ನೀವು ಪೂರ್ವ-ಮಾಲೀಕತ್ವದ ವಾಹನವನ್ನು ಖರೀದಿಸಲು ಪರಿಗಣಿಸಿದರೆ ಮತ್ತು ಹಣಕಾಸಿನ ನೆರವು ಬೇಕಾದರೆ, ನಮ್ಮ ಬಳಸಿದ ಕಾರ್ ಲೋನ್ ಸೂಕ್ತ ಪರಿಹಾರವಾಗಿದೆ. ಬಳಸಿದ ಕಾರುಗಳ ಲೋನ್‌ಗಳ ಮೇಲೆ ನಾವು ಸ್ಪರ್ಧಾತ್ಮಕ ಬಡ್ಡಿ ದರಗಳನ್ನು ಒದಗಿಸುತ್ತೇವೆ ಮತ್ತು ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳನ್ನು ಒದಗಿಸುತ್ತೇವೆ, ಇದು ಬಳಸಿದ ಕಾರ್ ಲೋನ್‌ಗಳನ್ನು ಎಲ್ಲರಿಗೂ ಅಕ್ಸೆಸ್ ಆಗುವಂತೆ ಮಾಡುತ್ತದೆ. ನಮ್ಮ ಸುಲಭ ಡಾಕ್ಯುಮೆಂಟೇಶನ್ ಪ್ರಕ್ರಿಯೆಯ ಮೂಲಕ ನಾವು ನಿಮ್ಮ ಖರೀದಿಯ ಪ್ರಯಾಣವನ್ನು ಸುಗಮಗೊಳಿಸುತ್ತೇವೆ ಮತ್ತು ಆಸ್ತಿಯ ಮೌಲ್ಯದ ಆಧಾರದ ಮೇಲೆ 95%* ವರೆಗಿನ ಹಣವನ್ನು ಒದಗಿಸುತ್ತೇವೆ. ನಮ್ಮ ತ್ವರಿತ ಅನುಮೋದನೆ ಪ್ರಕ್ರಿಯೆಯೊಂದಿಗೆ ನಿಮಗೆ ಬೇಕಾದಷ್ಟು ಬೇಗ ಹಣವನ್ನು ಪಡೆಯಿರಿ, ಏಕೆಂದರೆ ನಾವು ನಿಮಗೆ ಕೈಗೆಟಕುವ ಬಡ್ಡಿ ದರಗಳಲ್ಲಿ ಅತ್ಯುತ್ತಮ ಬಳಸಿದ ಕಾರ್ ಲೋನ್‌ಗಳನ್ನು ಒದಗಿಸಲು ಬದ್ಧರಾಗಿದ್ದೇವೆ.
ಶುಲ್ಕಗಳ ನಿಗದಿ | ಶುಲ್ಕಗಳು (ಜಿಎಸ್‌ಟಿ ಸೇರಿದಂತೆ) |
---|---|
ಪ್ರಕ್ರಿಯಾ ಶುಲ್ಕಗಳು | 10% ರ ವರೆಗೆ |
ಪೆನಲ್ ಶುಲ್ಕಗಳು | ಪಾವತಿಸದ ಕಂತುಗಳ ಮೇಲೆ ವರ್ಷಕ್ಕೆ 36% |
ಫೋರ್‌ಕ್ಲೋಸರ್ ಶುಲ್ಕಗಳು | ಎ) ಉಳಿದ ಸಾಲದ ಅವಧಿ <= 12 ತಿಂಗಳು: ಬಾಕಿ ಅಸಲಿನ ಮೇಲೆ 3% ಬಿ) ಉಳಿದ ಸಾಲದ ಅವಧಿ >12 ರಿಂದ <=24 ತಿಂಗಳುಗಳು: ಬಾಕಿ ಅಸಲಿನ ಮೇಲೆ 4% ಸಿ) ಉಳಿದ ಸಾಲದ ಅವಧಿ > 24 ತಿಂಗಳು: ಬಾಕಿ ಅಸಲಿನ ಮೇಲೆ 5% |
ಇತರೆ ಶುಲ್ಕಗಳು | |
ಬೌನ್ಸ್ ಶುಲ್ಕಗಳು | ಗರಿಷ್ಠ ₹ 750 |
ನಕಲಿ ಎನ್‌ಡಿಸಿ/ಎನ್ಒಸಿ ಶುಲ್ಕಗಳು | Rs.500 |
ನಿಮ್ಮ ಹಣಕಾಸನ್ನು ಸುಗಮಗೊಳಿಸಲು ಮತ್ತು ಶಾಂತಿಯುತ ಜೀವನವನ್ನು ಖಚಿತಪಡಿಸಿಕೊಳ್ಳಲು ಸರಳ ಮಾರ್ಗವನ್ನು ಆಯ್ಕೆ ಮಾಡಿ. ನಿಮ್ಮ ಮಾಸಿಕ ಬಜೆಟ್ ಯೋಜಿಸಲು ಟಿವಿಎಸ್ ಕ್ರೆಡಿಟ್‌ನ ಬಳಸಿದ ಕಾರ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಅಥವಾ ಕಾರ್ ಮೌಲ್ಯಮಾಪನ ಸಾಧನವನ್ನು ಬಳಸಿ. ಸಾಲದ ಮೊತ್ತ, ಬಳಸಿದ ಕಾರ್ ಲೋನ್ ಬಡ್ಡಿ ದರ, ಸಾಲದ ಅವಧಿ ಮುಂತಾದ ಮೌಲ್ಯಗಳನ್ನು ನಮೂದಿಸಿ ಮತ್ತು ನಿಮ್ಮ ಸಾಲದ ಇಎಂಐನ ತ್ವರಿತ ಅಂದಾಜು ಪಡೆಯಿರಿ.
