ಪ್ರಮುಖ ಸಾಲದಾತರಿಂದ ಪರ್ಸನಲ್ ಲೋನ್ಗಳ ಮೇಲಿನ ಬಡ್ಡಿ ದರಗಳು ಸಾಮಾನ್ಯವಾಗಿ ವರ್ಷಕ್ಕೆ 10.49% ರಿಂದ ಆರಂಭವಾಗುತ್ತದೆ. ಸಾರ್ವಜನಿಕ ವಲಯದ ಬ್ಯಾಂಕ್ಗಳು ಕಡಿಮೆ ಬಡ್ಡಿ ದರಗಳನ್ನು ನೀಡುವುದರಿಂದ, ಈ ಬ್ಯಾಂಕ್ಗಳು ಸಾಮಾನ್ಯವಾಗಿ ಪರ್ಸನಲ್ ಲೋನ್ಗಳ ಮೇಲೆ ಕಡಿಮೆ ಬಡ್ಡಿ ದರಗಳನ್ನು ಒದಗಿಸುತ್ತವೆ. ಅರ್ಜಿದಾರರ ಕ್ರೆಡಿಟ್ ಇತಿಹಾಸ, ಮಾಸಿಕ ಆದಾಯ, ವೃತ್ತಿಪರ ಪ್ರೊಫೈಲ್ ಇತ್ಯಾದಿಗಳ ಆಧಾರದ ಮೇಲೆ ಸಾಲದಾತರು ನೀಡುವ ಸಾಲದ ದರಗಳು. ಅತ್ಯಂತ ಸೂಕ್ತವಾದ ಪರ್ಸನಲ್ ಲೋನ್ ಆಫರನ್ನು ಆಯ್ಕೆ ಮಾಡಲು, ನೀವು ಪರ್ಸನಲ್ ಲೋನ್ ದರಗಳನ್ನು ಹೋಲಿಕೆ ಮಾಡಬೇಕು. ತುಂಬಾ ಸಾಲದಾತರು ಬಡ್ಡಿ ದರಗಳ ಆಫರ್ ನೀಡುತ್ತಾರೆ.
ಇಎಂಐ ಪರ್ಸನಲ್ ಲೋನ್ ಕ್ಯಾಲ್ಕುಲೇಟರ್
ವಿವಿಧ ಬಡ್ಡಿ ದರಗಳು ಮತ್ತು ಸಾಲದ ನಿಯಮಗಳಲ್ಲಿ ಸಾಲದ ಅವಧಿಯಾದ್ಯಂತ ನೀವು ಎಷ್ಟು ಇಎಂಐ ಪಾವತಿಸುತ್ತೀರಿ ಎಂಬುದನ್ನು ತಿಳಿದುಕೊಳ್ಳಲು ಟಿವಿಎಸ್ ಕ್ರೆಡಿಟ್ ಇಎಂಐ ಪರ್ಸನಲ್ ಲೋನ್ ಕ್ಯಾಲ್ಕುಲೇಟರ್ ಬಳಸಿ. ಆನ್ಲೈನ್ ಲೋನ್ ಕ್ಯಾಲ್ಕುಲೇಟರ್ ಬಡ್ಡಿ ಕ್ಯಾಲ್ಕುಲೇಟರ್ ಆಗಿ ಕೂಡ ಕೆಲಸ ಮಾಡುತ್ತದೆ ಏಕೆಂದರೆ ಇದು ನಿಮ್ಮ ಆನ್ಲೈನ್ ಪರ್ಸನಲ್ ಲೋನ್ ಮೇಲೆ ಪಾವತಿಸಬೇಕಾದ ಒಟ್ಟು ಬಡ್ಡಿಯನ್ನು ಲೆಕ್ಕ ಹಾಕಲು ನಿಮಗೆ ಸಹಾಯ ಮಾಡುತ್ತದೆ.
