ನಾವು, ಟಿವಿಎಸ್ ಕ್ರೆಡಿಟ್‌ನಲ್ಲಿ, ಅರ್ಹತೆ-ಆಧಾರಿತ ಔಪಚಾರಿಕ ನೇಮಕಾತಿ ಪ್ರಕ್ರಿಯೆಯನ್ನು ಹೊಂದಿದ್ದೇವೆ. ನೇಮಕಾತಿ ಪ್ರಕ್ರಿಯೆಯ ಸಮಯದಲ್ಲಿ ಅರ್ಜಿದಾರರಿಂದ ನಾವು ಯಾವುದೇ ಶುಲ್ಕ ಅಥವಾ ಡೆಪಾಸಿಟ್ ಅನ್ನು ಎಂದಿಗೂ ಕೇಳುವುದಿಲ್ಲ. ವಂಚನೆಯ ಇಮೇಲ್‌ಗಳು/ಆಫರ್‌ಗಳನ್ನು ಕಳುಹಿಸಲು TVS ಕ್ರೆಡಿಟ್ ಡೊಮೇನ್ ಐಡಿಯನ್ನು ನಕಲು ಮಾಡುವ ವಂಚಕರ ಬಗ್ಗೆ ಎಚ್ಚರವಿರಲಿ. ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

hamburger icon

ಇನ್ಸ್ಟಾಕಾರ್ಡ್ ಏಕೆ?

ಇನ್ಸ್ಟಾಕಾರ್ಡ್ ಎಂಬುದು ₹1 ಲಕ್ಷದವರೆಗಿನ ತ್ವರಿತ ಸಾಲಗಳನ್ನು ಪಡೆಯಲು ಟಿವಿಎಸ್ ಕ್ರೆಡಿಟ್ ಒದಗಿಸುವ ಮುಂಚಿತ-ಅನುಮೋದಿತ ಕ್ರೆಡಿಟ್ ಮಿತಿ ಸೌಲಭ್ಯವಾಗಿದೆ*

Features of InstaCard
InstaCard - Merchant Stores
ಮರ್ಚೆಂಟ್ ಸ್ಟೋರ್‌ಗಳು

ಸುಲಭ ಇಎಂಐ ಪಾವತಿ ಆಯ್ಕೆಯೊಂದಿಗೆ ನಿಮ್ಮ ಹತ್ತಿರದ ಮರ್ಚೆಂಟ್ ಮಳಿಗೆಯಲ್ಲಿ ಶಾಪಿಂಗ್ ಮಾಡಿ. 25,000 ಕ್ಕೂ ಹೆಚ್ಚು ಮರ್ಚೆಂಟ್ ಮಳಿಗೆಗಳಲ್ಲಿ ಅಂಗೀಕರಿಸಲಾಗುತ್ತದೆ.

ಇನ್ನಷ್ಟು ತಿಳಿಯಿರಿ arrow-more
InstaCard used for Shop Online
ಆನ್ಲೈನ್ ಶಾಪಿಂಗ್ ಮಾಡಿ

ಯಾವುದೇ ತೊಂದರೆಯಿಲ್ಲದೆ ನಮ್ಮ ಯಾವುದೇ ಆನ್ಲೈನ್ ಮರ್ಚೆಂಟ್ ಸ್ಟೋರ್‌ಗಳಿಂದ ನಿಮ್ಮ ಅನುಕೂಲಕ್ಕೆ ತಕ್ಕಂತೆ ಖರೀದಿಸಿ

ಇನ್ನಷ್ಟು ತಿಳಿಯಿರಿ arrow-more
ಬ್ಯಾಂಕ್ ಟ್ರಾನ್ಸ್‌ಫರ್

ಕೇವಲ 30 ನಿಮಿಷಗಳಲ್ಲಿ ನಿಮ್ಮ ನೋಂದಾಯಿತ ಬ್ಯಾಂಕ್ ಅಕೌಂಟಿಗೆ ₹ 25,000 ವರೆಗೆ ಟ್ರಾನ್ಸ್‌ಫರ್ ಮಾಡುವ ಮೂಲಕ ನಿಮ್ಮ ಎಲ್ಲಾ ತ್ವರಿತ ನಗದು ಅಗತ್ಯಗಳಿಗೆ ಸರಳ 2 ಕ್ಲಿಕ್ ಆಯ್ಕೆ.

ಇನ್ನಷ್ಟು ತಿಳಿಯಿರಿ arrow-more

ಆರಂಭಿಸುವುದು 1-2-3 ಯಷ್ಟೇ ಸುಲಭ

ವೈಶಿಷ್ಟ್ಯ ಮತ್ತು ಲಾಭಗಳು

Features and Benefits - Instacard InstaCard on TVS Credit Saathi App
  • Features and Benefits of InstaCard - Pre-approved loan* up to ₹ 1 lakh
    ₹ 1 ಲಕ್ಷದವರೆಗಿನ ಮುಂಚಿತ-ಅನುಮೋದಿತ ಲೋನ್

    ಜೀವನಶೈಲಿ, ಮನೆ ಸುಧಾರಣೆ, ಶಿಕ್ಷಣ, ಆರೋಗ್ಯ, ಪ್ರಯಾಣ, ಪೀಠೋಪಕರಣಗಳು, ಅಪ್ಲಾಯನ್ಸ್‌ಗಳು ಮುಂತಾದ ವರ್ಗಗಳನ್ನು ಕವರ್ ಮಾಡುವ ಮಳಿಗೆಗಳಲ್ಲಿ ಈ ಕ್ರೆಡಿಟ್ ಮಿತಿಯನ್ನು ಬಳಸಿ.

  • Features and Benefits of InstaCard - Repay easily
    ಸುಲಭವಾಗಿ ಮರುಪಾವತಿಸಿ

    ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮ ಇಎಂಐ ಗಳನ್ನು ಪ್ಲಾನ್ ಮಾಡಿ. ನಿಮ್ಮ ಖರೀದಿಯನ್ನು 3, 6, 9, 12 18 ಅಥವಾ 24 ತಿಂಗಳುಗಳ ಸುಲಭ ಇಎಂಐ ಗಳಾಗಿ ವಿಭಜಿಸಿ.

  • Features of Instacard - No documentation
    ಡಾಕ್ಯುಮೆಂಟ್ ಅಗತ್ಯವಿಲ್ಲ

    ಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್ ಅಥವಾ ನಮ್ಮ ಮರ್ಚೆಂಟ್ ಸ್ಟೋರ್‌ಗಳ ಮೂಲಕ ಸಾಲಕ್ಕೆ ಕೋರಿಕೆ ಸಲ್ಲಿಸಿ ಮತ್ತು ಯಾವುದೇ ಡಾಕ್ಯುಮೆಂಟೇಶನ್ ತೊಂದರೆಯಿಲ್ಲದೆ ತ್ವರಿತವಾಗಿ ಸಾಲದ ವಿತರಣೆಯನ್ನು ಪಡೆಯಿರಿ.

  • Benefits of Instacard - Zero cost EMI*
    ಶುಲ್ಕರಹಿತ ಇಎಂಐ*

    ಟಿವಿಎಸ್ ಕ್ರೆಡಿಟ್‌ನೊಂದಿಗೆ ಕೈಜೋಡಿಸಿರುವ ಯಾವುದೇ ಮರ್ಚೆಂಟ್ ಔಟ್ಲೆಟ್‌ಗೆ ಭೇಟಿ ನೀಡಿ ಮತ್ತು ಶೂನ್ಯ ವೆಚ್ಚದ ಇಎಂಐ ಪಡೆಯಲು ನಿಮ್ಮ ಮೊಬೈಲ್ ನಂಬರನ್ನು ಹಂಚಿಕೊಳ್ಳಿ*.

  • Features and Benefits of InstaCard - Zero processing fee
    ಯಾವುದೇ ಪ್ರಕ್ರಿಯಾ ಶುಲ್ಕವಿಲ್ಲ

    ಆನ್ಲೈನ್ ಖರೀದಿಗಳ ಮೇಲೆ ಶೂನ್ಯ ಪ್ರಕ್ರಿಯಾ ಶುಲ್ಕವನ್ನು ಆನಂದಿಸಿ*

ಇದರ ಮೇಲೆ ಶುಲ್ಕಗಳು ಇನ್ಸ್ಟಾಕಾರ್ಡ್

ಶುಲ್ಕಗಳ ನಿಗದಿ ಶುಲ್ಕಗಳು (ಜಿಎಸ್‌ಟಿ ಸೇರಿದಂತೆ)
ಪ್ರಕ್ರಿಯಾ ಶುಲ್ಕಗಳು 10% ರ ವರೆಗೆ
ಪೆನಲ್ ಶುಲ್ಕಗಳು ಪಾವತಿಸದ ಕಂತುಗಳ ಮೇಲೆ ವರ್ಷಕ್ಕೆ 36%
ಫೋರ್‌ಕ್ಲೋಸರ್ ಶುಲ್ಕಗಳು ಶೂನ್ಯ
ಇತರೆ ಶುಲ್ಕಗಳು
ಬೌನ್ಸ್ ಶುಲ್ಕಗಳು Rs.500
ನಕಲಿ ಎನ್‌ಡಿಸಿ/ಎನ್ಒಸಿ ಶುಲ್ಕಗಳು Rs.250

ಶುಲ್ಕಗಳ ಸಂಪೂರ್ಣ ಪಟ್ಟಿಗಾಗಿ, ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ

ಬಳಸುವುದುಹೇಗೆ?

ಬಳಸಲು ಹಂತಗಳು:

  • 1 ನಮ್ಮ ಯಾವುದೇ ಪಾಲುದಾರ ಮಳಿಗೆಗಳಿಗೆ ಭೇಟಿ ನೀಡಿ
  • 2 ನಿಮ್ಮ ಖರೀದಿಯನ್ನು ಮಾಡಿ
  • 3 ಟಿವಿಎಸ್ ಕ್ರೆಡಿಟ್ ಇಎಂಐ ಪಾವತಿ ಆಯ್ಕೆಗಾಗಿ ಡೀಲರನ್ನು ಕೇಳಿ
  • 4 ಕ್ರೆಡಿಟ್ ಮಿತಿಯನ್ನು ಪರಿಶೀಲಿಸಲು ನಿಮ್ಮ ಮೊಬೈಲ್ ನಂಬರನ್ನು ಹಂಚಿಕೊಳ್ಳಿ
  • 5 ಸಾಲದ ಮೊತ್ತವನ್ನು ಖಚಿತಪಡಿಸಿ, EMI ಮತ್ತು ಕಾಲಾವಧಿಯನ್ನು ಆಯ್ಕೆಮಾಡಿ ಮತ್ತು OTP ಯೊಂದಿಗೆ ಟ್ರಾನ್ಸಾಕ್ಷನ್ ಅನ್ನು ಅಧಿಕೃತಗೊಳಿಸಿ
Process of using InstaCard
  • insta_tab_iconಯಾವುದೇ ಖರೀದಿಯ ಮೇಲೆ ಶೂನ್ಯ ವೆಚ್ಚದ ಇಎಂಐ
  • insta_tab_iconಟಿವಿಎಸ್ ಕ್ರೆಡಿಟ್‌ನ 25,000+ ಮರ್ಚೆಂಟ್ ಕೌಂಟರ್‌ಗಳಲ್ಲಿ ಅಂಗೀಕರಿಸಲಾಗಿದೆ

ಬಳಸಲು ಹಂತಗಳು:

  • 1 ಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್‌ ತೆರೆಯಿರಿ -> ಇನ್ಸ್ಟಾಕಾರ್ಡ್ -> "ಆನ್ಲೈನಿನಲ್ಲಿ ಶಾಪಿಂಗ್ ಮಾಡಿ" -> ಬ್ರ್ಯಾಂಡ್ ಆಯ್ಕೆಮಾಡಿ ಅಥವಾ ನಮ್ಮ ಯಾವುದೇ ಪಾಲುದಾರ ವೆಬ್‌ಸೈಟ್‌ಗಳಿಗೆ ನೇರವಾಗಿ ಭೇಟಿ ನೀಡಿ
  • 2 ಮುಂದುವರಿಯಲು ನಿಮ್ಮ ಆಯ್ಕೆಯ ಯಾವುದೇ ಪ್ರಾಡಕ್ಟ್ ಅನ್ನು ಆಯ್ಕೆಮಾಡಿ ಮತ್ತು ಕಾರ್ಟಿಗೆ ಸೇರಿಸಿ.
  • 3 ಟಿವಿಎಸ್ ಕ್ರೆಡಿಟ್ ಇಎಂಐ ಅನ್ನು ಪಾವತಿ ಆಯ್ಕೆಯಾಗಿ ಆರಿಸಿ ಮತ್ತು ಕ್ರೆಡಿಟ್ ಮಿತಿಯನ್ನು ಪರಿಶೀಲಿಸಲು ನಿಮ್ಮ ಮೊಬೈಲ್ ನಂಬರ್‌ನೊಂದಿಗೆ ಲಾಗಿನ್ ಮಾಡಿ.
  • 4 ಸಾಲದ ಮೊತ್ತವನ್ನು ಖಚಿತಪಡಿಸಿ, EMI ಮತ್ತು ಕಾಲಾವಧಿಯನ್ನು ಆಯ್ಕೆಮಾಡಿ ಮತ್ತು OTP ಯೊಂದಿಗೆ ಟ್ರಾನ್ಸಾಕ್ಷನ್ ಅನ್ನು ಅಧಿಕೃತಗೊಳಿಸಿ.
Steps to use InstaCard for Online Shopping
  • insta_tab_iconನಿಮ್ಮ ಮನೆಯಿಂದಲೇ ಆರಾಮದಿಂದ ಯಾವುದೇ ಸಮಯದಲ್ಲಿ ನಿಮ್ಮ ಆನ್ಲೈನ್ ಖರೀದಿಯನ್ನು ಮಾಡಿ.
  • insta_tab_iconನಿಮ್ಮ ಯಾವುದೇ ಖರೀದಿಗಳ ಮೇಲೆ ಶೂನ್ಯ ಡೌನ್ ಪೇಮೆಂಟ್

