ಮದುವೆ ಎನ್ನುವುದು ಒಂದು ಪ್ರಮುಖ ಸಂಭ್ರಮಾಚರಣೆಯಾಗಿದ್ದು, ಇದು ಆನಂದ ಮತ್ತು ಉತ್ಸಾಹದಿಂದ ತುಂಬಿರುತ್ತದೆ, ಆದರೆ ಇದು ಕೆಲವೊಮ್ಮೆ ಗಮನಾರ್ಹ ವೆಚ್ಚಗಳು ಮತ್ತು ಮಾನಸಿಕ ಒತ್ತಡಗಳನ್ನು ಕೂಡ ಉಂಟುಮಾಡಬಹುದು.
ಅನೇಕ ದಂಪತಿಗಳು ಪ್ರಕ್ರಿಯೆಯನ್ನು ಸರಳಗೊಳಿಸಲು ಮತ್ತು ಅವರ ಹಣಕಾಸಿನ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಲು ಮದುವೆ ಲೋನ್ಗಳ ಮೊರೆ ಹೋಗುತ್ತಾರೆ. ಈ ಬ್ಲಾಗ್ನಲ್ಲಿ, ಅರ್ಹತಾ ಮಾನದಂಡ ಮತ್ತು ಅಪ್ಲಿಕೇಶನ್ ಪ್ರಕ್ರಿಯೆ ಸೇರಿದಂತೆ ಮದುವೆ ಲೋನ್ಗಳ ವಿವರಗಳನ್ನು ಅನ್ವೇಷಿಸೋಣ, ನಿಮ್ಮ ಕನಸಿನ ಮದುವೆಯನ್ನು ಸುಂದರ ವಾಸ್ತವವಾಗಿ ಪರಿವರ್ತಿಸಲು ನಿಮಗೆ ಸಹಾಯ ಮಾಡುವುದಕ್ಕಾಗಿ ಮೌಲ್ಯಯುತ ಒಳನೋಟಗಳನ್ನು ಪಡೆಯೋಣ.
ಮದುವೆ ಲೋನ್ ಎಂದರೇನು?
ವೆಡ್ಡಿಂಗ್ ಲೋನ್ ಎಂದೂ ಕರೆಯಲ್ಪಡುವ ಮದುವೆ ಲೋನ್ನಲ್ಲಿ, ವಿಶೇಷವಾಗಿ ಮದುವೆ ವೆಚ್ಚಗಳಿಗೆ ಹಣಕಾಸು ಒದಗಿಸಲು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಿಂದ ಹಣವನ್ನು ಸಾಲ ಪಡೆಯಲಾಗುತ್ತದೆ. ಇದು ಮದುವೆ ಅಗತ್ಯಗಳು ಮತ್ತು ವೆಚ್ಚಗಳನ್ನು ಪೂರೈಸಲು ಬ್ಯಾಂಕ್ ಅಥವಾ ಟಿವಿಎಸ್ ಕ್ರೆಡಿಟ್ನಂತಹ ಬ್ಯಾಂಕಿಂಗೇತರ ಹಣಕಾಸು ಕಂಪನಿಗಳಂತಹ ಅಧಿಕೃತ ಸಾಲದಾತರು ನೀಡುವ ಭದ್ರತೆ ರಹಿತ ಪರ್ಸನಲ್ ಲೋನ್ ಪ್ರಾಡಕ್ಟ್ ಆಗಿದೆ. ನಗದು ಹೊರಹರಿವನ್ನು ಆಗಾಗ ಪರಿಗಣಿಸುವ ಮದುವೆ-ಪೂರ್ವದ ವೆಚ್ಚಗಳಿಗೆ ಫೈನಾನ್ಸಿಂಗ್ ಒದಗಿಸುವ ಉದ್ದೇಶದೊಂದಿಗೆ ಲೋನನ್ನು ರಚಿಸಲಾಗಿರುತ್ತದೆ.