ಫಿಕ್ಸೆಡ್ ಬಡ್ಡಿ ದರಗಳು
ಫಿಕ್ಸೆಡ್ ಬಡ್ಡಿ ದರದ ಪರ್ಸನಲ್ ಲೋನ್ ಎಂದರೆ ನೀಡಲಾಗುವ ಬಡ್ಡಿ ದರವು ಫಿಕ್ಸೆಡ್ ಆಗಿರುತ್ತದೆ ಮತ್ತು ಸಾಲದ ಅವಧಿಯಾದ್ಯಂತ ಏರಿಳಿತವಾಗುವುದಿಲ್ಲ. ಫಿಕ್ಸೆಡ್ ಬಡ್ಡಿ ದರಗಳು ವೇರಿಯೆಬಲ್ ಬಡ್ಡಿ ದರಗಳಿಗಿಂತ ತುಲನಾತ್ಮಕವಾಗಿ ಹೆಚ್ಚಾಗಿರುತ್ತವೆ. ನೀವು ಸಾಲದ ಅವಧಿಯ ಮೇಲೆ ಮುಂಗಡವಾಗಿ ಪಾವತಿಸಬೇಕಾದ ನಿಖರವಾದ ಸಾಲದ ಇಎಂಐ ಅನ್ನು ಕೂಡ ಇದು ವಿವರಿಸುತ್ತದೆ.
ಪರ್ಸನಲ್ ಲೋನ್ಗಳಿಗೆ ಫಿಕ್ಸೆಡ್ ಬಡ್ಡಿ ದರಗಳ ಪ್ರಯೋಜನಗಳು
- ಬಡ್ಡಿ ದರದ ಪದ್ಧತಿಯಲ್ಲಿನ ಬದಲಾವಣೆಗಳನ್ನು ಲೆಕ್ಕಿಸದೆ, ಸಾಲದ ಅವಧಿಯುದ್ದಕ್ಕೂ ಬಡ್ಡಿ ದರವು ಸ್ಥಿರವಾಗಿರುತ್ತದೆ
- ಲೋನಿನ ಇಎಂಐ ಬದಲಾಗುವುದಿಲ್ಲ, ಲಿಕ್ವಿಡಿಟಿ ಮ್ಯಾನೇಜ್ಮೆಂಟ್ ಮತ್ತು ಬಜೆಟ್ ಮಾಡುವುದರಲ್ಲಿ ನಿಶ್ಚಿತತೆಯನ್ನು ಒದಗಿಸುತ್ತದೆ
- ಬಡ್ಡಿ-ದರದ ಪರ್ಸನಲ್ ಲೋನ್ಗಳು ಹೆಚ್ಚುತ್ತಿರುವ ಬಡ್ಡಿ-ದರದ ವ್ಯವಸ್ಥೆಯಲ್ಲಿ ಪ್ರಯೋಜನಕಾರಿಯಾಗಿರುತ್ತವೆ
ಫ್ಲೋಟಿಂಗ್ ಬಡ್ಡಿ ದರಗಳು
ಫ್ಲೋಟಿಂಗ್ ಬಡ್ಡಿ ದರದ ಪರ್ಸನಲ್ ಲೋನ್ಗಳ ಸಾಮಾನ್ಯವಾದ ಅರ್ಥ ಎಂದರೆ ಸಾಲ ಪಡೆಯುವ ದರಗಳಿಂದಾಗಿ ಸಾಲದ ಅವಧಿಯ ಮೇಲೆ ಬಡ್ಡಿ ದರವು ಬದಲಾಗಬಹುದು ಎಂದರ್ಥ. ನೀವು ಹೊಂದಾಣಿಕೆ ಮಾಡಬಹುದಾದ ದರದ ಪರ್ಸನಲ್ ಲೋನನ್ನು ಆಯ್ಕೆ ಮಾಡಿದರೆ, ಸಾಲದ ಅವಧಿಯಲ್ಲಿ ಬಡ್ಡಿ ದರದ ಬದಲಾವಣೆಗಳಿಗೆ ಸಿದ್ಧರಾಗಿರಿ.
