ನೀವು ಕೃಷಿ ಬಿಸಿನೆಸ್ಗೆ ಹೋಗಲು ಯೋಜಿಸುತ್ತಿದ್ದೀರಾ?
ಅಥವಾ ನೀವು ಈಗಾಗಲೇ ಫಾರ್ಮಿಂಗ್ ಮಾಡುತ್ತಿದ್ದೀರಾ?
ಫಾರ್ಮಿಂಗ್ ದುಬಾರಿ ಎಂದು ನೀವು ತಿಳಿದುಕೊಳ್ಳಬೇಕು! ಒಂದು ಫಾರ್ಮ್ ಆರಂಭಿಸುವುದು ಮತ್ತು ಮುನ್ನಡೆಸುವುದು ನಿಮ್ಮ ಹೆಚ್ಚಿನ ವೆಚ್ಚಕ್ಕೆ ಕಾರಣವಾಗಬಹುದು!
ನಿಮಗೆ ಹಣಕಾಸಿನ ಅಗತ್ಯವಿರುವ ಸಾಧ್ಯತೆ ಹೆಚ್ಚಾಗಿರುತ್ತದೆ, ಮತ್ತು ಆ ಸಂದರ್ಭದಲ್ಲಿ ನಿಖರವಾಗಿ ಫಾರ್ಮ್ ಲೋನ್ಗಳು ಸಹಾಯಕ್ಕೆ ಬರುತ್ತವೆ.
ಕೃಷಿ ಲೋನ್ ಪಡೆಯುವುದು ಸವಾಲಿನ ಕೆಲಸವಾಗಿರಬಹುದು. ಕೆಲವೊಮ್ಮೆ, ಸಾಲದಾತರ ಮನೆ ಬಾಗಿಲಿಗೆ ಹೋಗುವುದು ಕೂಡ ಕಷ್ಟ ಫಾರ್ಮ್ ಲೋನ್ ಅನುಮೋದನೆಗೆ ಬಹಳಷ್ಟು ಹೋಮ್ವರ್ಕ್ ಅಗತ್ಯವಿದೆ. ನಿಮಗೆ ಎಷ್ಟು ಹಣ ಬೇಕು, ನಿಮಗೆ ಯಾಕೆ ಅಗತ್ಯವಿದೆ ಮತ್ತು ನೀವು ಅದನ್ನು ಹೇಗೆ ಮರಳಿ ಪಾವತಿಸಲಿದ್ದೀರಿ ಎಂಬುದರ ಬಗ್ಗೆ ನಿಮಗೆ ಸ್ಪಷ್ಟತೆ ಇದ್ದರೆ ಇದು ಸುಲಭವಾದ ಕೆಲಸವಾಗಬಹುದು.
ನೀವು ಕೃಷಿ ಲೋನಿಗೆ ಅಪ್ಲೈ ಮಾಡುವ ಮೊದಲು ಮಾಡಬೇಕಾದ ಕೆಲವು ಪ್ರಮುಖ ವಿಷಯಗಳು ಇಲ್ಲಿವೆ:
1. ಸೂಕ್ತವಾದ ಬಿಸಿನೆಸ್ ಪ್ಲಾನ್ ಹೊಂದಿರಿ
ನೀವು ಸಾಲದಾತರ ಬಳಿಗೆ ಸುಮ್ಮನೆ ಹೋಗುವುದು ಮತ್ತು "ನನಗೆ ನನ್ನ ಕೃಷಿ ವ್ಯವಹಾರಕ್ಕಾಗಿ ಹಣಕಾಸು ಅಗತ್ಯವಿದೆ" ಎಂದು ಹೇಳಿದರೆ, ನಿಮ್ಮ ಸಾಲಕ್ಕೆ ಅನುಮೋದನೆ ದೊರಕದಿರುವುದು 99 ಶೇಕಡಾ ಸತ್ಯ. ಮತ್ತೊಂದೆಡೆ, ನೀವು ಸರಿಯಾದ ಬಿಸಿನೆಸ್ ಪ್ಲಾನಿನೊಂದಿಗೆ ಹೋದರೆ, ನೀವು ಎಲ್ಲಿ ಹೂಡಿಕೆ ಮಾಡಲು ಬಯಸುತ್ತೀರಿ, ನೀವು ಹೇಗೆ ಹೂಡಿಕೆ ಮಾಡುತ್ತೀರಿ ಮತ್ತು ನೀವು ಸಾಲವನ್ನು ಹೇಗೆ ಮರುಪಾವತಿಸುತ್ತೀರಿ ಎಂಬುದರ ಬಗ್ಗೆ ನೀವು ಸ್ಪಷ್ಟತೆಯನ್ನು ಹೊಂದಿದ್ದೀರಿ ಎಂದು ಸಾಲದಾತರು ತಿಳಿದುಕೊಳ್ಳುತ್ತಾರೆ. ನಿಮ್ಮ ಬಿಸಿನೆಸ್ ಪ್ಲಾನ್ ನಿಮ್ಮ ಹಿನ್ನೆಲೆ ಮಾಹಿತಿ, ಮಿಷನ್, ಗುರಿಗಳು, ಉದ್ದೇಶಗಳು ಮತ್ತು ಮಾರ್ಕೆಟಿಂಗ್ ಪ್ಲಾನ್ ಅನ್ನು ಒಳಗೊಂಡಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
2. ನಿಮ್ಮ ಹಣಕಾಸಿನ ಸ್ಟೇಟ್ಮೆಂಟ್ಗಳನ್ನು ಸೂಕ್ತವಾಗಿರಿಸುವುದನ್ನು ಖಚಿತಪಡಿಸಿಕೊಳ್ಳಿ
ಇದು ಅತ್ಯಂತ ಪ್ರಮುಖ ಹಂತಗಳಲ್ಲಿ ಒಂದಾಗಿದೆ, ಏಕೆಂದರೆ ಎಲ್ಲಾ ಸಾಲದಾತರು ಬ್ಯಾಂಕಿನಿಂದ ನೀವು ಪಡೆದ ಹಣವನ್ನು ಮರಳಿ ಪಾವತಿಸಲು ಸಾಧ್ಯವಾಗುತ್ತದೆಯೇ ಎಂದು ತಿಳಿದುಕೊಳ್ಳಲು ಬಯಸುತ್ತಾರೆ. ನೀವು ಸಂಪರ್ಕಿಸುವ ಯಾವುದೇ ಸಾಲದಾತರು ಆದಾಯ ಸ್ಟೇಟ್ಮೆಂಟ್, ನಗದು ಹರಿವಿನ ಸ್ಟೇಟ್ಮೆಂಟ್, ಫಾರ್ಮ್ ಬ್ಯಾಲೆನ್ಸ್ ಶೀಟ್ ಮತ್ತು ಬಿಸಿನೆಸ್ ಇತಿಹಾಸದಂತಹ ನಿಮ್ಮ ಹಣಕಾಸಿನ ಡಾಕ್ಯುಮೆಂಟ್ಗಳನ್ನು ಪರಿಶೀಲಿಸುವ ಮೂಲಕ ಸಾಲವನ್ನು ಮರುಪಾವತಿಸುವ ನಿಮ್ಮ ಹಣಕಾಸಿನ ಸಾಮರ್ಥ್ಯವನ್ನು ಪರಿಶೀಲಿಸಬಹುದು.
3. ನಿಮ್ಮ ಅಡಮಾನವನ್ನು ಸಿದ್ಧವಾಗಿರಿಸಿಕೊಳ್ಳಿ
ಅಡಮಾನವು ನಿಮ್ಮ ಸ್ವಂತ ಸ್ವತ್ತುಗಳಾಗಿವೆ ಮತ್ತು ನೀವು ಸಾಲವನ್ನು ಮರುಪಾವತಿಸಲು ವಿಫಲವಾದರೆ ಬ್ಯಾಂಕ್ ರಿಕವರಿಯಾಗಿ ಬಳಸಬಹುದು. ನೀವು ಸಾಲದ ಮೌಲ್ಯಕ್ಕೆ ತಕ್ಕ ರೂಪದ ಅಸೆಟ್ ಅನ್ನು ಹೊಂದಿರಬೇಕು. ‘ನೀವು ಯಾವ ಅಸೆಟ್ಗಳನ್ನು ಒತ್ತೆ ಇಡಬಹುದು?’ ಎಂದು ನಿಮ್ಮನ್ನು ಕೇಳಿದರೆ ಉತ್ತರದೊಂದಿಗೆ ನೀವು ಸಿದ್ಧರಾಗಿರುವಿರಿ ಎಂದು ಖಚಿತಪಡಿಸಿಕೊಳ್ಳಿ, ಸಾಲದ ಮೌಲ್ಯದ ಕೃಷಿಯೇತರ ಅಸೆಟ್ ಅನ್ನು ನೀವು ಪಡೆದಿದ್ದರೆ, ನಿಮ್ಮ ಸಾಲವನ್ನು ಅನುಮೋದಿಸುವ ಅವಕಾಶವು ಹೆಚ್ಚಾಗುತ್ತದೆ.