ಮದುವೆ ಲೋನ್ ಅರ್ಹತಾ ಮಾನದಂಡ
ಮದುವೆ ಲೋನಿಗೆ ಅರ್ಹತೆ ಪಡೆಯಲು ಅರ್ಹತಾ ಮಾನದಂಡಗಳು ಹೀಗಿವೆ:
- ಕನಿಷ್ಠ ವಯಸ್ಸಿನ ಅವಶ್ಯಕತೆ (ಸಾಮಾನ್ಯವಾಗಿ 21 ರಿಂದ 60 ವರ್ಷಗಳು)
- ಸಂಬಳ ಪಡೆಯುವವರು ಅಥವಾ ಸ್ಥಿರ ಆದಾಯದೊಂದಿಗೆ ಸ್ವಯಂ ಉದ್ಯೋಗಿ
- ಉತ್ತಮ ಕ್ರೆಡಿಟ್ ಸ್ಕೋರ್ (ಸಾಮಾನ್ಯವಾಗಿ 700 ಅಥವಾ ಅದಕ್ಕಿಂತ ಹೆಚ್ಚು)
- ಉದ್ಯೋಗ ಸ್ಥಿರತೆ ಮತ್ತು ಸ್ಥಿರ ಆದಾಯ
ಮದುವೆ ಲೋನಿನ ಪ್ರಯೋಜನಗಳು
- ತ್ವರಿತ ಅನುಮೋದನೆ: ಮದುವೆ ಅಥವಾ ಶಾದಿ ಲೋನ್ಗಳು ತ್ವರಿತ ಅನುಮೋದನೆಯೊಂದಿಗೆ ಹಣವನ್ನು ಒದಗಿಸುತ್ತವೆ.
- ಫ್ಲೆಕ್ಸಿಬಿಲಿಟಿ: ಸ್ಥಳದ ರಿಸರ್ವೇಶನ್, ಕ್ಯಾಟರಿಂಗ್, ಡೆಕೋರೇಶನ್, ಉಡುಪು ಮತ್ತು ಇನ್ನೂ ಮುಂತಾದವುಗಳನ್ನು ಒಳಗೊಂಡಂತೆ ವಿವಿಧ ಮದುವೆ ವೆಚ್ಚಗಳನ್ನು ಕವರ್ ಮಾಡಲು ಸಾಲದ ಮೊತ್ತವನ್ನು ಬಳಸಬಹುದು.
- ಅಡಮಾನವಿಲ್ಲ: ಮದುವೆ ಲೋನ್ಗಳು ಭದ್ರತೆ ರಹಿತವಾಗಿದ್ದು, ಯಾವುದೇ ಅಡಮಾನದ ಅಗತ್ಯವಿಲ್ಲ.
- ಫಿಕ್ಸೆಡ್ ಮದುವೆ ಲೋನ್ ಬಡ್ಡಿ ದರಗಳು: ಫಿಕ್ಸೆಡ್ ಮದುವೆ ಲೋನ್ ಬಡ್ಡಿ ದರಗಳು ಉತ್ತಮ ಹಣಕಾಸಿನ ಯೋಜನೆಗೆ ಅವಕಾಶ ನೀಡುತ್ತದೆ.