ಪರ್ಸನಲ್ ಲೋನ್ಗಳಿಗೆ ಫ್ಲೋಟಿಂಗ್ ಬಡ್ಡಿ ದರದ ಪ್ರಯೋಜನಗಳು
- ಬಡ್ಡಿ ದರಗಳನ್ನು ಫಿಕ್ಸೆಡ್ ಬಡ್ಡಿ ದರಗಳಿಗೆ ಹೋಲಿಸಿದರೆ ತುಲನಾತ್ಮಕವಾಗಿ ಕಡಿಮೆಯಾಗಿರುತ್ತವೆ
- ಬದಲಾಗುವ ಬಡ್ಡಿ ದರಗಳಲ್ಲಿ ಪರ್ಸನಲ್ ಲೋನ್ಗಳನ್ನು ಹೊಂದಿರುವುದು ಬಡ್ಡಿ ದರದ ಇಳಿಕೆಯ ವ್ಯವಸ್ಥೆಯಲ್ಲಿ ಪ್ರಯೋಜನಕಾರಿಯಾಗಿರುತ್ತದೆ
- ಬಡ್ಡಿ ವೆಚ್ಚಗಳು ಇಳಿಕೆಯಾಗುವುದರಿಂದ ಸಾಲಗಾರರು ಹಣವನ್ನು ಉಳಿತಾಯ ಮಾಡುತ್ತಾರೆ ಮತ್ತು ಬಡ್ಡಿ ದರದ ಇಳಿಕೆ ವ್ಯವಸ್ಥೆಯಲ್ಲಿ ಇಳಿಕೆಯಾಗುವ ಪಿಎಂಐ ಯಿಂದ ಕೂಡ ಪ್ರಯೋಜನ ಪಡೆಯುತ್ತಾರೆ.
- ನಿಮ್ಮ ಪರ್ಸನಲ್ ಲೋನ್ ಮುಂಗಡ ಪಾವತಿ ಅಥವಾ ಫೋರ್ಕ್ಲೋಸರ್ಗೆ ಸಂಬಂಧಿಸಿದ ಮುಂಗಡ ಪಾವತಿ ಶುಲ್ಕವನ್ನು ಉಳಿಸುತ್ತದೆ
ಕನಿಷ್ಠ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಪಡೆಯಲು ಸಲಹೆಗಳು
ಕಡಿಮೆ ದರದ ಪರ್ಸನಲ್ ಲೋನ್ ಪಡೆಯುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ಪ್ರಮುಖ ವಿಷಯಗಳು ಇಲ್ಲಿವೆ:
- ಕನಿಷ್ಠ 750 ಅಥವಾ ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ನಿರ್ಮಿಸಿ ಮತ್ತು ನಿರ್ವಹಿಸಿ
- ನೀವು ಈಗಾಗಲೇ ಡೆಪಾಸಿಟ್ ಮತ್ತು/ಅಥವಾ ಸಾಲದ ಅಕೌಂಟ್ಗಳನ್ನು ಹೊಂದಿರುವ ಬ್ಯಾಂಕ್ಗಳು/ಎನ್ಬಿಎಫ್ಸಿ ಗಳೊಂದಿಗೆ ಸಮಾಲೋಚಿಸಿ
- ರಜಾದಿನದ ಅವಧಿಯಲ್ಲಿ ಸಾಲದಾತರು ನೀಡುವ ಬಡ್ಡಿ ದರದ ರಿಯಾಯಿತಿಗಳನ್ನು ಟ್ರ್ಯಾಕ್ ಮಾಡಿ
- ವಿವಿಧ ಸಾಲದಾತರಿಂದ ಪರ್ಸನಲ್ ಲೋನ್ ಆಫರ್ಗಳನ್ನು ರಿವ್ಯೂ ಮಾಡಲು ಮತ್ತು ಹೋಲಿಕೆ ಮಾಡಲು ಆನ್ಲೈನ್ ಹಣಕಾಸು ಮಾರುಕಟ್ಟೆಗಳಿಗೆ ಭೇಟಿ ನೀಡಿ
ಪರ್ಸನಲ್ ಲೋನ್ ಬಡ್ಡಿ ದರಗಳನ್ನು ಪ್ರಭಾವಿಸುವ ಅಂಶಗಳು
ಕ್ರೆಡಿಟ್ ಸ್ಕೋರ್: ಹೆಚ್ಚಿನ ಕ್ರೆಡಿಟ್ ಸ್ಕೋರ್ ಕಡಿಮೆ ಬಡ್ಡಿ ದರಕ್ಕೆ ನಿಮಗೆ ಅರ್ಹತೆ ನೀಡಬಹುದು.
ಡೆಟ್-ಟು-ಇನ್ಕಮ್ ರೇಶಿಯೋ: ಕಡಿಮೆ ಡೆಟ್-ಟು-ಇನ್ಕಮ್ ಅನುಪಾತವು ನಿಮ್ಮನ್ನು ಸಾಲದಾತರಿಗೆ ಹೆಚ್ಚು ಆಕರ್ಷಕ ಸಾಲಗಾರರನ್ನಾಗಿ ಮಾಡಬಹುದು ಮತ್ತು ಕಡಿಮೆ ಬಡ್ಡಿ ದರಕ್ಕೆ ನಿಮಗೆ ಅರ್ಹತೆ ನೀಡಬಹುದು.
