ಜನಸಂಖ್ಯೆಯ ದೊಡ್ಡ ಭಾಗವು ದೈನಂದಿನ ಆಧಾರದ ಮೇಲೆ ಪ್ರಯಾಣಿಸಲು ಭಾರತದಲ್ಲಿ ಟೂ ವೀಲರ್ಗಳನ್ನು ಬಳಸುತ್ತಾರೆ. ಟ್ರಾಫಿಕ್ನ ಹೆಚ್ಚಳವು ಸಮಯಕ್ಕೆ ಸರಿಯಾಗಿ ಶಾಲೆಗಳು, ಕಾಲೇಜುಗಳು ಮತ್ತು ಕಚೇರಿಗಳನ್ನು ತಲುಪುವುದನ್ನು ಘನ ಕಾರ್ಯವನ್ನಾಗಿಸಿದೆ, ಇದು ಟೂ ವೀಲರ್ಗಳನ್ನು ಇತ್ತೀಚೆಗೆ ಭಾರತೀಯರಿಗೆ ಸಾರಿಗೆಯ ಅತ್ಯಂತ ಆದ್ಯತೆಯ ವಿಧಾನಗಳಲ್ಲಿ ಒಂದಾಗಿ ಮಾಡಿದೆ. ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಪ್ರಯಾಣಿಸಲು ಬಯಸುವ ಜನರ ಸಂಖ್ಯೆಯಲ್ಲಿ ಹೆಚ್ಚಳದೊಂದಿಗೆ, ಟೂ ವೀಲರ್ಗಳ ಬೇಡಿಕೆಯು ಮತ್ತು ಟೂ ವೀಲರ್ ಲೋನ್ಗಳ ಅಗತ್ಯತೆಯು ಆಕಾಶದೆತ್ತರಕ್ಕೆ ಏರಿದೆ.
ಇಎಂಐ ನಲ್ಲಿ ಬೈಕ್ ಅಥವಾ ಸ್ಕೂಟಿ ಖರೀದಿಸುವುದು ಇಂದು ಸುಲಭವಾದ ಆಯ್ಕೆಗಳಲ್ಲಿ ಒಂದಾಗಿದೆ. 2 ವೀಲರ್ ಲೋನ್ ಪಡೆಯುವ ಕೆಲವು ಪ್ರಯೋಜನಗಳು ಇಲ್ಲಿವೆ:
1. ಕೈಗೆಟುಕುವಿಕೆ: ಕಡಿಮೆ ಬಡ್ಡಿ ದರಗಳು, ಪ್ರಕ್ರಿಯಾ ಶುಲ್ಕಗಳು ಮತ್ತು ಡಾಕ್ಯುಮೆಂಟೇಶನ್ ಶುಲ್ಕಗಳು!
ಟೂ ವೀಲರ್ ಲೋನ್ ಬಡ್ಡಿ ದರವು ಆದಾಯ, ಬೈಕ್ ವಿವರಣೆಗಳು ಇತ್ಯಾದಿಗಳನ್ನು ಅವಲಂಬಿಸಿರುತ್ತದೆ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ, ಟೂ ವೀಲರ್ ಲೋನ್ಗಳ ಹೆಚ್ಚಿನ ಬೇಡಿಕೆ ಮತ್ತು ಟೂ ವೀಲರ್ ಫೈನಾನ್ಸ್ ಮಾರುಕಟ್ಟೆಯಲ್ಲಿ ಹೆಚ್ಚುತ್ತಿರುವ ಸ್ಪರ್ದಿಗಳ ಸಂಖ್ಯೆಯಿಂದಾಗಿ, ಬಡ್ಡಿ ದರವು ಕಡಿಮೆಯಾಗುವ ಟ್ರೆಂಡ್ ಹೊಂದಿದೆ, ಇದು ಹೆಚ್ಚಿನ ವ್ಯಕ್ತಿಗಳಿಗೆ ಕೈಗೆಟಕುವಂತೆ ಮಾಡುತ್ತದೆ. ಇದಲ್ಲದೆ, ಪ್ರಕ್ರಿಯಾ ಶುಲ್ಕಗಳು ಮತ್ತು ಡಾಕ್ಯುಮೆಂಟೇಶನ್ ಶುಲ್ಕಗಳು ಕಡಿಮೆಯಾಗಿವೆ. ಅದರ ಜೊತೆಗೆ, ಮಹಿಳಾ ಗ್ರಾಹಕರಂತಹ ವಿವಿಧ ವರ್ಗಗಳಿಗೆ ವಿಶೇಷ ಕಡಿಮೆ ಬಡ್ಡಿ ದರಗಳಂತಹ ಅನೇಕ ವಿಶೇಷ ಆಫರ್ಗಳು ಮತ್ತು ರಿಯಾಯಿತಿಗಳು ಲಭ್ಯವಿವೆ.