ಬಳಸಲು ಹಂತಗಳು:

  • 1 ಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್ ತೆರೆಯಿರಿ -> ಇನ್ಸ್ಟಾಕಾರ್ಡ್ -> ಬ್ಯಾಂಕ್ ಟ್ರಾನ್ಸ್‌ಫರ್
  • 2 ಮುಂದುವರಿಯಲು ಇಎಂಐ ಮತ್ತು ಕಾಲಾವಧಿಯೊಂದಿಗೆ ನಿಮ್ಮ ಸಾಲದ ಮೊತ್ತವನ್ನು ಆಯ್ಕೆಮಾಡಿ
  • 3 ನಿಮ್ಮ ನೋಂದಾಯಿತ ಬ್ಯಾಂಕ್ ವಿವರಗಳನ್ನು ಪರಿಶೀಲಿಸಿ ಮತ್ತು ಒಟಿಪಿ ಯನ್ನು ಖಚಿತಪಡಿಸಿ
  • 4 ಸಲ್ಲಿಸಿ ಮತ್ತು ಮೊತ್ತವನ್ನು 30 ನಿಮಿಷಗಳ ಒಳಗೆ ನಿಮ್ಮ ಬ್ಯಾಂಕ್ ಅಕೌಂಟಿಗೆ ಕ್ರೆಡಿಟ್ ಮಾಡಲಾಗುತ್ತದೆ
insta_tab_img
  • insta_tab_icon30 ನಿಮಿಷಗಳ ಒಳಗೆ ನಿಮ್ಮ ಬ್ಯಾಂಕ್ ಅಕೌಂಟಿಗೆ ತಕ್ಷಣ ಹಣದ ಕ್ರೆಡಿಟ್ ಪಡೆಯಿರಿ
  • insta_tab_icon₹25,000 ವರೆಗಿನ 24x7 ಫಂಡ್ ಟ್ರಾನ್ಸ್‌ಫರ್/-
  • insta_tab_iconನಿಮಗೆ ಅಗತ್ಯವಿದ್ದಾಗ ಪುನರಾವರ್ತಿತ ಬಳಕೆಯನ್ನು ಆನಂದಿಸಿ.

ಇನ್ಸ್ಟಾಕಾರ್ಡನ್ನು ಈ ಕೆಟಗರಿಗಳಲ್ಲಿ ಬಳಸಬಹುದು

ಇನ್ಸ್ಟಾಕಾರ್ಡ್ ಇಎಂಐ ಕ್ಯಾಲ್ಕುಲೇಟರ್

₹ 50000 ₹ 7,00,000
2% 35%
6 ತಿಂಗಳುಗಳು 60 ತಿಂಗಳುಗಳು
ಮಾಸಿಕ ಸಾಲದ ಇಎಂಐ
ಅಸಲು ಮೊತ್ತ
ಪಾವತಿಸಬೇಕಾದ ಒಟ್ಟು ಬಡ್ಡಿ
ಪಾವತಿಸಬೇಕಾದ ಒಟ್ಟು ಮೊತ್ತ

ಹಕ್ಕುತ್ಯಾಗ : ಈ ಫಲಿತಾಂಶಗಳು ಸೂಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ. ನಿಜವಾದ ಫಲಿತಾಂಶಗಳು ಬದಲಾಗಬಹುದು. ನಿಖರವಾದ ವಿವರಗಳಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ಇನ್ಸ್ಟಾಕಾರ್ಡ್ ಆಗಾಗ ಕೇಳುವ ಪ್ರಶ್ನೆಗಳು

ಇನ್ಸ್ಟಾಕಾರ್ಡ್ ಅನ್ನು ಆನ್ಲೈನ್ ಮತ್ತು ಆಫ್ಲೈನ್ ಮರ್ಚೆಂಟ್ ನೆಟ್ವರ್ಕ್‌ಗಳಾದ್ಯಂತ ಶಾಪಿಂಗ್, ಖರೀದಿ ಮತ್ತು ಪಾವತಿ ಅಗತ್ಯಗಳಿಗೆ, ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು, ಜೀವನಶೈಲಿ, ಹೋಮ್ ಅಪ್ಲಾಯನ್ಸ್ ವಸ್ತುಗಳು, ಪೀಠೋಪಕರಣಗಳು, ಶಿಕ್ಷಣ, ಆರೋಗ್ಯ, ಪ್ರಯಾಣ, ದೇಶೀಯ ಬಳಕೆ ಇತ್ಯಾದಿಗಳಿಗೆ ಬಳಸಬಹುದು.

ಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್ ಅಥವಾ ಮರ್ಚೆಂಟ್ ಸ್ಟೋರ್‌ಗಳ ಮೂಲಕ ಸಲ್ಲಿಸಿದ ಸಾಲದ ಕೋರಿಕೆಯ ಆಧಾರದ ಮೇಲೆ ಎಲ್ಲಾ ಟ್ರಾನ್ಸಾಕ್ಷನ್‌ಗಳನ್ನು ಸಾಲವಾಗಿ ಪರಿವರ್ತಿಸಲಾಗುತ್ತದೆ. 3%* ವರೆಗಿನ ಮಾಸಿಕ ಬಡ್ಡಿ ದರ ಅನ್ವಯವಾಗುತ್ತದೆ. ಮರುಪಾವತಿ ಅವಧಿಯ ಆಯ್ಕೆಗಳನ್ನು ಅರ್ಥಮಾಡಿಕೊಳ್ಳಲು ದಯವಿಟ್ಟು ಈ ಕೆಳಗಿನ ಗ್ರಿಡ್ ಅನ್ನು ನೋಡಿ.

ಮೊತ್ತ ( ₹ ) 3 ತಿಂಗಳುಗಳು 6 ತಿಂಗಳುಗಳು 9 ತಿಂಗಳುಗಳು 12 ತಿಂಗಳುಗಳು 15 ತಿಂಗಳುಗಳು 18 ತಿಂಗಳುಗಳು 24 ತಿಂಗಳುಗಳು
3000 ರಿಂದ 5,000
5,001 ದಿಂದ 10,000
10,001 ದಿಂದ 20,000
20,001 ದಿಂದ 30,000
30,001 ದಿಂದ 40,000
40,001 ದಿಂದ 50,000

ಕಾಲಕಾಲಕ್ಕೆ ತಿಳಿಸಲಾದ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟು ನಿಮ್ಮ ಇನ್ಸ್ಟಾಕಾರ್ಡ್ ಬಳಸಿಕೊಂಡು ಅನುಮೋದಿತ ಮಿತಿಯೊಳಗೆ ನೀವು ಗರಿಷ್ಠ 3 ಸಮಾನ ಸಾಲವನ್ನು ಪಡೆಯಬಹುದು.

ನೀವು ಒಂದೇ ಟ್ರಾನ್ಸಾಕ್ಷನ್ನಿನಲ್ಲಿ ಕನಿಷ್ಠ ₹ 3000 ಮತ್ತು ಗರಿಷ್ಠ ₹ 50,000 ಟ್ರಾನ್ಸಾಕ್ಷನ್ ಮಾಡಬಹುದು.

ನಿಮ್ಮ ಇನ್ಸ್ಟಾಕಾರ್ಡ್ ತ್ವರಿತ ಲೋನ್‌ಗಳಿಗೆ ನಿಮ್ಮ ಮಾಸಿಕ ಇಎಂಐ ಅನ್ನು ನಿಮ್ಮ ಹಿಂದಿನ ಸಾಲಕ್ಕಾಗಿ ನಮ್ಮೊಂದಿಗೆ ನೋಂದಣಿಯಾದ ಅದೇ ಬ್ಯಾಂಕ್ ಅಕೌಂಟಿನಿಂದ ಡೆಬಿಟ್ ಮಾಡಲಾಗುತ್ತದೆ.

ಹೌದು, ನಿಮ್ಮ ಇನ್ಸ್ಟಾಕಾರ್ಡ್ ಮೇಲೆ, ಯಶಸ್ವಿ ಟ್ರಾನ್ಸಾಕ್ಷನ್‌ಗಳಿಗಾಗಿ ಸಾಲ ವಿತರಣೆಯ ದಿನಾಂಕದಿಂದ ನಿಮಗೆ ಬಡ್ಡಿಯನ್ನು ವಿಧಿಸಲಾಗುತ್ತದೆ.

ಇನ್ಸ್ಟಾಕಾರ್ಡ್ ಬ್ಯಾಂಕ್ ಟ್ರಾನ್ಸ್‌ಫರ್ ಆಯ್ಕೆಯನ್ನು ಬಳಸುವ ಹಂತಗಳು:

  • ಟಿವಿಎಸ್ ಸಾಥಿ ಆ್ಯಪ್ ತೆರೆಯಿರಿ -> ಇನ್ಸ್ಟಾಕಾರ್ಡ್ -> ಬ್ಯಾಂಕ್ ಟ್ರಾನ್ಸ್‌ಫರ್.
  • ಮುಂದುವರಿಯಲು ಇಎಂಐ ಮತ್ತು ಕಾಲಾವಧಿಯೊಂದಿಗೆ ನಿಮ್ಮ ಸಾಲದ ಮೊತ್ತವನ್ನು ಆಯ್ಕೆಮಾಡಿ.
  • ನಿಮ್ಮ ನೋಂದಾಯಿತ ಬ್ಯಾಂಕ್ ವಿವರಗಳನ್ನು ಪರಿಶೀಲಿಸಿ ಮತ್ತು ಒಟಿಪಿ ಯನ್ನು ಖಚಿತಪಡಿಸಿ.
  • ಸಲ್ಲಿಸಿ ಮತ್ತು 30 ನಿಮಿಷಗಳ ಒಳಗೆ ಮೊತ್ತವನ್ನು ಟ್ರಾನ್ಸ್‌ಫರ್ ಮಾಡಲಾಗುತ್ತದೆ.

ಇನ್ಸ್ಟಾಕಾರ್ಡ್ ಮರ್ಚೆಂಟ್ ಸ್ಟೋರ್ ಆಯ್ಕೆಯನ್ನು ಬಳಸಲು ಹಂತಗಳು:

  • ನಮ್ಮ ಯಾವುದೇ ಪಾಲುದಾರ ಮಳಿಗೆಗಳಿಗೆ ಭೇಟಿ ನೀಡಿ.
  • ನಿಮ್ಮ ಖರೀದಿಯನ್ನು ಮಾಡಿ.
  • ಟಿವಿಎಸ್ ಕ್ರೆಡಿಟ್ ಇಎಂಐ ಪಾವತಿ ಆಯ್ಕೆಗಾಗಿ ಡೀಲರ್ ಬಳಿ ವಿಚಾರಿಸಿ.
  • ಕ್ರೆಡಿಟ್ ಮಿತಿಯನ್ನು ಪರಿಶೀಲಿಸಲು ನಿಮ್ಮ ಮೊಬೈಲ್ ನಂಬರನ್ನು ಹಂಚಿಕೊಳ್ಳಿ.
  • ಸಾಲದ ಮೊತ್ತ, ಇಎಂಐ ಮತ್ತು ಕಾಲಾವಧಿಯನ್ನು ಆಯ್ಕೆ ಮಾಡಿ ಮತ್ತು ಅದನ್ನು ಒಟಿಪಿಯೊಂದಿಗೆ ಸಲ್ಲಿಸಿ.

ಇನ್ಸ್ಟಾಕಾರ್ಡ್ ಶಾಪ್ ಆನ್ಲೈನ್ ಆಯ್ಕೆಯನ್ನು ಬಳಸುವ ಹಂತಗಳು:

  • ಟಿವಿಎಸ್ ಸಾಥಿ ಆ್ಯಪ್‌ ತೆರೆಯಿರಿ -> ಇನ್ಸ್ಟಾಕಾರ್ಡ್ -> "ಆನ್ಲೈನಿನಲ್ಲಿ ಶಾಪಿಂಗ್ ಮಾಡಿ" -> ಬ್ರ್ಯಾಂಡ್ ಆಯ್ಕೆಮಾಡಿ ಅಥವಾ ನಮ್ಮ ಯಾವುದೇ ಪಾಲುದಾರ ವೆಬ್‌ಸೈಟ್‌ಗಳಿಗೆ ನೇರವಾಗಿ ಭೇಟಿ ನೀಡಿ.
  • ಮುಂದುವರಿಯಲು ನಿಮ್ಮ ಪ್ರಾಡಕ್ಟ್ ಆಯ್ಕೆಮಾಡಿ ಮತ್ತು ಅದನ್ನು ಕಾರ್ಟ್‌ಗೆ ಸೇರಿಸಿ.
  • ಟಿವಿಎಸ್ ಕ್ರೆಡಿಟ್ ಇಎಂಐ ಅನ್ನು ಪಾವತಿ ಆಯ್ಕೆಯಾಗಿ ಆರಿಸಿ ಮತ್ತು ಕ್ರೆಡಿಟ್ ಮಿತಿಯನ್ನು ಪರಿಶೀಲಿಸಲು ನಿಮ್ಮ ಮೊಬೈಲ್ ನಂಬರ್‌ನೊಂದಿಗೆ ಲಾಗಿನ್ ಮಾಡಿ.
  • ಸಾಲದ ಮೊತ್ತವನ್ನು ಖಚಿತಪಡಿಸಿ, EMI ಮತ್ತು ಕಾಲಾವಧಿಯನ್ನು ಆಯ್ಕೆಮಾಡಿ ಮತ್ತು OTP ಯೊಂದಿಗೆ ಟ್ರಾನ್ಸಾಕ್ಷನ್ ಅನ್ನು ಅಧಿಕೃತಗೊಳಿಸಿ.

ಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್‌ನಲ್ಲಿ ನೀವು ವರ್ಚುವಲ್ ಇಎಂಐ ಕಾರ್ಡ್ ಅನ್ನು ಅಕ್ಸೆಸ್ ಮಾಡಬಹುದು, ಇದು ಕೇವಲ ಒಂದು ವಿಶಿಷ್ಟ ಗುರುತಿನ ಸಂಖ್ಯೆಯಾಗಿದೆ. ಆದರೆ ನಿಮಗೆ ಫಿಸಿಕಲ್ ಇನ್ಸ್ಟಾಕಾರ್ಡ್ ಅಗತ್ಯವಿದ್ದರೆ ನೀವು ₹ 100 ಪಾವತಿಸುವ ಮೂಲಕ ಕೋರಿಕೆಯನ್ನು ಸಲ್ಲಿಸಬಹುದು.

ನನ್ನ ಇನ್ಸ್ಟಾಕಾರ್ಡ್ ನಲ್ಲಿ ಸಾಲ ಸೌಲಭ್ಯವನ್ನು ಪಡೆಯಲು ನಿಮಗೆ ಯಾವುದೇ ಪ್ರಶ್ನೆಗಳಿದ್ದರೆ ಅಥವಾ ಸಹಾಯ ಬೇಕಿದ್ದರೆ, ನೀವು ನಮ್ಮನ್ನು 044-66-123456 ನಲ್ಲಿ ಸಂಪರ್ಕಿಸಬಹುದು ಅಥವಾ helpdesk@tvscredit.com ಗೆ ಇಮೇಲ್ ಮಾಡಬಹುದು.

ಸಾಲದ ಒಪ್ಪಂದದ ಅಡಿಯಲ್ಲಿ ("ಮಾಸ್ಟರ್ ಲೋನ್ ಅಗ್ರಿಮೆಂಟ್") ಸಾಲಗಾರ ("ಸಾಲಗಾರ") ಪಡೆದ ಸಾಲಕ್ಕೆ ಸಂಬಂಧಿಸಿದಂತೆ, ಸಾಲಗಾರನು ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್ (ಕೆಳಗೆ ವ್ಯಾಖ್ಯಾನಿಸಲಾಗಿದೆ) ನೀಡುವ ಪೂರ್ವ-ಅನುಮೋದಿತ ಸಾಲ ಪ್ರೋಗ್ರಾಮ್‌ಗೆ ಸೇರ್ಪಡೆಗೊಳ್ಳಲು ಆಯ್ಕೆ ಮಾಡಿಕೊಂಡಿದ್ದಾನೆ ( "ಟಿವಿಎಸ್ ಕ್ರೆಡಿಟ್ / ಕಂಪನಿ"), ಇಲ್ಲಿ ಸಾಲಗಾರನಿಗೆ ಪೂರ್ವ-ಅನುಮೋದಿತ ಕ್ರೆಡಿಟ್ ಮಿತಿಯೊಂದಿಗೆ ಮಂಜೂರು ಆಗಿದೆ, ಅರ್ಹತಾ ಮಾನದಂಡಗಳನ್ನು ಪೂರೈಸಲು ಒಳಪಟ್ಟಿರುತ್ತದೆ, ಬ್ಯಾಂಕ್ ಅಕೌಂಟಿಗೆ ಹಣವನ್ನು ಟ್ರಾನ್ಸ್‌ಫರ್ ಮಾಡುವ ಮೂಲಕ ಅಥವಾ ಟಿವಿಎಸ್ ನಲ್ಲಿ ಕ್ರೆಡಿಟ್ ಎಂಪನೆಲ್ಡ್ ವ್ಯಾಪಾರಿ ಸಂಸ್ಥೆಗಳು ಮತ್ತು ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಖರೀದಿಸಲು ಗ್ರಾಹಕರು ಕ್ರೆಡಿಟ್ ಸೌಲಭ್ಯವನ್ನು ಬಳಸಲು ಅರ್ಹರಾಗಿರುತ್ತಾರೆ.

ಇಲ್ಲಿ ನಮೂದಿಸಿದ ನಿಯಮ ಮತ್ತು ಷರತ್ತುಗಳು ("ನಿಯಮ ಮತ್ತು ಷರತ್ತುಗಳು") ಸಾಲಗಾರರಿಂದ ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್‌ನ ನೋಂದಣಿಗೆ ಅನ್ವಯವಾಗುತ್ತವೆ. ಮಾಸ್ಟರ್ ಲೋನ್ ಒಪ್ಪಂದದ ನಿಯಮಗಳೊಂದಿಗೆ ಓದಲಾದ ಈ ನಿಯಮಗಳು ಮತ್ತು ಷರತ್ತುಗಳು ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ ಟಿವಿಎಸ್ ಕ್ರೆಡಿಟ್ ಮತ್ತು ಸಾಲಗಾರನ ನಡುವಿನ ಸಂಪೂರ್ಣ ಒಪ್ಪಂದವನ್ನು ರೂಪಿಸುತ್ತವೆ.

ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್ ಅಡಿಯಲ್ಲಿ ನೋಂದಣಿಗಾಗಿ ಸೈನ್-ಅಪ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಮೂಲಕ, ಸಾಲಗಾರರು ಇಲ್ಲಿ ನಿಗದಿಪಡಿಸಿದ ನಿಯಮ ಮತ್ತು ಷರತ್ತುಗಳನ್ನು ಸ್ಪಷ್ಟವಾಗಿ ಓದಿದ್ದಾರೆ, ಅರ್ಥಮಾಡಿಕೊಂಡಿದ್ದಾರೆ, ಅಂಗೀಕರಿಸಿದ್ದಾರೆ ಮತ್ತು ಬದ್ಧರಾಗಿದ್ದಾರೆ ಎಂದು ಪರಿಗಣಿಸಲಾಗುತ್ತದೆ. ಅಸ್ತಿತ್ವದಲ್ಲಿರುವ ಬ್ಯಾಲೆನ್ಸ್‌ಗಳು, ಲೆಕ್ಕಾಚಾರದ ವಿಧಾನಗಳ ಮೇಲೆ ಪರಿಣಾಮ ಬೀರುವ ಬದಲಾವಣೆಗಳು ಸೇರಿದಂತೆ ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್ ಅಡಿಯಲ್ಲಿ ನೀಡಲಾಗುವ ಈ ನಿಯಮಗಳು ಮತ್ತು ಷರತ್ತುಗಳು, ಫೀಚರ್‌ಗಳು ಮತ್ತು ಪ್ರಯೋಜನಗಳನ್ನು ಯಾವುದೇ ಸಮಯದಲ್ಲಿ ಬದಲಾಯಿಸುವ ಹಕ್ಕನ್ನು ಟಿವಿಎಸ್ ಕ್ರೆಡಿಟ್ ಕಾಯ್ದಿರಿಸುತ್ತದೆ. ಅರ್ಹ ಸಾಲಗಾರರು ಪರಿಷ್ಕೃತ ನಿಯಮಗಳ ಅಡಿಯಲ್ಲಿ ಉಂಟಾದ ಎಲ್ಲಾ ಶುಲ್ಕಗಳು ಮತ್ತು ಇತರ ಎಲ್ಲಾ ಜವಾಬ್ದಾರಿಗಳಿಗೆ ಹೊಣೆಗಾರರಾಗಿರುತ್ತಾರೆ ಎಂದು ಒಪ್ಪುತ್ತಾರೆ.

ವ್ಯಾಖ್ಯಾನಗಳು

1.1. ಈ ಡಾಕ್ಯುಮೆಂಟ್‌ನಲ್ಲಿ, ಈ ಕೆಳಗಿನ ಪದ ಮತ್ತು ವಾಕ್ಯಗಳು ಈ ಕೆಳಗಿನ ಅರ್ಥಗಳನ್ನು ಹೊಂದಿರುತ್ತವೆ:

(a)"ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್" ಅಂದರೆ ಕಂಪನಿಯು ನೀಡುವ ಪ್ರೋಗ್ರಾಮ್ ಮತ್ತು ಅಗತ್ಯ ಶುಲ್ಕವನ್ನು ಪಾವತಿಸುವ ಮೂಲಕ ಸಾಲಗಾರರು ಒಪ್ಪಿಗೆ ನೀಡುತ್ತಾರೆ, ಇದರಲ್ಲಿ ಅರ್ಹತಾ ಮಾನದಂಡಗಳನ್ನು ಪೂರೈಸಲು ಒಳಪಟ್ಟು ಸಾಲಗಾರರನ್ನು ಸದಸ್ಯರಾಗಿ ನೋಂದಾಯಿಸಬಹುದು.

(b)"ಇನ್ಸ್ಟಾಕಾರ್ಡ್/ಕಾರ್ಡ್" ಅಂದರೆ ಸಾಲಗಾರರಿಗೆ ನೀಡಲಾದ ಫಿಸಿಕಲ್ ಅಥವಾ ವರ್ಚುವಲ್ ಕಾರ್ಡ್ (ವಿಶಿಷ್ಟ ಗುರುತಿನ ಸಂಖ್ಯೆಯನ್ನು ಹೊಂದಿರುವ) ಎಂದರ್ಥ. ಇದು ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಅಥವಾ ಪ್ರಿಪೇಯ್ಡ್ ಕಾರ್ಡ್ ಇತ್ಯಾದಿಗಳಲ್ಲ ಮತ್ತು ಟಿವಿಎಸ್ ಕ್ರೆಡಿಟ್ ಪಾಲುದಾರ ಮರ್ಚೆಂಟ್ (ಆಫ್ಲೈನ್ ಮತ್ತು ಆನ್ಲೈನ್) ನೆಟ್ವರ್ಕ್‌ಗಳೊಂದಿಗೆ ಮುಂಚಿತ-ಅನುಮೋದಿತ ಮಿತಿಯ ಸುಲಭ ಗುರುತಿಸುವಿಕೆಗೆ ಮತ್ತು ಬಳಕೆಗೆ ಇದನ್ನು ಸಾಲಗಾರರಿಗೆ ಟಿವಿಎಸ್ ಕ್ರೆಡಿಟ್ ನೀಡುತ್ತದೆ, ಅಂತಹ ಸಾಲಗಾರರು ಈ ಮೊದಲು ಟಿವಿಎಸ್ ಕ್ರೆಡಿಟ್‌ನಿಂದ ಯಾವುದೇ ಸಾಲದ ಸೌಲಭ್ಯವನ್ನು ಪಡೆದಿದ್ದರೂ ಅಥವಾ ಪಡೆದಿಲ್ಲದಿದ್ದರೂ.

(c)"ಫೀಸ್/ಶುಲ್ಕಗಳು" ಅಂದರೆ ಈ ನಿಯಮ ಮತ್ತು ಷರತ್ತುಗಳಲ್ಲಿ ನಿಗದಿಪಡಿಸಿದ ಅಂತಹ ಶುಲ್ಕಗಳು. ಇಲ್ಲಿ ನಮೂದಿಸಿದ ಎಲ್ಲಾ ವಿವರಗಳನ್ನು ಸಾಲಗಾರರಿಗೆ ನಿರ್ದಿಷ್ಟವಾಗಿ ತಿಳಿಸದ ಹೊರತು ಮತ್ತು ಕಾಲಕಾಲಕ್ಕೆ ತಿದ್ದುಪಡಿ ಮಾಡಿದಂತೆ ಸಾಲದ ಟರ್ಮ್ ಶೀಟ್‌ನಲ್ಲಿ ಒದಗಿಸಲಾಗುತ್ತದೆ.

(d)"ಇಎಂಐ/ಸಮಾನ ಮಾಸಿಕ ಕಂತುಗಳು" ಅಂದರೆ ಅಸಲು ಮೊತ್ತ, ಬಡ್ಡಿ ಮತ್ತು ಇತರ ಶುಲ್ಕಗಳನ್ನು ಒಳಗೊಂಡಿರುವ ಟಿವಿಎಸ್ ಕ್ರೆಡಿಟ್‌ಗೆ ಪ್ರತಿ ತಿಂಗಳು ಪಾವತಿಸಬೇಕಾದ ಮೊತ್ತ.

(e)"ಮುಂಚಿತ-ಅನುಮೋದಿತ ಲೋನ್ – ಅಪ್ಲಿಕೇಶನ್ ಫಾರ್ಮ್" ಅಂದರೆ ಟಿವಿಎಸ್ ಕ್ರೆಡಿಟ್‌ನಿಂದ ಕಾಲಕಾಲಕ್ಕೆ ನಿಗದಿಪಡಿಸಲಾದ ಫಾರ್ಮ್ ಮತ್ತು ವಿಧಾನದಲ್ಲಿ ಸಾಲಗಾರರು ಒಪ್ಪಿಕೊಂಡ, ಕಾರ್ಯಗತಗೊಳಿಸಿದ/ಕಾರ್ಯಗತಗೊಳಿಸಬೇಕಾದ ಅಪ್ಲಿಕೇಶನ್ ಅನ್ನು ಒಳಗೊಂಡಿರುತ್ತದೆ.