ಸಾಲದ ಅವಧಿ: ಕಡಿಮೆ ಸಾಲದ ಅವಧಿಯು ಕಡಿಮೆ ಬಡ್ಡಿ ದರದೊಂದಿಗೆ ಬರಬಹುದು.
ಸಾಲದಾತರ ಪ್ರಕಾರ: ಬ್ಯಾಂಕುಗಳು, ಕ್ರೆಡಿಟ್ ಯೂನಿಯನ್ಗಳು ಮತ್ತು ಆನ್ಲೈನ್ ಸಾಲದಾತರಂತಹ ವಿವಿಧ ರೀತಿಯ ಸಾಲದಾತರು ವಿವಿಧ ಬಡ್ಡಿ ದರಗಳನ್ನು ಒದಗಿಸಬಹುದು.
ಅಡಮಾನ: ಭದ್ರತೆ ಸಹಿತ ಲೋನ್, ಇಲ್ಲಿ ನೀವು ಅಡಮಾನವನ್ನು ಸಾಲಕ್ಕೆ ಭದ್ರತೆಯಾಗಿ ಇರಿಸುತ್ತೀರಿ, ಭದ್ರತೆ ರಹಿತ ಲೋನಿಗಿಂತ ಕಡಿಮೆ ಬಡ್ಡಿ ದರವನ್ನು ಹೊಂದಿರಬಹುದು.
ಆರ್ಥಿಕ ಪರಿಸ್ಥಿತಿಗಳು: ಫೆಡರಲ್ ರಿಸರ್ವ್ನ ಹಣಕಾಸಿನ ನೀತಿಯಂತಹ ವಿಶಾಲ ಆರ್ಥಿಕ ಪರಿಸ್ಥಿತಿಗಳಿಂದ ಬಡ್ಡಿ ದರಗಳು ಪ್ರಭಾವಿತಗೊಳ್ಳಬಹುದು.
ಪರ್ಸನಲ್ ಲೋನ್ನಲ್ಲಿ ಉತ್ತಮ ಡೀಲ್ ಅನ್ನು ಹುಡುಕಲು ಬಹು ಸಾಲದಾತರಿಂದ ಸುತ್ತಲೂ ನೋಟ ಹರಿಸುವುದು ಮತ್ತು ದರಗಳನ್ನು ಹೋಲಿಸುವುದು ಮುಖ್ಯವಾಗಿದೆ. ಟಿವಿಎಸ್ ಕ್ರೆಡಿಟ್ನಿಂದ ಸುಲಭವಾದ ಪರ್ಸನಲ್ ಲೋನ್ಗಳನ್ನು ಪಡೆಯಲು ಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್ ಡೌನ್ಲೋಡ್ ಮಾಡಿ.
ಪರ್ಸನಲ್ ಲೋನ್ ಟಾಪ್ ಪ್ರಯೋಜನಗಳು
ತೊಂದರೆ ರಹಿತ ಡಾಕ್ಯುಮೆಂಟೇಶನ್
ಪರ್ಸನಲ್ ಲೋನಿನ ಅತ್ಯಂತ ಗಮನಾರ್ಹ ಪ್ರಯೋಜನಗಳಲ್ಲಿ ಒಂದು ಎಂದರೆ ಕನಿಷ್ಠ ಡಾಕ್ಯುಮೆಂಟೇಶನ್. ಆನ್ಲೈನ್ ಅಪ್ಲಿಕೇಶನ್ ಸಂದರ್ಭದಲ್ಲಿ, ಡಾಕ್ಯುಮೆಂಟೇಶನ್ ಡಿಜಿಟಲ್ ಆಗಿರುತ್ತದೆ. ನಿಮ್ಮ ಅಪ್ಲಿಕೇಶನ್ ಫಾರ್ಮ್ನೊಂದಿಗೆ ನೀವು ಅಗತ್ಯವಿರುವ ಡಾಕ್ಯುಮೆಂಟ್ಗಳನ್ನು ಒಟ್ಟಿಗೆ ಅಪ್ಲೋಡ್ ಮಾಡಬಹುದು. ಈ ಪ್ರಕ್ರಿಯೆಯು ಸಂಪೂರ್ಣವಾಗಿ ಎಲೆಕ್ಟ್ರಾನಿಕ್ ಆಗಿರುತ್ತದೆ.
