ಸಾಲದಾತರಿಂದ ಹಣವನ್ನು ಸಾಲ ಪಡೆಯಲು ಸಾಲದಾತರು ಶುಲ್ಕವಾಗಿ ವಿಧಿಸುವ ಸಾಲದ ಮೊತ್ತದ ಶೇಕಡಾವಾರನ್ನು ಪರ್ಸನಲ್ ಲೋನ್ ಬಡ್ಡಿ ದರವು ಸೂಚಿಸುತ್ತದೆ. ಇದು ಪ್ರಕ್ರಿಯಾ ಶುಲ್ಕಗಳು ಮತ್ತು ತಡ ಪಾವತಿ ದಂಡಗಳಂತಹ ಹೆಚ್ಚುವರಿ ಶುಲ್ಕಗಳೊಂದಿಗೆ ನೇರವಾಗಿ ನಿಮ್ಮ ಮಾಸಿಕ ಇಎಂಐ ಮೇಲೆ ಪರಿಣಾಮ ಬೀರುತ್ತದೆ.
ನಿಮ್ಮ ಪರ್ಸನಲ್ ಲೋನ್ ಬಡ್ಡಿ ದರವನ್ನು ಕಡಿಮೆ ಮಾಡಲು, ಹೆಚ್ಚಿನ ಕ್ರೆಡಿಟ್ ಸ್ಕೋರ್ ನಿರ್ವಹಿಸಿ ಮತ್ತು ಅಪ್ಲೈ ಮಾಡುವ ಮೊದಲು ಯಾವುದೇ ಬಾಕಿ ಉಳಿದ ಲೋನ್‌ಗಳನ್ನು ಮರು ಪಾವತಿಸಿ. ನೀವು ಸ್ಥಿರ ಆದಾಯ ಮತ್ತು ಬಲವಾದ ಕ್ರೆಡಿಟ್ ಹಿಸ್ಟರಿ ಹೊಂದಿದ್ದರೆ ಸಾಲದಾತರೊಂದಿಗೆ ಕಡಿಮೆ ಬಡ್ಡಿದರ ಒದಗಿಸುವಂತೆ ಸಮಾಲೋಚನೆ ನಡೆಸಬಹುದು. ಸಾಲ ವಾಪಸಾತಿಗೆ ಕಡಿಮೆ ಕಾಲಾವಧಿ ಅಥವಾ ಹೆಚ್ಚಿನ ಮೊತ್ತದ ಡೌನ್ ಪೇಮೆಂಟ್ ಆಯ್ಕೆ ಮಾಡುವುದು ನಿಮ್ಮ ಮೇಲಿನ ಬಡ್ಡಿ ಹೊರೆಯನ್ನು ಕಡಿಮೆ ಮಾಡುತ್ತದೆ.
ನೀವು ವಿಶ್ವಾಸಾರ್ಹ ಸಾಲಗಾರರಾಗಿದ್ದೀರಿ ಎಂಬುದನ್ನು ಹೆಚ್ಚಿನ ಕ್ರೆಡಿಟ್ ಸ್ಕೋರ್ ಸಾಲದಾತರಿಗೆ ತೋರಿಸುತ್ತದೆ, ಇದು ನಿಮಗೆ ಕಡಿಮೆ ಬಡ್ಡಿ ದರ ಮತ್ತು ಉತ್ತಮ ಸಾಲ ನಿಯಮಗಳಿಗೆ ಅರ್ಹರನ್ನಾಗಿಸುತ್ತದೆ.
ಕಡಿಮೆ ಸಾಲ ಮರುಪಾವತಿ ಅವಧಿಯನ್ನು ಆಯ್ಕೆ ಮಾಡುವುದು ಕಾಲಾಂತರದಲ್ಲಿ ನೀವು ಕಟ್ಟುವ ಒಟ್ಟು ಬಡ್ಡಿಯನ್ನು ಕಡಿಮೆ ಮಾಡುತ್ತದೆ, ಇದು ನಿಮಗೆ ಹಣವನ್ನು ಉಳಿಸಲು ಸಹಾಯ ಮಾಡುತ್ತದೆ, ಆದರೆ ನಿಮ್ಮ ಇಎಂಐ ಮೊತ್ತ ಹೆಚ್ಚಾಗಿರುತ್ತದೆ ಎಂಬುದು ಗಮನದಲ್ಲಿರಲಿ.
