ಸುಡುವ ಬೇಸಿಗೆಯ ಬಿಸಿಯಾಗಿರಲಿ ಅಥವಾ ಚಳಿಗಾಲದ ಚಳಿಯಾಗಿರಲಿ, ಗೃಹೋಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ ಗ್ಯಾಜೆಟ್ಗಳ ಬೇಡಿಕೆ ಎಂದಿಗೂ ನಿಲ್ಲುವುದಿಲ್ಲ. ಮೊಬೈಲ್ ಫೋನ್ಗಳು, ಲ್ಯಾಪ್ಟಾಪ್ಗಳು, ಮ್ಯೂಸಿಕ್ ಸಿಸ್ಟಮ್ಗಳು, ಏರ್ ಕಂಡೀಶನರ್ಗಳು, ವಾಶಿಂಗ್ ಮಷೀನ್ಗಳು, ಟೆಲಿವಿಷನ್ಗಳು, ಮೈಕ್ರೋವೇವ್ಗಳು ಮತ್ತು ರೆಫ್ರಿಜರೇಟರ್ಗಳಂತಹ ಗೃಹೋಪಯೋಗಿ ವಸ್ತುಗಳ ಪ್ರಾಡಕ್ಟ್ಗಳನ್ನು ಖರೀದಿಸಲು ನೀವು ಬಯಸುತ್ತೀರಿ. ರಿಟೇಲರ್ಗಳು ಮತ್ತು ಬ್ಯಾಂಕುಗಳು ವಿವಿಧ ರಿಯಾಯಿತಿ ಕೊಡುಗೆಗಳು ಮತ್ತು ಹಣಕಾಸು ಆಯ್ಕೆಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಾರೆ. ಅತ್ಯಂತ ಜನಪ್ರಿಯ ಆಯ್ಕೆಗಳಲ್ಲಿ ಒಂದು ಕ್ರೆಡಿಟ್ ಕಾರ್ಡ್ ಆಗಿದ್ದರೂ, ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡುವ ಮೊದಲು ಇನ್ನೊಂದು ಆಯ್ಕೆಯನ್ನು ಅಂದರೆ ಗೃಹೋಪಯೋಗಿ ವಸ್ತುಗಳ ಲೋನ್ಗಳನ್ನು ನೋಡಿ.
ಗೃಹೋಪಯೋಗಿ ವಸ್ತುಗಳ ಲೋನ್ಗಳು - ಯಾಕೆ?
ಗೃಹೋಪಯೋಗಿ ವಸ್ತುಗಳ ಲೋನ್ಗಳು ಸುಲಭ ಇಎಂಐ ಮರುಪಾವತಿ ಆಯ್ಕೆಗಳಲ್ಲಿ ಪ್ರಾಡಕ್ಟ್ ಖರೀದಿಸಲು ಬ್ಯಾಂಕ್ ನಿಮಗೆ ನೀಡುವ ಹಣಕಾಸು ಆಗಿದೆ. ಇದಲ್ಲದೆ, ಸಾಲ ಪಡೆಯಲು ನೀವು ವೈಯಕ್ತಿಕ ಅಸೆಟ್ ಅನ್ನು ರಿಸ್ಕ್ನಲ್ಲಿಡಬೇಕಾಗಿಲ್ಲ ಮತ್ತು ನೀವು ತ್ವರಿತ ಅನುಮೋದನೆಯನ್ನು ಪಡೆಯುತ್ತೀರಿ. ಅಲ್ಲದೆ, ಇತರ ಸಾಲಗಳಿಗೆ ಹೋಲಿಸಿದರೆ ಅರ್ಹತಾ ಮಾನದಂಡಗಳು
ಗೃಹೋಪಯೋಗಿ ವಸ್ತುಗಳ ಲೋನ್ಗಳು – ಹೇಗೆ?
