ತಮ್ಮ ಸ್ವಂತ ಟೂ ವೀಲರ್ನಲ್ಲಿ ರಸ್ತೆಯ ಮೇಲೆ ಸಾಗುವ ಸ್ವಾತಂತ್ರ್ಯವು ಭಾರತದಲ್ಲಿ ಅನೇಕರ ಪಾಲಿಗೆ ಸಂತೋಷದ ಮೈಲಿಗಲ್ಲಾಗಿದೆ.
ಆದಾಗ್ಯೂ, ನಿಜವಾದ ಮಾಲೀಕತ್ವದ ಪ್ರಯಾಣವು ಅಂತಿಮ ಟೂ ವೀಲರ್ ಲೋನ್ ಪಾವತಿಯೊಂದಿಗೆ ಆರಂಭವಾಗುವುದಿಲ್ಲ. ಟೂ ವೀಲರ್ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ (ಎನ್ಒಸಿ) ಪಡೆಯುವುದು ನಿಮ್ಮ ರೈಡ್ಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಮತ್ತು ಮನಸ್ಸಿಗೆ ಶಾಂತಿ ತರುವ ನಿರ್ಣಾಯಕ ಹಂತವಾಗಿದೆ.
ಈ ಬ್ಲಾಗ್ನಲ್ಲಿ, ಬೈಕ್ಗಳಿಗೆ ಎನ್ಒಸಿಯ ಪ್ರಾಮುಖ್ಯತೆ ಮತ್ತು ಅದು ನಿಮ್ಮ ಸಾಲದೊಂದಿಗೆ ಹೇಗೆ ಸಂಬಂಧ ಹೊಂದಿದೆ ಎಂಬುದರ ಬಗ್ಗೆ ನೀವು ತಿಳಿದುಕೊಳ್ಳುವಿರಿ.
ಎನ್ಒಸಿ (ನೋ ಅಬ್ಜೆಕ್ಷನ್ ಸರ್ಟಿಫಿಕೇಟ್) ಎಂದರೇನು?
ಬೈಕ್ ಲೋನ್ಗೆ ಎನ್ಒಸಿ ಎಂಬುದು ಯಾವುದೇ ಬಾಕಿ ಶುಲ್ಕಗಳಿಲ್ಲದೆ ಸಾಲದ ಮೊತ್ತದ ಪೂರ್ಣ ಮರುಪಾವತಿಯನ್ನು ಖಚಿತಪಡಿಸುವ ಕಾನೂನು ಡಾಕ್ಯುಮೆಂಟ್ ಆಗಿದೆ, ಆದ್ದರಿಂದ ಇದನ್ನು ನೋ ಡ್ಯೂಸ್ ಸರ್ಟಿಫಿಕೇಟ್ ಎಂದು ಕೂಡ ಕರೆಯಲಾಗುತ್ತದೆ.
ಒಮ್ಮೆ ಈ ಡಾಕ್ಯುಮೆಂಟ್ ಪಡೆದ ನಂತರ, ಬೈಕ್ ಲೋನ್ಗೆ ಸಂಬಂಧಿಸಿದ ನಿಮ್ಮ ಹಣಕಾಸಿನ ಬದ್ಧತೆಗಳನ್ನು ಪೂರೈಸಿದ ಪುರಾವೆಯಾಗಿ ಇದು ಕಾರ್ಯ ನಿರ್ವಹಿಸುವುದರಿಂದ ನೀವು ಕಾನೂನುಬದ್ಧವಾಗಿ ಸಾಲದಿಂದ ಮುಕ್ತರಾಗುತ್ತೀರಿ.
ಬೈಕ್ ಲೋನ್ಗಳಿಗೆ ಎನ್ಒಸಿಯ ಪ್ರಾಮುಖ್ಯತೆ
ಬೈಕ್ ಲೋನ್ಗಳನ್ನು ಪಡೆದ ವ್ಯಕ್ತಿಗಳಿಗೆ ಬೈಕ್ನ ಎನ್ಒಸಿ ನಿರ್ಣಾಯಕವಾಗಿದೆ. ಇದರರ್ಥ ಸಾಲದಾತರು ನಿಮ್ಮ ವಾಹನದ ಮೇಲೆ ಯಾವುದೇ ಕ್ಲೈಮ್ ಹೊಂದಿಲ್ಲ ಮತ್ತು ನೀವು ಮಾಲೀಕತ್ವವನ್ನು ಮಾರಾಟ ಮಾಡಲು ಅಥವಾ ವರ್ಗಾಯಿಸಲು ನಿರ್ಧರಿಸಿದರೆ ಆಕ್ಷೇಪಿಸುವುದಿಲ್ಲ.
