ಹೆಚ್ಚಿದ ಡಿಜಿಟಲೀಕರಣ ಮತ್ತು ಬ್ಯಾಂಕಿಂಗ್ನ ಹೆಚ್ಚುತ್ತಿರುವ ಸುಲಭ ಲಭ್ಯತೆಯಿಂದಾಗಿ ವಂಚನೆಯ ಅರಿವು ಹೆಚ್ಚು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿದೆ, ವಂಚಕರು ಹೆಚ್ಚು ನವೀನ ಮೋಸದ ಅಭ್ಯಾಸಗಳೊಂದಿಗೆ ಬರುತ್ತಿದ್ದಾರೆ. ಸಾಮಾನ್ಯವಾಗಿ, ಅವರು ಸೂಕ್ಷ್ಮ ವೈಯಕ್ತಿಕ ಮಾಹಿತಿಯನ್ನು ಪಡೆಯಲು ಮತ್ತು ಹಣಕಾಸಿನ ನಷ್ಟಕ್ಕೆ ಕಾರಣವಾಗಲು ಅಧಿಕೃತ ಸಿಬ್ಬಂದಿಯಾಗಿ ತೋರಿಸಿಕೊಳ್ಳುತ್ತಾರೆ.
ನೀವು ತಿಳಿದಿರಬೇಕಾದ ಸಾಮಾನ್ಯ ರೀತಿಯ ವಂಚನೆಗಳು
- ಫಿಶಿಂಗ್ ಲಿಂಕ್ಗಳು - ನಿಜವಾದ ವೆಬ್ಸೈಟ್ನಂತೆ ಕಾಣುವ ಥರ್ಡ್ ಪಾರ್ಟಿ ವೆಬ್ಸೈಟ್ಗಳ ಲಿಂಕ್ಗಳನ್ನು ಎಸ್ಎಂಎಸ್, ಸೋಶಿಯಲ್ ಮೀಡಿಯಾ, ಇಮೇಲ್ ಅಥವಾ ತ್ವರಿತ ಮೆಸೇಜ್ಗಳ ಮೂಲಕ ಹಂಚಿಕೊಳ್ಳಲಾಗುತ್ತದೆ. ವಂಚಕರು ನಿಮ್ಮ ಹಣಕಾಸಿನ ಮಾಹಿತಿಯನ್ನು ಪಡೆದುಕೊಳ್ಳಲು ಇವುಗಳನ್ನು ಬಳಸುತ್ತಾರೆ.
- ಇಮೇಲ್/ಎಸ್ಎಂಎಸ್/ಕಾಲ್ ಸ್ಕ್ಯಾಮ್ಗಳು - ಇಮೇಲ್, ಎಸ್ಎಂಎಸ್, ಟೆಲಿಫೋನ್ ಕರೆಗಳ ಮೂಲಕ ಪ್ರಕಟಿಸಲಾದ ಸಾಲದ ಲಭ್ಯತೆ ಅಥವಾ ಸಾಲದ ಮಂಜೂರಾತಿಗಳ ಬಗ್ಗೆ ನಕಲಿ ಸಂದೇಶಗಳು.
- ಸಾಲಗಳನ್ನು ವಿಸ್ತರಿಸಲು ನಕಲಿ ಜಾಹೀರಾತುಗಳು - ಅವುಗಳು ಆಕರ್ಷಕ ಮತ್ತು ಕಡಿಮೆ ಬಡ್ಡಿಯಲ್ಲಿ ಪರ್ಸನಲ್ ಲೋನ್ಗಳ ಬಗ್ಗೆ ಜಾಹೀರಾತು ನೀಡುತ್ತವೆ ಆದರೆ ಪ್ರಕ್ರಿಯಾ ಶುಲ್ಕ, ಜಿಎಸ್ಟಿ, ಮುಂಗಡ ಇಎಂಐ, ಅನ್-ಹೋಲ್ಡ್ ಶುಲ್ಕಗಳು ಮುಂತಾದ ಮುಂಗಡ ಶುಲ್ಕಗಳನ್ನು ಬೇಡುತ್ತವೆ.
