ಸಾಲ ಅಥವಾ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಲು ಯೋಜಿಸುತ್ತಿದ್ದೀರಾ?
ತಕ್ಷಣವೇ ಸಿಬಿಲ್ ಸ್ಕೋರ್ ಪರಿಶೀಲಿಸಿ!
ನೀವು ಕಳಪೆ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಸಾಲದ ಮೇಲೆ ಅಧಿಕ ಬಡ್ಡಿ ವಿಧಿಸುವ ಅಥವಾ ಕ್ರೆಡಿಟ್ ಕಾರ್ಡ್ ತಿರಸ್ಕರಿಸುವ ಅವಕಾಶವಿದೆ.
ಉತ್ತಮ ಕ್ರೆಡಿಟ್ ಸ್ಕೋರ್ ಕಡ್ಡಾಯವಾಗಿದೆ.
ಆದರೆ, ಉತ್ತಮ ಸಿಬಿಲ್ ಸ್ಕೋರ್ ಎಂದರೇನು?
ಕ್ರೆಡಿಟ್ ಸ್ಕೋರ್ ಎಂಬುದು ವ್ಯಕ್ತಿಗೆ ತನ್ನ ಕ್ರೆಡಿಟ್ ಇತಿಹಾಸದ ವಿಶ್ಲೇಷಣೆಯ ಆಧಾರದ ಮೇಲೆ ನಿಯೋಜಿಸಲಾದ ಸಂಖ್ಯೆಯಾಗಿದೆ. ನೀವು ಸಾಲ ಪಡೆಯಲು ಯೋಗ್ಯರಾಗಿದ್ದೀರಾ ಎಂಬುದನ್ನು ನಿಮ್ಮ ಕ್ರೆಡಿಟ್ ಸ್ಕೋರ್ ನಿರ್ಧರಿಸುತ್ತದೆ. ಒಬ್ಬ ವ್ಯಕ್ತಿಯು ತನ್ನ ಸಾಲಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸುತ್ತಾರೆ ಎಂಬುದನ್ನು ಉತ್ತಮ ಕ್ರೆಡಿಟ್ ಸ್ಕೋರ್ ತೋರಿಸುತ್ತದೆ, ಹೀಗಾಗಿ ಭವಿಷ್ಯದ ಸಾಲಗಳನ್ನು ವೇಗವಾಗಿ ಮತ್ತು ಕಡಿಮೆ ಬಡ್ಡಿಯೊಂದಿಗೆ ಪಡೆಯುವ ಅವಕಾಶಗಳನ್ನು ಹೆಚ್ಚಿಸುತ್ತದೆ. ಕ್ರೆಡಿಟ್ ಸ್ಕೋರ್ 300 ರಿಂದ 900 ನಡುವಿನ ಸಂಖ್ಯೆಯಾಗಿದೆ ಮತ್ತು 700 ಕ್ಕಿಂತ ಹೆಚ್ಚಿನ ಯಾವುದೇ ಸಂಖ್ಯೆಯನ್ನು ಉತ್ತಮ ಸಿಬಿಲ್ ಸ್ಕೋರ್ ಎಂದು ಪರಿಗಣಿಸಲಾಗುತ್ತದೆ.
ಆದಾಗ್ಯೂ, 700 ಕ್ಕಿಂತ ಕಡಿಮೆ ಎಂದರೆ ಸಾಲ ಪಡೆಯುವುದು ಕಠಿಣ ಪರಿಶ್ರಮದಿಂದ ಕೂಡಿರುತ್ತದೆ.
ಉತ್ತಮ ಸುದ್ದಿ ಎಂದರೆ ನಿಮ್ಮ ಸಿಬಿಲ್ ಸ್ಕೋರನ್ನು ಸುಧಾರಿಸಲು ಸಾಧ್ಯವಾಗುತ್ತದೆ. ಆದ್ದರಿಂದ, ಚಿಂತೆಯನ್ನು ಬಿಡಿ ಮತ್ತು ನಿಮ್ಮ ಸಿಬಿಲ್ ಸ್ಕೋರ್ ಸುಧಾರಿಸಲು ನಿಮ್ಮ ಮುಂದಿನ ಹೆಜ್ಜೆ ಇಡಿ.