ಟಿವಿಎಸ್ ಕ್ರೆಡಿಟ್ನಂತಹ ಕೆಲವು ಸಾಲದಾತರು ಮನೆಬಾಗಿಲಿನ ಡಾಕ್ಯುಮೆಂಟ್ ಸಂಗ್ರಹ ಸೇವೆಯನ್ನು ಕೂಡ ಒದಗಿಸುತ್ತಾರೆ. ಪ್ರಕ್ರಿಯೆಗಾಗಿ, ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ನೀವು ವಯಸ್ಸು, ವಿಳಾಸ, ಬ್ಯಾಂಕ್ ಅಕೌಂಟ್ ವಿವರಗಳು, ಪೇಸ್ಲಿಪ್ಗಳು, ಆದಾಯ ತೆರಿಗೆ ರಿಟರ್ನ್ಸ್, ಕ್ರೆಡಿಟ್ ಇತಿಹಾಸ ಇತ್ಯಾದಿಗಳನ್ನು ಒದಗಿಸಬೇಕಾಗುತ್ತದೆ.
ತ್ವರಿತ ಪೇ-ಔಟ್
ಹೋಮ್ ಲೋನನ್ನು ನೀಡುವುದು ಸುಮಾರು 3-4 ವಾರಗಳನ್ನು ತೆಗೆದುಕೊಳ್ಳುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಪರ್ಸನಲ್ ಲೋನ್ 24 ರಿಂದ 72 ಗಂಟೆಗಳನ್ನು ಮಾತ್ರ ತೆಗೆದುಕೊಳ್ಳುತ್ತದೆ. ಆದ್ದರಿಂದ, ತುರ್ತು ಪಾವತಿ ಅಥವಾ ನಗದು ಅಗತ್ಯಗಳನ್ನು ಪೂರೈಸಲು ಅವುಗಳು ಅತ್ಯುತ್ತಮ ಹಣಕಾಸು ಪ್ರಾಡಕ್ಟ್ ಆಗಿವೆ. ಆದಾಗ್ಯೂ, ನೀವು ಅರ್ಹತಾ ಮಾನದಂಡಗಳನ್ನು ಪೂರೈಸಬೇಕು ಮತ್ತು ನಿಮ್ಮ ಸಾಲದ ತ್ವರಿತ ವಿತರಣೆ ಪಡೆಯಲು ಉತ್ತಮ ಕ್ರೆಡಿಟ್ ಹೊಂದಿರಬೇಕು.
ಸ್ವತ್ತಿನ ಆಧಾರದ ಅವಶ್ಯಕತೆಯಿಲ್ಲ
ಪರ್ಸನಲ್ ಲೋನ್ಗಳು ಭದ್ರತೆ ರಹಿತ ಲೋನ್ಗಳಾಗಿವೆ. ಆದ್ದರಿಂದ, ನೀವು ಯಾವುದೇ ಡೀಫಾಲ್ಟ್ ಅಥವಾ ಶುಲ್ಕಗಳ ಪಾವತಿ ಮಾಡದಿರುವಿಕೆಗೆ ಯಾವುದೇ ಭದ್ರತೆಯನ್ನು ಒದಗಿಸುವ ಅಗತ್ಯವಿಲ್ಲ. ಪರ್ಸನಲ್ ಲೋನ್ಗಳ ಈ ಲಕ್ಷಣ ಅವುಗಳನ್ನು ಸ್ಥಿರ ಆದಾಯದ ಮೂಲವನ್ನು ಹೊಂದಿರುವ ಯಾರಾದರೂ ಅಕ್ಸೆಸ್ ಹೊಂದುವಂತೆ ಮಾಡುತ್ತದೆ ಮತ್ತು ಉತ್ತಮ ಕ್ರೆಡಿಟ್ ಇತಿಹಾಸವು ಸಾಲದ ಒಟ್ಟುಗೂಡಿಸುವಿಕೆಗೆ ನಿಮಗೆ ಸಹಾಯ ಮಾಡುತ್ತದೆ
