“ನಮಗೆ ಅರ್ಥವಾಗದ ವಿಷಯಗಳ ಕುರಿತು ನಾವು ಎಂದಿಗೂ ಭಯದಲ್ಲಿರುತ್ತೇವೆ" - ರಾಬರ್ಟ್ ಲಂಗ್ಡನ್, ದಿ ಲಾಸ್ಟ್ ಸಿಂಬಲ್
ಸಾಲವನ್ನು ತೆಗೆದುಕೊಳ್ಳುವ ದಿನಗಳ ಬೇಸರದ ಪೇಪರ್ವರ್ಕ್, ನಿರಾಶಾದಾಯಕ ವಿಳಂಬಗಳು ಮತ್ತು ಗ್ರಾಹಕ ಸೇವೆಯನ್ನು ನಿಮ್ಮ ಕೆಟ್ಟ ಶತ್ರುವಿಗೆ ನೀವು ಬಯಸದಿರುವಷ್ಟು ಕೆಟ್ಟದಾಗಿರುತ್ತದೆ. ಕ್ರೆಡಿಟ್ ಅನ್ನು ಪಡೆಯುವುದು ಈಗ ಸುಲಭವಾಗಿದೆ. ಪೇಪರ್ವರ್ಕ್ ಅನ್ನು ಹೆಚ್ಚಿನ ಪಾಲು ತೆಗೆದುಹಾಕಲಾಗಿದೆ ಮತ್ತು ಹಿಂದೆಂದಿಗಿಂತಲೂ ವೇಗವಾಗಿ ಮತ್ತು ಹೆಚ್ಚು ಗ್ರಾಹಕ-ಸ್ನೇಹಿಯಾಗಿ ಪ್ರಕ್ರಿಯೆಗೊಳಿಸಲಾಗುತ್ತದೆ, ಈಗ ಕಾರು, ಬೈಕ್ ಅಥವಾ ಎಲ್ಇಡಿ ಟಿವಿ ಗೆ ಹಣಕಾಸು ಒದಗಿಸುವುದು ತುಂಬಾ ಸುಲಭವಾಗಿದೆ.
ಇದರ ಹೊರತಾಗಿಯೂ, ಸಾಲ ಪಡೆಯುವುದರ ಬಗ್ಗೆ ಅನೇಕ ತಪ್ಪುಗಳು ಮುಂದುವರೆಯುತ್ತಿದೆ. ಉಳಿತಾಯವನ್ನು ಸದ್ಗುಣವಾಗಿ ಎತ್ತಿಹಿಡಿಯುವ ಮತ್ತು ಸಾಲದ ಕಲ್ಪನೆಯನ್ನು ಅಸಹ್ಯ ಎಂದು ನಿರ್ಣಯಿಸುವ ಸಮಾಜದಲ್ಲಿ, ಅನೇಕ ಭಾರತೀಯರು ಸಾಲವನ್ನು ತೀರಿಸಲು ಸಾಧ್ಯವಿಲ್ಲ ಎಂಬ ಭಯದಿಂದ ಸಾಲವನ್ನು ತೆಗೆದುಕೊಳ್ಳುವ ಬಗ್ಗೆ ಎಚ್ಚರದಿಂದಿರುತ್ತಾರೆ. ಈ ಭಯವನ್ನು ಹಣಕಾಸು ಸಂಸ್ಥೆಯ ಪುರಾತನ ಚಿತ್ರಣ - ಹಲವಾರು ಪ್ರಶ್ನೆಗಳನ್ನು ಕೇಳುವ ಮತ್ತು ಅಸಂಖ್ಯಾತ ಹಂತಗಳ ಮೂಲಕ ನಿಮ್ಮನ್ನು ಅಲ್ಲಿಂದಿಲ್ಲಿಗೆ ಜಿಗಿಯುತ್ತಿರುವಂತೆ ಮಾಡುವ ಕಠಿಣ ನೋಟದ ಬ್ಯಾಂಕರ್ಗಳೊಂದಿಗಿನ ತಣ್ಣನೆಯ ಮತ್ತು ನಿಷೇಧಿತ ಸ್ಥಳ ಎಂಬ ಭಾವನೆಯೊಂದಿಗೆ ಇನ್ನಷ್ಟು ಹದಗೆಡಿಸುತ್ತದೆ.
