ವಹಣೆ, ಹೂಡಿಕೆಗಳು, ರೇಟಿಂಗ್ಗಳು ಮತ್ತು ಬಾಹ್ಯ ಪಾಲುದಾರರ ಸಂವಹನಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. ತೆರಿಗೆ, ವೆಚ್ಚ, ಆಡಿಟಿಂಗ್, ಹಣಕಾಸಿನ ವರದಿ ಮತ್ತು ಕಾರ್ಯತಂತ್ರದ ಹಣಕಾಸಿನ ಯೋಜನೆ ಮತ್ತು ನಿರ್ವಹಣೆ ಅವರ ಪರಿಣತಿಯ ಕ್ಷೇತ್ರಗಳಲ್ಲಿ ಒಂದಾಗಿದೆ. ಟಿವಿಎಸ್ ಕ್ರೆಡಿಟ್ಗೆ ಸೇರುವ ಮೊದಲು ಅವರು ನಿಸ್ಸಾನ್ ಅಶೋಕ್ ಲೇಲ್ಯಾಂಡ್ ಟೆಕ್ನಾಲಜೀಸ್ ಲಿಮಿಟೆಡ್ನಲ್ಲಿಸಿಎಫ್ಒ ಆಗಿದ್ದರು. ಎರಡು ಗಮನಾರ್ಹ ಸಂಸ್ಥೆಗಳು, ಟಿವಿಎಸ್ ಮತ್ತು ಅಶೋಕ್ ಲೇಲ್ಯಾಂಡ್ನೊಂದಿಗೆ ಅನೇಕ ವಲಯಗಳಲ್ಲಿ ಕೆಲಸ ಮಾಡುವುದರ ಜೊತೆಗೆ ಅವರು ಅಂತಾರಾಷ್ಟ್ರೀಯ ಉದ್ಯೋಗದ ಅನುಭವವನ್ನು ಹೊಂದಿದ್ದಾರೆ.
ಪಿಯುಷ್ ಚೌಧರಿ ಅವರು ಸುಮಾರು 18 ವರ್ಷಗಳ ಆಡಿಟಿಂಗ್ ಅನುಭವವನ್ನು ಹೊಂದಿದ್ದಾರೆ ಮತ್ತು ಅವರು ಚಾರ್ಟರ್ಡ್ ಅಕೌಂಟೆಂಟ್ (ಐಸಿಎಐ) ಮತ್ತು ಸಿಐಎಸ್ಎ (ಉತ್ತೀರ್ಣ) (ಬಿಗ್ 4 ರ ಮತ್ತು ಬಿಎಫ್ಎಸ್ಐ ಉದ್ಯಮ) ಆಗಿದ್ದಾರೆ. ಅವರು ಟಿವಿಎಸ್ ಕ್ರೆಡಿಟ್ನಲ್ಲಿ ಮುಖ್ಯ ಆಂತರಿಕ ಆಡಿಟ್ ಕಚೇರಿಯಾಗಿ ಆರ್ಬಿಐ ಮಾನದಂಡಗಳನ್ನು ಅನುಸರಿಸುವಲ್ಲಿ ಬಲವಾದ ರಿಸ್ಕ್ ಆಧಾರಿತ ಆಂತರಿಕ ಆಡಿಟ್ (ಆರ್ಬಿಐಎ) ಚೌಕಟ್ಟನ್ನು ಸ್ಥಾಪಿಸುತ್ತಾರೆ. ಅವರ ಪರಿಣತಿಯ ಪ್ರಮುಖ ಕ್ಷೇತ್ರಗಳಲ್ಲಿ ಬ್ಯಾಂಕ್ಗಳು ಮತ್ತು ಬ್ಯಾಂಕ್ ಅಲ್ಲದ ಹಣಕಾಸು ಕಂಪನಿಗಳಿಗೆ (ಎನ್ಬಿಎಫ್ಸಿ ಗಳು) ರಿಸ್ಕ್-ಆಧಾರಿತ ಆಂತರಿಕ ಆಡಿಟ್ (ಆರ್ಬಿಐಎ) ಚೌಕಟ್ಟುಗಳನ್ನು ನಿರ್ಮಿಸುವುದು, ಆಂತರಿಕ ಆಡಿಟ್ ಕಾರ್ಯವಿಧಾನಗಳನ್ನು ಸ್ವಯಂಚಾಲಿತಗೊಳಿಸುವುದು, ಐಟಿಆಡಿಟ್ಗಳನ್ನು ನಡೆಸುವುದು, ಆಂತರಿಕ ಹಣಕಾಸು ನಿಯಂತ್ರಣಗಳ (ಐಎಫ್ಸಿಸಿ) ಚೌಕಟ್ಟುಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಆಡಿಟ್ ಸಮಿತಿಗಳಿಗೆ ಪ್ರಸ್ತುತಪಡಿಸುವುದು ಸೇರಿವೆ. ಅವರು ಹಲವಾರು ವ್ಯವಸ್ಥೆ ಮತ್ತು ಪ್ರಕ್ರಿಯೆ ಭರವಸೆ ಉಪಕ್ರಮಗಳಲ್ಲಿ ಪಿಡಬ್ಲ್ಯೂಸಿ ಮತ್ತು ಡೆಲಾಯ್ಟ್ಗಾಗಿ ಕೆಲಸ ಮಾಡಿದ್ದಾರೆ (ಅಪ್ಲಿಕೇಶನ್ ಕಂಟ್ರೋಲ್ಸ್ ಟೆಸ್ಟಿಂಗ್, ಐಟಿಜಿಸಿ ಆಡಿಟ್ಸ್, ಎಸ್ಒಎಕ್ಸ್, ಎಸ್ಎಸ್ಎಇ 16 ತೊಡಗುವಿಕೆಗಳು).