ಪರ್ಸನಲ್ ಲೋನ್ಗಳ ಇನ್ನೊಂದು ಪ್ರಮುಖ ಪ್ರಯೋಜನವೆಂದರೆ ಸಾಲವನ್ನು ಪಾವತಿಸುವ ಅದರ ಸಾಮರ್ಥ್ಯ. ನೀವು ಭದ್ರತೆ ಸಹಿತ ಸಾಲಗಳು ಅಥವಾ ಹೆಚ್ಚಿನ-ಹೊರೆಯ ಕ್ರೆಡಿಟ್ ಕಾರ್ಡ್ಗಳನ್ನು ಹೊಂದಿದ್ದರೆ, ಪಾವತಿಗಳನ್ನು ಮಾಡಲು ಮತ್ತು ನಿಮ್ಮ ಪೋರ್ಟ್ಫೋಲಿಯೊದಿಂದ ಹೊಣೆಗಾರಿಕೆಗಳನ್ನು ತೆಗೆದುಹಾಕಲು ನೀವು ಪರ್ಸನಲ್ ಲೋನ್ ಅನ್ನು ಬಳಸಬಹುದು. ಪರ್ಸನಲ್ ಲೋನ್ ಬಡ್ಡಿ ದರಗಳು ಕ್ರೆಡಿಟ್ ಕಾರ್ಡ್ ದರಗಳಿಗಿಂತ ಕಡಿಮೆ ಇವೆ. ಆದ್ದರಿಂದ, ನೀವು ಕಡಿಮೆ ಬಡ್ಡಿಯ ಹಣಕಾಸು ಪ್ರಾಡಕ್ಟ್ನೊಂದಿಗೆ ಹೆಚ್ಚಿನ ಬಡ್ಡಿಯ ಸಾಲಗಳನ್ನು ಕೂಡ ಪಾವತಿಸಬಹುದು.
ಬಹುಮುಖತೆ
ಸಾಲವನ್ನು ಬಳಸುವ ವಿಷಯಕ್ಕೆ ಬಂದಾಗ, ಪರ್ಸನಲ್ ಲೋನ್ಗಳನ್ನು ಯಾವುದೂ ಮೀರಿಸಲಾರದು. ಬ್ಯಾಂಕ್ಗಳು ಮತ್ತು ಸಾಲದಾತರು ಅಂತಿಮ ಬಳಕೆಯ ಮೇಲೆ ಯಾವುದೇ ಮಿತಿಗಳು ಅಥವಾ ನಿರ್ಬಂಧಗಳನ್ನು ವಿಧಿಸುವುದಿಲ್ಲ. ಇದು ಪರ್ಸನಲ್ ಲೋನಿನ ಅತ್ಯಂತ ಪ್ರಯೋಜನಕಾರಿ ಅಂಶಗಳಲ್ಲಿ ಒಂದಾಗಿದೆ. ನಿಮ್ಮ ಕನಸಿನ ರಜಾದಿನವನ್ನು ಯೋಜಿಸಲು, ಇತರ ಸಾಲಗಳನ್ನು ಪಾವತಿಸಲು, ಐಷಾರಾಮಿ ಗ್ಯಾಜೆಟ್ಗಳು ಮತ್ತು ಅಕ್ಸೆಸರಿಗಳನ್ನು ಖರೀದಿಸಲು ಅಥವಾ ದೊಡ್ಡ ಮದುವೆಯನ್ನು ಆಚರಿಸಲು ನೀವು ಸಾಲ ಪಡೆದ ಹಣವನ್ನು ಬಳಸಬಹುದು. ತುರ್ತು ಪರಿಸ್ಥಿತಿಗಳಲ್ಲಿ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡಲು ಕೂಡ ಪರ್ಸನಲ್ ಲೋನ್ಗಳು ಸಹಾಯ ಮಾಡುತ್ತವೆ.