- ಎಟಿಎಂ ಕಾರ್ಡ್ ಸ್ಕಿಮ್ಮಿಂಗ್ - ವಂಚಕರು ನಿಮ್ಮ ಕಾರ್ಡ್ ಪಿನ್ ಕ್ಯಾಪ್ಚರ್ ಮಾಡಲು ಡಮ್ಮಿ ಕೀಪ್ಯಾಡ್ ಅಥವಾ ಸಣ್ಣ, ಉತ್ತಮ ಗುಪ್ತ ಕ್ಯಾಮರಾವನ್ನು ಇರಿಸಬಹುದು. ಅವರು ಇತರ ಕಾಯುತ್ತಿರುವ ಗ್ರಾಹಕರಂತೆ ವರ್ತಿಸುತ್ತಿರಬಹುದು ಅಥವಾ ಸ್ಕಿಮ್ಮಿಂಗ್ ಡಿವೈಸ್ಗಳ ಮೂಲಕ ನಿಮ್ಮ ಕಾರ್ಡಿನ ಮಾಹಿತಿ ಕದಿಯಬಹುದು.
- ಒಟಿಪಿ ಆಧಾರಿತ ವಂಚನೆ - ವಂಚಕರು ಅಧಿಕೃತ ಸಿಬ್ಬಂದಿಯಂತೆ ತೋರಿಸಿಕೊಳ್ಳುತ್ತಾರೆ ಮತ್ತು ಸಾಲದ ಲಭ್ಯತೆ ಅಥವಾ ಕ್ರೆಡಿಟ್ ಮಿತಿ ಹೆಚ್ಚಳ ಮತ್ತು ಕರೆ ಮಾಡಲು ಸಂಖ್ಯೆಯ ಬಗ್ಗೆ ಸಂದೇಶಗಳನ್ನು ಕಳುಹಿಸುತ್ತಾರೆ. ಕರೆ ಮಾಡಿದ ನಂತರ, ಅವರು ಒಟಿಪಿ ಗಳು ಮತ್ತು ಪಿನ್ ಗಳನ್ನು ಒಳಗೊಂಡಂತೆ ಹಂಚಿಕೊಂಡ ಡಾಕ್ಯುಮೆಂಟ್ಗಳು ಮತ್ತು ವಿವರಗಳನ್ನು ಕೇಳುತ್ತಾರೆ.
ನಿಮ್ಮ ಹಣಕಾಸಿನ ಮಾಹಿತಿ ಮತ್ತು ಟ್ರಾನ್ಸಾಕ್ಷನ್ಗಳನ್ನು ಸುರಕ್ಷಿತಗೊಳಿಸಲು 10 ಮಾರ್ಗಗಳು
- 1. ಅನಧಿಕೃತ ಟ್ರಾನ್ಸಾಕ್ಷನ್ಗಳಿಗಾಗಿ ನಿಮ್ಮ ಅಕೌಂಟ್ಗಳನ್ನು ಮೇಲ್ವಿಚಾರಣೆ ಮಾಡಿ. ಯಾವುದೇ ಅನಧಿಕೃತ ಟ್ರಾನ್ಸಾಕ್ಷನ್ ಸಂದರ್ಭದಲ್ಲಿ ಸಂಬಂಧಿತ ಅಧಿಕಾರಿಗಳ ಗಮನಕ್ಕೆ ತನ್ನಿ.
- 2. ಅಜ್ಞಾತ ಐಡಿ ಗಳಿಂದ ಪಡೆದ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬೇಡಿ.
- 3. ಅನಧಿಕೃತ ಸಿಬ್ಬಂದಿಯೊಂದಿಗೆ ನಿಮ್ಮ ಹಣಕಾಸಿನ ವಿವರಗಳನ್ನು ಹಂಚಿಕೊಳ್ಳಬೇಡಿ.
- 4. ಸಾರ್ವಜನಿಕ ವೈ-ಫೈ ಅಥವಾ ಉಚಿತ ವಿಪಿಎನ್ ಗಳನ್ನು ಬಳಸುವುದನ್ನು ತಪ್ಪಿಸಿ.
- 5. ಯುಪಿಐ ಮೂಲಕ ಹಣ ಪಡೆಯಲು ಯಾವುದೇ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಬೇಡಿ ಅಥವಾ ಪಿನ್ ನಮೂದಿಸಬೇಡಿ.
- 6. ಅಪರಿಚಿತರಿಂದ ಎಟಿಎಂ ನಲ್ಲಿ ಸಹಾಯಕ್ಕಾಗಿ ಕೇಳಬೇಡಿ.