ತಪ್ಪು ಕಲ್ಪನೆಗಳು, ಅದೃಷ್ಟವಶಾತ್, ಬಲೂನ್ಗಳಂತಿರುತ್ತವೆ - ಅವು ಎತ್ತರಕ್ಕೆ ಏರಬಹುದು ಮತ್ತು ದೂರ ಹಾರಬಹುದು, ಆದರೆ ಅವು ಅನಿಲದಿಂದ ತುಂಬಿಕೊಂಡಿರುತ್ತವೆ ಮತ್ತು ಅವುಗಳನ್ನು ಸ್ಫೋಟಿಸಲು ಸಣ್ಣ ಚುಚ್ಚುವಿಕೆ ಸಾಕು.. ಈ ಪೋಸ್ಟಿನಲ್ಲಿ, ಸಾಲ ಪಡೆಯುವ ಬಗೆಗಿನ ಅತ್ಯಂತ ಸಾಮಾನ್ಯ ತಪ್ಪುಕಲ್ಪನೆಗಳನ್ನು ನಾವು ಪರಿಶೀಲಿಸುತ್ತೇವೆ ಮತ್ತು ಅವುಗಳನ್ನು ನಿಮಗಾಗಿ ಬಿಡಿಸಿ ಹೇಳುತ್ತೇವೆ.
1. ನನ್ನ ಪ್ರೊಫೈಲ್ನೊಂದಿಗೆ, ನಾನು ಎಂದಿಗೂ ಸಾಲ ಪಡೆಯಲಾಗುವುದಿಲ್ಲ!
ಸಾಲ ಪಡೆಯಲು ಅನೇಕರಲ್ಲಿ ಅವರ ಪ್ರೊಫೈಲ್ಗಳು 'ಸಾಕಾಗುವಷ್ಟಿಲ್ಲ' ಎಂಬುದು ಸಾಮಾನ್ಯ ತಪ್ಪು ಕಲ್ಪನೆಯಾಗಿದೆ. ಅವರು ಪಡೆಯುವ ಸಂಬಳವು ಸೂಕ್ತವಾಗದಿರಬಹುದು, ಅವರ ಕ್ರೆಡಿಟ್ ಇತಿಹಾಸದ ಕೊರತೆ (ಅಥವಾ ಕಳಪೆ ಸಿಬಿಲ್ ಸ್ಕೋರ್) ಎದುರಾಗಬಹುದು ಅಥವಾ ಅವರ ಬಾಡಿಗೆ ವಸತಿ ಸೌಲಭ್ಯಗಳು ಸಮಸ್ಯೆಯನ್ನು ಉಂಟುಮಾಡಬಹುದು ಎಂದು ಅವರು ನಂಬುತ್ತಾರೆ.
ಉತ್ತಮ ಸುದ್ದಿ ಇಲ್ಲಿದೆ - ನಿಮ್ಮ ಪ್ರೊಫೈಲ್ ಏನೇ ಆಗಿರಬಹುದು, ನೀವು ಸಾಲ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ! ವಿವಿಧ ರೀತಿಯ ಪ್ರೊಫೈಲ್ಗಳಿಗೆ ಸರಿಹೊಂದುವಂತೆ ಹಣಕಾಸುದಾರರು ಹಲವಾರು ಸ್ಕೀಮ್ಗಳನ್ನು ಹೊಂದಿದ್ದಾರೆ. ನೀವು ಅಪ್ಲೈ ಮಾಡಿದಾಗ ನಿಮ್ಮ ವಯಸ್ಸು, ಆದಾಯ, ಉದ್ಯೋಗ ಮತ್ತು ನಿವಾಸದ ಸ್ಥಳವು ಎದುರಾಗುತ್ತದೆ, ಈ ಯಾವುದೇ ವಿವರಗಳ ಕಾರಣದಿಂದಾಗಿ ನಿಮ್ಮ ಅಪ್ಲಿಕೇಶನ್ ಅನ್ನು ತಿರಸ್ಕರಿಸದ ಸಾಧ್ಯತೆ ಇರುತ್ತದೆ. ಮುಂದುವರಿಯಿರಿ ಮತ್ತು ಆತ್ಮವಿಶ್ವಾಸದೊಂದಿಗೆ ಅಪ್ಲೈ ಮಾಡಿ!