ನಿಮ್ಮ ಸಿಬಿಲ್ ಸ್ಕೋರನ್ನು ತಕ್ಷಣವೇ ಸುಧಾರಿಸಲು ಕೆಲವು ಉತ್ತಮ ಸುಲಭ ಸಲಹೆಗಳನ್ನು ನೋಡಿ:
1. ನಿಮ್ಮ ಕ್ರೆಡಿಟ್ ರಿಪೋರ್ಟನ್ನು ವಿಶ್ಲೇಷಿಸಿ ಮತ್ತು ದೋಷಗಳು ಯಾವುದಾದರೂ ಇದ್ದರೆ ಅದನ್ನು ಪರಿಹರಿಸಿ!
ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿದೆ ಎಂದು ನೀವು ಭಾವಿಸಬಹುದು. ಆದಾಗ್ಯೂ, ಸಿಬಿಲ್ ಕ್ಯಾಲ್ಕುಲೇಟರ್ ಬಳಸಿಕೊಂಡು ನೀವು ನಿಮ್ಮ ಸಿಬಿಲ್ ಸ್ಕೋರನ್ನು ಆನ್ಲೈನಿನಲ್ಲಿ ಪರಿಶೀಲಿಸಬೇಕು. ಒಂದು ವೇಳೆ ನೀವು ಕಳಪೆ ಸ್ಕೋರ್ ಹೊಂದಿದ್ದರೆ, ಅದು ಆಡಳಿತಾತ್ಮಕ ದೋಷದಿಂದಾಗಿರಬಹುದು. ನೀವು ಸಾಲವನ್ನು ಪಾವತಿಸಿರಬಹುದು ಮತ್ತು ಅದು ಇನ್ನೂ ಬಾಕಿ ಇರುವ ಇಎಂಐ ಗಳನ್ನು ತೋರಿಸುತ್ತಿರಬಹುದು. ಅಲ್ಲದೆ, ಯಾವುದೇ ಅನುಮಾನಾಸ್ಪದ ಚಟುವಟಿಕೆಗಾಗಿ ಪರಿಶೀಲಿಸಿ ; ಇದು ವಂಚನೆಯಾಗಿರಬಹುದು. ಅಂತಹ ದೋಷಗಳು ಅಥವಾ ಚಟುವಟಿಕೆಗಳು ನಿಮ್ಮ ಭವಿಷ್ಯದ ಸಾಲ ಪಡೆಯುವ ಶಕ್ತಿಯ ಮೇಲೆ ಪರಿಣಾಮ ಬೀರಬಹುದು. ನೀವು ಅಂತಹ ದೋಷಗಳನ್ನು ಕಂಡುಕೊಂಡರೆ, ಅದನ್ನು ಸಿಬಿಲ್ ಗೆ ವರದಿ ಮಾಡಿ ಮತ್ತು ತಕ್ಷಣವೇ ವಿವಾದವನ್ನು ಪರಿಹರಿಸಿ. ಪರಿಷ್ಕೃತ ಸ್ಕೋರ್ ಸಕಾರಾತ್ಮಕವಾಗಿರಬಹುದು. [ನಮ್ಮ ಕ್ರೆಡಿಟ್ ಕ್ಯಾಲ್ಕುಲೇಟರ್ನಲ್ಲಿ ನಿಮ್ಮ ಸಿಬಿಲ್ ಸ್ಕೋರ್ ಪರಿಶೀಲಿಸಿ]
2. ಪ್ರತಿ ಬಾರಿ, ಸಮಯಕ್ಕೆ ಸರಿಯಾಗಿ ಪಾವತಿಸಿ!