ನೀವು ಗೃಹೋಪಯೋಗಿ ವಸ್ತುಗಳ ಲೋನ್ಗಳನ್ನು ಪಡೆಯಲು ಯೋಜಿಸುತ್ತಿದ್ದರೆ, ನೀವು ಅದನ್ನು ಪಡೆಯುವ ಮೊದಲು ಪರಿಗಣಿಸಬೇಕಾದ ಕೆಲವು ಪ್ರಮುಖ ವಿಷಯಗಳನ್ನು ನೋಡಿ
1. ಬಡ್ಡಿ ದರ
ಈ ಗೃಹೋಪಯೋಗಿ ವಸ್ತುಗಳ ಲೋನ್ಗಳು, ಪಡೆಯುವಾಗ ಬಡ್ಡಿ ದರವು ಅತ್ಯಂತ ಪ್ರಮುಖ ನಿರ್ಧರಿತ ಅಂಶಗಳಲ್ಲಿ ಒಂದಾಗಿರಬೇಕು, ಏಕೆಂದರೆ ಇದು ಪ್ರಾಡಕ್ಟ್ನ ನಿಜವಾದ ಬೆಲೆಯನ್ನು ಹೊರತುಪಡಿಸಿ ನೀವು ಪಾವತಿಸಬೇಕಾದ ಹೆಚ್ಚುವರಿ ಮೊತ್ತವನ್ನು ನಿರ್ಧರಿಸುತ್ತದೆ. ಸಾಮಾನ್ಯವಾಗಿ, ಕ್ರೆಡಿಟ್ ಕಾರ್ಡ್ಗಳು ಅಥವಾ ಇತರ ರೀತಿಯ ಸಾಲಗಳಿಗೆ ಹೋಲಿಸಿದರೆ ಸಿಡಿ ಲೋನ್ಗಳಲ್ಲಿ ಬಡ್ಡಿ ದರವು ಕಡಿಮೆಯಾಗಿರುತ್ತದೆ. ಕೆಲವು ಹಣಕಾಸು ಸಂಸ್ಥೆಗಳು ಗೃಹೋಪಯೋಗಿ ವಸ್ತುಗಳ ನಿರ್ದಿಷ್ಟ ಶ್ರೇಣಿಯ ಮೇಲೆ 0% ಬಡ್ಡಿ ಆಫರ್ಗಳನ್ನು ಕೂಡ ಒದಗಿಸುತ್ತವೆ.
2. ಅವಧಿ
ಗೃಹೋಪಯೋಗಿ ವಸ್ತುಗಳ ಲೋನಿನ ಅವಧಿಯು ನೀವು ಕಂತುಗಳನ್ನು ಪಾವತಿಸಬೇಕಾದ ಮತ್ತು ಪ್ರತಿ ತಿಂಗಳು ಪಾವತಿಸಬೇಕಾದ ಮೊತ್ತವಾಗಿದೆ. ಸಾಮಾನ್ಯವಾಗಿ, ಕಾಲಾವಧಿಯ ತಿಂಗಳ ಸಂಖ್ಯೆಯು 3 ರಿಂದ 24 ತಿಂಗಳ ನಡುವೆ ಇರುತ್ತದೆ. ಆದಾಗ್ಯೂ, ಇದು ಮತ್ತೊಮ್ಮೆ ಹಣಕಾಸು ಸಂಸ್ಥೆ ಮತ್ತು ನೀವು ಖರೀದಿಸುತ್ತಿರುವ ಪ್ರಾಡಕ್ಟ್ ಮೇಲೆ ಅವಲಂಬಿತವಾಗಿರುತ್ತದೆ. ಕಡಿಮೆ ಕಾಲಾವಧಿಯನ್ನು ಆಯ್ಕೆ ಮಾಡಲು ಸಲಹೆ ನೀಡಲಾಗುತ್ತದೆ, ಇದರಿಂದಾಗಿ ನೀವು ಬಡ್ಡಿಯಾಗಿ ತುಂಬಾ ಹಣ ಕಳೆದುಕೊಳ್ಳದೆ ಸಾಧ್ಯವಾದಷ್ಟು ಬೇಗ ಸಾಲವನ್ನು ಮರುಪಾವತಿ ಮಾಡಬಹುದು.
