ಬೇಸಿಗೆಯ ಋತುವಿನಲ್ಲಿ ಸಂಪೂರ್ಣ ಸ್ವಿಂಗ್ನಲ್ಲಿ, ಕೂಲ್ ಡೌನ್ ಆಗುವ ಸಮಯದ ಅಗತ್ಯವಿದೆ. ಈ ಬೇಸಿಗೆಯ ಸಮಯದಲ್ಲಿ ಶಾಖವನ್ನು ತಪ್ಪಿಸಲು ಉತ್ತಮ ಮಾರ್ಗವೆಂದರೆ ಏರ್ ಕಂಡೀಶನರ್ನೊಂದಿಗೆ ನಿಮ್ಮ ಮನೆಯನ್ನು ತಂಪಾಗಿಸುವುದು. ನಮ್ಮಲ್ಲಿ ಬಹಳಷ್ಟು ಮಂದಿ ಸೆಖೆಯನ್ನು ತಡೆಯಲು ಎಸಿ ಖರೀದಿಸಲು ಬಯಸುತ್ತೇವೆ, ಆದರೆ ಹಣವನ್ನು ಮುಂಗಡವಾಗಿ ಪಾವತಿಸಲು ನಾವು ಬಯಸುವುದಿಲ್ಲ. ಇದಕ್ಕಿರುವ ಒಂದು ಪರಿಹಾರವೆಂದರೆ ಸುಲಭ ಕಂತುಗಳಲ್ಲಿ ಪಾವತಿಸುವುದು ಮತ್ತು ಇಎಂಐನಲ್ಲಿ ಎಸಿ ಖರೀದಿಸುವುದು.
ಈ ಬ್ಲಾಗ್ ಪೋಸ್ಟ್ನಲ್ಲಿ, ಇಎಂಐನಲ್ಲಿ ಎಸಿ ಖರೀದಿಸುವ ಪ್ರಯೋಜನಗಳನ್ನು ಮತ್ತು ನಿಮ್ಮ ಹಣಕಾಸಿನ ಮೇಲೆ ಒತ್ತಡ ಹೇರದೆ ತಂಪಾದ ಪರಿಸರವನ್ನು ಆನಂದಿಸಲು ಇದು ನಿಮಗೆ ಹೇಗೆ ಅನುವು ಮಾಡಿಕೊಡುತ್ತದೆ ಎಂಬುದನ್ನು ನಾವು ತಿಳಿಸುತ್ತೇವೆ!
ಇಎಂಐನಲ್ಲಿ ಎಸಿ ಖರೀದಿಸಿ: ನಿಮ್ಮ ಅಗತ್ಯಗಳಿಗೆ ಸೂಕ್ತವಾದ ವಿಧಾನ
ನೀವು ನಿಮ್ಮ ಎಸಿಗೆ ಹಣಕಾಸು ಒದಗಿಸಲು ಬಯಸಿದಾಗ, ನೀವು ಕ್ರೆಡಿಟ್ ಕಾರ್ಡ್ನಲ್ಲಿ ಇಎಂಐ ಗಳನ್ನು ಆಯ್ಕೆ ಮಾಡಬಹುದು ಅಥವಾ ಗೃಹೋಪಯೋಗಿ ವಸ್ತುಗಳ ಲೋನ್ ಪಡೆಯುವ ಮೂಲಕ ಕ್ರೆಡಿಟ್ ಕಾರ್ಡ್ ಇಲ್ಲದೆ ಇಎಂಐನಲ್ಲಿ ಎಸಿ ಖರೀದಿಸಬಹುದು.
ಬ್ಯಾಂಕ್ಗಳು ಮತ್ತು ನಮ್ಮಂಥ ಎನ್ಬಿಎಫ್ಸಿಗಳು, ಟಿವಿಎಸ್ ಕ್ರೆಡಿಟ್, ಕನಿಷ್ಠ ಬಡ್ಡಿ ದರಗಳಲ್ಲಿ ಕನ್ಸ್ಯೂಮರ್ ಡ್ಯೂರೇಬಲ್ ಲೋನ್ಗಳನ್ನು ಒದಗಿಸುತ್ತವೆ.