ಬೈಕ್ ಲೋನ್ನ ಎನ್ಒಸಿ ಸಂದರ್ಭದಲ್ಲಿ, ಅದನ್ನು ಬ್ಯಾಂಕ್ ಅಥವಾ ಎನ್ಬಿಎಫ್ಸಿ (ಟಿವಿಎಸ್ ಕ್ರೆಡಿಟ್ನಂತಹ ಬ್ಯಾಂಕಿಂಗೇತರ ಹಣಕಾಸು ಕಂಪನಿ) ನೀಡುತ್ತದೆ
ಈ ಕೆಳಗಿನ ಕಾರಣಗಳಿಗಾಗಿ ಬೈಕ್ಗೆ ಎನ್ಒಸಿ ಅಗತ್ಯವಾಗಿದೆ:
- ಮಾಲೀಕತ್ವ ವರ್ಗಾವಣೆ: ನೀವು ನಿಮ್ಮ ಟೂ ವೀಲರ್ ಅನ್ನು ಮಾರಾಟ ಮಾಡಲು ಯೋಜಿಸಿದರೆ, ಎನ್ಒಸಿ ಯು ಖರೀದಿದಾರರಿಗೆ ಮಾಲೀಕತ್ವದ ತೊಂದರೆ ರಹಿತ ವರ್ಗಾವಣೆಯನ್ನು ಖಚಿತಪಡಿಸುತ್ತದೆ, ವಾಹನವು ಅಸ್ತಿತ್ವದಲ್ಲಿರುವ ಯಾವುದೇ ಲೋನ್ಗಳು ಅಥವಾ ಹೊಣೆಗಾರಿಕೆಗಳಿಂದ ಮುಕ್ತವಾಗಿದೆ ಎಂದು ದೃಢಪಡಿಸುತ್ತದೆ.
- ಆರ್ಟಿಒ (ಪ್ರಾದೇಶಿಕ ಸಾರಿಗೆ ಕಚೇರಿ) ಪ್ರಕ್ರಿಯೆ: ಸಾಲದ ಮೂಲಕ ಟೂ ವೀಲರ್ ಖರೀದಿಸಿದ ನಂತರ, ಸಾಲ ತೀರುವವರೆಗೆ ವಾಹನದ ನೋಂದಣಿ ಸಾಲದಾತರ ಹೆಸರಿನಲ್ಲಿರುತ್ತದೆ. ವಾಹನದ ನೋಂದಣಿಯನ್ನು ಹೊಸ ಮಾಲೀಕರಿಗೆ ಟ್ರಾನ್ಸ್ಫರ್ ಮಾಡುವ ಪ್ರಕ್ರಿಯೆಯನ್ನು ಆರಂಭಿಸಲು ಬೈಕ್ಗೆ ಎನ್ಒಸಿ ಅಗತ್ಯವಿದೆ.
- ಇನ್ಶೂರೆನ್ಸ್ ಕ್ಲೈಮ್: ನಿಮ್ಮ ಟೂ ವೀಲರ್ಗೆ ಅಪಘಾತಗಳು ಅಥವಾ ಹಾನಿ ಸಂಭವಿಸಿದ ಸಂದರ್ಭದಲ್ಲಿ, ವಾಹನದ ಮಾಲೀಕತ್ವದ ವಿವರಗಳನ್ನು ಅಪ್ಡೇಟ್ ಮಾಡದಿದ್ದರೆ ಅದು ನಿಮ್ಮ ಇನ್ಶೂರೆನ್ಸ್ ಕ್ಲೈಮ್ ಮೇಲೆ ಪರಿಣಾಮ ಬೀರಬಹುದು. ಎನ್ಒಸಿ ಸುಗಮ ಇನ್ಶೂರೆನ್ಸ್ ಕ್ಲೈಮ್ ಸೆಟಲ್ಮೆಂಟ್ ಅನ್ನು ಖಚಿತಪಡಿಸುತ್ತದೆ.
