ಟಿವಿಎಸ್ ಕ್ರೆಡಿಟ್ ಭಾರತದಾದ್ಯಂತ ಲಕ್ಷಾಂತರ ಗ್ರಾಹಕರಿಗೆ ವಿಶ್ವಾಸಾರ್ಹ ಕ್ರೆಡಿಟ್ ಪಾಲುದಾರನಾಗಿದೆ. ಟಿವಿಎಸ್ ಕ್ರೆಡಿಟ್ ಮೋಸದ ಚಟುವಟಿಕೆಗಳ ಬಗ್ಗೆ ಆನ್ಲೈನಿನಲ್ಲಿ ತಿಳಿದುಕೊಳ್ಳಲು ನಿಮ್ಮನ್ನು ಕೋರುತ್ತದೆ. ವಂಚನೆಯು ಕಾರ್ಡ್ದಾರರ ಅರಿವಿಗೆ ಬಾರದ ಕ್ರೆಡಿಟ್/ಡೆಬಿಟ್ ಕಾರ್ಡ್ ವಿವರಗಳ ಕಾನೂನುಬಾಹಿರ ಬಳಕೆಯಾಗಿದೆ. ಇಮೇಲ್, ತ್ವರಿತ ಮೆಸೇಜಿಂಗ್, ವೆಬ್ಸೈಟ್ಗಳು ಮತ್ತು ಫೋನ್ ಕರೆಗಳು ವೈಯಕ್ತಿಕ ಡೇಟಾವನ್ನು ಕದಿಯುವ ಸಾಮಾನ್ಯ ಮೂಲಗಳಾಗಿವೆ. ಆದ್ದರಿಂದ, ವಂಚನೆಯ ಬೆದರಿಕೆಯನ್ನು ನಿವಾರಿಸಲು ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್, ಪಿನ್ ನಂಬರ್, ಸಿವಿವಿ ಮುಂತಾದ ಯಾವುದೇ ಗೌಪ್ಯ ಮಾಹಿತಿಯನ್ನು ಅಜ್ಞಾತ ವೆಬ್ಸೈಟ್ಗಳಲ್ಲಿ ಹಂಚಿಕೊಳ್ಳಬೇಡಿ.
ಮೋಸದ ಟ್ರಾನ್ಸಾಕ್ಷನ್ಗಳನ್ನು ಹೇಗೆ ತಪ್ಪಿಸುವುದು ಎಂಬುದನ್ನು ನೀವು ತಿಳಿಯುವ ಮೊದಲು, ವಿವಿಧ ರೀತಿಯ ಆನ್ಲೈನ್ ವಂಚನೆಗಳ ಬಗ್ಗೆ ತಿಳಿಯಿರಿ:
- ಫಿಶಿಂಗ್: ಮೋಸದ ವೆಬ್ಸೈಟ್ ಅಥವಾ ನಕಲಿ ಇಮೇಲ್ನಲ್ಲಿ ಲಾಗಿನ್ ಕ್ರೆಡೆನ್ಶಿಯಲ್ಗಳು ಅಥವಾ ಕಾರ್ಡ್ ವಿವರಗಳನ್ನು ಹಂಚಿಕೊಳ್ಳುವಾಗ ಗ್ರಾಹಕರು ಫಿಶಿಂಗ್ಗೆ ಗುರಿಯಾಗುತ್ತಾರೆ. ಅಪರಿಚಿತ ಮೂಲಗಳಿಗೆ ಖಾಸಗಿ ಮಾಹಿತಿಯನ್ನು ಸಲ್ಲಿಸುವುದರಿಂದ ವೈಯಕ್ತಿಕ ಡೇಟಾವನ್ನು ಕದಿಯುವುದಕ್ಕೆ ಕಾರಣವಾಗಬಹುದು.
- ಪೇಜ್ ಜಾಕಿಂಗ್: ಗ್ರಾಹಕರನ್ನು ಬೇರೆ ವೆಬ್ಸೈಟ್ಗೆ ಮರುನಿರ್ದೇಶಿಸಲಾಗುತ್ತದೆ ಏಕೆಂದರೆ ಹ್ಯಾಕರ್ಗಳು ಮೂಲ ವೆಬ್ಸೈಟ್ ಪೇಜ್ ಮತ್ತು ಸಂಭಾವ್ಯ ಡೇಟಾವನ್ನು ಹೈಜಾಕ್ ಮಾಡುತ್ತಾರೆ.