ನಮ್ಮೊಂದಿಗೆ, ನಮ್ಮ ಶೂನ್ಯ ಡೌನ್ ಪೇಮೆಂಟ್ ಲೋನ್ಗಳ ಮೂಲಕ ನೀವು 100% ವರೆಗೆ ಹಣಕಾಸನ್ನು ಪಡೆಯಬಹುದು. ಇದು ಕ್ರೆಡಿಟ್ ಹಿಸ್ಟರಿ ಇಲ್ಲದೆ ಮೊದಲ ಬಾರಿಯ ಸಾಲಗಾರರಿಗೆ ಕೂಡ ಅನ್ವಯವಾಗುತ್ತದೆ.
ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ:
ಇಎಂಐನಲ್ಲಿ ಎಸಿ ಖರೀದಿಸುವ ಹಂತಗಳು:
ಗ್ರಾಹಕರ ಸುಲಭ ಪ್ರವೇಶಕ್ಕಾಗಿ ಸ್ಪಷ್ಟವಾಗಿ ನಿರ್ಧರಿಸಿದ ಹಂತಗಳೊಂದಿಗೆ ಎಸಿ ಫೈನಾನ್ಸ್ ಪ್ರಕ್ರಿಯೆಗಳು ಈಗ ತುಂಬಾ ಬಳಕೆದಾರ-ಸ್ನೇಹಿಯಾಗಿವೆ.
ಇದನ್ನು ಕೆಳಗೆ ವಿವರವಾಗಿ ತಿಳಿಯೋಣ:
-
-
ಅವಶ್ಯಕತೆಗಳ ಚೆಕ್ಲಿಸ್ಟ್ ರಚಿಸಿ:
ನಿಮ್ಮ ಕೂಲಿಂಗ್ ಅವಶ್ಯಕತೆಗಳನ್ನು ಗುರುತಿಸುವ ಮೂಲಕ ಆರಂಭಿಸಿ. ಇದು ಸ್ಪ್ಲಿಟ್ ಎಸಿ, ವಿಂಡೋ ಎಸಿ, ಇನ್ವರ್ಟರ್ ಅಥವಾ ನಾನ್-ಇನ್ವರ್ಟರ್ ಎಸಿ ಮುಂತಾದ ಎಸಿ ಪ್ರಕಾರ ಮತ್ತು ಸ್ಥಳ, ಇಂಧನ ದಕ್ಷತೆ (ಸ್ಟಾರ್ ರೇಟಿಂಗ್) ಇತ್ಯಾದಿಗಳ ಆಧಾರದ ಮೇಲೆ ಸಾಮರ್ಥ್ಯವನ್ನು ನಿರ್ಧರಿಸುವುದನ್ನು ಒಳಗೊಂಡಿದೆ.
-
ಎಸಿ ಮಾಡೆಲ್ ಆರಿಸಿ:
ನಿಮ್ಮ ಅಗತ್ಯಗಳ ಸ್ಪಷ್ಟ ಚಿತ್ರಣವನ್ನು ಹೊಂದಿದ ನಂತರ, ಅವುಗಳಿಗೆ ಸರಿಹೊಂದುವ ಎಸಿ ಮಾಡೆಲ್ಗಳಲ್ಲಿ ಒಂದನ್ನು ಆಯ್ಕೆ ಮಾಡಿ. ಮಾಹಿತಿಯುಕ್ತ ನಿರ್ಧಾರವನ್ನು ಕೈಗೊಳ್ಳಲು ಫೀಚರ್ಗಳು, ಬೆಲೆ ಶ್ರೇಣಿ, ಗ್ರಾಹಕರ ತೃಪ್ತಿ ರೇಟಿಂಗ್ಗಳು ಇತ್ಯಾದಿಗಳನ್ನು ವಿಶ್ಲೇಷಿಸಿ.
-
ನಿಮ್ಮ ಹಣಕಾಸು ಸಂಸ್ಥೆಯನ್ನು ಆಯ್ಕೆಮಾಡಿ:
ನಿಮ್ಮ ಇಎಂಐ ಪ್ಲಾನ್ ಕಾರ್ಯಗತಗೊಳಿಸಲು, ನೀವು ಹಣಕಾಸು ಸಂಸ್ಥೆಯನ್ನು ಆಯ್ಕೆ ಮಾಡಬೇಕು. ನಿರ್ಣಯ ಕೈಗೊಳ್ಳುವ ಮೊದಲು ವಿವಿಧ ಸಾಲದಾತರು ಒದಗಿಸುವ ಲೋನ್ನ ಇಎಂಐ ಪ್ಲಾನ್ಗಳು, ಬಡ್ಡಿ ದರಗಳು, ಕಾಲಾವಧಿ ಮತ್ತು ನಿಯಮ ಮತ್ತು ಷರತ್ತುಗಳನ್ನು ಹೋಲಿಸಿ.