2. ಸುಲಭ ಮತ್ತು ತ್ವರಿತ: ಸುಲಭ ಅಪ್ಲಿಕೇಶನ್ ಮತ್ತು ತ್ವರಿತ ಪ್ರಕ್ರಿಯೆ!
ಸಾಲಕ್ಕೆ ಅಪ್ಲೈ ಮಾಡಲು ಗಂಟೆಗಳವರೆಗೆ ಬ್ಯಾಂಕುಗಳು ಮತ್ತು ಕಚೇರಿಗಳಲ್ಲಿ ಉದ್ದದ ಸರತಿ ಸಾಲಿನಲ್ಲಿ ನಿಲ್ಲುವ ಮತ್ತು ಅನುಮೋದನೆ ಪಡೆಯಲು ತಿಂಗಳಿಗಿಂತ ಹೆಚ್ಚು ಕಾಯುವ ದಿನಗಳು ಮುಗಿದಿವೆ. ಕಳೆದ ಕೆಲವು ವರ್ಷಗಳಲ್ಲಿ, ಸಾಲದ ಅಪ್ಲಿಕೇಶನ್ ಮತ್ತು ಅನುಮೋದನೆ ಪ್ರಕ್ರಿಯೆಯಲ್ಲಿ ಬಹಳಷ್ಟು ಸುಧಾರಣೆಗಳಾಗಿವೆ. ಇತರ ಸಾಲಗಳಂತೆ ಅಲ್ಲದೆ, ಟೂ ವೀಲರ್ಗಳಿಗೆ ಅಪ್ಲಿಕೇಶನ್ ಪ್ರಕ್ರಿಯೆಯು ತ್ವರಿತ, ಸುಲಭ ಮತ್ತು ಗ್ರಾಹಕರು ಆನ್ಲೈನಿನಲ್ಲಿ ಕೂಡ ಅಪ್ಲೈ ಮಾಡಬಹುದು. ಇದಲ್ಲದೆ, ಅಪ್ಲಿಕೇಶನ್ ಪೂರ್ಣಗೊಂಡ ನಂತರ, ಪ್ರಕ್ರಿಯಾ ಸಮಯವು 2 ರಿಂದ 3 ಕೆಲಸದ ದಿನಗಳಷ್ಟು ಕಡಿಮೆ ಇರಬಹುದು. ಅಲ್ಲದೆ, ಡಾಕ್ಯುಮೆಂಟೇಶನ್ ಕನಿಷ್ಠವಾಗಿದೆ, ಇದು ಹೆಚ್ಚಿನ ಜನರಿಗೆ ಸಾಲಕ್ಕೆ ಅರ್ಹತೆ ನೀಡುತ್ತದೆ. ಆದ್ದರಿಂದ, ಸಾಲದ ಅಪ್ಲಿಕೇಶನ್, ಪ್ರಕ್ರಿಯೆ ಮತ್ತು ಮಂಜೂರಾತಿಯ ಸಂಪೂರ್ಣ ಪ್ರಕ್ರಿಯೆಯು ಕೆಲವು ದಿನಗಳ ಕಾಲ ಮಾತ್ರ ಇರುತ್ತದೆ. ಗ್ರಾಹಕರು ಸಣ್ಣ ಕಂತುಗಳಲ್ಲಿ ಮೊತ್ತವನ್ನು ಮರುಪಾವತಿಸುವ ಪ್ರಯೋಜನವನ್ನು ಕೂಡ ಹೊಂದಿದ್ದಾರೆ.