(f)"ಸ್ವಾಗತ ಪತ್ರ" ಅಂದರೆ ಕ್ರೆಡಿಟ್ ಸೌಲಭ್ಯವನ್ನು ಪಡೆಯಲು/ಬಳಸಲು ಅನ್ವಯವಾಗುವ ಪ್ರಮುಖ ನಿಯಮಗಳು ಮತ್ತು ಷರತ್ತುಗಳ ಪಟ್ಟಿ ಮತ್ತು ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್/ಕ್ರೆಡಿಟ್ ವಿವರಗಳನ್ನು ಸೆಟ್ ಮಾಡುವ ಸಾಲಗಾರರಿಗೆ ಟಿವಿಎಸ್ ಕ್ರೆಡಿಟ್ ಕಳುಹಿಸುವ ಪತ್ರವಾಗಿದೆ.

(g)"ವ್ಯಾಪಾರಿ ಸಂಸ್ಥೆ" ಎಂದರೆ ಸಂಸ್ಥೆಗಳೊಂದಿಗೆ ಟಿವಿಎಸ್ ಕ್ರೆಡಿಟ್ ರಚಿಸಿದ ವ್ಯಾಪಾರಿ ನೆಟ್ವರ್ಕ್, ಸ್ಥಾಪಿತವಿರುವ ಕಡೆಯಲ್ಲೆಲ್ಲಾ, ಪೂರ್ವ-ಅನುಮೋದಿತ ಲೋನ್ ಪ್ರೋಗ್ರಾಮ್ ಸೌಲಭ್ಯವನ್ನು ಗೌರವಿಸುತ್ತದೆ, ಇತರವುಗಳಾದ ಅಂಗಡಿಗಳು, ಮಳಿಗೆಗಳು, ಹೋಟೆಲ್‌ಗಳು, ಏರ್‌ಲೈನ್‌ಗಳು ಮತ್ತು ಮೇಲ್ ಆರ್ಡರ್ ಜಾಹೀರಾತುದಾರರನ್ನು ಒಳಗೊಂಡಿರಬಹುದು.

(h)"POS" / "EDC" ಅಂದರೆ ಭಾರತದ ವ್ಯಾಪಾರಿ ಸಂಸ್ಥೆಗಳಲ್ಲಿ ಬಳಸಲಾಗುವ ಮಾರಾಟ / ಎಲೆಕ್ಟ್ರಾನಿಕ್ ಡೇಟಾ ಕ್ಯಾಪ್ಚರಿಂಗ್ ಯಂತ್ರಗಳು, ಟ್ರಾನ್ಸಾಕ್ಷನ್‌ಗಳನ್ನು ಪ್ರಕ್ರಿಯೆಗೊಳಿಸಲು ಸಾಮರ್ಥ್ಯ ಹೊಂದಿರುತ್ತವೆ ಮತ್ತು ಇದರಲ್ಲಿ, ಸಾಲಗಾರರು ತಕ್ಷಣವೇ ಅವರಿಗೆ ಮಂಜೂರಾದ ಕ್ರೆಡಿಟ್ ಮಿತಿಯನ್ನು ಬಳಸಬಹುದು.

ಅರ್ಹತಾ ಮಾನದಂಡ ಮತ್ತು ನೋಂದಣಿ

2.1. ಅರ್ಹತಾ ಮಾನದಂಡ:

2.1.1. ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮಿನ ಪ್ರಯೋಜನಗಳನ್ನು ಬಳಸಲು ಅರ್ಹರಾಗಲು, ಸಾಲಗಾರರು ಕನಿಷ್ಠ 3 ಇಎಂಐ ಗಳನ್ನು ಅಥವಾ ಡೀಫಾಲ್ಟ್ ಇಲ್ಲದೆ ನಿಗದಿಪಡಿಸಿದಂತೆ ಮರುಪಾವತಿಸಿರಬೇಕು.

2.1.2. ಮೇಲಿನವುಗಳ ಹೊರತಾಗಿಯೂ, ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮಿನಲ್ಲಿ ಸಾಲಗಾರರು ಸೌಲಭ್ಯವನ್ನು ಬಳಸುವ ಅರ್ಹತೆಯು ಕಂಪನಿಯ ಸ್ವಂತ ವಿವೇಚನೆಯಿಂದ ಇರುತ್ತದೆ.

2.1.3. ಮುಂಚಿತ-ಅನುಮೋದಿತ ಲೋನ್ - ಟಿವಿಎಸ್ ಕ್ರೆಡಿಟ್‌ನೊಂದಿಗೆ ಲೋನ್ ಅಪ್ಲಿಕೇಶನ್ ಫಾರ್ಮ್ ಅನ್ನು ಸಲ್ಲಿಸುವ ಮೂಲಕ ಸಾಲಗಾರರು ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್ ಅನ್ನು ಆಯ್ಕೆ ಮಾಡಬಹುದು. ಮೇಲಿನ ಮಾನದಂಡಗಳ ಆಧಾರದ ಮೇಲೆ ಟಿವಿಎಸ್ ಕ್ರೆಡಿಟ್, ಮುಂಚಿತ-ಅನುಮೋದಿತ ಲೋನ್ – ಸಾಲದ ಅಪ್ಲಿಕೇಶನ್ ಫಾರ್ಮ್ ಅನ್ನು ಅಂಗೀಕರಿಸಬಹುದು ಅಥವಾ ತಿರಸ್ಕರಿಸಬಹುದು. ಯಾವುದೇ ರೀತಿಯ ಅಸಮರ್ಪಕ ಮರುಪಾವತಿ ನಡವಳಿಕೆಯಿಂದಾಗಿ ಕ್ರೆಡಿಟ್ ಸೌಲಭ್ಯದ ಯಾವುದೇ ಸಸ್ಪೆನ್ಶನ್/ವಿತ್‌ಡ್ರಾವಲ್ ಸಂದರ್ಭದಲ್ಲಿ, ಸಾಲಗಾರರು ಪಾವತಿಸಿದ ಯಾವುದೇ ಶುಲ್ಕ/ ನೋಂದಣಿ ಶುಲ್ಕವನ್ನು ರಿಫಂಡ್ ಮಾಡಲು ಟಿವಿಎಸ್ ಕ್ರೆಡಿಟ್ ಬಾಧ್ಯತೆ ಹೊಂದಿರುವುದಿಲ್ಲ ಎಂದು ಸಾಲಗಾರರು ಒಪ್ಪುತ್ತಾರೆ.

2.2. ದಾಖಲಾತಿ:

2.2.1. ಟಿವಿಎಸ್ ಕ್ರೆಡಿಟ್ ನೀಡಲಾದ ಸಂಪರ್ಕ ವಿಧಾನಗಳು/ವಿವರಗಳ ಮೂಲಕ ಕ್ರೆಡಿಟ್ ಸೌಲಭ್ಯದ ಬಳಕೆಗೆ ಅನ್ವಯವಾಗುವ ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್/ಕ್ರೆಡಿಟ್ ವಿವರಗಳು ಮತ್ತು ಪ್ರಮುಖ ನಿಯಮಗಳು ಮತ್ತು ಷರತ್ತುಗಳ ಪಟ್ಟಿಯನ್ನು ಸೆಟ್ ಮಾಡುವ ಸ್ವಾಗತ ಪತ್ರವನ್ನು ಕಳುಹಿಸುತ್ತದೆ

2.2.2. ಸ್ವಾಗತ ಪತ್ರ ಪಡೆದ ನಂತರ, ಸಾಲಗಾರರು ಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್‌ ("ಸಾಥಿ ಆ್ಯಪ್‌") (ಅಥವಾ) ಟಿವಿಎಸ್ ಕ್ರೆಡಿಟ್ ವೆಬ್‌ಸೈಟ್ ಮೂಲಕ ("ಟಿವಿಎಸ್ ಕ್ರೆಡಿಟ್ ವೆಬ್‌ಸೈಟ್") ಅಥವಾ ಟಿವಿಎಸ್ ಕ್ರೆಡಿಟ್‌ನ ಗ್ರಾಹಕ ಸಹಾಯವಾಣಿ ಸಂಪರ್ಕ ಸಂಖ್ಯೆಯಲ್ಲಿ ಕೋರಿಕೆಯನ್ನು ಸಲ್ಲಿಸುವ ಮೂಲಕ ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್ ಸೌಲಭ್ಯವನ್ನು ಸಕ್ರಿಯಗೊಳಿಸಬಹುದು.

2.2.3. ಒಮ್ಮೆ ಸಾಲಗಾರನು ಟಿವಿಎಸ್ ಕ್ರೆಡಿಟ್‌ನಿಂದ ಎಸ್ಎಂಎಸ್/ಇ-ಮೇಲ್ ಟ್ರಿಗರ್ ಅನ್ನು ಸ್ವೀಕರಿಸಿದ ನಂತರ, ಪೂರ್ವ-ಅನುಮೋದಿತ ಲೋನ್ ಪ್ರೋಗ್ರಾಮಿಗೆ ಯಶಸ್ವಿ ದಾಖಲಾತಿಯನ್ನು ದೃಢೀಕರಿಸುತ್ತದೆ ಮತ್ತು ಆತ/ಆಕೆಯ ನೋಂದಾಯಿತ ಮೊಬೈಲ್ ನಂಬರ್/ಇ-ಮೇಲ್ ಐಡಿ ಗೆ ಕ್ರೆಡಿಟ್ ಮಿತಿಯನ್ನು ಮಂಜೂರು ಮಾಡಿದ ನಂತರ, ಸಾಲಗಾರ ನೋಂದಾಯಿತ ಮೊಬೈಲ್ ನಂಬರ್ ಅನ್ನು ಬಳಸಿಕೊಂಡು ಸಾಥಿ ಆ್ಯಪ್/ಟಿವಿಎಸ್ ಕ್ರೆಡಿಟ್ ವೆಬ್‌ಸೈಟ್/ಐವಿಆರ್ ಗೆ ಲಾಗಿನ್ ಆಗಬೇಕು ಮತ್ತು ಆತನ ನೋಂದಾಯಿತ ಮೊಬೈಲ್ ಸಂಖ್ಯೆಗೆ ಕಳುಹಿಸಿದ ಆತನ ಜನ್ಮ ದಿನಾಂಕ ಮತ್ತು ಒಟಿಪಿ ಅನ್ನು ನಮೂದಿಸುವ ಮೂಲಕ ಆತನ ಪೂರ್ವ-ಅನುಮೋದಿತ ಲೋನ್ ಅನ್ನು ಪಡೆಯಲು ಪೂರ್ವ-ಅನುಮೋದಿತ ಲೋನ್ ಪ್ರೋಗ್ರಾಮ್ ಸೌಲಭ್ಯವನ್ನು ಸಕ್ರಿಯಗೊಳಿಸಬೇಕು.

2.2.4. ಕ್ರೆಡೆನ್ಶಿಯಲ್‌ಗಳನ್ನು ಯಶಸ್ವಿಯಾಗಿ ಒದಗಿಸಿದ ನಂತರ, ಸಾಲಗಾರರು ತಮ್ಮ ನೋಂದಾಯಿತ ಮೊಬೈಲ್ ನಂಬರ್/ಇಮೇಲ್ ಐಡಿಗೆ ಎಸ್ಎಂಎಸ್/ಇಮೇಲ್ ಮೂಲಕ ಮುಂಚಿತ ಅನುಮೋದಿತ ಲೋನ್ ಪ್ರೋಗ್ರಾಮ್ ಸೌಲಭ್ಯ ಸಕ್ರಿಯಗೊಳಿಸುವಿಕೆಯ ದೃಢೀಕರಣವನ್ನು ಪಡೆಯುತ್ತಾರೆ.

ಇತರ ನಿಯಮ ಮತ್ತು ಷರತ್ತುಗಳು

3.1. ಈ ಮುಂಚಿತ ಅನುಮೋದಿತ ಲೋನ್ ಪ್ರೋಗ್ರಾಮ್ ಅಡಿಯಲ್ಲಿ ಯಾವುದೇ ಸೌಲಭ್ಯ / ಟ್ರಾನ್ಸಾಕ್ಷನ್ ಅನ್ನು ಪ್ರತ್ಯೇಕ ಸಾಲದ ಸೌಲಭ್ಯವೆಂದು ಪರಿಗಣಿಸಲಾಗುತ್ತದೆ ಮತ್ತು ಸಾಲಗಾರರು ಕಾರ್ಯಗತಗೊಳಿಸಲಾದ / ಕಾರ್ಯಗತಗೊಳಿಸಬೇಕಾದ ಮಾಸ್ಟರ್ ಲೋನ್ ಒಪ್ಪಂದದ ನಿಯಮ ಮತ್ತು ಷರತ್ತುಗಳು ಬದ್ಧವಾಗಿರುತ್ತವೆ ಮತ್ತು ಅನ್ವಯವಾಗುತ್ತವೆ ಎಂದು ಸಾಲಗಾರರು ಒಪ್ಪುತ್ತಾರೆ.

3.2. ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್ ಅಡಿಯಲ್ಲಿ ನೀಡಲಾಗುವ ಕ್ರೆಡಿಟ್ ಮಿತಿ, ಪ್ರಯೋಜನಗಳು, ಆಫರ್‌ಗಳು / ಇತರ ಹೆಚ್ಚುವರಿ ಸೇವೆಗಳ ಅರ್ಹತೆಯು ಟಿವಿಎಸ್ ಕ್ರೆಡಿಟ್‌ನ ಸ್ವಂತ ವಿವೇಚನೆಗೆ ಒಳಪಟ್ಟಿರುತ್ತದೆ.

3.3. ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್ ಅಡಿಯಲ್ಲಿ ಯಾವುದೇ ಟ್ರಾನ್ಸಾಕ್ಷನ್‌ಗಳನ್ನು ಮಾಡುವ ಮೊದಲು, ಸಾಲಗಾರರು ಟಿವಿಎಸ್ ಕ್ರೆಡಿಟ್‌ನಿಂದ ಕ್ರೆಡಿಟ್ ಸೌಲಭ್ಯವನ್ನು ಬಳಸಲು ಪ್ರತಿ ಬಾರಿ ಕೋರಿಕೆಯನ್ನು ಸಲ್ಲಿಸಬೇಕು (ಇದು ಮಾಸ್ಟರ್ ಲೋನ್ ಒಪ್ಪಂದದ ನಿಯಮಗಳಿಗೆ ಒಳಪಟ್ಟಿರುತ್ತದೆ).