4. ಸಾಮಾನ್ಯ ಪ್ರಶ್ನೆಗಳಿಗಾಗಿ ನಿಮ್ಮನ್ನು ಸಿದ್ಧಪಡಿಸಿಕೊಳ್ಳಿ
ಇದು ತುಂಬಾ ಸ್ಪಷ್ಟವಾಗಿದೆ ಎಂದು ನೀವು ಭಾವಿಸಿದರೂ, ಅದನ್ನು ಲಘುವಾಗಿ ತೆಗೆದುಕೊಳ್ಳಬೇಡಿ. ಅರ್ಹತೆಗಳು ಮತ್ತು ಹಿಂದಿನ ಅನುಭವದಂತಹ ಸಾಮಾನ್ಯ ಪ್ರಶ್ನೆಗಳಿಗೆ ನೀವು ಉತ್ತರಿಸುವ ಆಧಾರದ ಮೇಲೆ, ನಿಮ್ಮ ಬಿಸಿನೆಸ್ ಪ್ಲಾನ್ ಫಲಪ್ರದವಾಗಿದೆಯೇ ಅಥವಾ ನೀವು ಸಾಲವನ್ನು ಮರುಪಾವತಿಸಲು ಸಾಧ್ಯವಾಗುತ್ತದೆಯೇ ಎಂದು ಸಾಲದಾತನು ನಿರ್ಧರಿಸಬಹುದು. ಆದ್ದರಿಂದ, ನೀವು ಸಾಲದಾತರ ಮೇಲೆ ಉತ್ತಮ ಪ್ರಭಾವವನ್ನು ಸೃಷ್ಟಿಸಲು ಬಯಸಿದರೆ, ನೀವು ಸಾಮಾನ್ಯ ಪ್ರಶ್ನೆಗಳಿಗೆ ಸಿದ್ಧರಾಗಿರಬೇಕು.
ನೀವು ಮೇಲೆ ತಿಳಿಸಿದ ವಿಷಯಗಳೊಂದಿಗೆ ಸಿದ್ಧರಾಗಿದ್ದರೆ ಮತ್ತು ಸಾಲಕ್ಕಾಗಿ ನೀವು ಸಾಲದಾತರನ್ನು ಸಂಪರ್ಕಿಸುವ ಮೊದಲು ನೀವು ಸೂಕ್ತ ಪ್ಲಾನ್ ಅನ್ನು ಮಾಡಿಕೊಂಡಿದ್ದರೆ, ಅವರು ನಿಮ್ಮ ಸಾಲವನ್ನು ಅನುಮೋದಿಸುವ ಹೆಚ್ಚಿನ ಅವಕಾಶಗಳಿವೆ. ಒಮ್ಮೆ ನೀವು ಅದನ್ನು ಪಡೆದ ನಂತರ, ನೀವು ಕೃಷಿ ಸಲಕರಣೆಗಳು ಮತ್ತು ಸರಬರಾಜುಗಳನ್ನು ಖರೀದಿಸುವಲ್ಲಿ, ಹಳೆಯ ಸಾಲವನ್ನು ರಿಫೈನಾನ್ಸ್ ಮಾಡುವುದು, ದುರಸ್ತಿ ಕೆಲಸದೊಂದಿಗೆ ಭೂಮಿಯನ್ನು ಸುಧಾರಿಸುವುದು ಮತ್ತು ಮಾರ್ಕೆಟಿಂಗ್ ಅಭಿಯಾನಗಳು ಮತ್ತು ಜಾಹೀರಾತುಗಳನ್ನು ಮಾಡುವಲ್ಲಿ ಹಣಕಾಸಿನ ಉತ್ತಮ ಬಳಕೆಯನ್ನು ಮಾಡಬಹುದು. ಬಹಳಷ್ಟು ಬ್ಯಾಂಕುಗಳು ಟ್ರ್ಯಾಕ್ಟರ್ ಲೋನ್ಗಳು ಅನ್ನು ಕೂಡ ಪ್ರತ್ಯೇಕವಾಗಿ ಒದಗಿಸುತ್ತವೆ. ಆದ್ದರಿಂದ, ನೀವು ಟ್ರ್ಯಾಕ್ಟರ್ ಲೋನ್ ಬಡ್ಡಿ ದರವನ್ನು ಆನ್ಲೈನಿನಲ್ಲಿ ಪರಿಶೀಲಿಸಬಹುದು ಮತ್ತು ನಂತರ ಅದರೊಂದಿಗೆ ಮುಂದುವರಿಯಬಹುದು!