ಇಎಂಐ ನಲ್ಲಿ ಲ್ಯಾಪ್‌ಟಾಪ್ ಖರೀದಿಸುವುದು ನಿಮ್ಮೆಲ್ಲ ಉಳಿತಾಯವನ್ನು ಕರಗಿಸದೆಯೇ ನಿಮ್ಮ ಶಿಕ್ಷಣ, ಕೆಲಸ ಅಥವಾ ಬಿಸಿನೆಸ್ ಸೆಟಪ್ ಅನ್ನು ಅಪ್ಗ್ರೇಡ್ ಮಾಡಲು ಉತ್ತಮ ಮಾರ್ಗವಾಗಿದೆ. ಟಿವಿಎಸ್ ಕ್ರೆಡಿಟ್ ಇಎಂಐ ಆಯ್ಕೆಯೊಂದಿಗೆ, ಲ್ಯಾಪ್‌ಟಾಪ್ ಖರೀದಿಸಲು ಸಂಪೂರ್ಣ ಮೊತ್ತವನ್ನು ಒಮ್ಮೆಗೇ ಮುಂಗಡವಾಗಿ ಪಾವತಿಸುವ ಬದಲು ನೀವು ಹಲವಾರು ತಿಂಗಳಿಗೆ ನಿಮ್ಮ ವೆಚ್ಚವನ್ನು ವಿಸ್ತರಿಸಬಹುದು. ಆನ್‌ಲೈನ್‌ನಲ್ಲಿ ಇಎಂಐ ನಲ್ಲಿ ಲ್ಯಾಪ್‌ಟಾಪ್ ಖರೀದಿಸುವುದು ಜನಪ್ರಿಯ ಆಯ್ಕೆಯಾಗಿದೆ, ಇದಕ್ಕೆ ಕಾರಣ ಅದು ನೀಡುವ ಅನುಕೂಲತೆ ಮತ್ತು ಫ್ಲೆಕ್ಸಿಬಿಲಿಟಿ. ನೀವು ವಿದ್ಯಾರ್ಥಿ, ವೃತ್ತಿಪರರು ಅಥವಾ ಗೇಮಿಂಗ್ ಅನ್ನು ಆನಂದಿಸುವವರು ಯಾರೇ ಆಗಿರಿ, ನಿಮ್ಮ ಅಗತ್ಯಗಳಿಗೆ ಸರಿ ಹೊಂದುವಂಥ ವ್ಯಾಪಕ ಶ್ರೇಣಿಯ ಲ್ಯಾಪ್‌ಟಾಪ್‌ಗಳು ಲಭ್ಯವಿವೆ. ನಮ್ಮ ಲ್ಯಾಪ್‌ಟಾಪ್ ಫೈನಾನ್ಸಿಂಗ್ ಆಯ್ಕೆಗಳನ್ನು ಆರಿಸಿಕೊಳ್ಳುವ ಮೂಲಕ, ನೀವು ಇತ್ತೀಚಿನ ತಂತ್ರಜ್ಞಾನವನ್ನು ತಕ್ಷಣವೇ ಅಕ್ಸೆಸ್ ಮಾಡಬಹುದು ಮತ್ತು ಸುಲಭ, ಕೈಗೆಟಕುವ ಕಂತುಗಳಲ್ಲಿ ಮರುಪಾವತಿ ಮಾಡಬಹುದು. ನಾವು ನೋ-ಕಾಸ್ಟ್ ಇಎಂಐ ಪ್ಲಾನ್‌ಗಳನ್ನು ಒದಗಿಸುತ್ತೇವೆ, ಅದನ್ನು ಬಳಸಿಕೊಂಡು ನೀವು ಮುಂಗಡ ಪಾವತಿಯ ಯಾವುದೇ ಹೆಚ್ಚುವರಿ ಹಣಕಾಸಿನ ಹೊರೆಯಿಲ್ಲದೆ ಹೆಚ್ಚಿನ ಕಾರ್ಯಕ್ಷಮತೆಯ ಲ್ಯಾಪ್‌ಟಾಪ್ ಹೊಂದಬಹುದು. ಈ ಆಯ್ಕೆಯು ಬಜೆಟ್ ನಿರ್ಬಂಧಗಳನ್ನು ಲೆಕ್ಕಿಸದೆ ಪ್ರೀಮಿಯಂ ಲ್ಯಾಪ್‌ಟಾಪ್‌ಗಳನ್ನು ಹೆಚ್ಚು ಕೈಗೆಟಕುವಂತೆ ಮಾಡುತ್ತದೆ.