ವೆಡ್ಡಿಂಗ್ ಲೋನ್ಗಳು ವರ್ಸಸ್ ಇತರ ಫೈನಾನ್ಸಿಂಗ್ ಆಯ್ಕೆಗಳು
ಮದುವೆಗಾಗಿ ಇತರ ಸಾಮಾನ್ಯ ಫೈನಾನ್ಸಿಂಗ್ ಆಯ್ಕೆಗಳೊಂದಿಗೆ ಮದುವೆ ಲೋನ್ಗಳನ್ನು ಹೋಲಿಕೆ ಮಾಡಿ:
ಕ್ರೆಡಿಟ್ ಕಾರ್ಡ್ಗಳು: ಕ್ರೆಡಿಟ್ ಕಾರ್ಡ್ಗಳನ್ನು ಬಳಸುವಾಗ, ನೀವು ನಿಮ್ಮ ಹಣದ ಮೂಲಕ ವಸ್ತುಗಳನ್ನು ಖರೀದಿಸಬಹುದು ಮತ್ತು ಅನುಕೂಲಕರವಾಗಿ ಬಿಲ್ಗಳನ್ನು ಪಾವತಿಸಬಹುದು. ಮದುವೆ ಲೋನ್ಗಳಿಗೆ ಹೋಲಿಸಿದರೆ ಕ್ರೆಡಿಟ್ ಕಾರ್ಡ್ಗಳು ಹೆಚ್ಚಿನ ಬಡ್ಡಿ ದರಗಳೊಂದಿಗೆ ಬರಬಹುದು.
ಹೆಚ್ಚುವರಿಯಾಗಿ, ಪಾವತಿಯು ವಿಳಂಬವಾದರೆ ಹೆಚ್ಚಿನ ಬಡ್ಡಿ ಶುಲ್ಕಗಳ ಅಪಾಯ ಇರುತ್ತದೆ. ವಿವಿಧ ಕಾರಣಗಳಿಗಾಗಿ, ಮದುವೆಯ ದೊಡ್ಡ ಖರ್ಚುಗಳನ್ನು ಮಾಡಲು ಕ್ರೆಡಿಟ್ ಕಾರ್ಡ್ಗಳು ಪರಿಣಾಮಕಾರಿ ಪರಿಹಾರವಾಗದೇ ಇರಬಹುದು.
ಸಾಂಪ್ರದಾಯಿಕ ಲೋನ್ಗಳು: ಬ್ಯಾಂಕ್ ಲೋನ್ಗಳು ಅಥವಾ ಹಣಕಾಸು ಸಂಸ್ಥೆಗಳ ಲೋನ್ಗಳಂತಹ ಸಾಂಪ್ರದಾಯಿಕ ಮದುವೆ ಲೋನ್ಗಳಿಗೆ ಡಾಕ್ಯುಮೆಂಟೇಶನ್ ಮತ್ತು ಕ್ರೆಡಿಟ್ ಪರಿಶೀಲನೆಗಳನ್ನು ಒಳಗೊಂಡಂತೆ ವ್ಯಾಪಕ ಅಪ್ಲಿಕೇಶನ್ ಪ್ರಕ್ರಿಯೆಯ ಅಗತ್ಯವಿದೆ, ಅದೇ ಟಿವಿಎಸ್ ಕ್ರೆಡಿಟ್ನಲ್ಲಿ ನಾವು ಸುಲಭವಾದ ಪೇಪರ್ವರ್ಕ್ ಮತ್ತು ತ್ವರಿತ ಸಾಲದ ಅನುಮೋದನೆ ಜೊತೆಗೆ ತಕ್ಷಣದ ಫಂಡ್ಗಳಂತಹ ಹಲವು ಕಾರ್ಯಕ್ಷಮತೆಗಳನ್ನು ಒದಗಿಸುತ್ತೇವೆ. ಕ್ರೆಡಿಟ್ ಕಾರ್ಡ್ಗಳು ನಿಮಗೆ ಸುಲಭವಾಗಿ ಖರ್ಚು ಮಾಡಲು ತಡೆರಹಿತ ಮಾರ್ಗವನ್ನು ಒದಗಿಸುತ್ತವೆ ಮತ್ತು ಸಾಂಪ್ರದಾಯಿಕ ಲೋನ್ಗಳು ರಚನಾತ್ಮಕ ಫೈನಾನ್ಸಿಂಗ್ ಅನ್ನು ಒದಗಿಸುತ್ತವೆ. ಇತರ ಹಣಕಾಸು ಆಯ್ಕೆಗಳಿಗೆ ಹೋಲಿಸಿದರೆ ಮದುವೆ ಲೋನ್ಗಳನ್ನು ಸಾಮಾನ್ಯವಾಗಿ ಅವುಗಳ ಫ್ಲೆಕ್ಸಿಬಿಲಿಟಿ, ಅಕ್ಸೆಸ್ ಮತ್ತು ಕಡಿಮೆ ಬಡ್ಡಿ ದರಗಳ ಕಾರಣಗಳಿಗಾಗಿ ಆದ್ಯತೆ ನೀಡಲಾಗುತ್ತದೆ. ಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್ನ ಸಹಾಯದಿಂದ, ನೀವು ಮನೆಯಲ್ಲೇ ಕುಳಿತು ವಿರಮಿಸುತ್ತ ನಿಮ್ಮ ಮದುವೆ ಲೋನಿಗೆ ಅನುಮೋದನೆ ಪ್ರಕ್ರಿಯೆಯ ಬಗ್ಗೆ ಚಿಂತಿಸದೆ ನಿಮ್ಮ ಸಮಯವನ್ನು ಆನಂದಿಸಬಹುದು!
ನಿಮ್ಮ ಕನಸಿನ ಮದುವೆಯನ್ನು ನನಸಾಗಿಸಲು ಹಂತಗಳು
ಯಾವುದೇ ಹೆಚ್ಚುವರಿ ಒತ್ತಡ ಅಥವಾ ಹಣಕಾಸಿನ ಚಿಂತೆಗಳಿಲ್ಲದೆ ನಿಮ್ಮ ಕನಸಿನ ಮದುವೆಯನ್ನು ನನಸಾಗಿಸಲು ನಿಮ್ಮ ಮದುವೆ ಫೈನಾನ್ಸ್ ಚಿಂತೆಯನ್ನು ದೂರ ಮಾಡಿಕೊಳ್ಳಿ. ಸುಗಮ ಮತ್ತು ದಕ್ಷ ಮದುವೆ ಯೋಜನೆಯ ಅನುಭವವನ್ನು ತಮ್ಮದಾಗಿಸಲು ಈ ಪ್ರಮುಖ ಹಂತಗಳನ್ನು ಅನ್ವೇಷಿಸಿ.
- ಬಜೆಟ್ ಸೆಟ್ ಮಾಡಿ: ಬಜೆಟ್ ರಚಿಸುವ ಮೂಲಕ ಖಚಿತವಾಗಿರಿ ಮತ್ತು ನಿಮ್ಮ ಖರ್ಚಿನ ಬಗ್ಗೆ ಸ್ಮಾರ್ಟ್ ಆಗಿರಿ. ನಿಮ್ ಆ ಸುಂದರ ದಿನವನ್ನು ಪ್ಲಾನ್ ಮಾಡುವಾಗ ನಿಮ್ಮ ಫೈನಾನ್ಸ್ ಅನ್ನು ನಿಯಂತ್ರಿಸುವುದು ಮುಖ್ಯವಾಗಿದೆ. ಬಜೆಟ್ ಸೆಟ್ ಮಾಡುವ ಮೂಲಕ ಆರಂಭಿಸಿ ಮತ್ತು ಸ್ಥಳ, ಕ್ಯಾಟರಿಂಗ್, ಡೆಕೋರೇಶನ್, ಉಡುಪು ಮತ್ತು ಇನ್ನೂ ಮುಂತಾದವುಗಳನ್ನು ಒಳಗೊಂಡಂತೆ ಎಲ್ಲಾ ಮದುವೆ ವೆಚ್ಚಗಳನ್ನು ಪಟ್ಟಿ ಮಾಡಿ. ವಿವರವಾದ ಪ್ಲಾನ್ ಹೊಂದಿರುವುದರಿಂದ ಎಲ್ಲಾ ವೆಚ್ಚಗಳ ಬಗ್ಗೆ ನಿಮಗೆ ಅರಿವು ಸಿಗುತ್ತದೆ ಮತ್ತು ವಿವಿಧ ಕಡೆಗಳಲ್ಲಿ ಅನಿರೀಕ್ಷಿತ ವೆಚ್ಚಗಳನ್ನು ತಪ್ಪಿಸಬಹುದು ಎಂಬುದನ್ನು ಖಚಿತಪಡಿಸುತ್ತದೆ.
