ಸಿಬಿಲ್ ಅಥವಾ ಕ್ರೆಡಿಟ್ ಮಾಹಿತಿ ಬ್ಯೂರೋ (ಇಂಡಿಯಾ) ಲಿಮಿಟೆಡ್ ಸ್ಕೋರ್ ಸಾಲಗಾರರ ಕ್ರೆಡಿಟ್ ಹಿಸ್ಟರಿ, ರೇಟಿಂಗ್ ಮತ್ತು ವರದಿಯ ಮೂರು ಅಂಕಿಯ ಸಾರಾಂಶವಾಗಿದೆ ಮತ್ತು ಹೀಗಾಗಿ ಇದು ಯಾವುದೇ ಸಾಲಗಾರರ ವಿಶ್ವಾಸಾರ್ಹತೆ ಮತ್ತು ಬಿಸಿನೆಸ್ ಲೋನ್ಗಳನ್ನು ಮರುಪಾವತಿಸುವ ಅವರ ಸಾಮರ್ಥ್ಯದ ಸೂಚನೆಯಾಗಿದೆ. 300 ರಿಂದ 900 ವರೆಗಿನ ಶ್ರೇಣಿಯಲ್ಲಿ, ಈ ಸ್ಕೋರ್ ಅನ್ನು ಕಾಲಕಾಲಕ್ಕೆ ರಚಿಸಲಾಗುತ್ತದೆ ಮತ್ತು ಸಾಲಗಾರರು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಂತಹ ಸಾಲದಾತರಿಂದ ವಿವಿಧ ಉದ್ದೇಶಗಳಿಗಾಗಿ ಬಿಸಿನೆಸ್ ಲೋನ್ಗಳು ಅಥವಾ ಯಾವುದೇ ರೀತಿಯ ಕ್ರೆಡಿಟ್ ತೆಗೆದುಕೊಳ್ಳುತ್ತಾರೆ. ಸಾಮಾನ್ಯವಾಗಿ, ಸ್ಕೋರ್ 900 ಕ್ಕೆ ಹತ್ತಿರವಾಗಿದ್ದರೆ, ರೇಟಿಂಗ್ ಉತ್ತಮವಾಗಿರುತ್ತದೆ.
ಸಿಬಿಲ್ ಸ್ಕೋರನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?
ಸಿಬಿಲ್ ಸ್ಕೋರ್ ಮೌಲ್ಯಮಾಪನಕ್ಕೆ ಕೊಡುಗೆ ನೀಡುವ ಕೆಲವು ಅಂಶಗಳಿವೆ, ಅವುಗಳೆಂದರೆ:
ಕ್ರೆಡಿಟ್ ಮರುಪಾವತಿ ಹಿಸ್ಟರಿ
– ಇದು ಕ್ರೆಡಿಟ್ ಹಿಸ್ಟರಿಯ 35% ಆಗಿರುತ್ತದೆ ಮತ್ತು ಹೀಗಾಗಿ, ಯಾವುದೇ ಸಣ್ಣ ಬಿಸಿನೆಸ್ ಲೋನ್ ಪಡೆಯುವಾಗ ನಿರ್ಣಾಯಕವಾಗಿದೆ.
ತೆಗೆದುಕೊಳ್ಳಲಾದ ಕ್ರೆಡಿಟ್ ಪ್ರಕಾರ ಮತ್ತು ಮರುಪಾವತಿ ಅವಧಿ
– ಇವುಗಳು ಕ್ರಮವಾಗಿ ನಿಮ್ಮ ಕ್ರೆಡಿಟ್ ಸ್ಕೋರ್ಗೆ 10% ಮತ್ತು 15% ಕೊಡುಗೆ ನೀಡುತ್ತವೆ. ಸಕಾರಾತ್ಮಕ ಪರಿಣಾಮವನ್ನು ಉಂಟುಮಾಡಲು ಕ್ರೆಡಿಟ್ ಸಮತೋಲನವನ್ನು (ಇತರ ಪದಗಳಲ್ಲಿ, ಭದ್ರತೆ ಸಹಿತ ಮತ್ತು ಭದ್ರತೆ ರಹಿತ ಸಾಲಗಳ ಸಂಯೋಜನೆ) ತೋರಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಅಲ್ಲದೆ, ಸಾಲದಾತರೊಂದಿಗೆ ಒಪ್ಪಿಕೊಂಡ ಸಮಯಕ್ಕೆ ಸರಿಯಾದ ಮರುಪಾವತಿಯನ್ನು ಮರುಪಾವತಿಯ ಅವಧಿಯು ಮೌಲ್ಯಮಾಪನ ಮಾಡುತ್ತದೆ.
ಕ್ರೆಡಿಟ್ ವಿಚಾರಣೆಗಳ ಫ್ರೀಕ್ವೆನ್ಸಿ
– ಕ್ರೆಡಿಟ್ ವಿಚಾರಣೆಗಳು ಕೂಡ ಸಿಬಿಲ್ ಸ್ಕೋರ್ನಲ್ಲಿ ಕಾಣಿಸಿಕೊಳ್ಳುತ್ತವೆ. ಅನೇಕ ವಿಚಾರಣೆಗಳು ಮತ್ತು ವಿಶೇಷವಾಗಿ ಯಶಸ್ವಿಯಾಗದವುಗಳು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರಬಹುದು ಏಕೆಂದರೆ ಇದು ಕ್ರೆಡಿಟರ್ ನೀವು ಸಾಲವನ್ನು ಮರುಪಾವತಿಸಲು ಹಣಕಾಸಿನ ಸಾಮರ್ಥ್ಯವನ್ನು ಹೊಂದಿಲ್ಲ ಎಂದು ಕಂಡುಕೊಂಡಿದ್ದಾರೆ ಎಂಬುದನ್ನು ಸೂಚಿಸಬಹುದು.