3. ಡೌನ್ಪೇಮೆಂಟ್
ಸಾಮಾನ್ಯವಾಗಿ, ಬ್ಯಾಂಕ್ಗಳು ಪ್ರಾಡಕ್ಟ್ನ ಒಟ್ಟು ಮೊತ್ತದ 80 ರಿಂದ 95 ಶೇಕಡಾವಾರು ಸಾಲಗಳನ್ನು ಒದಗಿಸುತ್ತವೆ, ಅಂದರೆ ನೀವು ಉಳಿದ ಮೊತ್ತವನ್ನು ಡೌನ್ ಪೇಮೆಂಟ್ ಆಗಿ ಪಾವತಿಸಬೇಕಾಗುತ್ತದೆ. ಆದ್ದರಿಂದ, ಸಾಲಕ್ಕೆ ಅಪ್ಲೈ ಮಾಡುವ ಮೊದಲು ನೀವು ಈ ವಿವರಗಳನ್ನು ಪರಿಶೀಲಿಸುವುದನ್ನು ಖಚಿತಪಡಿಸಿಕೊಳ್ಳಿ, ಇದರಿಂದಾಗಿ ನೀವು ಡೌನ್ ಪೇಮೆಂಟ್ ಮೊತ್ತಕ್ಕೆ ಸಿದ್ಧರಾಗಬಹುದು.
4. ಗುಪ್ತ ವೆಚ್ಚಗಳು
ನಿರ್ದಿಷ್ಟ ಶ್ರೇಣಿಯ ಪ್ರಾಡಕ್ಟ್ಗಳ ಮೇಲೆ 0 ಶೇಕಡಾ ಬಡ್ಡಿ ಎಂದು ಆಫರ್ ಹೇಳಬಹುದು. ಆದಾಗ್ಯೂ, ಪ್ರಕ್ರಿಯಾ ಶುಲ್ಕದಂತಹ ಇತರ ಶುಲ್ಕಗಳು ಇರಬಹುದು. ಅಲ್ಲದೆ, ನೀವು ಸಿಡಿ ಲೋನನ್ನು ಪಡೆಯುತ್ತಿದ್ದರೆ ಆ ಪ್ರಾಡಕ್ಟ್ ಮೇಲೆ ಯಾವುದೇ ರಿಯಾಯಿತಿಯನ್ನು ಪಡೆಯಲು ಸಾಧ್ಯವಿಲ್ಲ ಎಂಬ ಷರತ್ತುಗಳಿವೆ. ನೀವು ಆ ಪ್ರಾಡಕ್ಟ್ನ ಮೇಲೆ ಯಾವುದೇ ರಿಯಾಯಿತಿಯನ್ನು ಪಡೆಯಲು ಸಾಧ್ಯವಿಲ್ಲದಂತಹ ಷರತ್ತುಗಳಿರಬಹುದು. ಆದ್ದರಿಂದ, ಅಂತಿಮವಾಗಿ ನೀವು ಒಂದು ಅಥವಾ ಇನ್ನೊಂದು ರೀತಿಯಲ್ಲಿ ಹಣವನ್ನು ಕಳೆದುಕೊಳ್ಳುವ ಸಂಭವವಿರುತ್ತದೆ.
5. ಡಾಕ್ಯುಮೆಂಟೇಶನ್
ಕನಿಷ್ಠ ಡಾಕ್ಯುಮೆಂಟೇಶನ್ ಕಾರಣದಿಂದಾಗಿ ಗೃಹೋಪಯೋಗಿ ವಸ್ತುಗಳ ಲೋನ್ಗಳು ಪಡೆಯಲು ಸುಲಭವಾದ ಸಾಲಗಳಲ್ಲಿ ಒಂದಾಗಿದೆ. ನೀವು ಸಲ್ಲಿಸಬೇಕಾಗಿರುವುದು ಕೇವಲ ನಿಮ್ಮ ಗುರುತಿನ ಪುರಾವೆ, ವಿಳಾಸದ ಪುರಾವೆ ಮತ್ತು ಆದಾಯದ ಪುರಾವೆ ಹಾಗೂ ನೀವು ತ್ವರಿತ ಅನುಮೋದನೆಯನ್ನು ಪಡೆಯಬಹುದು.