- ಸುಳ್ಳು ಮರ್ಚೆಂಟ್ ಗುರುತು: ನಕಲಿ ಮರ್ಚೆಂಟ್ ಅಕೌಂಟ್ ನಿಜವಾಗಿಯೂ ಕಾನೂನುಬದ್ಧ ಬಿಸಿನೆಸ್ ಅಕೌಂಟಿಗೆ ಸೇರಿದೆ ಎಂದು ಗ್ರಾಹಕರು ನಂಬುತ್ತಾರೆ. ಮೂಲವು ವಿಶ್ವಾಸಾರ್ಹವಾಗಿದೆ ಎಂದು ಊಹಿಸಿಕೊಂಡು, ಅನೇಕರು ಟ್ರ್ಯಾಪಿನಲ್ಲಿ ಬೀಳುತ್ತಾರೆ.
ಈಗ, ಮೋಸದ ಟ್ರಾನ್ಸಾಕ್ಷನ್ಗಳನ್ನು ತಪ್ಪಿಸುವುದು ಹೇಗೆ ಮತ್ತು ನಿಮ್ಮ ಅಕೌಂಟನ್ನು ಸುರಕ್ಷಿತವಾಗಿರಿಸುವುದು ಹೇಗೆ ಎಂದು ನಿಮಗೆ ತಿಳಿದಿದೆ:
- ಕರೆಯ ಮೂಲಕ ಗೌಪ್ಯ ಹಣಕಾಸಿನ ಮಾಹಿತಿಯನ್ನು ಹಂಚಿಕೊಳ್ಳಬೇಡಿ: ನಿಮ್ಮ ಸಿವಿವಿ ಪಿನ್, ಕಾರ್ಡ್ ವಿವರಗಳು ಅಥವಾ ಅಕೌಂಟ್ ನಂಬರನ್ನು ಹಂಚಿಕೊಳ್ಳಲು ನಿಮ್ಮನ್ನು ಕೇಳಿದಾಗ, ದಯವಿಟ್ಟು ಅದನ್ನು ಕರೆಯ ಮೂಲಕ ಹಂಚಿಕೊಳ್ಳುವುದನ್ನು ತಪ್ಪಿಸಿಕೊಳ್ಳಿ. ಅದೇ ರೀತಿ, ಅಪರಿಚಿತ/ತಿಳಿಯದ ವೆಬ್ಸೈಟ್ಗಳು ಮತ್ತು ಲಿಂಕ್ಗಳಲ್ಲಿ ನಿಮ್ಮ ಹಣಕಾಸಿನ ವಿವರಗಳನ್ನು ಹಂಚಿಕೊಳ್ಳಬೇಡಿ.
- ಅಟ್ಯಾಚ್ಮೆಂಟ್ಗಳು ಮತ್ತು ಡೌನ್ಲೋಡ್ಗಳ ಬಗ್ಗೆ ಎಚ್ಚರಿಕೆಯಿಂದ ಇರಿ: ಇಮೇಲ್ ಮೂಲದ ಬಗ್ಗೆ ಖಚಿತತೆ ಇಲ್ಲದಿದ್ದಾಗ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಡಿ ಅಥವಾ ಅಟ್ಯಾಚ್ಮೆಂಟ್ ತೆರೆಯಬೇಡಿ. ಅಜ್ಞಾತ ಅಟ್ಯಾಚ್ಮೆಂಟ್ಗಳನ್ನು ಡೌನ್ಲೋಡ್ ಮಾಡುವುದರಿಂದ ವೈರಸ್ನೊಂದಿಗೆ ನಿಮ್ಮ ಡಿವೈಸಿನ ಮೇಲೆ ಪರಿಣಾಮ ಬೀರಬಹುದು.