- ಕಾನೂನು ಅನುಸರಣೆ: ವಾಹನದ ಮಾಲೀಕತ್ವ ಟ್ರಾನ್ಸ್ಫರ್ ಮಾಡುವಾಗ ಅಥವಾ ವಾಹನವನ್ನು ಮಾರಾಟ ಮಾಡುವಾಗ ಕಾನೂನು ಸಮಸ್ಯೆಗಳನ್ನು ತಪ್ಪಿಸಲು ಸಾಲ ಮರುಪಾವತಿಯ ನಂತರ ಪ್ರಾದೇಶಿಕ ಸಾರಿಗೆ ಕಚೇರಿಯೊಂದಿಗೆ (ಆರ್ಟಿಒ) ವಾಹನ ಮಾಲೀಕತ್ವದ ವಿವರಗಳನ್ನು ಅಪ್ಡೇಟ್ ಮಾಡುವುದು ಕಾನೂನು ಅವಶ್ಯಕತೆಯಾಗಿದೆ.
ಹೆಚ್ಚುವರಿಯಾಗಿ, ನೀವು ನೋಂದಣಿ ಪ್ರಮಾಣಪತ್ರದಿಂದ ಬೈಕಿನ ಒತ್ತೆಯನ್ನು ತೆಗೆದು ಹಾಕಲು ಅಥವಾ ರದ್ದುಗೊಳಿಸಲು ಬಯಸಿದರೆ ಅಥವಾ ನೀವು ನಿಮ್ಮ ಬೈಕಿನ ನೋಂದಣಿಯನ್ನು ಬೇರೆ ಆರ್ಟಿಒ ಅಥವಾ ರಾಜ್ಯಕ್ಕೆ ವರ್ಗಾಯಿಸಲು ಬಯಸಿದರೆ ಎನ್ಒಸಿ ಅಗತ್ಯವಿದೆ. ಮೋಟರ್ ವಾಹನ ಕಾಯ್ದೆಯಲ್ಲಿ ವಿವರಿಸಲಾದ ಮಾರ್ಗಸೂಚಿಗಳ ಪ್ರಕಾರ, ಅಂತಾರಾಜ್ಯ ಬೈಕ್ ವರ್ಗಾವಣೆಗಳಿಗೆ ಅಥವಾ ನೀವು ಹೊಸ ನೋಂದಣಿ ಗುರುತು ಪಡೆಯಲು ಬಯಸಿದರೆ ಎನ್ಒಸಿ ಪಡೆಯುವುದು ಕಡ್ಡಾಯವಾಗಿದೆ. ಎನ್ಒಸಿಗೆ ಅಪ್ಲೈ ಮಾಡುವುದು ಹೇಗೆ ಎಂಬುದನ್ನು ಕೆಳಗೆ ಕೊಡಲಾಗಿದೆ.
ಆನ್ಲೈನ್ನಲ್ಲಿ ಬೈಕ್ ಎನ್ಒಸಿ ಪಡೆಯುವ ಹಂತಗಳು
ನೀವು ಎರಡು ರೀತಿಯಲ್ಲಿ ಆನ್ಲೈನ್ ಎನ್ಒಸಿಗೆ ಅಪ್ಲೈ ಮಾಡಬಹುದು.
ನಿಮ್ಮ ಬ್ಯಾಂಕ್ ಅಥವಾ ಎನ್ಬಿಎಫ್ಸಿ ಮೂಲಕ ನೀವು ಬೈಕ್ ಲೋನ್ ಪಡೆದಿದ್ದರೆ, ಪ್ರಕ್ರಿಯೆಯು ತುಂಬಾ ಸರಳವಾಗಿದೆ.
1. ನಿಮ್ಮ ನೆಟ್ ಬ್ಯಾಂಕಿಂಗ್ ಅಥವಾ ಎನ್ಬಿಎಫ್ಸಿ ಅಕೌಂಟ್ಗೆ ಲಾಗಿನ್ ಮಾಡಿ.
2. ಎನ್ಒಸಿ ವಿಭಾಗಕ್ಕಾಗಿ ಪರಿಶೀಲಿಸಿ ಮತ್ತು ಎನ್ಒಸಿ ಡೌನ್ಲೋಡ್ ಮಾಡಿ.
3.ನೀವು ಯಾವುದೇ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಸಹಾಯಕ್ಕಾಗಿ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.