3. ಗ್ರಾಮೀಣ ಪ್ರವೇಶವನ್ನು ಹೆಚ್ಚಿಸುವುದು
ಗ್ರಾಮೀಣ ಪ್ರದೇಶಗಳಲ್ಲಿಯೂ, ಅಲ್ಲಿ ಕೆಲವಷ್ಟೇ ಬ್ಯಾಂಕುಗಳಿದ್ದರೂ, ಗ್ರಾಹಕರು ಸಾಲಗಳನ್ನು ಪಡೆಯಲು ತುಂಬಾ ಆಯ್ಕೆಗಳನ್ನು ಹೊಂದಿರುತ್ತಾರೆ. ಕಡಿಮೆ ಕ್ರೆಡಿಟ್ ಸ್ಕೋರ್ ಹೊಂದಿರುವ ಅಥವಾ ಬ್ಯಾಂಕ್ಗಳು ತಿರಸ್ಕರಿಸಿದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರು ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳನ್ನು (ಎನ್ಬಿಎಫ್ಸಿ) ಅಕ್ಸೆಸ್ ಮಾಡಬಹುದು, ಇದು ಅಂತಹ ಸಾಲಗಾರರಿಗೆ ಇಎಂಐ ನಲ್ಲಿ ಬೈಕನ್ನು ಖರೀದಿಸುವುದನ್ನು ಅನುಕೂಲಕರವಾಗಿಸುತ್ತದೆ.
4. ಕಡಿಮೆ ಹಣಕಾಸಿನ ಹೊರೆ ಮತ್ತು ಹೆಚ್ಚಿನ ಸಿಬಿಲ್ ಸ್ಕೋರ್
ಟೂ ವೀಲರ್ ಲೋನಿನ ಪ್ರಯೋಜನಗಳು ಅಲ್ಲಿ ಅತಿದೊಡ್ಡದಾಗಿದ್ದು, ಯಾವುದೇ ಹಣಕಾಸಿನ ತೊಂದರೆಯನ್ನು ಎದುರಿಸುವುದಿಲ್ಲ. ಬೈಕ್ ಲೋನ್ ನಾಮಮಾತ್ರದ ಮಾಸಿಕ ಫಿಕ್ಸೆಡ್ ಬಡ್ಡಿ ದರಗಳೊಂದಿಗೆ ಬರುವುದರಿಂದ, ಪ್ರತಿ ತಿಂಗಳು ಪಾವತಿಸುವುದು ಸುಲಭ. ಯುವ ವೃತ್ತಿಪರರಿಗೆ ಇದು ಸೂಕ್ತ ಆಯ್ಕೆಯಾಗಿದೆ, ಏಕೆಂದರೆ ಉತ್ತಮ ಸಿಬಿಲ್ ಸ್ಕೋರ್ ನಿರ್ಮಿಸಲು ಇದು ಅವರಿಗೆ ಉತ್ತಮ ಅವಕಾಶವಾಗಿದೆ.
ಸಾಲವನ್ನು ಹೊರೆಯಾಗಿ ಪರಿಗಣಿಸಬೇಡಿ - ಅದರ ಉದ್ದೇಶ, ನಿಮ್ಮ ಭುಜದಲ್ಲಿರುವ ಹಣಕಾಸಿನ ಹೊರೆಯನ್ನು ತೆಗೆದುಕೊಳ್ಳುವುದು. ಟೂ ವೀಲರ್ ಲೋನಿನಿಂದ ಹೆಚ್ಚಿನದನ್ನು ಪಡೆದುಕೊಳ್ಳಿ ಮತ್ತು ನಿಮ್ಮ ಹೆಚ್ಚಿನ ಹಣಕಾಸಿನ ಸಮಸ್ಯೆಗಳನ್ನು ಪರಿಹರಿಸಿ