ಕೆಲವು ಜನರು ತಮ್ಮ ಬಿಲ್ಗಳನ್ನು ತಡವಾಗಿ ಪಾವತಿಸುತ್ತಾರೆ, ಕೆಲವರು ಪಾವತಿಯನ್ನು ಸಂಪೂರ್ಣವಾಗಿ ಸ್ಕಿಪ್ ಮಾಡುತ್ತಾರೆ. ಆದಾಗ್ಯೂ, ಒಂದು ತಡವಾದ ಪಾವತಿಯೂ ಕ್ರೆಡಿಟ್ ಸ್ಕೋರ್ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ, ಗಡುವು ದಿನಾಂಕಕ್ಕಿಂತ ಮೊದಲು ಎಲ್ಲಾ ಪಾವತಿಯನ್ನು ಮಾಡುವುದು ಯಾವಾಗಲೂ ಉತ್ತಮ ಅಭ್ಯಾಸವಾಗಿದೆ. ಗಡುವು ದಿನಾಂಕಕ್ಕಿಂತ ಕನಿಷ್ಠ ಐದು ದಿನಗಳ ಮೊದಲು ಪಾವತಿ ಮಾಡುವುದು ಮತ್ತು ಚೆಕ್ ಮೂಲಕ ಪಾವತಿಸುವುದಾದರೆ, ಗಡುವು ದಿನಾಂಕಕ್ಕಿಂತ 10 ದಿನಗಳ ಮೊದಲು ಮಾಡುವುದು ನಿಮ್ಮ ಸಿಬಿಲ್ ಸ್ಕೋರ್ ಅನ್ನು ಗ್ರೀನ್ ಝೋನ್ಗೆ ತೆಗೆದುಕೊಂಡು ಹೋಗುತ್ತದೆ.
3. ನಿಮ್ಮ ಕ್ರೆಡಿಟ್ ಕಾರ್ಡ್ಗಳನ್ನು ಬುದ್ಧಿವಂತಿಕೆಯಿಂದ ಬಳಸಿ!
ಕ್ರೆಡಿಟ್ ಕಾರ್ಡ್ಗಳು ಎಲ್ಲರಿಗೂ ಉತ್ತಮ ಟೂಲ್ ಆಗಿದೆ. ಇದು ಹಲವಾರು ಪ್ರಯೋಜನಗಳೊಂದಿಗೆ ಬರುತ್ತದೆ ; ಇದು ನಮ್ಮ ಅಗತ್ಯತೆಗಳು, ರಿವಾರ್ಡ್ ಪಾಯಿಂಟ್ಗಳು, ಉಚಿತ ವೌಚರ್ಗಳು ಮತ್ತು ನಗದು ಇಲ್ಲದೆ ತಿರುಗಾಡುವಾಗ ಮನಸ್ಸಿನ ಶಾಂತಿಯನ್ನು ಒದಗಿಸುತ್ತದೆ. ಆದಾಗ್ಯೂ, ಖರ್ಚಿನ ಶಿಸ್ತಲ್ಲಿ ಯಾವುದೇ ಸಮಸ್ಯೆಗಳನ್ನು ತಪ್ಪಿಸಲು ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಬಳಕೆಯನ್ನು ಮಿತಿಗೊಳಿಸಬೇಕು. ಕೆಲವರು 30 ಶೇಕಡಾ ಕ್ರೆಡಿಟ್ ಬಳಕೆಯ ನಿಯಮವನ್ನು ಅನುಸರಿಸಲು ಕೇಳುತ್ತಾರೆ, ಆದರೆ ಕೆಲವರು ನಿಮ್ಮ ಮಿತಿಯ 50 ಶೇಕಡಾವಾರು ಖರ್ಚು ಮಾಡಲು ಸಲಹೆ ನೀಡುತ್ತಾರೆ. ಸುರಕ್ಷತೆ ದೃಷ್ಟಿಯಿಂದ ನಾವು 40 ಶೇಕಡಾವಾರಿನೊಂದಿಗೆ ಹೋಗೋಣ. ಕ್ರೆಡಿಟ್ ಕಾರ್ಡಿನ ಉತ್ತಮ ಬಳಕೆಯು ಉತ್ತಮ ಸಿಬಿಲ್ ಸ್ಕೋರ್ ಪಡೆಯಲು ನಿಮಗೆ ಅನುವು ಮಾಡಿಕೊಡುತ್ತದೆ.