- ಅಧಿಕೃತ ವೆಬ್ಸೈಟ್ಗಳಿಗೆ ಭೇಟಿ ನೀಡಿ: ಮೂಲ ವೆಬ್ಸೈಟ್ ಲಿಂಕಿಗೆ ಹೊಂದಿಕೆಯಾಗುವ ಅದೇ ರೀತಿಯ ಡೊಮೇನ್ ಹೆಸರುಗಳು ಮತ್ತು ಯುಆರ್ಎಲ್ ಗಳು ಇರಬಹುದು. ಯುಆರ್ಎಲ್ ಅನ್ನು ಎರಡು ಬಾರಿ ಪರಿಶೀಲಿಸಿ ಮತ್ತು ಯಾವುದೇ ಪಾವತಿ ಮಾಡಲು ನೀವು ಅಧಿಕೃತ ವೆಬ್ಸೈಟ್ ನಮೂದಿಸಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ಕಾರ್ಡ್ ವಿವರಗಳನ್ನು ಆನ್ಲೈನಿನಲ್ಲಿ ಎಂದಿಗೂ ಸೇವ್ ಮಾಡಬೇಡಿ: ಪ್ರತಿ ಬಾರಿ ನೀವು ಆನ್ಲೈನ್ ಪಾವತಿ ಮಾಡಿದಾಗ, ಕಾರ್ಡ್ ವಿವರಗಳನ್ನು ಮಾನ್ಯುಯಲ್ ಆಗಿ ನಮೂದಿಸಿ ಮತ್ತು ಮರುಬಳಕೆಗಾಗಿ ಅದನ್ನು ಸೇವ್ ಮಾಡಬೇಡಿ. ಪಾವತಿ ಪೂರ್ಣಗೊಂಡ ತಕ್ಷಣ ನಿಮ್ಮ ಅಕೌಂಟಿನಿಂದ ಲಾಗೌಟ್ ಆಗಿ.
ಮೋಸದ ಟ್ರಾನ್ಸಾಕ್ಷನ್ಗಳಲ್ಲಿ ನೀವು ಸಿಲುಕಿಕೊಂಡರೆ ಏನು ಮಾಡಬಹುದು?
ಒಂದು ವೇಳೆ ನಿಮ್ಮ ಬ್ಯಾಂಕ್ ಅಕೌಂಟಿನಲ್ಲಿ ಅರಿವಿಲ್ಲದ ಡೆಬಿಟ್/ಕ್ರೆಡಿಟ್ ಚಟುವಟಿಕೆಗಳ ಬಗ್ಗೆ ನಿಮಗೆ ಶಂಕೆ ಉಂಟಾದರೆ, ತಕ್ಷಣವೇ ಗ್ರಾಹಕ ಸಹಾಯವಾಣಿ ವಿಭಾಗಕ್ಕೆ ಸಮಸ್ಯೆಯನ್ನು ವರದಿ ಮಾಡಿ ಮತ್ತು ದೂರನ್ನು ಸಲ್ಲಿಸಿ. ಆರ್ಬಿಐ ನಿಯಮಗಳ ಪ್ರಕಾರ, ಬ್ಯಾಂಕಿಗೆ ತಿಳಿಸಿದ ನಂತರ, ದೂರನ್ನು 90 ದಿನಗಳ ಒಳಗೆ ಪರಿಹರಿಸಬೇಕು.
ವೈಯಕ್ತಿಕ ವಿವರಗಳನ್ನು ವೆಬ್ಸೈಟ್ನಲ್ಲಿ ಹಂಚಿಕೊಳ್ಳುವಾಗ ಅದರ ಗ್ರಾಹಕರ ವಿವರಗಳ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಟಿವಿಎಸ್ ಕ್ರೆಡಿಟ್ ಪ್ರತಿಯೊಂದು ಪ್ರಯತ್ನವನ್ನು ಮಾಡುತ್ತದೆ. ಜವಾಬ್ದಾರಿಯುತ ಗ್ರಾಹಕರಾಗಿ ; ವಂಚಕರ ಕುರಿತು ಅರಿವಿರಲಿ ಮತ್ತು ನಿಮ್ಮ ಹಣಕಾಸಿನ ಮಾಹಿತಿಯನ್ನು ರಕ್ಷಿಸಿಕೊಳ್ಳಿ.
ನಿಮ್ಮ ಭದ್ರತೆಯು ನಮ್ಮ ಹೆಚ್ಚಿನ ಆದ್ಯತೆಯಾಗಿದೆ.