ಟಿವಿಎಸ್ ಕ್ರೆಡಿಟ್ನಲ್ಲಿ ಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್ ಮತ್ತು ಟಿವಿಎಸ್ ಕ್ರೆಡಿಟ್ ವೆಬ್ಸೈಟ್ ಮೂಲಕ ಎನ್ಒಸಿ ಪಡೆಯಲು ನಾವು ತಡೆರಹಿತ ಪ್ರಕ್ರಿಯೆಯನ್ನು ಒದಗಿಸುತ್ತೇವೆ. ಇನ್ನಷ್ಟು ತಿಳಿಯಲು ಈ ಲಿಂಕ್ ಪರಿಶೀಲಿಸಿ: https://www.tvscredit.com/faq/what-is-the-procedure-to-get-noc/
ನಿಮ್ಮ ಕೋರಿಕೆಯನ್ನು ಸಲ್ಲಿಸಿದ ನಂತರ, ನಿಮ್ಮ ವಿಚಾರಣೆಯ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ರೆಫರೆನ್ಸ್ ನಂಬರ್ ಜೊತೆಗೆ ದೃಢೀಕರಣವನ್ನು ಪಡೆಯುತ್ತೀರಿ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಡಿಯಲ್ಲಿ 'ಪರಿವಾಹನ್' ಎಂಬ ಆನ್ಲೈನ್ ಪೋರ್ಟಲ್ ಮೂಲಕ ಎನ್ಒಸಿಗೆ ಅಪ್ಲಿಕೇಶನ್ ಸಲ್ಲಿಸಬಹುದು. ಆದಾಗ್ಯೂ, ಇದನ್ನು ಎಲ್ಲಾ ರಾಜ್ಯಗಳಿಗೆ ಇನ್ನೂ ಸಕ್ರಿಯಗೊಳಿಸಿಲ್ಲ.
ಆರ್ಟಿಒ ಮೂಲಕ ಎನ್ಒಸಿ ಪಡೆಯುವ ಹಂತಗಳು
ಆರ್ಟಿಒ ಮೂಲಕ ನೀವು ನೇರವಾಗಿ ಎನ್ಒಸಿಗೆ ಅಪ್ಲೈ ಮಾಡಬಹುದು, ಈ ಹಂತಗಳನ್ನು ಅನುಸರಿಸಿ:
- ಸಂಬಂಧಿತ ಅಧಿಕಾರಿಗಳನ್ನು ಸಂಪರ್ಕಿಸಿ ಸಿಎಂವಿ 28 ಫಾರ್ಮ್ ಪಡೆಯಿರಿ ಮತ್ತು ಅಗತ್ಯ ವಿವರಗಳನ್ನು ಭರ್ತಿ ಮಾಡಿ.
- ₹100 ಪಾವತಿಸಿ, ಅಗತ್ಯ ಡಾಕ್ಯುಮೆಂಟ್ಗಳೊಂದಿಗೆ ಭರ್ತಿ ಮಾಡಿದ ಫಾರ್ಮ್ ಸಲ್ಲಿಸಿ.
- ನಿಮ್ಮ ವಾಹನಕ್ಕೆ ಸಂಬಂಧಿಸಿದ ಯಾವುದೇ ಬಾಕಿಗಳು ಅಥವಾ ಕಾನೂನು ಸಮಸ್ಯೆಗಳು ಇಲ್ಲ ಎಂಬುದನ್ನು ಖಚಿತಪಡಿಸಿದ ನಂತರ ಆರ್ಟಿಒ ಅದನ್ನು ಪರಿಶೀಲಿಸುತ್ತದೆ ಮತ್ತು ಎನ್ಒಸಿ ನೀಡುತ್ತದೆ.
ಸಾಲ ಮರುಪಾವತಿಯ ನಂತರ ನಿಮ್ಮ ಬೈಕಿನ ಮಾಲೀಕತ್ವವನ್ನು ಸುರಕ್ಷಿತಗೊಳಿಸುವಲ್ಲಿ ಟೂ ವೀಲರ್ ಲೋನ್ ಎನ್ಒಸಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಇದು ಸಂಪೂರ್ಣ ಕ್ಲಿಯರೆನ್ಸ್ ಅನ್ನು ಸೂಚಿಸುತ್ತದೆ. ಇದು ಕೇವಲ ನಿಮ್ಮ ಬೈಕ್ ಲೋನ್ನ ಪೂರ್ಣ ಕ್ಲಿಯರೆನ್ಸ್ ಅನ್ನು ಸೂಚಿಸುವುದಷ್ಟೇ ಅಲ್ಲದೆ, ಕಾನೂನು ಅನುಸರಣೆಯೊಂದಿಗೆ ಮಾಲೀಕತ್ವವನ್ನು ವರ್ಗಾಯಿಸಲು ಸುಲಭ ಪ್ರಕ್ರಿಯೆಯನ್ನು ಖಚಿತಪಡಿಸುತ್ತದೆ. ನೀವು ನಿಮ್ಮ ವಾಹನವನ್ನು ಮಾರಾಟ ಮಾಡಲು ಅಥವಾ ಅದರ ಮಾಲೀಕತ್ವದ ವಿವರಗಳನ್ನು ಅಪ್ಡೇಟ್ ಮಾಡಲು ಯೋಜಿಸಿದರೆ, ಚಿಂತೆ-ಮುಕ್ತವಾಗಿ, ಕಾನೂನುಬದ್ಧವಾಗಿ ಉತ್ತಮ ಅನುಭವಕ್ಕಾಗಿ ಟೂ ವೀಲರ್ ಲೋನ್ ಎನ್ಒಸಿ ಪಡೆಯುವುದು ಅಗತ್ಯವಾಗಿದೆ. ಇಂದೇ ಈ ಪ್ರಕ್ರಿಯೆಯನ್ನು ಸುಲಭಗೊಳಿಸಲು ಟಿವಿಎಸ್ ಕ್ರೆಡಿಟ್ ಅನ್ನು ಆಯ್ಕೆಮಾಡಿ!