2. ನಾನು ನಿರ್ವಹಿಸಬಹುದಾಗಿರುವುದಕ್ಕಿಂತ ಹೆಚ್ಚಿನ ಪೇಪರ್ವರ್ಕ್ ಇರುತ್ತದೆ
ಪೇಪರ್ವರ್ಕ್. ಪದದ ಶಬ್ದವು ಡಾಕ್ಯುಮೆಂಟ್ಗಳಿಂದ ತುಂಬಿದ ದಪ್ಪದ ಫೋಲ್ಡರ್ಗಳ ಚಿತ್ರಣವನ್ನು ಮನಸ್ಸಿಗೆ ತರುತ್ತದೆ, ಪೆನ್ನ ಎಲ್ಲಾ ಶಾಯಿಯನ್ನು ಖಾಲಿ ಮಾಡಲು ಸಾಕಷ್ಟು ಸಹಿಗಳು, ಮತ್ತು ಒಂದು ಪ್ರಮುಖ ಡಾಕ್ಯುಮೆಂಟ್ ತಪ್ಪಿಹೋಗಿರಬಹುದೇನೋ ಎಂಬ ಭಯದ ಭಾವನೆಯನ್ನು ತರುತ್ತದೆ. ಇದು ಹಿಂದೆ ನಿಜವಾಗಿದ್ದರೂ, ಅದು ಇನ್ನು ಮುಂದೆ ಹೀಗಿರುವುದಿಲ್ಲ. ಈ ದಿನಗಳಲ್ಲಿ ಎನ್ಬಿಎಫ್ಸಿ ಗಳು ಇಕೆವೈಸಿ ಮತ್ತು ಇಸೈನ್ ಕಾರ್ಯವಿಧಾನಗಳನ್ನು ಅನುಷ್ಠಾನಗೊಳಿಸುತ್ತಿವೆ, ಎರಡೂ ಕೂಡ ಸೆಕೆಂಡುಗಳಲ್ಲಿ ಪ್ರತಿಯೊಂದು ಅಗತ್ಯ ವಿವರಗಳನ್ನು ಅಕ್ಸೆಸ್ ಮಾಡಲು ಅನುವು ಮಾಡಿಕೊಡುತ್ತಾರೆ - ಇದು ಪೂರ್ತಿ ಆನ್ಲೈನ್ ಆಗಿದೆ ಮತ್ತು ಯಾವುದೇ ಪೇಪರ್ವರ್ಕ್ ಅಗತ್ಯವಿಲ್ಲ!
3. ಇದು ವರ್ಷಾನುಗಟ್ಟಲೆ ಸಮಯವನ್ನು ತೆಗೆದುಕೊಳ್ಳುತ್ತದೆ!
ಈ ತಪ್ಪು ಕಲ್ಪನೆಯು ಚಟ್ನಿಯ ಕಲೆಯಂತೆ ಹಠಮಾರಿಯಾಗಿದೆ - ದೂರವಾಗಲು ನಿರಾಕರಿಸುತ್ತದೆ. ಸಾಲದ ಅನುಮೋದನೆ ಪಡೆಯಲು ಇನ್ನು ಮುಂದೆ ತಿಂಗಳು, ವಾರಗಳು ಅಥವಾ ದಿನಗಳನ್ನು ತೆಗೆದುಕೊಳ್ಳುವುದಿಲ್ಲ. ನಿಮ್ಮ ಸಾಲದ ಅಪ್ಲಿಕೇಶನ್ನಿನ ಪ್ರತಿಯೊಂದು ಪ್ರಕ್ರಿಯೆ - ನಿಮ್ಮ ವಿವರಗಳ ಪ್ರವೇಶದಿಂದ ಹಿಡಿದು ಕ್ರೆಡಿಟ್ ಅನುಮೋದನೆ ಪ್ರಕ್ರಿಯೆಗಳವರೆಗೆ - ಡಿಜಿಟಲ್ ಆಗಿರುತ್ತದೆ ಮತ್ತು ಅಂತಹ ಪ್ರಕ್ರಿಯೆಯನ್ನು ಬಹುತೇಕ ತ್ವರಿತವಾಗಿ ಪೂರ್ಣಗೊಳಿಸಲಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ನಿಮ್ಮ ಸಾಲವನ್ನು ಅನುಮೋದಿಸಲು ಕೆಲವು ಗಂಟೆಗಳಿಗಿಂತ ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಅನುಮೋದನೆ ಪ್ರಕ್ರಿಯೆಯ ಸಾಮಾನ್ಯ ಅವಧಿಯು T20 ಮ್ಯಾಚ್ನಷ್ಟು ದೀರ್ಘವಾಗಿರುತ್ತದೆ!