ನಮ್ಮ ಲ್ಯಾಪ್‌ಟಾಪ್ ಸಾಲ ಇಎಂಐ ಕ್ಯಾಲ್ಕುಲೇಟರ್‌ನೊಂದಿಗೆ ನಿಮ್ಮ ಮಾಸಿಕ ಪಾವತಿಗಳನ್ನು ಸುಲಭವಾಗಿ ಅಂದಾಜಿಸಿ.
ಹಕ್ಕುತ್ಯಾಗ : ಈ ಫಲಿತಾಂಶಗಳು ಸೂಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ. ನಿಜವಾದ ಫಲಿತಾಂಶಗಳು ಬದಲಾಗಬಹುದು. ನಿಖರವಾದ ವಿವರಗಳಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ಹೌದು, ಟಿವಿಎಸ್ ಕ್ರೆಡಿಟ್‌ನೊಂದಿಗೆ, ಕ್ರೆಡಿಟ್ ಕಾರ್ಡ್ ಅಗತ್ಯವಿಲ್ಲದೆ ಇನ್ಸ್ಟಾ ಕಾರ್ಡ್ ಅಥವಾ ಗೃಹೋಪಯೋಗಿ ವಸ್ತುಗಳ ಸಾಲ ಬಳಸಿಕೊಂಡು ನೀವು ಇಎಂಐ ನಲ್ಲಿ ಲ್ಯಾಪ್‌ಟಾಪ್ ಖರೀದಿಸಬಹುದು.
ನೋ-ಕಾಸ್ಟ್ ಇಎಂಐ ಎಂದರೆ ನೀವು ಯಾವುದೇ ಹೆಚ್ಚುವರಿ ಬಡ್ಡಿ ಶುಲ್ಕಗಳಿಲ್ಲದೆ ಕಾಲಕಾಲಕ್ಕೆ ಲ್ಯಾಪ್‌ಟಾಪ್‌ನ ಬೆಲೆಯನ್ನು ಮಾತ್ರ ಪಾವತಿಸುತ್ತೀರಿ.
ನೀವು ಆಯ್ಕೆ ಮಾಡಿದ ಪ್ಲಾನ್ ಆಧಾರದ ಮೇಲೆ ಮರುಪಾವತಿ ಅವಧಿಯು 6 ರಿಂದ 24 ತಿಂಗಳವರೆಗೆ ಇರುತ್ತದೆ.
*ಹಕ್ಕುತ್ಯಾಗ: ಸಾಲದ ಅನುಮೋದನೆ ಅಥವಾ ನಿರಾಕರಣೆಯು ಟಿವಿಎಸ್ ಕ್ರೆಡಿಟ್‌ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತದೆ. ಸಾಲದ ಅನುಮೋದನೆ ಮತ್ತು ವಿತರಣೆಗೆ ತೆಗೆದುಕೊಳ್ಳುವ ಸಮಯ, ಅಗತ್ಯವಿರುವ ಡಾಕ್ಯುಮೆಂಟೇಶನ್, ಮಂಜೂರಾದ ಸಾಲದ ಮೊತ್ತ, ಸಾಲದ ಬಡ್ಡಿ ದರ, ಮರುಪಾವತಿ ಅವಧಿ ಮತ್ತು ಇತರ ಹಣಕಾಸಿನ ನಿಯಮಗಳು ಅರ್ಜಿದಾರರ ಹಣಕಾಸಿನ ಪ್ರೊಫೈಲ್, ಕ್ರೆಡಿಟ್ ಅರ್ಹತೆ, ಟಿವಿಎಸ್ ಕ್ರೆಡಿಟ್‌ನ ಆಂತರಿಕ ನೀತಿಗಳ ಪ್ರಕಾರ ಅರ್ಹತೆ ಇತ್ಯಾದಿಗಳನ್ನು ಅವಲಂಬಿಸಿರುತ್ತವೆ. ಅಪ್ಲಿಕೇಶನ್‌ನೊಂದಿಗೆ ಮುಂದುವರೆಯುವ ಮೊದಲು ದಯವಿಟ್ಟು ಲೋನ್‌ಗೆ ಸಂಬಂಧಿಸಿದ ಯಾವುದೇ ಫೀಸ್ ಅಥವಾ ಶುಲ್ಕಗಳನ್ನು ಒಳಗೊಂಡಂತೆ ನಿಯಮ ಮತ್ತು ಷರತ್ತುಗಳನ್ನು ಓದಿ.