ಎಫ್ಎಕ್ಯೂ ಗಳು –
- ಬೈಕ್ಗಳಿಗೆ ಎನ್ಒಸಿ ಏಕೆ ಮುಖ್ಯವಾಗಿದೆ?
ಇದು ಬೈಕ್ ಲೋನ್ನ ಯಶಸ್ವಿ ಮರುಪಾವತಿಯನ್ನು ಸೂಚಿಸುತ್ತದೆ ಮತ್ತು ಮಾಲೀಕತ್ವದ ವರ್ಗಾವಣೆಯ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ ಮತ್ತು ಕಾನೂನು ಅನುಸರಣೆಯನ್ನು ಖಚಿತಪಡಿಸುತ್ತದೆ.
- ಸಾಲಕ್ಕೆ ಎನ್ಒಸಿ ಏಕೆ ಅಗತ್ಯವಿದೆ?
ಸಾಲ ಮುಚ್ಚುವಿಕೆಯ ನಂತರ, ಕ್ರೆಡಿಟ್ ಹಿಸ್ಟರಿ ಅಪ್ ಟು ಡೇಟ್ ಆಗಿರಿಸಲು ಎನ್ಒಸಿ ಅನ್ನು ಸಿಬಿಲ್ಗೆ ಸಲ್ಲಿಸಬೇಕು. ಒಂದು ವೇಳೆ ನೀವು ಮುಂದೆ ಯಾವುದೇ ಲೋನ್ಗಳಿಗೆ ಅಪ್ಲೈ ಮಾಡಲು ಬಯಸಿದರೆ, ಯಾವುದೇ ಲೋನ್ಗಳು ಬಾಕಿ ಉಳಿದಿಲ್ಲ ಎಂಬುದನ್ನು ಸಿಬಿಲ್ ವರದಿಯು ಖಚಿತಪಡಿಸಬೇಕು.
- ಬೈಕ್ಗೆ ಎನ್ಒಸಿ ಪ್ರಮಾಣಪತ್ರ ಎಂದರೇನು?
ಬೈಕ್ಗಾಗಿ ಟೂ ವೀಲರ್ ಎನ್ಒಸಿ ಪ್ರಮಾಣಪತ್ರವು ಒಂದು ಕಾನೂನು ಡಾಕ್ಯುಮೆಂಟ್ ಆಗಿದ್ದು, ಪ್ರಮಾಣಪತ್ರದಲ್ಲಿರುವ ವಿವರಗಳಿಗೆ ವಿತರಿಸುವ ಏಜೆನ್ಸಿ/ಬ್ಯಾಂಕ್ ಯಾವುದೇ ಆಕ್ಷೇಪಣೆಗಳನ್ನು ಹೊಂದಿಲ್ಲ ಎಂದು ತಿಳಿಸುತ್ತದೆ.
- ಬೈಕ್ನ ಎನ್ಒಸಿ ಎಷ್ಟು ಸಮಯದವರೆಗೆ ಮಾನ್ಯವಾಗಿರುತ್ತದೆ?
ವಿತರಣೆಯ ದಿನಾಂಕದಿಂದ 6 ತಿಂಗಳವರೆಗೆ ಎನ್ಒಸಿ ಮಾನ್ಯವಾಗಿರುತ್ತದೆ. ಆದ್ದರಿಂದ, ಈ ಅವಧಿಯೊಳಗೆ ಆರ್ಟಿಒನಲ್ಲಿ ಮರು-ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಮುಖ್ಯವಾಗಿದೆ.