4. ಅಲ್ಪಾವಧಿಯಲ್ಲಿ ಅನೇಕ ಸಾಲ/ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ಗಳನ್ನು ತಪ್ಪಿಸಿ!
ಅಲ್ಪಾವಧಿಯಲ್ಲಿ, ಸಾಲಗಳು ಮತ್ತು ಕ್ರೆಡಿಟ್ ಕಾರ್ಡಿಗೆ ಅನೇಕ ವಿಚಾರಣೆಗಳು ಉತ್ತಮ ಪ್ರಭಾವವನ್ನು ಸೃಷ್ಟಿಸುವುದಿಲ್ಲ. ಇದು ನೀವು ಕ್ರೆಡಿಟ್ ಹಂಗ್ರಿ ಮತ್ತು ಅನೇಕ ಮೂಲಗಳಿಂದ ಕ್ರೆಡಿಟ್ ಹುಡುಕುತ್ತಿದ್ದೀರಿ ಎಂಬುದನ್ನು ತೋರಿಸುತ್ತದೆ. ಆದ್ದರಿಂದ, ನಿಮ್ಮ ಸ್ಕೋರ್ನಲ್ಲಿ ಹೆಚ್ಚಿನ ಇಳಿಕೆಯನ್ನು ನೀವು ಬಯಸದಿದ್ದರೆ, ನೀವು ಅಲ್ಪಾವಧಿಯಲ್ಲಿ ಅನೇಕ ಕ್ರೆಡಿಟ್ ಕಾರ್ಡ್ಗಳು ಮತ್ತು ಸಾಲಗಳಿಗೆ ಅಪ್ಲೈ ಮಾಡುವುದನ್ನು ನಿಲ್ಲಿಸಬೇಕು. ಇದಲ್ಲದೆ, ಕೆಲವು ಸಾಲದಾತರು ನಿಮ್ಮ ಪರಿಸ್ಥಿತಿಯ ಪ್ರಯೋಜನವನ್ನು ಕೂಡ ಪಡೆಯಬಹುದು ಮತ್ತು ಹೆಚ್ಚಿನ ಬಡ್ಡಿ ದರದ ಸಾಲಗಳಲ್ಲಿ ನಿಮ್ಮನ್ನು ಆಕರ್ಷಿಸಬಹುದು.
- ಬೋನಸ್ ಸಲಹೆಗಳು:ಭದ್ರತೆ ಸಹಿತ ಮತ್ತು ಭದ್ರತೆ ರಹಿತ ಸಾಲಗಳ ಸರಿಯಾದ ಮಿಶ್ರಣವನ್ನು ಪಡೆಯಿರಿ.
- ಮೊದಲು ಹೆಚ್ಚಿನ ಬಡ್ಡಿ ದರಗಳೊಂದಿಗಿನ ಸಾಲಗಳನ್ನು ಪಾವತಿಸಿ.
- ಕ್ರೆಡಿಟ್ ಕಾರ್ಡ್ನೊಂದಿಗೆ ಸಾಲಗಳನ್ನು ಸೆಟಲ್ ಮಾಡಬೇಡಿ.
- ಹಳೆಯ ಕ್ರೆಡಿಟ್ ಕಾರ್ಡ್ ಬಳಸಿ.
- ನಿಮ್ಮ ಮೊದಲ ಕ್ರೆಡಿಟ್ ಕಾರ್ಡ್ ಅನ್ನು ಜಾಣತನದಿಂದ ಪಡೆಯಿರಿ.
- ನಿಮ್ಮ ಕ್ರೆಡಿಟ್ ಮಿತಿಯನ್ನು ಹೆಚ್ಚಿಸಿ.