4. ಬಡ್ಡಿ ದರಗಳು ನನಗೆ ತುಂಬಾ ಹೆಚ್ಚಾಗಿರಬಹುದು!
ಬ್ಯಾಂಕುಗಳು ಮತ್ತು ಎನ್ಬಿಎಫ್ಸಿ ಗಳಲ್ಲಿ ಸೇಲ್ಸ್ ಮ್ಯಾನೇಜರ್ಗಳು ಪ್ರತಿದಿನ ಹಲವಾರು ಕಳಕಳಿಗಳನ್ನು ಪರಿಹರಿಸುತ್ತಾರೆ, ಆದರೆ ಪ್ರತಿ ಕೆಲವು ಗಂಟೆಗಳಲ್ಲಿ ಪಾಪ್ ಅಪ್ ಆಗುವ ಒಂದು ಪ್ರಶ್ನೆ "ಬಡ್ಡಿ ದರಗಳು ಕೈಗೆಟಕುವಂತಿವೆಯೇ?" . ಬಡ್ಡಿ ದರವು ಹೆಚ್ಚಾಗಿ ನಿಮ್ಮ ಪ್ರೊಫೈಲ್ ಮೇಲೆ ಅವಲಂಬಿತವಾಗಿರುವಾಗ, ದೀರ್ಘಾವಧಿಯನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಇಎಂಐ ಗಳನ್ನು ಕೈಗೆಟಕುವಂತೆ ಮಾಡಬಹುದು. ಇದಲ್ಲದೆ, ಯಾವಾಗಲೂ ಉತ್ತಮ ರಿಯಾಯಿತಿಗಳು ಮತ್ತು ಆಫರ್ಗಳನ್ನು ಪಡೆಯಬೇಕು - ಅವುಗಳ ಬಗ್ಗೆ ಕೇಳಲು ಮರೆಯಬೇಡಿ!
ಸಾಲವು ಹೊರೆ ಅಥವಾ ಪ್ರತಿಬಂಧಕವಲ್ಲ - ವಾಸ್ತವವಾಗಿ, ನಿಮ್ಮ ಆಕಾಂಕ್ಷೆಗಳನ್ನು ಹೆಚ್ಚು ಸಮಯ ಕಾಯದೆ ಅಥವಾ ನಂತರದ ದಿನಾಂಕಕ್ಕೆ ಮುಂದೂಡದೆ ಅದನ್ನು ಸಾಧಿಸಲು ಇದು ಒಂದು ಉತ್ತಮ ಮಾರ್ಗವಾಗಿದೆ! ಮೇಲೆ ವಿವರಿಸಲಾದ ತಪ್ಪು ಕಲ್ಪನೆಗಳು ನಿಮ್ಮನ್ನು ಸಾಲಕ್ಕೆ ಅಪ್ಲೈ ಮಾಡುವುದರಿಂದ ತಡೆಯುವಂತೆ ಮಾಡಬೇಡಿ. ಉತ್ತಮ, ಉತ್ಕೃಷ್ಟ ಮತ್ತು ಹೆಚ್ಚು ತೃಪ್ತ ಜೀವನದತ್ತ ಹೆಜ್ಜೆ ಹಾಕಿ - ಇದನ್ನು ನೀವು ಪ್ರಾರಂಭಿಸಲು ಬೇಕಾಗಿರುವುದು ಅನುಕೂಲಕರ ಮತ್ತು ಸಮಯೋಚಿತ ಸಾಲ.