ಸಾಲ ಮತ್ತು ಆದಾಯದ ಅನುಪಾತವು ಕಡಿಮೆ ಇರುವುದು ಉತ್ತಮ ಹಣಕಾಸಿನ ಸ್ಥಿರತೆಯನ್ನು ಸೂಚಿಸುತ್ತದೆ ಮತ್ತು ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಪಡೆಯುವ ಸಾಧ್ಯತೆಗಳನ್ನು ಸುಧಾರಿಸುತ್ತದೆ.
ಪರ್ಸನಲ್ ಲೋನ್ ಬಡ್ಡಿ ದರಗಳನ್ನು ಸಾಮಾನ್ಯವಾಗಿ ಫ್ಲ್ಯಾಟ್ ದರ ಅಥವಾ ರೆಡ್ಯೂಸಿಂಗ್ ಬ್ಯಾಲೆನ್ಸ್ ವಿಧಾನವನ್ನು ಬಳಸಿಕೊಂಡು ಲೆಕ್ಕ ಹಾಕಲಾಗುತ್ತದೆ. ಫ್ಲ್ಯಾಟ್ ದರದ ವಿಧಾನದಲ್ಲಿ, ಸಾಲದ ಅವಧಿಯುದ್ದಕ್ಕೂ ಪೂರ್ಣ ಸಾಲದ ಮೊತ್ತಕ್ಕೆ ಬಡ್ಡಿಯನ್ನು ವಿಧಿಸಲಾಗುತ್ತದೆ, ಆದರೆ ರೆಡ್ಯೂಸಿಂಗ್ ಬ್ಯಾಲೆನ್ಸ್ ವಿಧಾನದಲ್ಲಿ, ಬಾಕಿ ಉಳಿಕೆಯ ಮೇಲೆ ಮಾತ್ರ ಬಡ್ಡಿಯನ್ನು ವಿಧಿಸಲಾಗುತ್ತದೆ, ಇದು ಪ್ರತಿ ಇಎಂಐನೊಂದಿಗೆ ಕಡಿಮೆಯಾಗುತ್ತದೆ. ನಿಮ್ಮ ಪರ್ಸನಲ್ ಲೋನ್ ಬಡ್ಡಿ ದರವನ್ನು ನಿರ್ಧರಿಸುವಾಗ ಸಾಲದಾತರು ನಿಮ್ಮ ಕ್ರೆಡಿಟ್ ಸ್ಕೋರ್, ಆದಾಯ, ಸಾಲದ ಕಾಲಾವಧಿ ಮತ್ತು ಪ್ರಸ್ತುತ ಹಣಕಾಸಿನ ಜವಾಬ್ದಾರಿಗಳಂತಹ ಅಂಶಗಳನ್ನು ಕೂಡ ಪರಿಗಣಿಸುತ್ತಾರೆ.
ಪರ್ಸನಲ್ ಲೋನ್‌ಗಳ ಬಡ್ಡಿ ದರವನ್ನು ಹೊರತುಪಡಿಸಿ ಪರಿಗಣಿಸಬೇಕಾದ ವಿಷಯಗಳು
ಪ್ರಕ್ರಿಯಾ ಶುಲ್ಕ
ಇದು ಸಾಲದ ಅಪ್ಲಿಕೇಶನ್ ಅನ್ನು ಪ್ರಕ್ರಿಯೆಗೊಳಿಸಲು ಸಾಲದಾತರು ವಿಧಿಸುವ ಒಂದು ಬಾರಿಯ ಶುಲ್ಕವಾಗಿದೆ. ಇದು ಸಾಲದ ಮೊತ್ತದ ಶೇಕಡಾವಾರು ಅಥವಾ ನಿಗದಿತ ಶುಲ್ಕವಾಗಿರಬಹುದು.
ಅನ್ವಯವಾಗುವ ಶುಲ್ಕಗಳು
ತಡ ಪಾವತಿ ಶುಲ್ಕಗಳು, ಮುಂಗಡ ಪಾವತಿ ದಂಡಗಳು ಅಥವಾ ಅವಧಿಗೂ ಮುನ್ನ ಸಾಲ ಮರುಪಾವತಿ ಶುಲ್ಕಗಳಂತಹ ಹೆಚ್ಚುವರಿ ಶುಲ್ಕಗಳು ಒಟ್ಟು ಸಾಲ ವೆಚ್ಚದ ಮೇಲೆ ಪರಿಣಾಮ ಬೀರಬಹುದು. ನಿರ್ಧರಿಸುವ ಮೊದಲು ಇವುಗಳನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯವಾಗಿದೆ.