ಅಸ್ತಿತ್ವದಲ್ಲಿರುವ ಸಾಲ ಮತ್ತು ಕ್ರೆಡಿಟ್ ಬಳಕೆ
– ಈ ವಿಭಾಗವು ಕ್ರೆಡಿಟ್ ಸ್ಕೋರ್ನ 30% ಆಗಿರುತ್ತದೆ. ಇದು ನಿಮಗೆ ಎಷ್ಟು ಕ್ರೆಡಿಟ್ ಆಗಿದೆ ಮತ್ತು ಆ ಸಾಲ ಪಡೆದ ಮೊತ್ತವನ್ನು ಎಷ್ಟು ಬಳಸಲಾಗಿದೆ ಎಂಬುದನ್ನು ಮೌಲ್ಯಮಾಪನ ಮಾಡುತ್ತದೆ. ನಿಮ್ಮ ಮಾಸಿಕ ಕ್ರೆಡಿಟ್ ಮಿತಿಯನ್ನು ಮೀರಿದರೆ ನಿಮ್ಮ CIBIL ಸ್ಕೋರ್ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರಬಹುದು ಎಂಬುದನ್ನು ಗಮನಿಸಬೇಕು.
ಸಿಬಿಲ್ ಸ್ಕೋರ್ 1 ಎಂದರೇನು?
ಇದರರ್ಥ ಸಾಲಗಾರರ ಕ್ರೆಡಿಟ್ ಹಿಸ್ಟರಿ ಬಗ್ಗೆ ವರದಿ ಮಾಡಲು ಯಾವುದೇ ಸಂಬಂಧಿತ ಮಾಹಿತಿ ಇಲ್ಲ. ಕ್ರೆಡಿಟ್ ಸ್ಕೋರ್ 1 ಆನ್ಲೈನ್ ಬಿಸಿನೆಸ್ ಲೋನಿಗೆ ಅಪ್ಲಿಕೇಶನ್ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರಬಹುದು ಎಂಬುದನ್ನು ಗಮನಿಸಬೇಕು.
ಬಿಸಿನೆಸ್ ಲೋನ್ಗಳನ್ನು ತೆಗೆದುಕೊಳ್ಳಲು ಸಿಬಿಲ್ ಸ್ಕೋರ್ ಹೇಗೆ ಕೊಡುಗೆ ನೀಡುತ್ತದೆ?
ಸಿಬಿಲ್ 600 ಮಿಲಿಯನ್ಗಿಂತ ಹೆಚ್ಚು ವ್ಯಕ್ತಿಗಳು ಮತ್ತು 32 ಮಿಲಿಯನ್ ಬಿಸಿನೆಸ್ಗಳ ಕ್ರೆಡಿಟ್ ಮಾಹಿತಿಯನ್ನು ನಿರ್ವಹಿಸುತ್ತದೆ ಮತ್ತು ಆದ್ದರಿಂದ ಸಾಲದ ಅಪ್ಲಿಕೇಶನ್ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಸಂಭಾವ್ಯ ಸಾಲಗಾರರು ಸಣ್ಣ ಬಿಸಿನೆಸ್ ಲೋನ್ಗಳಿಗಾಗಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯನ್ನು ಸಂಪರ್ಕಿಸಿದಾಗ, ಸಾಲದಾತರು ಕ್ರೆಡಿಟ್-ಅರ್ಹತೆಗಾಗಿ ಅವರ ಸಿಬಿಲ್ ಸ್ಕೋರ್ ಅನ್ನು ವಿಮರ್ಶಿಸುತ್ತಾರೆ. ಸ್ಕೋರ್ ಕಡಿಮೆ ಇದ್ದರೆ, ಬ್ಯಾಂಕ್ ಅಪ್ಲಿಕೇಶನನ್ನು ಮುಂದಕ್ಕೆ ಪ್ರಕ್ರಿಯೆಗೊಳಿಸದೇ ಇರಬಹುದು. ಆದರೆ ಸ್ಕೋರ್ ಹೆಚ್ಚಾಗಿದ್ದರೆ, ಅವರು ಅಪ್ಲಿಕೇಶನ್ ಅನ್ನು ಪರಿಗಣಿಸಬಹುದು ಮತ್ತು ಅದನ್ನು ಮಂಜೂರು ಮಾಡುವ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಕೋರಲಾದ ಮೊತ್ತ, ಸಂಭಾವ್ಯ ಬಿಸಿನೆಸ್ ಲೋನ್ ಬಡ್ಡಿ ದರ ಮುಂತಾದ ಇತರ ವಿವರಗಳನ್ನು ಪರಿಶೀಲಿಸಬಹುದು.
ಉತ್ತಮ ಮತ್ತು ಆರೋಗ್ಯಕರ ಸಿಬಿಲ್ ಸ್ಕೋರ್ ಕಾಪಾಡುವುದು ಮುಖ್ಯವಾಗಿದೆ ಮತ್ತು ಜಾಣತನದ ಆರ್ಥಿಕ ನಿಲುವನ್ನು ತೆಗೆದುಕೊಳ್ಳುವ ಮೂಲಕ ಅದನ್ನು ಸಾಧಿಸಬಹುದು: ಕ್ರೆಡಿಟ್ ಕಾರ್ಡ್ ಬಿಲ್ಗಳು ಮತ್ತು ಇಎಂಐ ಗಳ ಸಮಯಕ್ಕೆ ಸರಿಯಾದ ಪಾವತಿ, ಸಾಲದ ಮೇಲೆ ಯಾವುದೇ ಡೀಫಾಲ್ಟ್ ಇಲ್ಲದಿರುವುದು ಇತ್ಯಾದಿ.