ಕ್ರೆಡಿಟ್ ಸ್ಕೋರ್ ನಿರ್ಮಿಸಿ
ಕೈಗೆಟಕುವ ಪರ್ಸನಲ್ ಲೋನ್ಗಳು ವಿಶೇಷವಾಗಿ ನೀವು ಕ್ರೆಡಿಟ್ಗೆ ಹೊಸಬರಾಗಿದ್ದರೆ ಅಥವಾ ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ, ನಿಮ್ಮ ಕ್ರೆಡಿಟ್ ಸ್ಕೋರ್ ಸುಧಾರಿಸಲು ಉತ್ತಮ ಮಾರ್ಗವಾಗಿವೆ. ನೀವು ಆಕರ್ಷಕ ಬಡ್ಡಿ ದರಗಳಲ್ಲಿ ಇವುಗಳ ಪ್ರಯೋಜನವನ್ನು ಪಡೆಯಬಹುದು ಮತ್ತು ಅವುಗಳನ್ನು ಫ್ಲೆಕ್ಸಿಬಲ್ ಸಾಲದ ಅವಧಿಯೊಂದಿಗೆ ಮರುಪಾವತಿ ಮಾಡಬಹುದು. ನೀವು ನಿಮ್ಮ ಇಎಂಐ ಮತ್ತು ಬಡ್ಡಿಯನ್ನು ಸಮಯಕ್ಕೆ ಸರಿಯಾಗಿ ಪಾವತಿಸುವುದರಿಂದ, ನಿಮ್ಮ ಕ್ರೆಡಿಟ್ ಸ್ಕೋರ್ ನಿರಂತರವಾಗಿ ಸುಧಾರಣೆಯಾಗುತ್ತಾ ಸಾಗುತ್ತದೆ
ಆದರೆ ಪಾವತಿಸುವ ನಿಮ್ಮ ಸಾಮರ್ಥ್ಯದೊಳಗೆ ಸಾಲ ತೆಗೆದುಕೊಳ್ಳಲು ಮರೆಯಬೇಡಿ. ಸಾಲದ ಮೇಲೆ ಇಎಂಐ ಪಾವತಿಸಲು ವಿಫಲವಾಗುವುದು ಮತ್ತು ನೀವು ಇಎಂಐ ಕಳೆದುಕೊಳ್ಳುವುದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕವಾಗಿ ಪರಿಣಾಮ ಬೀರಬಹುದು.
ಫ್ಲೆಕ್ಸಿಬಲ್ ಕಾಲಾವಧಿ
ಸಾಲಗಾರರನ್ನು ಆಕರ್ಷಿಸುವ ಪರ್ಸನಲ್ ಲೋನ್ಗಳ ಪ್ರಯೋಜನಗಳಲ್ಲಿ ಒಂದು ಫ್ಲೆಕ್ಸಿಬಲ್ ಮರುಪಾವತಿ ಶೆಡ್ಯೂಲ್ ಆಗಿದೆ. ಅವಧಿಯು 12 ತಿಂಗಳುಗಳಿಂದ ಆರಂಭವಾಗುತ್ತದೆ ಮತ್ತು 7 ವರ್ಷಗಳವರೆಗೆ ಇರಬಹುದು.
ಆದ್ದರಿಂದ, ನಿಮ್ಮ ಹಣಕಾಸು ಮತ್ತು ಅಗತ್ಯಗಳಿಗೆ ಸರಿಹೊಂದುವ ಹೂಡಿಕೆಯನ್ನು ನೀವು ಆಯ್ಕೆ ಮಾಡಬಹುದು ಮತ್ತು ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನಿಮ್ಮ ಮಾಸಿಕ ವೆಚ್ಚಗಳನ್ನು ಅತ್ಯುತ್ತಮಗೊಳಿಸಲು ನಿಮಗೆ ಅನುಮತಿ ನೀಡುತ್ತದೆ. ದೀರ್ಘಕಾಲ ಇಟ್ಟುಕೊಳ್ಳುವುದು ಎಂದರೆ ಕಡಿಮೆ ಇಎಂಐ.
ಆಕರ್ಷಕ ಬಡ್ಡಿ ದರಗಳು
ಪರ್ಸನಲ್ ಲೋನ್ಗಳು ಸ್ಪರ್ಧಾತ್ಮಕ ಬಡ್ಡಿ ದರಗಳಲ್ಲಿ ಲಭ್ಯವಿವೆ. ಪರಿಣಾಮವಾಗಿ, ನೀವು ಕೈಗೆಟಕುವ ಇಎಂಐ ಅನ್ನು ಆನಂದಿಸಬಹುದು. ಬಡ್ಡಿ ದರವು ಸಾಮಾನ್ಯವಾಗಿ ಫಿಕ್ಸೆಡ್ ಆಗಿರುತ್ತದೆ. ನಿಮ್ಮ ಇಎಂಐ ಗಳನ್ನು ಸಾಲದ ಅವಧಿಯಂತೆ ನಿಗದಿಪಡಿಸಲಾಗಿದೆ, ಮತ್ತು ಬಡ್ಡಿ ದರಗಳು ಬದಲಾಗುವ ಬಗ್ಗೆ ನೀವು ಚಿಂತಿಸಬೇಕಾಗಿಲ್ಲ.
