ನಿಮ್ಮ ಇ-ಮ್ಯಾಂಡೇಟ್ ವಿವರಗಳನ್ನು ತಿದ್ದುಪಡಿ ಮಾಡಲು ನಿಮಗೆ ಸಹಾಯ ಮಾಡುವ ಹಂತಗಳು ಈ ಕೆಳಗಿನಂತಿವೆ:
- www.tvscredit.com ಗೆ ಭೇಟಿ ನೀಡಿ ಮತ್ತು ಗ್ರಾಹಕರ ಲಾಗಿನ್ಗಾಗಿ ನೀವು ಆಯ್ಕೆಯನ್ನು ಕಂಡುಕೊಳ್ಳುವ ಲಾಗಿನ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನೋಂದಾಯಿತ ಮೊಬೈಲ್ ನಂಬರ್ ನಮೂದಿಸುವ ಮೂಲಕ ಗ್ರಾಹಕ ಪೋರ್ಟಲ್ಗೆ ಲಾಗಿನ್ ಮಾಡಿ ಮತ್ತು ನಂತರ ನಿಮ್ಮ ಮೊಬೈಲ್ ನಂಬರಿನಲ್ಲಿ ನೀವು ಪಡೆಯುವ ಒಟಿಪಿಯನ್ನು ನಮೂದಿಸಿ
- ವಿಚಾರಣೆ ಸಲ್ಲಿಸಿ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
- ನಿಮ್ಮ ಲೋನ್ ಅಗ್ರೀಮೆಂಟ್ ನಂಬರ್ ನಮೂದಿಸಿ
- ಕೆಟಗರಿ ಡ್ರಾಪ್ಡೌನ್ ಮೆನುವಿನಲ್ಲಿ, ಮ್ಯಾಂಡೇಟ್ ತಿದ್ದುಪಡಿ ಆಯ್ಕೆಮಾಡಿ
- ಪ್ರಶ್ನೆಯ ಗ್ರಿಡ್ನಲ್ಲಿ ನೀವು ತಿದ್ದುಪಡಿ ಮಾಡಲು ಬಯಸುವ ನಿಮ್ಮ ವಿವರಗಳನ್ನು ಟೈಪ್ ಮಾಡಬಹುದು. ನೀವು ನಿಮ್ಮ ಬ್ಯಾಂಕಿನ ಹೆಸರು, ಬ್ಯಾಂಕ್ ಅಕೌಂಟ್ ನಂಬರ್ ಮತ್ತು ನಿಮ್ಮ ಇಎಂಐ ಸೈಕಲ್ ದಿನಾಂಕವನ್ನು ತಿದ್ದುಪಡಿ ಮಾಡಬಹುದು. ಲಭ್ಯವಿದ್ದರೆ ಯಾವುದೇ ಬೆಂಬಲಿತ ಡಾಕ್ಯುಮೆಂಟ್ಗಳನ್ನು ಅಪ್ಲೋಡ್ ಮಾಡಿ
- ಕೋರಿಕೆಯನ್ನು ಪೂರ್ಣಗೊಳಿಸಲು ಸಲ್ಲಿಸಿ ಮೇಲೆ ಕ್ಲಿಕ್ ಮಾಡಿ
ನಿಮ್ಮ ಕೋರಿಕೆಯನ್ನು ಸಲ್ಲಿಸಿದ ನಂತರ, ನೀವು ಅದಕ್ಕಾಗಿ ಟಿಕೆಟ್ ನಂಬರ್ ರೂಪದಲ್ಲಿ ಸ್ವೀಕೃತಿಯನ್ನು ಪಡೆಯುತ್ತೀರಿ, ಇದರ ನಂತರ ಟಿವಿಎಸ್ ಕ್ರೆಡಿಟ್ ತಂಡವು 10 ಕೆಲಸದ ದಿನಗಳ ಅವಧಿಯೊಳಗೆ ಕೋರಿಕೆಯನ್ನು ಪೂರ್ಣಗೊಳಿಸುತ್ತದೆ ಮತ್ತು ಪೂರ್ಣಗೊಂಡ ನಂತರ ದೃಢೀಕರಣವನ್ನು ಒದಗಿಸುತ್ತದೆ.