- ಸಾಲದ ಆಫರ್ಗಳನ್ನು ಹೋಲಿಕೆ ಮಾಡಿ: ನೀವು ಮದುವೆ ಲೋನಿಗೆ ಅಪ್ಲೈ ಮಾಡುವ ಪ್ರಕ್ರಿಯೆಯಲ್ಲಿರುವುದರಿಂದ, ನೀವು ಹೊಂದಿರುವ ಬೇರೆ ಸಾಲದ ಆಫರ್ಗಳನ್ನು ಪರಿಗಣಿಸುವುದು ಅಗತ್ಯವಾಗಿದೆ. ನಿಮ್ಮ ಹಣಕಾಸಿನ ಪರಿಸ್ಥಿತಿಗೆ ಸರಿಹೊಂದುವ ಅತ್ಯುತ್ತಮ ಡೀಲ್ ಕಂಡುಕೊಳ್ಳಲು ಬಡ್ಡಿ ದರಗಳು, ಲೋನ್ ಅವಧಿಗಳು, ಶುಲ್ಕಗಳು ಮತ್ತು ಮರುಪಾವತಿ ಆಯ್ಕೆಗಳನ್ನು ವಿಶ್ಲೇಷಿಸಿ. ಪೂರೈಕೆದಾರರನ್ನು ಆಯ್ಕೆ ಮಾಡುವಾಗ, ಅವರ ಫೀಸ್ ಮತ್ತು ಲೋನ್ ನಿಯಮಗಳು ನಿಮಗೆ ಕೈಗೆಟಕುವಂತಿವೆ ಮತ್ತು ಮರುಪಾವತಿಯಲ್ಲಿ ಫ್ಲೆಕ್ಸಿಬಿಲಿಟಿಯನ್ನು ಒದಗಿಸುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಆರಂಭಿಕ ಲೋನ್ ಮರುಪಾವತಿಯ ಪ್ರಯೋಜನಗಳ ಬಗ್ಗೆ ಕೂಡ ನೀವು ವಿಚಾರಿಸಬಹುದು, ಇದು ಬಡ್ಡಿ ವೆಚ್ಚಗಳನ್ನು ಕಡಿಮೆ ಮಾಡಲು ಮತ್ತು ಮರುಪಾವತಿಯನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ.
- ಮುಂಚಿತವಾಗಿ ಯೋಜಿಸಿ: ಮದುವೆ ದಿನಕ್ಕಿಂತ ಮುಂಚಿತವಾಗಿಯೇ ಸಾಲವನ್ನು ಸುರಕ್ಷಿತಗೊಳಿಸುವುದು ಉತ್ತಮ ಅಭ್ಯಾಸವಾಗಿದೆ. ಕೊನೆಯ ಕ್ಷಣದ ತೊಂದರೆಯನ್ನು ತಪ್ಪಿಸಲು ಮತ್ತು ಅಗತ್ಯವಿರುವ ಎಲ್ಲಾ ಡಾಕ್ಯುಮೆಂಟ್ಗಳು ಸಿದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಲೋನ್ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಮುಂಚಿತವಾಗಿ ಆರಂಭಿಸಿ. ವಿಶೇಷವಾಗಿ ಮಾರಾಟಗಾರರ ಡೆಪಾಸಿಟ್ಗಳು ಮತ್ತು ಇತರ ಆರಂಭಿಕ ಪಾವತಿಗಳಿಗೆ ಅಗತ್ಯವಿದ್ದಾಗ ಲೋನ್ ಕವರ್ ಪಡೆಯಲು ಈಗಲೇ ಕೆಲಸ ಮಾಡಿ.