₹10,000 ರಿಂದ ₹1.5 ಲಕ್ಷಗಳವರೆಗಿನ* ಲೋನ್ ಮೊತ್ತಗಳ ಇಎಂಐ ಮೇಲೆ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಇರುವುದರಿಂದ ಮತ್ತು 6 ರಿಂದ 24 ತಿಂಗಳವರೆಗಿನ ಫ್ಲೆಕ್ಸಿಬಲ್ ಮರುಪಾವತಿ ಅವಧಿಯಲ್ಲಿ ಅದನ್ನು ಪಾವತಿಸಬಹುದಾದ್ದರಿಂದ ಟಿವಿಎಸ್ ಕ್ರೆಡಿಟ್ ಒಂದು ಒಳ್ಳೆಯ ಆಯ್ಕೆಯಾಗಿದೆ ಎಂದು ಹೇಳಬಹುದು*.
-
ಇಎಂಐಗೆ ಅರ್ಹತೆ ಪಡೆಯಿರಿ:
ನೀವು ಎಸಿ ಮಾಡೆಲ್ ಮತ್ತು ಹಣಕಾಸು ಸಂಸ್ಥೆಯನ್ನು ನಿರ್ಧರಿಸಿದ ನಂತರ, ಇಎಂಐಗೆ ಅಪ್ಲೈ ಮಾಡಿ. ಸಾಲದಾತರ ಆಧಾರದ ಮೇಲೆ, ನೀವು ಸಾಲದಾತರ ವೆಬ್ಸೈಟ್ಗೆ ಲಿಂಕ್ ಆಗಿರುವ ಆನ್ಲೈನ್ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಬೇಕು ಅಥವಾ ಇಎಂಐಗೆ ಅರ್ಹತೆ ಪಡೆಯಲು ವೈಯಕ್ತಿಕವಾಗಿ ಅಪ್ಲೈ ಮಾಡಬೇಕು.
-
ನಿಮ್ಮ ಡಾಕ್ಯುಮೆಂಟ್ಗಳನ್ನು ಕ್ರಮವಾಗಿ ಪಡೆಯಿರಿ:
ಪರಿಶೀಲನಾ ಉದ್ದೇಶಗಳಿಗಾಗಿ ಸಂಸ್ಥೆಗೆ ಕೆಲವು ಡಾಕ್ಯುಮೆಂಟ್ಗಳ ಅಗತ್ಯವಿರುತ್ತದೆ. ಇದು ಐಡಿ ಪುರಾವೆ (ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಡ್ರೈವರ್ಸ್ ಲೈಸೆನ್ಸ್ ಇತ್ಯಾದಿ), ನಿವಾಸದ ಪುರಾವೆ (ಬಾಡಿಗೆ ಒಪ್ಪಂದ, ಯುಟಿಲಿಟಿ ಬಿಲ್ಗಳು ಇತ್ಯಾದಿ), ಮತ್ತು ಆದಾಯ ಪುರಾವೆ (ಬ್ಯಾಂಕ್ ಸ್ಟೇಟ್ಮೆಂಟ್ಗಳು, ಸಂಬಳದ ಸ್ಲಿಪ್ಗಳು ಇತ್ಯಾದಿ) ಗಳನ್ನು ಒಳಗೊಂಡಿದೆ
-
ಅಪ್ಲಿಕೇಶನ್ ಫಲಿತಾಂಶಗಳಿಗಾಗಿ ಕಾಯಿರಿ:
ಅಪ್ಲಿಕೇಶನ್ ಫಾರ್ಮ್ ಮತ್ತು ಅಗತ್ಯವಿರುವ ಡಾಕ್ಯುಮೆಂಟ್ಗಳನ್ನು ನೀವು ಒದಗಿಸಿದ ನಂತರ ಹಣಕಾಸು ಸಂಸ್ಥೆಗಳು ನಿಮ್ಮ ಅಪ್ಲಿಕೇಶನ್ ಅನ್ನು ಪರಿಶೀಲಿಸುತ್ತವೆ. ಅನುಮೋದನೆ ಪ್ರಕ್ರಿಯೆಯ ಕಾಯುವ ಸಮಯವು ಕೆಲವು ಗಂಟೆಗಳಿಂದ ಕೆಲವು ದಿನಗಳವರೆಗೆ ಇರಬಹುದು.