3.4. ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್ ಸದಸ್ಯತ್ವವನ್ನು ವರ್ಗಾಯಿಸಲಾಗುವುದಿಲ್ಲ ಮತ್ತು ನಿಯೋಜಿಸಲಾಗುವುದಿಲ್ಲ. ಕ್ರೆಡಿಟ್ ಸೌಲಭ್ಯವು ಭಾರತದಲ್ಲಿ ಮಾತ್ರ ಬಳಕೆಗೆ ಮಾನ್ಯವಾಗಿರುತ್ತದೆ ಮತ್ತು ಭಾರತೀಯ ಕರೆನ್ಸಿಯಲ್ಲಿ ಸರಕು ಅಥವಾ ಸೇವೆಗಳನ್ನು ಖರೀದಿಸಲು ಮಾತ್ರ ಮಾನ್ಯವಾಗಿರುತ್ತದೆ. ಅಲ್ಲದೆ, ಕೆಲವು ವ್ಯಾಪಾರಿ ಸ್ಥಳಗಳು / ಸಂಸ್ಥೆಗಳು / ವರ್ಗದಲ್ಲಿ ಶಾಶ್ವತವಾಗಿ ಅಥವಾ ಕಾಲಕಾಲಕ್ಕೆ ತಿಳಿಸಬಹುದಾದ ಬಳಕೆಯಲ್ಲಿ ನಿರ್ಬಂಧಗಳು ಇರುತ್ತವೆ.

3.5. ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್ ಮತ್ತು ಟಿವಿಎಸ್ ಕ್ರೆಡಿಟ್‌ನೊಂದಿಗಿನ ಎಲ್ಲಾ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸಾಲಗಾರರು ಯಾವಾಗಲೂ ಉತ್ತಮ ನಂಬಿಕೆಯಲ್ಲಿ ಕಾರ್ಯನಿರ್ವಹಿಸಲು ಬದ್ಧರಾಗಿರುತ್ತಾರೆ.

3.6. ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್ ಅಡಿಯಲ್ಲಿ ಲೋನ್ ಸೌಲಭ್ಯವನ್ನು ಭಾರತದ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ನಿಷೇಧಿತ ವಸ್ತುಗಳನ್ನು ಖರೀದಿಸಲು ಬಳಸಲು ಉದ್ದೇಶಿಸಿಲ್ಲ ಎಂದು ಸಾಲಗಾರರು ಒಪ್ಪುತ್ತಾರೆ ಅವುಗಳೆಂದರೆ ಲಾಟರಿ ಟಿಕೆಟ್‌ಗಳು, ನಿಷೇಧಿತ ಅಥವಾ ತಡೆಹಿಡಿಯಲಾದ ಮ್ಯಾಗಜಿನ್‌ಗಳು, ಸ್ವೀಪ್‌ಸ್ಟೇಕ್‌ಗಳಲ್ಲಿ ಭಾಗವಹಿಸುವಿಕೆ, ಕಾಲ್-ಬ್ಯಾಕ್ ಸೇವೆಗಳಿಗೆ ಪಾವತಿ ಇತ್ಯಾದಿ ಅಥವಾ ವಿದೇಶಿ ಕರೆನ್ಸಿಯಲ್ಲಿ ಪ್ರಾಬಲ್ಯ ಹೊಂದಿರುವ ಟ್ರಾನ್ಸಾಕ್ಷನ್‌ಗಳು.

3.7. ಕಾರ್ಯಾಚರಣೆಗಳು ಅಥವಾ ಎಲೆಕ್ಟ್ರಾನಿಕ್ ಡೇಟಾ ಕ್ಯಾಪ್ಚರ್ ಸಮಯದಲ್ಲಿ ಪಿಒಎಸ್ ಅಥವಾ ಸಿಸ್ಟಮ್ ಅಥವಾ ಟರ್ಮಿನಲ್‌ನ ಯಾವುದೇ ವೈಫಲ್ಯಗಳು ಅಥವಾ ದೋಷಗಳು ಅಥವಾ ಅಸಮರ್ಪಕ ಕಾರ್ಯನಿರ್ವಹಣೆಗೆ ಟಿವಿಎಸ್ ಕ್ರೆಡಿಟ್ ಜವಾಬ್ದಾರರಾಗಿರುವುದಿಲ್ಲ.

3.8. ಸಾಲಗಾರರಿಂದ ಈ ನಿಯಮ ಮತ್ತು ಷರತ್ತುಗಳ ಯಾವುದೇ ಉಲ್ಲಂಘನೆಯ ಸಂದರ್ಭದಲ್ಲಿ, ಅಂತಹ ಉಲ್ಲಂಘನೆಯಿಂದ ಉಂಟಾಗುವ ಯಾವುದೇ ನಷ್ಟಕ್ಕೆ ಆತ/ಆಕೆ ನೇರವಾಗಿ ಅಥವಾ ಪರೋಕ್ಷವಾಗಿ ಜವಾಬ್ದಾರರಾಗಿರುತ್ತಾರೆ ; ಮತ್ತು ಬೇಡಿಕೆಯ ಮೇಲೆ, ಟಿವಿಎಸ್ ಕ್ರೆಡಿಟ್‌ಗೆ ಪಾವತಿಸಲು ಜವಾಬ್ದಾರರಾಗಿರುತ್ತಾರೆ. ಟಿವಿಎಸ್ ಕ್ರೆಡಿಟ್‌ನಿಂದ ಪಡೆದ ಆತ/ಆಕೆಯ ಕ್ರೆಡಿಟ್ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಸಾಲಗಾರರು ಯಾವುದೇ ಬದ್ಧತೆಯಲ್ಲಿ ಡೀಫಾಲ್ಟ್ ಮಾಡಿದರೆ ಅದನ್ನು ಕೂಡ ಉಲ್ಲಂಘನೆಯಾಗಿ ಪರಿಗಣಿಸಲಾಗುವುದು.

3.9. ಟಿವಿಎಸ್ ಕ್ರೆಡಿಟ್ ಮತ್ತು ಸಾಲಗಾರನ ನಡುವೆ ಯಾವುದೇ ಭಿನ್ನಾಭಿಪ್ರಾಯ ಅಥವಾ ವಿವಾದದ ಸಂದರ್ಭದಲ್ಲಿ ಯಾವುದೇ ಘಟನೆ, ಸಂಭವಿಸುವಿಕೆ, ಸಂದರ್ಭ, ಬದಲಾವಣೆ, ಸತ್ಯ, ಮಾಹಿತಿ, ದಾಖಲೆ, ಅಧಿಕಾರ, ಪ್ರಕ್ರಿಯೆ, ಕಾಯ್ದೆ, ಲೋಪ, ಹಕ್ಕುಗಳು, ಉಲ್ಲಂಘನೆ, ಡೀಫಾಲ್ಟ್ ಅಥವಾ ಇಲ್ಲದಿದ್ದರೆ ಪೂರ್ವ-ಅನುಮೋದಿತ ಲೋನ್ ಪ್ರೋಗ್ರಾಮ್ ಸೌಲಭ್ಯದ ಬಳಕೆ ಅಥವಾ ದುರುಪಯೋಗವನ್ನು ಒಳಗೊಂಡಂತೆ, ಮೇಲಿನ ಯಾವುದಾದರೂ ವಸ್ತುವಿನ ಬಗ್ಗೆ ಟಿವಿಎಸ್ ಕ್ರೆಡಿಟ್‌ನ ಅಭಿಪ್ರಾಯವು ಅಂತಿಮವಾಗಿರುತ್ತದೆ ಮತ್ತು ಸಾಲಗಾರನ ಮೇಲೆ ಬದ್ಧವಾಗಿರುತ್ತದೆ. ಈ ವಿಷಯದಲ್ಲಿ, ಕಾಲಕಾಲಕ್ಕೆ ಟಿವಿಎಸ್ ಕ್ರೆಡಿಟ್‌ನಿಂದ ನಿಗದಿಪಡಿಸಲಾದ ಈ ನಿಯಮ ಮತ್ತು ಷರತ್ತುಗಳು ಮತ್ತು ನೀತಿಗಳಿಗೆ ಸಾಲಗಾರರು ಬದ್ಧರಾಗಿರುತ್ತಾರೆ.

3.10. ಶುಲ್ಕಗಳ ವಿವರಗಳಿಗಾಗಿ, ಸಾಲಗಾರರ ಕ್ರೆಡಿಟ್ ಮಿತಿ/ಟ್ರಾನ್ಸಾಕ್ಷನ್‌ನ ಪ್ರತಿ ಬಳಕೆಗೆ ಟಿವಿಎಸ್ ಕ್ರೆಡಿಟ್‌ನಿಂದ ಒದಗಿಸಲಾಗುವ ಸಾಲದ ಟರ್ಮ್ ಶೀಟ್ ಅನ್ನು ನೋಡಿ. ಈ ಶುಲ್ಕಗಳು ಟಿವಿಎಸ್ ಕ್ರೆಡಿಟ್‌ನ ಸ್ವಂತ ವಿವೇಚನೆಯಿಂದ ಬದಲಾವಣೆಗಳಿಗೆ ಒಳಪಟ್ಟಿರುತ್ತವೆ. ಆದಾಗ್ಯೂ, ಸಾಲಗಾರರಿಗೆ ಮೂವತ್ತು (30) ದಿನಗಳ ಮುಂಚಿತ ಸೂಚನೆಯನ್ನು ನೀಡುವ ನಿರೀಕ್ಷಿತ ಪರಿಣಾಮದೊಂದಿಗೆ ಮಾತ್ರ ಅಂತಹ ಶುಲ್ಕಗಳಲ್ಲಿನ ಬದಲಾವಣೆಗಳನ್ನು ಮಾಡಬಹುದು.

3.11. ಅಂತಹ ಸಂದರ್ಭಗಳಲ್ಲಿ, ಪಡೆದ ಸೌಲಭ್ಯದ ಯಾವುದೇ ರೀತಿಯ ದುರ್ಬಲತೆ, ಟಿವಿಎಸ್ ಕ್ರೆಡಿಟ್ ಕಾನೂನಿನ ಪ್ರಕಾರ ಯಾವುದೇ ರೀತಿಯ ಕಾನೂನು ಕ್ರಮವನ್ನು ತೆಗೆದುಕೊಳ್ಳುತ್ತದೆ.

3.12. ಕ್ರೆಡಿಟ್ ಸೌಲಭ್ಯ ಮರುಪಾವತಿಯಲ್ಲಿ ಡೀಫಾಲ್ಟ್ ಇದ್ದಲ್ಲಿ ಪ್ರಾಥಮಿಕ ಸಾಲ ಒಪ್ಪಂದಕ್ಕೆ ಯಾವುದೇ NOC ಇರುವುದಿಲ್ಲ ಎಂದು ಸಾಲಗಾರ ಒಪ್ಪಿಕೊಳ್ಳುತ್ತಾನೆ ಮತ್ತು ಅಂಗೀಕರಿಸುತ್ತಾನೆ

3.13. ಸಾಲಗಾರರಿಗೆ ಸಂಬಂಧಿಸಿದಂತೆ ಟಿವಿಎಸ್ ಕ್ರೆಡಿಟ್ ಹೊಂದಿರುವ ಸಿಕೆವೈಸಿಆರ್, ಕೆವೈಸಿ ದಾಖಲೆಗಳು, ಅಸ್ತಿತ್ವದಲ್ಲಿರುವ ಸಾಲಗಳು ಮತ್ತು/ಅಥವಾ ಮರುಪಾವತಿ ಇತಿಹಾಸ, ಸಂಬಂಧಿಸಿದ ಎಲ್ಲಾ ಮಾಹಿತಿ ಮತ್ತು ವಿವರಗಳನ್ನು ಟಿವಿಎಸ್ ಕ್ರೆಡಿಟ್ ವ್ಯಾಪಾರ ಸಂಬಂಧವನ್ನು ಹೊಂದಿರುವ ಅಥವಾ ಹೊಂದಬಹುದಾದ ಯಾವುದೇ ವ್ಯಾಪಾರ ಘಟಕಕ್ಕೆ ಮತ್ತು ಸಾಲಗಾರರಿಂದ ಒಪ್ಪಿಕೊಳ್ಳಲಾದ ಟಿವಿಎಸ್ ಕ್ರೆಡಿಟ್ ಮೂಲಕ ನೀಡಲಾಗುವ ಹೆಚ್ಚುವರಿ ವೈಶಿಷ್ಟ್ಯಗಳು/ಮೌಲ್ಯವರ್ಧಿತ ಸೇವೆಗಳನ್ನು ವಿಸ್ತರಿಸುವ ಉದ್ದೇಶಕ್ಕಾಗಿ ವಿನಿಮಯ, ಹಂಚಿಕೊಳ್ಳಲು, ಬಹಿರಂಗಪಡಿಸಲು ಅಥವಾ ಭಾಗವಾಗಲು ಸಾಲಗಾರರು ಒಪ್ಪಿಕೊಳ್ಳುತ್ತಾರೆ ಮತ್ತು ಅಧಿಕಾರ ನೀಡುತ್ತಾರೆ.