ಈ ಕಾರನ್ನು ಖರೀದಿಸಲು ಆಸಕ್ತಿ ಹೊಂದಿದ್ದೀರಾ?
ಈಗ ಅಪ್ಲೈ ಮಾಡಿಹಕ್ಕುತ್ಯಾಗ : ಈ ಫಲಿತಾಂಶಗಳು ಸೂಚನಾತ್ಮಕ ಉದ್ದೇಶಗಳಿಗಾಗಿ ಮಾತ್ರ. ನಿಜವಾದ ಫಲಿತಾಂಶಗಳು ಬದಲಾಗಬಹುದು. ನಿಖರವಾದ ವಿವರಗಳಿಗಾಗಿ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ಯಾವುದೇ ಡೇಟಾ ಕಂಡುಬಂದಿಲ್ಲ.
ಟಿವಿಎಸ್ ಕ್ರೆಡಿಟ್ನಿಂದ ನೀವು ಬಳಸಿದ ಕಾರ್ ಲೋನ್ ಏಕೆ ಆಯ್ಕೆ ಮಾಡಬೇಕು ಎಂಬುದಕ್ಕೆ ಕಾರಣಗಳು ಇಲ್ಲಿವೆ:
ಟಿವಿಎಸ್ ಕ್ರೆಡಿಟ್ ಬಳಸಿದ ಕಾರ್ ಲೋನ್‌ಗಳಿಗೆ ಕಡಿಮೆ ಬಡ್ಡಿ ದರಗಳೊಂದಿಗೆ 60 ತಿಂಗಳವರೆಗಿನ ಮರುಪಾವತಿ ಅವಧಿಯನ್ನು ಒದಗಿಸುತ್ತದೆ.
ಹೌದು, ಸೆಕೆಂಡ್-ಹ್ಯಾಂಡ್ ಕಾರ್ ಲೋನ್‌ಗಳಿಗೆ ನೀವು ಇಎಂಐ ಆಯ್ಕೆಯನ್ನು ಪಡೆಯಬಹುದು. ನಮ್ಮ ಕಾರ್ ಮೌಲ್ಯಮಾಪನ ಸಾಧನ ಬಳಸಿಕೊಂಡು ನಿಮ್ಮ ಬಳಸಿದ ಕಾರ್ ಲೋನಿಗೆ ಅಂದಾಜು ಇಎಂಐ ಪರಿಶೀಲಿಸಿ.
ಹೌದು, ನೀವು ಬಳಸಿದ ಕಾರ್ ಲೋನ್ ಆಯ್ಕೆ ಮಾಡಿದಾಗ, ನೀವು ಡೌನ್‌ಪೇಮೆಂಟ್ ಮಾಡಬೇಕು. ನಿಮ್ಮ ಅಪೇಕ್ಷಿತ ಸೆಕೆಂಡ್-ಹ್ಯಾಂಡ್ ಕಾರಿನ 95% ಮೊತ್ತವನ್ನು ಟಿವಿಎಸ್ ಕ್ರೆಡಿಟ್ ಫೈನಾನ್ಸ್ ಮಾಡುತ್ತದೆ.