-
ಎಸಿ ಖರೀದಿ ಮಾಡಿ:
ನಿಮ್ಮ ಇಎಂಐ ಅಪ್ಲಿಕೇಶನ್ ಪರಿಶೀಲಿಸಿದ ನಂತರ ಮತ್ತು ಅನುಮೋದನೆ ಪಡೆದ ನಂತರ, ಆಯ್ಕೆ ಮಾಡಿದ ಎಸಿ ಮಾಡೆಲ್ ಖರೀದಿಸಲು ಕೋರಲಾದ ಹಣವನ್ನು ಸಾಲದಾತರ ಪ್ರಕ್ರಿಯೆಯ ಆಧಾರದ ಮೇಲೆ ನೇರವಾಗಿ ರಿಟೇಲರ್ಗೆ ವರ್ಗಾಯಿಸಲಾಗುತ್ತದೆ ಅಥವಾ ಮರುಪಾವತಿ ಮಾಡಲಾಗುತ್ತದೆ.
-
ಇಎಂಐ ಪಾವತಿಗಳನ್ನು ಮಾಡಿ:
ನೀವು ಈಗ ಒಪ್ಪಿಕೊಂಡ ಶೆಡ್ಯೂಲ್ ಪ್ರಕಾರ ಇಎಂಐ ಮೊತ್ತ ಪಾವತಿಸುವುದನ್ನು ಮುಂದುವರಿಯಬಹುದು. ಹೆಚ್ಚಾಗಿ ಇದು ಪ್ರತಿ ತಿಂಗಳು ಪಾವತಿಸಬೇಕಾದ ನಿಗದಿತ ಮೊತ್ತವಾಗಿದ್ದು, ಇದು ಪರಿಣಾಮಕಾರಿ ಹಣಕಾಸು ನಿರ್ವಹಣೆಗೆ ಅನುಮತಿ ನೀಡುತ್ತದೆ..
-
ಇಎಂಐನಲ್ಲಿ ಎಸಿ ಖರೀದಿಸುವ ಪ್ರಯೋಜನಗಳು:
ಇಎಂಐನಲ್ಲಿ ಎಸಿ ಖರೀದಿಸುವ ಪ್ರಯೋಜನಗಳು:
-
-
-
ಕಂತುಗಳಲ್ಲಿ ಎಸಿ ಖರೀದಿ:
ಜೇಬಿಗೆ ಹೊರೆಯಾಗದ ಮಾಸಿಕ ಕಂತುಗಳು ಮುಂಗಡವಾಗಿ ಒಟ್ಟು ಮೊತ್ತವನ್ನು ಖರ್ಚು ಮಾಡುವುದನ್ನು ತಡೆಯುವ ಮೂಲಕ ಹಣಕಾಸಿನ ಒತ್ತಡವನ್ನು ತಪ್ಪಿಸಲು ನಿಮಗೆ ಸಹಾಯ ಮಾಡುತ್ತವೆ.
-
ನೋ ಕಾಸ್ಟ್ ಇಎಂಐ:
ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ನೀವು ನಿಮ್ಮ ಮಾಸಿಕ ಕಂತುಗಳನ್ನು ಪಾವತಿಸಬಹುದು
-
ಶೂನ್ಯ ಡೌನ್ ಪೇಮೆಂಟ್:
ನೀವು ಖರೀದಿಸಲು ಬಯಸುವ ಗೃಹೋಪಯೋಗಿ ವಸ್ತುಗಳ ಎಲ್ಲಾ ವೆಚ್ಚಗಳನ್ನು ಕವರ್ ಮಾಡಲಾಗುವುದರಿಂದ ; ನಿಮ್ಮ ಅಪೇಕ್ಷಿತ ವಸ್ತುಗಳನ್ನು ಹೊಂದಲು ನೀವು ಇನ್ನು ಮುಂದೆ ಕಾಯಬೇಕಾಗಿಲ್ಲ
-
ಕಡಿಮೆ ಡಾಕ್ಯುಮೆಂಟೇಶನ್:
ನೀವು ಈಗ ಕನಿಷ್ಠ ಡಾಕ್ಯುಮೆಂಟೇಶನ್ ಮತ್ತು ಪ್ರಕ್ರಿಯೆಯೊಂದಿಗೆ ಟಿವಿಎಸ್ ಕ್ರೆಡಿಟ್ನಲ್ಲಿ ಗೃಹೋಪಯೋಗಿ ವಸ್ತುಗಳ ಲೋನ್ ಅನ್ನು ಆನ್ಲೈನ್ನಲ್ಲಿ ಪಡೆಯಬಹುದು