ಮುಂಚಿತವಾಗಿ ಯೋಜಿಸುವುದರಿಂದ ಒಪ್ಪಂದ ಸಂಬಂಧಿತ ಸಮಸ್ಯೆಗಳನ್ನು ಸರಾಗವಾಗಿ ವ್ಯವಹರಿಸಲು ಸಹಾಯ ಮಾಡುತ್ತದೆ. ನೆನಪಿಡಿ, ಇದು ತ್ವರಿತ ಮದುವೆ ಲೋನ್ ಅನುಮೋದನೆ, ಫಂಡ್ ಬಳಕೆಯ ಫ್ಲೆಕ್ಸಿಬಿಲಿಟಿ ಅಥವಾ ಫಿಕ್ಸೆಡ್ ಬಡ್ಡಿ ದರಗಳು ಏನೇ ಆಗಿರಲಿ, ಮದುವೆ ಲೋನ್ಗಳು ಅಡಮಾನ ಅವಶ್ಯಕತೆಗಳ ಒತ್ತಡವಿಲ್ಲದೆ ನಿಮಗೆ ಅಗತ್ಯವಿರುವ ಹಣಕಾಸಿನ ನೆರವನ್ನು ಒದಗಿಸುತ್ತದೆ. ಈ ಅನುಕೂಲಕರ ಕ್ರೆಡಿಟ್ ಪರಿಹಾರವನ್ನು ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ರೂಪಿಸಲಾಗಿದೆ, ಇದು ನಿಮ್ಮ ಕನಸಿನ ಮದುವೆಗೆ ಸುಲಭವಾದ ಫೈನಾನ್ಸ್ ಅನ್ನು ಒದಗಿಸುತ್ತದೆ. ನಿಮ್ಮ ಬಜೆಟ್ ಮತ್ತು ಹಣಕಾಸಿನ ಅವಶ್ಯಕತೆಗಳಿಗೆ ಸರಿಹೊಂದುವ ಸಾಲವನ್ನು ಆಯ್ಕೆ ಮಾಡಲು ಯಾವಾಗಲೂ ಮರುಪಾವತಿಯೊಂದಿಗೆ ನಿಮ್ಮ ಆದಾಯ ಮತ್ತು ಹೊಂದಾಣಿಕೆಯ ಮಟ್ಟವನ್ನು ಪರಿಗಣಿಸಿ.
ಎಫ್ಎಕ್ಯೂ ಗಳು –
- ಮದುವೆ ಲೋನಿಗೆ ಯಾರು ಅರ್ಹರಾಗಿರುತ್ತಾರೆ?
ಕ್ರೆಡಿಟ್ ಸಂಸ್ಥೆಗಳು ನಿಗದಿಪಡಿಸಿದ ವಯಸ್ಸು, ಆದಾಯ ಮತ್ತು ಕ್ರೆಡಿಟ್ ಸ್ಕೋರ್ ಅವಶ್ಯಕತೆಗಳನ್ನು ಪೂರೈಸುವ ವ್ಯಕ್ತಿಗಳು ಮದುವೆ ಲೋನಿಗೆ ಅರ್ಹರಾಗಿರುತ್ತಾರೆ.
- ಮದುವೆ ಲೋನ್ ಉತ್ತಮವಾಗಿದೆಯೇ?