ಫೀಸ್ ಮತ್ತು ಶುಲ್ಕಗಳು

4.1. ಗ್ರಾಹಕರ ನೋಂದಾಯಿತ ಬ್ಯಾಂಕ್ ಅಕೌಂಟಿನಿಂದ ವಾರ್ಷಿಕ ಶುಲ್ಕವನ್ನು ಆಟೋ ಡೆಬಿಟ್ ಮಾಡುವ ಮೂಲಕ ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್ ಅನ್ನು ಪ್ರತಿ ವರ್ಷ ಆಟೋ ರಿನೀವ್ ಮಾಡಲಾಗುತ್ತದೆ. ಆದ್ದರಿಂದ ವಿಧಿಸಲಾಗುವ ಶುಲ್ಕವನ್ನು ರಿಫಂಡ್ ಮಾಡಲಾಗುವುದಿಲ್ಲ.

4.2. ವಾರ್ಷಿಕ ಮಾನ್ಯತಾ ಅವಧಿಯಲ್ಲಿ ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್ ಅಡಿಯಲ್ಲಿ ಯಾವುದೇ ಸಾಲ ಪಡೆದಿರದ ಗ್ರಾಹಕರಿಗೆ ಮಾತ್ರ ಈ ವಾರ್ಷಿಕ ಶುಲ್ಕವನ್ನು ಡೆಬಿಟ್ ಮಾಡಲಾಗುತ್ತದೆ.

4.3. ಅನ್ವಯವಾಗುವ ಹೆಚ್ಚುವರಿ ಶುಲ್ಕಗಳನ್ನು ಪಾವತಿಸುವ ಮೂಲಕ ಗ್ರಾಹಕರು ಮೌಲ್ಯವರ್ಧಿತ ಸೇವೆಗಳು/ಫೀಚರ್‌ಗಳನ್ನು ಕೂಡ ಆಯ್ಕೆ ಮಾಡಬಹುದು.

4.4. ಗ್ರಾಹಕ ಸಹಾಯ ತಂಡಕ್ಕೆ ಲಿಖಿತ ಕೋರಿಕೆಯನ್ನು ಸಲ್ಲಿಸುವ ಮೂಲಕ ನವೀಕರಣವನ್ನು ರದ್ದುಗೊಳಿಸುವ ಆಯ್ಕೆಯನ್ನು ಗ್ರಾಹಕರು ಹೊಂದಿದ್ದಾರೆ. ರದ್ದುಪಡಿಸಿದ ನಂತರ ಗ್ರಾಹಕರು ಈ ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್ ಅಡಿಯಲ್ಲಿ ಯಾವುದೇ ಸೌಲಭ್ಯವನ್ನು ಬಳಸಲು ಅರ್ಹರಾಗಿರುವುದಿಲ್ಲ. ಅಂತಹ ರದ್ದತಿಗಳು ಅಂತಹ ರದ್ದತಿ ಕೋರಿಕೆಯನ್ನು ಸಲ್ಲಿಸುವ ಮೊದಲು ವಿಧಿಸಲಾದ ವಾರ್ಷಿಕ ಶುಲ್ಕದ ಮೇಲಿನ ಮರುಪಾವತಿಯನ್ನು ಕ್ಲೈಮ್ ಮಾಡಲು ಗ್ರಾಹಕರಿಗೆ ಅರ್ಹತೆಯನ್ನು ನೀಡುವುದಿಲ್ಲ.

ವೇರಿಯೆಂಟ್ ಸ್ಟ್ಯಾಂಡರ್ಡ್* ಪ್ರೀಮಿಯಂ**
ನೋಂದಣಿ ಶುಲ್ಕ (ಒಂದು ಬಾರಿ) ₹ 499 /- ₹ 699 /-
ವಾರ್ಷಿಕ ಶುಲ್ಕ 117 /- (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)
ಈ ಪ್ರೋಗ್ರಾಮ್ ಅಡಿಯಲ್ಲಿ ಮುಂಚಿತ-ಅನುಮೋದಿತ ಲೋನ್ ಸೌಲಭ್ಯವನ್ನು ಮಾನ್ಯತಾ ಅವಧಿ ಮುಗಿಯುವ ತಿಂಗಳ ಮೇಲೆ ಸ್ವಯಂಚಾಲಿತವಾಗಿ ನವೀಕರಿಸಲಾಗುತ್ತದೆ, ಇದನ್ನು ಮುಂಭಾಗದಲ್ಲಿ ನಮೂದಿಸಲಾಗಿದೆ. ಉದಾಹರಣೆಗೆ: ಕಾರ್ಡ್ ಮುಂಭಾಗದ ಮೇಲೆ ಮಾನ್ಯತಾ ಅವಧಿ ಮುಗಿಯುವ ತಿಂಗಳು 12/2022 ಆಗಿದ್ದರೆ, ನವೀಕರಣ ಶುಲ್ಕವನ್ನು ಡಿಸೆಂಬರ್ 2022 ತಿಂಗಳಲ್ಲಿ ಡೆಬಿಟ್ ಮಾಡಲಾಗುತ್ತದೆ.
ತ್ವರಿತ ಬ್ಯಾಂಕ್ ಟ್ರಾನ್ಸ್‌ಫರ್ ವಾರ್ಷಿಕ ಶುಲ್ಕ 249 /- (ಅನ್ವಯವಾಗುವ ತೆರಿಗೆಗಳನ್ನು ಒಳಗೊಂಡು)
ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮಿನ ಮಾನ್ಯತಾ ಅವಧಿಯೊಳಗೆ ಮೊದಲ ಬಳಕೆಯ ಸಮಯದಲ್ಲಿ ತ್ವರಿತ ಬ್ಯಾಂಕ್ ಟ್ರಾನ್ಸ್‌ಫರ್ ವಾರ್ಷಿಕ ಶುಲ್ಕವನ್ನು ಡೆಬಿಟ್ ಮಾಡಲಾಗುತ್ತದೆ: ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್ ವಾರ್ಷಿಕ ಮಾನ್ಯತಾ ಅವಧಿಯು 01/2022 ರಿಂದ 12/2022 ನಡುವೆ ಇದ್ದರೆ ಮತ್ತು ಈ ಅವಧಿಯಲ್ಲಿ ಮೊದಲ ಬಳಕೆಯು ಯಾವುದೇ ಸಮಯದಲ್ಲಿ ಇದ್ದರೆ, ಸಾಲದ ವಿತರಣೆಯಿಂದ ತ್ವರಿತ ಬ್ಯಾಂಕ್ ಟ್ರಾನ್ಸ್‌ಫರ್ ವಾರ್ಷಿಕ ಶುಲ್ಕವನ್ನು ಡೆಬಿಟ್ ಮಾಡಲಾಗುತ್ತದೆ.
ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್ ಅಡಿಯಲ್ಲಿ ಬುಕ್ ಮಾಡಲಾದ ಸಾಲಗಳಿಗೆ ವಾರ್ಷಿಕ ಬಡ್ಡಿ ದರ % (ವಾರ್ಷಿಕ) ಬಡ್ಡಿ ದರದ ಪಾಲಿಸಿಯ ಪ್ರಕಾರ, ವಾರ್ಷಿಕ ಆಧಾರದ ಮೇಲೆ ಗ್ರಾಹಕರಿಗೆ 24% -35% ನಡುವೆ ಪರಿಣಾಮಕಾರಿ ಆಂತರಿಕ ಆದಾಯ ದರವನ್ನು (IRR) ವಿಧಿಸಲಾಗುತ್ತದೆ.
ಫಿಸಿಕಲ್ ಕಾರ್ಡ್ 100/-
ಇನ್ಸ್ಟಾಕಾರ್ಡ್ ಹೋಮ್‌ಪೇಜಿಗೆ ಲಾಗಿನ್ ಮಾಡಿದ ನಂತರ ಗ್ರಾಹಕರು ಟಿವಿಎಸ್ ಕ್ರೆಡಿಟ್ ಸಾಥಿ ಆ್ಯಪ್‌ ಮೂಲಕ ನಿರ್ದಿಷ್ಟ ಕೋರಿಕೆಯನ್ನು ಮಾಡಬೇಕು. ಫಿಸಿಕಲ್ ಕಾರ್ಡನ್ನು ನೇರವಾಗಿ ಗ್ರಾಹಕರ ನೋಂದಾಯಿತ ವಿಳಾಸಕ್ಕೆ ಮಾತ್ರ ರವಾನಿಸಲಾಗುತ್ತದೆ.

*ಇನ್ಸ್ಟಾಕಾರ್ಡ್ ಪ್ರೋಗ್ರಾಮ್‌ನ ಸ್ಟ್ಯಾಂಡರ್ಡ್ ವೇರಿಯೆಂಟ್, ಗ್ರಾಹಕರಿಗೆ ಆಫ್‌ಲೈನ್ ಮರ್ಚೆಂಟ್ ನೆಟ್ವರ್ಕ್ ಮತ್ತು ತ್ವರಿತ ಬ್ಯಾಂಕ್ ಟ್ರಾನ್ಸ್‌ಫರ್ ಸೌಲಭ್ಯದೊಂದಿಗೆ ಮಾತ್ರ ಟಿವಿಎಸ್ ಕ್ರೆಡಿಟ್‌ನೊಂದಿಗೆ ಮುಂಚಿತ-ಅನುಮೋದಿತ ಲೋನ್ ಸೌಲಭ್ಯವನ್ನು ಬಳಸಲು ಅನುಮತಿ ನೀಡುತ್ತದೆ

**ಇನ್ಸ್ಟಾಕಾರ್ಡ್ ಪ್ರೋಗ್ರಾಮ್‌ನ ಪ್ರೀಮಿಯಂ ವೇರಿಯೆಂಟ್ ತಕ್ಷಣದ ಬ್ಯಾಂಕ್ ಟ್ರಾನ್ಸ್‌ಫರ್ ಸೌಲಭ್ಯದೊಂದಿಗೆ ಆಫ್‌ಲೈನ್ ಮತ್ತು ಆನ್‌ಲೈನ್ ವ್ಯಾಪಾರಿ ನೆಟ್ವರ್ಕ್‌ನೊಂದಿಗೆ ಟಿವಿಎಸ್ ಕ್ರೆಡಿಟ್‌ನೊಂದಿಗೆ ಮುಂಚಿತ-ಅನುಮೋದಿತ ಲೋನ್ ಸೌಲಭ್ಯವನ್ನು ಬಳಸಲು ಗ್ರಾಹಕರಿಗೆ ಅನುಮತಿ ನೀಡುತ್ತದೆ

5.1. ಮೇಲಿನವುಗಳಿಗೆ ಯಾವುದೇ ಪೂರ್ವಾಗ್ರಹವಿಲ್ಲದೆ, ಟಿವಿಎಸ್ ಕ್ರೆಡಿಟ್ ನೇರವಾಗಿ ಅಥವಾ ಪರೋಕ್ಷವಾಗಿ ಉಂಟಾಗುವ ಯಾವುದೇ ನಷ್ಟ ಅಥವಾ ಹಾನಿಗೆ ಸಂಬಂಧಿಸಿದಂತೆ ಸಾಲಗಾರರ ಮೇಲಿನ ಯಾವುದೇ ಹೊಣೆಗಾರಿಕೆಯ ಅಡಿಯಲ್ಲಿ ಬರುವುದಿಲ್ಲ:

5.1.1. ವಿತರಣೆಯಲ್ಲಿ ವಿಳಂಬ ಅಥವಾ ವಿತರಣೆ ಮಾಡದಿರುವುದು, ವ್ಯಾಪಾರಿ ಸಂಸ್ಥೆ ಮತ್ತು ಸಾಲಗಾರ ಮತ್ತು/ಅಥವಾ ಯಾವುದೇ ಥರ್ಡ್ ಪಾರ್ಟಿ ನಡುವಿನ ಸೇವೆಗಳಲ್ಲಿನ ಕೊರತೆ ಸೇರಿದಂತೆ ಪೂರೈಸಲಾದ ಯಾವುದೇ ಸರಕು ಅಥವಾ ಸೇವೆಗಳಲ್ಲಿನ ಯಾವುದೇ ದೋಷ.

5.1.2. ಟಿವಿಎಸ್ ಕ್ರೆಡಿಟ್‌ಗೆ ಬಹಿರಂಗಪಡಿಸಲಾದ ಯಾವುದೇ ತಪ್ಪು ಹೇಳಿಕೆ, ತಪ್ಪು ನಿರೂಪಣೆ, ದೋಷ ಅಥವಾ ಲೋಪ. ಟಿವಿಎಸ್ ಕ್ರೆಡಿಟ್ ಅಥವಾ ಟಿವಿಎಸ್ ಕ್ರೆಡಿಟ್ ಪರವಾಗಿ ಕಾರ್ಯನಿರ್ವಹಿಸುವ ಯಾವುದೇ ವ್ಯಕ್ತಿಯಿಂದ ಸಾಲಗಾರರಿಂದ ಬಾಕಿಯಿರುವ ಬಾಕಿಗಳ ಇತ್ಯರ್ಥಕ್ಕಾಗಿ ಬೇಡಿಕೆ ಅಥವಾ ಕ್ಲೈಮ್ ಮಾಡಿದ ಸಂದರ್ಭದಲ್ಲಿ, ಸಾಲಗಾರನು ಅಂತಹ ಬೇಡಿಕೆ ಅಥವಾ ಕ್ಲೈಮ್ ಮಾನನಷ್ಟ ಅಥವಾ ಯಾವುದೇ ರೀತಿಯಲ್ಲಿ ಸಾಲಗಾರನ ಪಾತ್ರಕ್ಕೆ ಪೂರ್ವಾಗ್ರಹ ಸೃಷ್ಟಿಸುವ ಅಥವಾ ಹಾಗೆ ಪ್ರತಿಬಿಂಬಿಸುವ ಕ್ರಿಯೆಯಾಗಿರುವುದಿಲ್ಲ ಎಂದು ಒಪ್ಪಿಕೊಳ್ಳುತ್ತಾನೆ ಮತ್ತು ದೃಢೀಕರಿಸುತ್ತಾನೆ.