ತೆರಿಗೆ ಅನುಕೂಲಗಳು
ಹಣವನ್ನು ಹೇಗೆ ಬಳಸಲಾಗುತ್ತದೆ ಎಂಬುದರ ಆಧಾರದ ಮೇಲೆ, ನಿಮ್ಮ ಖಾಸಗಿ ಸಾಲಕ್ಕೆ ನೀವು ತೆರಿಗೆ ಭತ್ಯೆಗಳನ್ನು ಕ್ಲೈಮ್ ಮಾಡಬಹುದು.
ಉದಾಹರಣೆಗೆ, ನೀವು ಮನೆಯನ್ನು ನವೀಕರಿಸಲು ಅಥವಾ ನಿರ್ಮಿಸಲು ಅಥವಾ ಮನೆಯ ಮೇಲೆ ಡೌನ್ ಪೇಮೆಂಟ್ ಮಾಡಲು ಸಾಲವನ್ನು ಬಳಸುತ್ತಿದ್ದರೆ, ಹಣಕಾಸು ವರ್ಷದಲ್ಲಿ ಪಾವತಿಸಿದ ಬಡ್ಡಿಗೆ ಸೆಕ್ಷನ್ 24B ₹ 2 ಲಕ್ಷದವರೆಗಿನ ತೆರಿಗೆ ಕಡಿತಕ್ಕೆ ನೀವು ಅರ್ಹರಾಗಿರುತ್ತೀರಿ. ಆದಾಗ್ಯೂ, ಇತರ ಬಳಕೆಯ ಪ್ರಕರಣಗಳು ಹೆಚ್ಚುವರಿ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತವೆ. ನಿಮ್ಮ ಪರ್ಸನಲ್ ಲೋನ್ಗಳ ಮೇಲೆ ತೆರಿಗೆ ಪ್ರಯೋಜನಗಳನ್ನು ನೀವು ಹೇಗೆ ಆನಂದಿಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳಲು ಅಗತ್ಯವಿರುವ ಡಾಕ್ಯುಮೆಂಟ್ಗಳನ್ನು ಸಲ್ಲಿಸಿ.
ಪರ್ಸನಲ್ ಲೋನ್ಗಳು ಈ ದಿನಗಳಲ್ಲಿ ಹೆಚ್ಚಿನ ಬೇಡಿಕೆಯಲ್ಲಿವೆ. ನೀವು ಪರ್ಸನಲ್ ಲೋನ್ ನಿರ್ಧರಿಸುವ ಮೊದಲು, ಬಳಸಿದ ಮೊತ್ತವು ನಿಮ್ಮ ಪಾವತಿ ಸಾಮರ್ಥ್ಯಕ್ಕೆ ಹೊಂದಿಕೆಯಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ದಯವಿಟ್ಟು ಎಲ್ಲಾ ಸಾಮಾನ್ಯ ನಿಯಮ ಮತ್ತು ಷರತ್ತುಗಳನ್ನು ಎಚ್ಚರಿಕೆಯಿಂದ ಓದಿ. ಅನೇಕ ಸಾಲದಾತರು, ಟಿವಿಎಸ್ ಕ್ರೆಡಿಟ್ ಮತ್ತು ಬ್ಯಾಂಕ್ಗಳಂತಹ ಹಣಕಾಸು ತಂತ್ರಜ್ಞಾನ ಕಂಪನಿಗಳು ಪರ್ಸನಲ್ ಲೋನ್ಗಳನ್ನು ಒದಗಿಸುತ್ತವೆ.
ಈಗ ಪರ್ಸನಲ್ ಲೋನಿನ ಎಲ್ಲಾ ಅಂಶಗಳ ಬಗ್ಗೆ ನೀವು ಚೆನ್ನಾಗಿ ಅರಿತುಕೊಂಡಿದ್ದೀರಿ. ಆದ್ದರಿಂದ ಇನ್ನು ಕಾಯಬೇಡಿ ಮತ್ತು ಟಿವಿಎಸ್ ಕ್ರೆಡಿಟ್ ಡಿಜಿಟಲ್ ಪರ್ಸನಲ್ ಲೋನ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ ಮತ್ತು ನಿಮಗೆ ಸೂಕ್ತವಾದ ಆಯ್ಕೆಯನ್ನು ಆರಿಸಿಕೊಳ್ಳಿ.