ಈ ಸಾಲಗಳ ಬೆಂಬಲಕ್ಕೆ ಯಾವುದೇ ಸಮಸ್ಯೆಗಳಿಲ್ಲದೇ ಇದ್ದಾಗ ಇದು ಉತ್ತಮವಾಗಿದೆ. ಅಂತಹ ಲೋನ್ಗಳು ಮದುವೆಯ ವೆಚ್ಚಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಮತ್ತು ಯಾವುದೇ ರೀತಿಯ ಜವಾಬ್ದಾರಿಯಿಲ್ಲದ ಫಂಡ್ಗಳ ನಿರ್ವಹಣೆಯಿಂದ ಉಳಿತಾಯ ಮಾರ್ಗವಾಗಿ ಕಾರ್ಯನಿರ್ವಹಿಸಲು ನಿಮಗೆ ಅನುವು ಮಾಡಿಕೊಡುತ್ತವೆ.
- ಮದುವೆ ಲೋನಿಗೆ ಬೇಕಾದ ಡಾಕ್ಯುಮೆಂಟ್ಗಳು ಯಾವುವು?
ಸಾಲಕ್ಕಾಗಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ವಿಳಾಸದ ಪುರಾವೆಯಂತಹ ಪ್ರಮುಖ ಡಾಕ್ಯುಮೆಂಟ್ಗಳು ಸಾಕಾಗುತ್ತವೆ.
- ಮದುವೆ ಲೋನಿಗೆ ಅಪ್ಲೈ ಮಾಡುವುದು ಹೇಗೆ?
ಸ್ಟೋರ್ಗೆ ಭೇಟಿ ನೀಡಲು ನಿಮಗೆ ಸಾಧ್ಯವಾಗದಿದ್ದರೆ ಅಧಿಕೃತ ವೆಬ್ಸೈಟ್ನಲ್ಲಿ ನೀವು ಪ್ರಕ್ರಿಯೆಯನ್ನು ಆರಂಭಿಸಬಹುದು. ಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್ ಡೌನ್ಲೋಡ್ ಮಾಡುವ ಮೂಲಕ ಮತ್ತು ಅಗತ್ಯವಿರುವ ಡಾಕ್ಯುಮೆಂಟ್ಗಳು ಮತ್ತು ಮಾಹಿತಿಯನ್ನು ಸಲ್ಲಿಸುವ ಮೂಲಕ ಅಪ್ಲಿಕೇಶನ್ ಪ್ರಕ್ರಿಯೆಯನ್ನು ಅನುಸರಿಸುವುದು ಇನ್ನೊಂದು ಅನುಕೂಲಕರ ಆಯ್ಕೆಯಾಗಿದೆ.
- ಪರ್ಸನಲ್ ಲೋನ್ ಮತ್ತು ಮದುವೆ ಲೋನ್ ನಡುವಿನ ವ್ಯತ್ಯಾಸವೇನು?
ಪರ್ಸನಲ್ ಲೋನ್ ಎಂಬುದು ಬಹು ಉದ್ದೇಶಕ್ಕಾಗಿ ವಿನ್ಯಾಸಗೊಳಿಸಲಾದ ಫ್ಲೆಕ್ಸಿಬಲ್ ಹಣಕಾಸಿನ ಸಾಧನವಾಗಿದೆ, ಆದರೆ ಮದುವೆ ಲೋನನ್ನು ವಿಶೇಷವಾಗಿ ಸ್ಥಳ, ಕೇಟರಿಂಗ್ ಮತ್ತು ಉಡುಪುಗಳಂತಹ ಮದುವೆ ವೆಚ್ಚಗಳಿಗೆ ಹಣಕಾಸು ಒದಗಿಸಲು ರೂಪಿಸಲಾಗಿದೆ. ಮದುವೆ ಲೋನ್ಗಳು ವಿಶೇಷವಾಗಿ ಮದುವೆಗಳ ಫೈನಾನ್ಸ್ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿರುವ ವಿಶಿಷ್ಟ ನಿಯಮಗಳು ಮತ್ತು ಸ್ಪರ್ಧಾತ್ಮಕ ದರಗಳನ್ನು ಒದಗಿಸುತ್ತವೆ.