ವಿತರಣೆಯ ಸಮಯ
ಅನುಮೋದಿತ ಸಾಲದ ಮೊತ್ತವನ್ನು ನಿಮ್ಮ ಅಕೌಂಟ್‌ಗೆ ಟ್ರಾನ್ಸ್‌ಫರ್ ಮಾಡಲು ಸಾಲದಾತರು ತೆಗೆದುಕೊಳ್ಳುವ ಸಮಯ. ತುರ್ತು ಹಣಕಾಸಿನ ಪರಿಸ್ಥಿತಿಗಳಲ್ಲಿ ತ್ವರಿತ ವಿತರಣೆಯು ನಿರ್ಣಾಯಕವಾಗಬಹುದು.
ಆಫರ್‌ಗಳು ಮತ್ತು ರಿಯಾಯಿತಿಗಳು
ಸಾಲಗಾರರನ್ನು ಆಕರ್ಷಿಸಲು ಸಾಲದಾತರು ಕಡಿಮೆ ಪ್ರಕ್ರಿಯಾ ಶುಲ್ಕಗಳು ಅಥವಾ ಬಡ್ಡಿ ದರದ ರಿಯಾಯಿತಿಗಳಂತಹ ವಿಶೇಷ ಆಫರ್‌ಗಳನ್ನು ನೀಡಬಹುದು. ಈ ಆಫರ್‌ಗಳು ಒಟ್ಟಾರೆ ಸಾಲದ ವೆಚ್ಚಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಟಿವಿಎಸ್ ಕ್ರೆಡಿಟ್‌ನಲ್ಲಿ, ನಮ್ಮ ಗ್ರಾಹಕರಿಗೆ ಲೋನ್‌ಗಳನ್ನು ಒದಗಿಸುವಾಗ ಅನುಕೂಲಕರ, ವಿಶ್ವಾಸಾರ್ಹ ಮತ್ತು ಸಮಾಧಾನಕರ ಅನುಭವ ನೀಡುವತ್ತ ನಾವು ಗಮನಹರಿಸುತ್ತೇವೆ. ಸಾಲದ ಪ್ರತಿ ಹಂತದಲ್ಲೂ ನಿಮಗೆ ಬೆಂಬಲ ನೀಡಲು ನಾವು ಬದ್ಧರಾಗಿದ್ದೇವೆ. ನೀವು ನಮ್ಮ ಆನ್ಲೈನ್ ಪರ್ಸನಲ್ ಲೋನ್‌ಗಳನ್ನು ಏಕೆ ಆಯ್ಕೆ ಮಾಡಬೇಕು ಎಂಬುದು ಇಲ್ಲಿದೆ.
ಭಾರತದಲ್ಲಿ ಪ್ರಸ್ತುತ ಪರ್ಸನಲ್ ಲೋನ್ ಬಡ್ಡಿ ದರಗಳು ಒಬ್ಬ ಸಾಲದಾತರಿಂದ ಇನ್ನೊಬ್ಬರಿಗೆ ಬದಲಾಗುತ್ತವೆ ಮತ್ತು ನಿಮ್ಮ ಹಣಕಾಸಿನ ಪ್ರೊಫೈಲ್ ಮೇಲೆ ಅವಲಂಬಿತವಾಗಿರುತ್ತವೆ.
ಇಲ್ಲ, ಪರ್ಸನಲ್ ಲೋನ್‌ಗಳು ಯಾವಾಗಲೂ ಬಡ್ಡಿಯೊಂದಿಗೆ ಬರುತ್ತವೆ, ಏಕೆಂದರೆ ಸಾಲದಾತರು ಲೋನ್ ಒದಗಿಸಲು ಶುಲ್ಕವನ್ನು ವಿಧಿಸುತ್ತಾರೆ. ಆದಾಗ್ಯೂ, ಕೆಲವು ಪ್ರಚಾರದ ಆಫರ್‌ಗಳು ಸೀಮಿತ ಅವಧಿಗೆ ಬಡ್ಡಿಯನ್ನು ಕಡಿಮೆ ಮಾಡಬಹುದು.
ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