-
ಮೊದಲ ಬಾರಿಯ ಸಾಲಗಾರರ ಅರ್ಹತೆ:
ಯಾವುದೇ ಕ್ರೆಡಿಟ್ ಹಿಸ್ಟರಿ ಇಲ್ಲದ ಮೊದಲ ಬಾರಿಯ ಸಾಲಗಾರರಿಗೆ ಕೂಡ ಹಣಕಾಸಿನ ನೆರವು ನೀಡಲಾಗುತ್ತದೆ
-
-
ಕ್ರೆಡಿಟ್ ಕಾರ್ಡ್ನ ಮಿತಿಗಳಿಲ್ಲದೆ ಇಎಂಐನಲ್ಲಿ ಎಸಿ ಖರೀದಿಸುವುದು
ನೀವು ಕ್ರೆಡಿಟ್ ಕಾರ್ಡ್ ಮಿತಿಗಳನ್ನು ಮೀರಬಹುದು, ಒಂದು ವೇಳೆ, ನೀವು ಗೃಹೋಪಯೋಗಿ ವಸ್ತುಗಳ ಲೋನ್ಗೆ ಅರ್ಹತಾ ಮಾನದಂಡಗಳನ್ನು ಪೂರೈಸಿದರೆ, ನೀವು ಕ್ರೆಡಿಟ್ ಕಾರ್ಡ್ನ ಅಗತ್ಯವಿಲ್ಲದೆ ಇಎಂಐ ಪಾವತಿಸಬಹುದು.
ಆದಾಗ್ಯೂ, ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಹೆಚ್ಚಿನ ಲೋನ್ ಮಿತಿಗಳಿಗೆ ಅಪ್ಲೈ ಮಾಡಲು ಸಾಧ್ಯವಾಗಬಹುದು.
ಬೇಸಿಗೆಯ ಧಗೆ ದಿನೇದಿನೆ ಹೆಚ್ಚುತ್ತಿರುವ ಈ ಸಮಯದಲ್ಲಿ, ಇಎಂಐನಲ್ಲಿ ಎಸಿ ಖರೀದಿಸುವುದು ಅತ್ಯುತ್ತಮ ಪರಿಹಾರವಾಗಿದೆ. ಇಎಂಐನಲ್ಲಿ ಎಸಿ ಖರೀದಿಸುವುದು ಆರ್ಥಿಕವಾಗಿ ಜಾಗರೂಕವಾದ ಖರೀದಿ ತಂತ್ರವಾಗಿದ್ದು, ಇದು ದೀರ್ಘ ಕಾಯುವಿಕೆ ಇಲ್ಲದೆ ಸೆಖೆಯನ್ನು ನಿಭಾಯಿಸಲು ನಿಮಗೆ ಸಹಾಯ ಮಾಡುತ್ತದೆ.
ಟಿವಿಎಸ್ ಕ್ರೆಡಿಟ್ನೊಂದಿಗೆ, ನಿಮ್ಮ ಕನಸಿನ ಹೋಮ್ ಅಪ್ಲಾಯನ್ಸ್ ಹೊಂದುವುದು ಹಿಂದೆಂದಿಗಿಂತಲೂ ಸುಲಭವಾಗಿದೆ! ನಮ್ಮ ಗೃಹೋಪಯೋಗಿ ವಸ್ತುಗಳ ಲೋನ್ನೊಂದಿಗೆ ನಿಮ್ಮ ಎಸಿ ಖರೀದಿಗೆ ಹಣಕಾಸು ಒದಗಿಸಲು ಇದು ಸಮರ್ಥ ಮಾರ್ಗವಾಗಿದೆ. ಕನಿಷ್ಠ ಡಾಕ್ಯುಮೆಂಟೇಶನ್ ಪ್ರಕ್ರಿಯೆ ಮತ್ತು ರೌಂಡ್-ದಿ-ಕ್ಲಾಕ್ ಅನುಮೋದನೆಯು ಮೊದಲ ಬಾರಿಯ ಸಾಲಗಾರರಿಗೆ ಕೂಡ ಹಣಕಾಸಿನ ಪರಿಹಾರಗಳನ್ನು ತಕ್ಷಣವೇ ಸಾಧ್ಯವಾಗುವಂತೆ ಮಾಡುತ್ತದೆ.