- 7. ನಿಮ್ಮ ಯುಪಿಐ ಆ್ಯಪ್ಗಳು ಮತ್ತು ನಿಮ್ಮ ಸ್ಮಾರ್ಟ್ಫೋನ್ ಅನ್ನು ರಕ್ಷಿಸಲು ಪಾಸ್ವರ್ಡ್ಗಳನ್ನು ಬಳಸಿ.
- 8. ಸಾಮಾನ್ಯವಾಗಿ ಬಳಸಲಾಗುವ 12345 ಅಥವಾ ಹುಟ್ಟುಹಬ್ಬಗಳನ್ನು ಪಾಸ್ವರ್ಡ್ಗಳಾಗಿ ಬಳಸಬೇಡಿ.
- 9. ಸೂಕ್ಷ್ಮ ವಿವರಗಳನ್ನು ಕೇಳುವ ಮೆಸೇಜ್ಗಳಲ್ಲಿ ಯಾವಾಗಲೂ ಸ್ಪೆಲ್ಲಿಂಗ್ ದೋಷಗಳಿವೆಯೇ ಎಂದು ನೋಡಿ. ಅವುಗಳಲ್ಲಿ ದೋಷಗಳಿದ್ದರೆ, ಅವುಗಳು ನಕಲಿ.
- 10. ಕಾರ್ಡ್ ವಿವರಗಳು ಮತ್ತು ಇತರ ಸೂಕ್ಷ್ಮ ಮಾಹಿತಿಯನ್ನು ಸಂಗ್ರಹಿಸುವುದನ್ನು ತಡೆಗಟ್ಟಲು ವೆಬ್ ಬ್ರೌಸರ್ನ ಆಟೋ-ಕಂಪ್ಲೀಟ್ ಅನ್ನು ಆಫ್ ಮಾಡಿ.
ವಂಚನೆ ತಡೆಗಟ್ಟಲು ಟಿವಿಎಸ್ ಕ್ರೆಡಿಟ್ ತೆಗೆದುಕೊಳ್ಳುವ ಹೆಜ್ಜೆಗಳು ಯಾವುವು?
- ವೆಬ್ಸೈಟ್ನಲ್ಲಿ ಅಧಿಕೃತ ಪಾವತಿ ಲಿಂಕ್ ಒದಗಿಸುತ್ತದೆ
- ಪಾವತಿ ಗೇಟ್ವೇಯನ್ನು ಅಧಿಕೃತ ವೆಬ್ಸೈಟ್ ಮೂಲಕ ರೂಟ್ ಮಾಡಲಾಗುತ್ತದೆ
- ಪಾವತಿ ವಿವರಗಳು ವೈಯಕ್ತಿಕ ಅಕೌಂಟ್/ಯುಪಿಐ ಅಕೌಂಟ್ ಆಗಿರುವುದಿಲ್ಲ
ವೈಯಕ್ತಿಕ ಬ್ಯಾಂಕ್/ಯುಪಿಐ ಅಕೌಂಟ್ಗೆ ಅಥವಾ ಅಜ್ಞಾತ ವೆಬ್ ಲಿಂಕ್ಗಳ ಮೂಲಕ ಪಾವತಿಗಳನ್ನು ಮಾಡಲು ನಿಮ್ಮನ್ನು ಕೇಳುವ ಮೋಸದ ಕರೆಗಳು/ಮೆಸೇಜ್ಗಳ ಬಗ್ಗೆ ಎಚ್ಚರಿಕೆಯಿಂದಿರಿ. ಪಾವತಿ ಮಾಡುವ ಮೊದಲು ವೆಬ್ ಲಿಂಕ್ ಅಧಿಕೃತ ಟಿವಿಎಸ್ ಕ್ರೆಡಿಟ್ ಪಾವತಿ ಲಿಂಕ್ ಆಗಿದೆ ಎಂಬುದನ್ನು ಯಾವಾಗಲೂ ಖಚಿತಪಡಿಸಿಕೊಳ್ಳಿ. ಎಚ್ಚರಿಕೆಯಿಂದಿರಿ ಮತ್ತು ಸುರಕ್ಷಿತವಾಗಿರಿ.
ಹೆಚ್ಚಿನ ಮಾಹಿತಿಗಾಗಿ, ಕ್ಲಿಕ್ ಮಾಡುವ ಮೂಲಕ ನಮ್ಮ ವಿಡಿಯೋ ನೋಡಿ ಇಲ್ಲಿ.