5.1.3. ಸಾಲಗಾರ ಆತ/ಆಕೆ ನಿಗದಿತ ದಿನಾಂಕದಂದು ಹಣವನ್ನು ಪಾವತಿಸಲು ವಿಫಲವಾದಲ್ಲಿ ಅಥವಾ ಅದು ಬಾಕಿ ಇರುವ ದಿನಾಂಕದ ಮೊದಲು ಬಾಕಿ ಎಂದು ಘೋಷಿಸಬಹುದು ಅಥವಾ ಸಾಲಗಾರನು ಆನಂದಿಸುತ್ತಿರುವ ಪ್ರಸ್ತುತ ನಿಯಮಗಳ ಅಡಿಯಲ್ಲಿ ಯಾವುದೇ ಡೀಫಾಲ್ಟ್ ಮಾಡಿದರೆ, ಅದರ ಅಡಿಯಲ್ಲಿ ಸಾಲಗಾರನು ಹಣಕಾಸು / ಕಾರ್ಪೊರೇಟ್ / ಇತರ ಸೌಲಭ್ಯವನ್ನು ಅನುಭವಿಸುತ್ತಿದ್ದರೆ, TVS ಕ್ರೆಡಿಟ್ ತನ್ನ ಸ್ವಂತ ವಿವೇಚನೆಯಿಂದ, ಪೂರ್ವಾಗ್ರಹವಿಲ್ಲದೆ, ಈ ನಿಯಮಗಳು ಮತ್ತು ಷರತ್ತುಗಳಲ್ಲಿ ನಿಗದಿಪಡಿಸಿದಂತೆ ತನ್ನ ಎಲ್ಲಾ ಅಥವಾ ಯಾವುದೇ ಹಕ್ಕುಗಳನ್ನು ಚಲಾಯಿಸುತ್ತದೆ ಎಂದು ಸಾಲಗಾರನು ಸ್ಪಷ್ಟವಾಗಿ ಒಪ್ಪಿಕೊಳ್ಳುತ್ತಾನೆ. TVS ಕ್ರೆಡಿಟ್ ನೀಡಿದ ಪಾವತಿಗಳಿಗೆ ಸಂಬಂಧಿಸಿದ ಯಾವುದೇ ಸೂಚನೆಯನ್ನು ಸಾಲಗಾರರು TVS ಕ್ರೆಡಿಟ್‌ಗೆ ಕೊನೆಯದಾಗಿ ಲಿಖಿತವಾಗಿ ಸೂಚಿಸಿದ ಸಾಲಗಾರರ ಮೇಲಿಂಗ್ ವಿಳಾಸಕ್ಕೆ ಕಳುಹಿಸಿದ ಏಳು (7) ದಿನಗಳ ಒಳಗೆ ಸಾಲಗಾರರು ಪಡೆದಿದ್ದಾರೆ ಎಂದು ಪರಿಗಣಿಸಲಾಗುತ್ತದೆ. ಯಾವುದೇ ಸೂಚನೆಯನ್ನು ಫ್ಯಾಕ್ಸ್ ಅಥವಾ ಸಂವಹನದ ಮೂಲಕ ಕೂಡ ಕಳುಹಿಸಬಹುದು ಮತ್ತು ಪೋಸ್ಟ್ ಅಥವಾ ಫ್ಯಾಕ್ಸ್ ಮೂಲಕ ಲಿಖಿತವಾಗಿ ಧೃಢೀಕರಿಸಬಹುದು. ಸೂಚನೆಗಳನ್ನು ಸ್ವೀಕರಿಸುವಲ್ಲಿ ವಿಳಂಬಗಳಿಗೆ TVS ಕ್ರೆಡಿಟ್ ಜವಾಬ್ದಾರಿ ಹೊಂದಿರುವುದಿಲ್ಲ.

5.1.3.Any ಈ ಸೌಲಭ್ಯದಿಂದ ಹಣದ ಯಾವುದೇ ದುರುಪಯೋಗ/ದುರ್ಬಳಕೆಗೆ, ಟಿವಿಎಸ್ ಕ್ರೆಡಿಟ್ ಜವಾಬ್ದಾರಿ ಹೊಂದಿರುವುದಿಲ್ಲ.

ಗ್ರಾಹಕರ ಕುಂದುಕೊರತೆ ಪರಿಹಾರ

6.1. ಸಾಲಗಾರರು ಕಾರ್ಯಗತಗೊಳಿಸಿದ ಮಾಸ್ಟರ್ ಲೋನ್ ಒಪ್ಪಂದದಲ್ಲಿ ನಿರ್ದಿಷ್ಟಪಡಿಸಿದಂತೆ ಗ್ರಾಹಕರ ಕುಂದುಕೊರತೆಗಳನ್ನು ಪರಿಹರಿಸಬೇಕು.

6.2. ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್ ಸೌಲಭ್ಯಕ್ಕೆ ಸಂಬಂಧಿಸಿದ ಯಾವುದೇ ವಿವಾದಗಳನ್ನು ಅಂತಹ ಸಂದರ್ಭದಿಂದ ಏಳು (7) ದಿನಗಳ ಒಳಗೆ ಸಾಲಗಾರರು ಗ್ರಾಹಕ ಸಹಾಯವಾಣಿ ಕೇಂದ್ರದೊಂದಿಗೆ ಸಲ್ಲಿಸಬೇಕು. ಅಂತಹ ಸಂಭವದಿಂದ ಏಳು (7) ದಿನಗಳ ನಂತರ ಸಾಲಗಾರರು ಸಲ್ಲಿಸಿದ ಯಾವುದೇ ವಿವಾದವನ್ನು ಟಿವಿಎಸ್ ಕ್ರೆಡಿಟ್‌ನಿಂದ ಸ್ವೀಕರಿಸಲಾಗುವುದಿಲ್ಲ ಮತ್ತು ಟಿವಿಎಸ್ ಕ್ರೆಡಿಟ್ ಯಾವುದೇ ರೀತಿಯಲ್ಲಿ ಅದಕ್ಕೆ ಹೊಣೆಗಾರರಾಗಿರುವುದಿಲ್ಲ.

6.3. ಒಟಿಪಿ ಆಧಾರಿತ ದೃಢೀಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಗ್ರಾಹಕರ ಕುಂದುಕೊರತೆಯು ಸಾಲಗಾರರು ಮಾಡಿದ ಹೊಣೆಗಾರಿಕೆಯ ನಿರ್ಣಾಯಕ ಸಾಕ್ಷ್ಯವಾಗಿರುತ್ತದೆ. ಪಾವತಿಗಾಗಿ ಬ್ಯಾಂಕ್/ಪಾಲುದಾರರು ಪಡೆದ ಯಾವುದೇ ಶುಲ್ಕದ ಸ್ಲಿಪ್ ಅಥವಾ ಇತರ ಪಾವತಿ ಕೋರಿಕೆಯು ಅಂತಹ ಶುಲ್ಕದ ಸ್ಲಿಪ್ ಅಥವಾ ಇತರ ಕೋರಿಕೆಯ ಮೇಲೆ ರೆಕಾರ್ಡ್ ಮಾಡಲಾದ ಶುಲ್ಕವನ್ನು ಸಾಲಗಾರರು ಸರಿಯಾಗಿ ಭರಿಸಿದ ನಿರ್ಣಾಯಕ ಪುರಾವೆಯಾಗಿರುತ್ತದೆ, ಕ್ರೆಡೆನ್ಶಿಯಲ್‌ಗಳನ್ನು ವಂಚನೆಯಿಂದ ದುರುಪಯೋಗ ಮಾಡದ ಹೊರತು, ಪುರಾವೆಯ ಹೊರೆಯು ಸಾಲಗಾರರ ಮೇಲೆ ಇರುತ್ತದೆ. ಈ ಷರತ್ತಿನಲ್ಲಿ ಉಲ್ಲೇಖಿಸಲಾದ ಇತರ ಪಾವತಿ ಕೋರಿಕೆಯು ಶುಲ್ಕವಾಗಿ ದಾಖಲಿಸಲ್ಪಡದ ಕ್ರೆಡಿಟ್ ಸೌಲಭ್ಯವನ್ನು ಬಳಸಿಕೊಂಡು ವ್ಯಾಪಾರಿ ಸಂಸ್ಥೆಯಲ್ಲಿ ಸಾಲಗಾರನು ಮಾಡಿದ ಅನುಮತಿ ಇರುವ ವೆಚ್ಚಗಳಿಗೆ ಸಂಬಂಧಿಸಿದ ಯಾವುದೇ ಮತ್ತು ಎಲ್ಲಾ ಪಾವತಿಗಳನ್ನು ಒಳಗೊಂಡಿರುತ್ತದೆ.

6.4. ಇದಕ್ಕೆ ಸಂಬಂಧಿಸಿದ ಎಲ್ಲಾ ವಿವಾದಗಳು ಚೆನ್ನೈನ ಸಮರ್ಥ ನ್ಯಾಯಾಲಯಗಳ ವಿಶೇಷ ನ್ಯಾಯವ್ಯಾಪ್ತಿಗೆ ಒಳಪಟ್ಟಿರುತ್ತವೆ ಮತ್ತು ಅನ್ವಯವಾಗುವ ಕಾನೂನುಗಳು ಭಾರತೀಯ ಕಾನೂನುಗಳಾಗಿರುತ್ತವೆ.

ಡಿಸ್‌ಕ್ಲೋಜರ್‌ಗಳು

7.1. ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್ ಅಡಿಯಲ್ಲಿನ ಮಾಹಿತಿಯನ್ನು ಕಾರ್ಪೊರೇಟ್ ಸೌಲಭ್ಯಗಳನ್ನು ಒದಗಿಸುವ ಇತರ ಬ್ಯಾಂಕುಗಳು ಮತ್ತು ಹಣಕಾಸು ಘಟಕಗಳಲ್ಲಿ ವಿನಿಮಯ ಮಾಡಬಹುದು ಎಂದು ಸಾಲಗಾರರು ಒಪ್ಪಿಕೊಳ್ಳುತ್ತಾರೆ ಮತ್ತು ಸಮ್ಮತಿಸುತ್ತಾರೆ. ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್‌ಗಾಗಿ ಅಪ್ಲಿಕೇಶನ್ ಸ್ವೀಕರಿಸುವುದು ವ್ಯಕ್ತಿಯ ಕ್ರೆಡಿಟ್ ಅರ್ಹತೆಯ ಯಾವುದೇ ಪ್ರತಿಕೂಲ ವರದಿಗಳ ಆಧಾರದ ಮೇಲೆ ಇರುತ್ತದೆ.

7.2. ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್ ಸಾಲ ಸೌಲಭ್ಯದ ಬಳಕೆಯಲ್ಲಿನ ಯಾವುದೇ ಅಕ್ರಮಗಳ ಕುರಿತು ಟಿವಿಎಸ್ ಕ್ರೆಡಿಟ್ ಇತರ ಬ್ಯಾಂಕ್‌ಗಳು ಅಥವಾ ಹಣಕಾಸು ಘಟಕಗಳಿಗೆ ವರದಿ ಮಾಡಬಹುದು. ಪ್ರತಿಕೂಲ ವರದಿಗಳ ಸ್ವೀಕೃತಿಯ ಆಧಾರದ ಮೇಲೆ (ಸಾಲಗಾರ ಅಥವಾ ಆತ/ಆಕೆಯ ಕುಟುಂಬದ ಸದಸ್ಯರ ಕ್ರೆಡಿಟ್-ಅರ್ಹತೆಗೆ ಸಂಬಂಧಿಸಿದಂತೆ), ಟಿವಿಎಸ್ ಕ್ರೆಡಿಟ್, ಬರವಣಿಗೆಯಲ್ಲಿ 15 ದಿನಗಳ ಮುಂಚಿತ ಸೂಚನೆಯ ನಂತರ, ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್ ಸೌಲಭ್ಯವನ್ನು ರದ್ದುಗೊಳಿಸಬಹುದು, ಇಲ್ಲಿ ಮುಂಚಿತ-ಅನುಮೋದಿತ ಲೋನ್‌ಗಳ ಮೇಲಿನ ಸಂಪೂರ್ಣ ಬಾಕಿ ಉಳಿಕೆ ಮತ್ತು ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್ ಸೌಲಭ್ಯದ ಬಳಕೆಯ ಮೇಲೆ ಉಂಟಾದ ಯಾವುದೇ ಶುಲ್ಕಗಳನ್ನು ಆಧರಿಸಿ, ಇನ್ನೂ ಸಾಲಗಾರರಿಗೆ ಸಾಲವಾಗಿ ಬುಕ್ ಮಾಡದಿದ್ದರೂ, ಸಾಲಗಾರರು ತಕ್ಷಣವೇ ಪಾವತಿಸಬೇಕಾಗುತ್ತದೆ. ಸಾಲಗಾರನು ಮೇಲೆ ಹೇಳಿದ ಷರತ್ತುಗಳಿಗೆ ಸಂಬಂಧಿಸಿದಂತೆ ಯಾವುದೇ ಸಂದರ್ಭದಲ್ಲಿ ವಿವಾದವನ್ನು ಹೊಂದಿರುವುದಿಲ್ಲ.