ವಿಕಾಸ್ ಅರೋರಾ, ವಿಶೇಷವಾಗಿ ಬಿಎಫ್ಎಸ್ಐ ವಲಯದಲ್ಲಿ 18 ವರ್ಷಗಳಿಗಿಂತ ಹೆಚ್ಚಿನ ಅನುಭವ ಹೊಂದಿರುವ ಅನುಭವಿ ಅನುಸರಣೆ, ಆಡಳಿತ ಮತ್ತು ಕಾನೂನು ತಜ್ಞರಾಗಿದ್ದಾರೆ. ಅವರು ಕಾರ್ಪೊರೇಟ್ ಕಾನೂನು, ಎನ್ಬಿಎಫ್ಸಿ ಅನುಸರಣೆ, ನಿಯಮಾವಳಿಗಳು, ಆಡಳಿತ, ಡೇಟಾ ಗೌಪ್ಯತೆ, ಕಾರ್ಮಿಕ ಕಾನೂನುಗಳು, ಒಪ್ಪಂದ ನಿರ್ವಹಣೆ, ವಿವಾದ ಮತ್ತು ಫೆಮಾ ಮತ್ತು ವಂಚನೆ-ವಿರೋಧಿ ನಿರ್ವಹಣೆ ಮತ್ತು ಪಿಎಂಎಲ್ಎ ಅನುಸರಣೆಯಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಅವರು ಕಾರ್ಪೊರೇಟ್ ಸೆಕ್ರೆಟರಿ (ಐಸಿಎಸ್ಐ) ಮತ್ತು ಕಾನೂನು ಪದವೀಧರ (ಎಲ್ಎಲ್ಬಿ) ಎಂಬ ಟೈಟಲ್ಗಳನ್ನು ಹೊಂದಿದ್ದಾರೆ. ಮುಖ್ಯ ಅನುಸರಣೆ ಅಧಿಕಾರಿಯಾಗಿ, ಅವರು ಬಲವಾದ ಅನುಸರಣೆ ಚೌಕಟ್ಟನ್ನು ಸ್ಥಾಪಿಸಲು ಮತ್ತು ಸಂಸ್ಥೆಯ ಅನುಸರಣೆ ಸಂಸ್ಕೃತಿಗೆ ಮಾರ್ಗದರ್ಶನ ನೀಡಲು ಜವಾಬ್ದಾರರಾಗಿದ್ದಾರೆ. ಟಿವಿಎಸ್ ಕ್ರೆಡಿಟ್ಗೆ ಸೇರುವ ಮೊದಲು, ಅವರು ಬಿಎಂಡಬ್ಲ್ಯೂ ಹಣಕಾಸು ಸೇವೆಗಳಲ್ಲಿ ಅನುಸರಣೆ, ಕಾನೂನು ಮತ್ತು ಕಂಪನಿ ಕಾರ್ಯದರ್ಶಿಯಾಗಿದ್ದರು. ಅವರು ಈ ಮೊದಲು ಜಿಇ ಮನಿ, ಕೆನರಾ ಎಚ್ಎಸ್ಬಿಸಿ ಲೈಫ್ ಇನ್ಶೂರೆನ್ಸ್ ಮತ್ತು ಜೆನ್ಪ್ಯಾಕ್ಟ್ನೊಂದಿಗೆ ಕೆಲಸ ಮಾಡಿದ್ದಾರೆ.
ಇತ್ತೀಚಿನ ಅಪ್ಡೇಟ್ಗಳು ಮತ್ತು ಆಫರ್ಗಳಿಗಾಗಿ ಸೈನ್ ಅಪ್ ಮಾಡಿ