7.3. ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್ ಅಡಿಯಲ್ಲಿ ಸಾಲಗಾರರು ಮಾಡಿದ ಯಾವುದೇ ಟ್ರಾನ್ಸಾಕ್ಷನ್‌ಗಳಿಗೆ ಸಂಬಂಧಿಸಿದ ಯಾವುದೇ ಮಾಸಿಕ ಸ್ಟೇಟ್ಮೆಂಟನ್ನು ಟಿವಿಎಸ್ ಕ್ರೆಡಿಟ್ ಕಳುಹಿಸುವುದಿಲ್ಲ. ಮುಂಚಿತ-ಅನುಮೋದಿತ ಲೋನ್ ಅಪ್ಲಿಕೇಶನ್ ಫಾರ್ಮ್‌ನಲ್ಲಿ ನೀಡಲಾದ ಎಲ್ಲಾ ವಿವರಗಳು ನಿಜವಾಗಿರುತ್ತದೆ, ಸರಿಯಾಗಿರುತ್ತದೆ ಮತ್ತು ನೀಡಲಾದ ವಿವರಗಳಲ್ಲಿ ಯಾವುದೇ ಬದಲಾವಣೆಗಳಿದ್ದರೆ, ಆತ/ಆಕೆ ಸಮಂಜಸವಾದ ಅವಧಿಯೊಳಗೆ ಟಿವಿಎಸ್ ಕ್ರೆಡಿಟ್‌ಗೆ ತಿಳಿಸುತ್ತಾರೆ. ತಪ್ಪಾದ ವಿವರಗಳ ಸಂದರ್ಭದಲ್ಲಿ ಪರಿಣಾಮವಾಗಿ ಸಾಲಗಾರರಿಗೆ ಯಾವುದೇ ನಷ್ಟ ಅಥವಾ ಹೊಣೆಗಾರಿಕೆ ಉಂಟಾದರೆ ಟಿವಿಎಸ್ ಕ್ರೆಡಿಟ್ ಎಲ್ಲಾ ಹೊಣೆಗಾರಿಕೆಯನ್ನು ನಿರಾಕರಿಸುತ್ತದೆ.

ಸಮಾಪ್ತಿ ಮತ್ತು ಸಮಾಪ್ತಿಯ ಪರಿಣಾಮಗಳು

8.1. ತನ್ನ ಸ್ವಂತ ವಿವೇಚನೆಯಿಂದ ಟಿವಿಎಸ್ ಕ್ರೆಡಿಟ್ ಪೂರ್ವ-ಅನುಮೋದಿತ ಲೋನ್ ಪ್ರೋಗ್ರಾಮ್‌ನಿಂದ ಸಾಲಗಾರರ ನೋಂದಣಿಯನ್ನು ನಿಲ್ಲಿಸಬಹುದು:

8.1.1. ಸಾಲಗಾರರನ್ನು ದಿವಾಳಿ ಎಂದು ಘೋಷಿಸಲಾದ ಸಂದರ್ಭದಲ್ಲಿ ಅಥವಾ ಸಾಲಗಾರರ ಮರಣದ ನಂತರ.

8.1.2. ಸಾಲಗಾರರು ಯಾವುದೇ ನಿಯಮ ಮತ್ತು ಷರತ್ತುಗಳನ್ನು ಉಲ್ಲಂಘಿಸುವ ಸಂದರ್ಭದಲ್ಲಿ.

8.1.3. ಭಾರತದಲ್ಲಿನ ಯಾವುದೇ ನಿಯಂತ್ರಕ ಅಥವಾ ಶಾಸನಬದ್ಧ ಪ್ರಾಧಿಕಾರ ಅಥವಾ ಯಾವುದೇ ತನಿಖಾ ಸಂಸ್ಥೆಯ ಆದೇಶ ಅಥವಾ ಸಮರ್ಥ ನ್ಯಾಯಾಲಯದ ಆದೇಶದ ಮೂಲಕ ಸಾಲಗಾರನ ಮೇಲೆ ಯಾವುದೇ ನಿರ್ಬಂಧವನ್ನು ವಿಧಿಸಿದ ಸಂದರ್ಭದಲ್ಲಿ.

8.1.4. ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್ ಅನ್ವಯವಾಗುವ ಕಾನೂನುಗಳು, ನಿಯಮಗಳು, ಮಾರ್ಗಸೂಚಿಗಳು ಅಥವಾ ಸರ್ಕ್ಯುಲರ್ ಅಡಿಯಲ್ಲಿ ಕಾನೂನುಬಾಹಿರವಾಗಿದ್ದರೆ ; ಅಥವಾ

8.1.5. ಮುಂಚಿತ -ಅನುಮೋದಿತ ಲೋನ್ ಪ್ರೋಗ್ರಾಮ್ ಅನ್ನು ನಿಲ್ಲಿಸಿದ ಸಂದರ್ಭದಲ್ಲಿ.

8.2. ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್ ಅಡಿಯಲ್ಲಿ ಮುಕ್ತಾಯದ ಪರಿಣಾಮಗಳಿಗೆ ಮಾಸ್ಟರ್ ಲೋನ್ ಒಪ್ಪಂದದ ಮುಕ್ತಾಯದ ಪರಿಣಾಮಗಳಿಗೆ ಸಂಬಂಧಿಸಿದ ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ.

ಗ್ರಾಹಕ ಬೆಂಬಲ

9.1. ಯಾವುದೇ ಪ್ರಶ್ನೆಗಳಿಗೆ, ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಿ  https://www.tvscredit.com/get-in-touch  ಮತ್ತು ನಿಮ್ಮ ವಿಚಾರಣೆಯನ್ನು ಪರಿಹರಿಸಲು ನಿರ್ದೇಶನಗಳನ್ನು ಅನುಸರಿಸಿ.

9.2. ಇನ್ಸ್ಟಾಕಾರ್ಡ್ ಪ್ರೋಗ್ರಾಮ್ ಗ್ರಾಹಕರು ನಮ್ಮ ಗ್ರಾಹಕ ಸಹಾಯವಾಣಿ ಕೇಂದ್ರವನ್ನು 040-66-123456 ರಲ್ಲಿ ಸಂಪರ್ಕಿಸಬಹುದು

ನಿಯಮ ಮತ್ತು ಷರತ್ತುಗಳನ್ನು ಬದಲಾಯಿಸುವುದು

10.1. ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್ ಇಲ್ಲಿ ನಮೂದಿಸಿದ ನಿಯಮ ಮತ್ತು ಷರತ್ತುಗಳಿಗೆ ಮತ್ತು ಕಾಲಕಾಲಕ್ಕೆ ಟಿವಿಎಸ್ ಕ್ರೆಡಿಟ್‌ನಿಂದ ನಿಗದಿಪಡಿಸಲಾದ ಯಾವುದೇ ಹೆಚ್ಚುವರಿ ಷರತ್ತುಗಳಿಗೆ ಒಳಪಟ್ಟಿರುತ್ತದೆ.

10.2.The ಸಾಲಗಾರರು ಈ ನಿಯಮಗಳು ಮತ್ತು ಷರತ್ತುಗಳನ್ನು ಪರಿಶೀಲಿಸಲು ಜವಾಬ್ದಾರರಾಗಿರುತ್ತಾರೆ, ಅದರಲ್ಲಿನ ತಿದ್ದುಪಡಿಗಳನ್ನು ಒಳಗೊಂಡಂತೆ ಮತ್ತು ಮುಂಚಿತ-ಅನುಮೋದಿತ ಲೋನ್ ಪ್ರೋಗ್ರಾಮ್ ಸೌಲಭ್ಯಗಳನ್ನು ಬಳಸುವುದನ್ನು ಮುಂದುವರಿಸುವ ಮೂಲಕ ತಿದ್ದುಪಡಿ ಮಾಡಿದ ನಿಯಮಗಳು ಮತ್ತು ಷರತ್ತುಗಳನ್ನು ಅಂಗೀಕರಿಸಿದ್ದಾರೆ ಎಂದು ಪರಿಗಣಿಸಲಾಗುತ್ತದೆ.

10.3. ಸಾಲಗಾರನು ಈ ಮೂಲಕ ಸಾಲದ ಅಪ್ಲಿಕೇಶನ್ ಫಾರ್ಮಿನಲ್ಲಿನ ಎಲ್ಲಾ ನಿಯಮಗಳು ಮತ್ತು ಷರತ್ತುಗಳನ್ನು ಟಿವಿಎಸ್ ಕ್ರೆಡಿಟ್‌ನಿಂದ ಒದಗಿಸಲಾದ ರೂಪದಲ್ಲಿ ಮತ್ತು ಕಾಲಕಾಲಕ್ಕೆ ಒಪ್ಪಿಕೊಳ್ಳುತ್ತಾನೆ.

ಇತರ ಪ್ರಾಡಕ್ಟ್‌ಗಳು

Two-Wheeler Loan
ಟೂ ವೀಲರ್ ಲೋನ್‌ಗಳು

ನಮ್ಮ ತಡೆರಹಿತ ಟೂ ವೀಲರ್ ಫೈನಾನ್ಸಿಂಗ್‌ನೊಂದಿಗೆ ಸ್ವಾತಂತ್ರ್ಯದತ್ತ ವಿಹಾರ ಮಾಡಿ

ಇನ್ನಷ್ಟು ಓದಿ arrow
Used Car Loan
ಬಳಸಿದ ಕಾರ್ ಲೋನ್‌ಗಳು

ತ್ವರಿತ ಬಳಸಿದ ಕಾರ್ ಫೈನಾನ್ಸಿಂಗ್‌ನೊಂದಿಗೆ ಸ್ಟೈಲ್‌ನಲ್ಲಿ ರಸ್ತೆಗಿಳಿಯಿರಿ.

ಇನ್ನಷ್ಟು ಓದಿ arrow
Consumer Durable Loan
ಗೃಹೋಪಯೋಗಿ ವಸ್ತುಗಳ ಲೋನ್‌ಗಳು

ನಮ್ಮ ಫ್ಲೆಕ್ಸಿಬಲ್ ಗೃಹೋಪಯೋಗಿ ವಸ್ತುಗಳ ಲೋನ್‌ಗಳೊಂದಿಗೆ ಸಾಧ್ಯತೆಗಳ ಪ್ರಪಂಚವನ್ನು ಅನ್ಲಾಕ್ ಮಾಡಿ.

ಇನ್ನಷ್ಟು ಓದಿ arrow
Mobile Loan
ಮೊಬೈಲ್ ಲೋನ್‌ಗಳು

ಇತ್ತೀಚಿನ ಸ್ಮಾರ್ಟ್‌ಫೋನಿಗೆ ಅಪ್ಗ್ರೇಡ್ ಮಾಡಿ ಮತ್ತು ನಿಮ್ಮ ಜೀವನವನ್ನು ಸರಳಗೊಳಿಸಿ.

ಇನ್ನಷ್ಟು ಓದಿ arrow
Online Personal Loan
ಆನ್ಲೈನ್ ಪರ್ಸನಲ್ ಲೋನ್‌ಗಳು

ನಮ್ಮ ತ್ವರಿತ ಮತ್ತು ಸುಲಭವಾದ ಪರ್ಸನಲ್ ಲೋನ್‌ಗಳೊಂದಿಗೆ ನಿಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸಿಕೊಳ್ಳಿ.

ಇನ್ನಷ್ಟು ಓದಿ arrow
Gold Loan
ಗೋಲ್ಡ್ ಲೋನ್‌ಗಳು

ನಮ್ಮೊಂದಿಗೆ ನಿಮ್ಮ ಗೋಲ್ಡ್ ಲೋನ್ ಪ್ರಯಾಣವನ್ನು ಪ್ರಾರಂಭಿಸಿ.

ಇನ್ನಷ್ಟು ಓದಿ arrow
Used Commercial Vehicle Loan
ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್‌ಗಳು

ಬಳಸಿದ ಕಮರ್ಷಿಯಲ್ ವೆಹಿಕಲ್ ಫೈನಾನ್ಸಿಂಗ್‌ನೊಂದಿಗೆ ನಿಮ್ಮ ಬಿಸಿನೆಸ್ ಬೆಳವಣಿಗೆಗೆ ಇನ್ನಷ್ಟು ಉತ್ಸಾಹ ತುಂಬಿ.

ಇನ್ನಷ್ಟು ಓದಿ arrow
New Tractor Loan
ಹೊಸ ಟ್ರ್ಯಾಕ್ಟರ್ ಲೋನ್‌ಗಳು

ನಿಮ್ಮ ಕೃಷಿ ಕ್ಷೇತ್ರದ ಆಕಾಂಕ್ಷೆಗಳಿಗೆ ಜೀವ ತುಂಬಲು ಕೈಗೆಟಕುವ ಟ್ರ್ಯಾಕ್ಟರ್ ಫೈನಾನ್ಸಿಂಗ್.

ಇನ್ನಷ್ಟು ಓದಿ arrow
Benefits of Two Wheeler Loans - Easy Documentation
ಬಿಸಿನೆಸ್ ಲೋನ್‌‌ಗಳು

ರಿಟೇಲ್ ಬಿಸಿನೆಸ್ ಮತ್ತು ಕಾರ್ಪೊರೇಟ್‌ಗಳಿಗಾಗಿ ಇರುವ ನಮ್ಮ ಹಣಕಾಸಿನ ಪರಿಹಾರಗಳೊಂದಿಗೆ ನಿಮ್ಮ ಬಿಸಿನೆಸ್ ಅನ್ನು ಬೆಳೆಸಿ

ಇನ್ನಷ್ಟು ಓದಿ arrow
Three-Wheeler Auto Loan
ತ್ರಿ ವೀಲರ್ ಲೋನ್‌ಗಳು

ಸುಲಭವಾದ ತ್ರೀ ವೀಲರ್ ವಾಹನದ ಲೋನ್‌ಗಳೊಂದಿಗೆ ತ್ರೀ ವೀಲರ್ ವಾಹನದ ಕನಸುಗಳನ್ನು ನನಸಾಗಿಸಿ.

ಇನ್ನಷ್ಟು ಓದಿ arrow

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ

-->