ನಿಮ್ಮ ಕ್ರೆಡಿಟ್ ಸ್ಕೋರ್ 750 ಅಥವಾ ಅದಕ್ಕಿಂತ ಹೆಚ್ಚಾಗಿರಬೇಕು. ಇದು ಬಳಸಿದ ಕಾರ್ ಲೋನ್ ಪಡೆಯಲು ನಿಮ್ಮ ಅರ್ಹತೆಯನ್ನು ಹೆಚ್ಚಿಸುತ್ತದೆ. ನೀವು ನಿಮ್ಮ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಬಹುದು, ಡಾಕ್ಯುಮೆಂಟೇಶನ್ ಸಲ್ಲಿಸಬಹುದು ಮತ್ತು ತ್ವರಿತ ಅನುಮೋದನೆ ಪಡೆಯಬಹುದು.
ಅತ್ಯುತ್ತಮ ವೆಹಿಕಲ್ ಫೈನಾನ್ಸ್ ದರಗಳನ್ನು ಪಡೆಯಲು, ನೀವು ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದೀರಾ ಪರಿಶೀಲಿಸಿ, ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು ಒದಗಿಸಿ ಮತ್ತು ಸೂಕ್ತ ಕಾಲಾವಧಿಯನ್ನು ಆಯ್ಕೆಮಾಡಿ. ಟಿವಿಎಸ್ ಕ್ರೆಡಿಟ್‌ನಲ್ಲಿ, ಬಳಸಿದ ಕಾರ್ ಹೊಂದುವುದನ್ನು ಸುಲಭ ಮತ್ತು ಹೆಚ್ಚು ಕೈಗೆಟುಕುವಂತೆ ಮಾಡಲು ನಾವು ಫ್ಲೆಕ್ಸಿಬಲ್ ಸಾಲದ ಆಯ್ಕೆಗಳು ಮತ್ತು ಆಕರ್ಷಕ ದರಗಳನ್ನು ಒದಗಿಸುತ್ತೇವೆ.
ಹೌದು, ಟಿವಿಎಸ್ ಕ್ರೆಡಿಟ್ ವಿವಿಧ ಕಂಪನಿ ಮತ್ತು ಮಾಡೆಲ್‌ಗಳ ಕಾರುಗಳಿಗೆ ಹಳೆಯ ವಾಹನದ ಹಣಕಾಸನ್ನು ಒದಗಿಸುತ್ತದೆ. ನಿಮ್ಮ ಕನಸಿನ ಕಾರನ್ನು ವಿಳಂಬವಿಲ್ಲದೆ ನಿಮ್ಮದಾಗಿಸಿಕೊಳ್ಳಲು ನಿಮಗೆ ಸಹಾಯ ಮಾಡುವುದಕ್ಕಾಗಿ ನಮ್ಮ ಸಾಲಗಳು ಫ್ಲೆಕ್ಸಿಬಲ್ ಇಎಂಐ ಮತ್ತು ತ್ವರಿತ ಪ್ರಕ್ರಿಯೆಯೊಂದಿಗೆ ಕಾರಿನ ಮೌಲ್ಯದ 95% ವರೆಗೆ ಕವರ್ ಮಾಡುತ್ತವೆ.
ಟಿವಿಎಸ್ ಕ್ರೆಡಿಟ್ ಆಫರ್‌ಗಳು:
ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಬಳಸಿದ ಕಾರ್ ಲೋನ್ ಅರ್ಹತೆ ಮತ್ತು ಡಾಕ್ಯುಮೆಂಟ್‌ಗಳು ವಿಭಾಗಕ್ಕೆ ಭೇಟಿ ನೀಡಬಹುದು.
ಸೆಕೆಂಡ್-ಹ್ಯಾಂಡ್ ಕಾರ್ ಲೋನ್‌ಗಳಿಗೆ ಬಡ್ಡಿ ದರಗಳು ಸಾಲದಾತರು, ಕಾರಿನ ಸ್ಥಿತಿ ಮತ್ತು ಸಾಲಗಾರರ ಕ್ರೆಡಿಟ್ ಪ್ರೊಫೈಲ್‌ನಂತಹ ಅಂಶಗಳ ಆಧಾರದ ಮೇಲೆ ಬದಲಾಗುತ್ತವೆ.
ನೀವು ನಮ್ಮ ಡೀಲರ್ ಲೊಕೇಟರ್ ಪುಟಕ್ಕೆ ಭೇಟಿ ನೀಡಬಹುದು ಮತ್ತು ನಿಮ್ಮ ಹಳೆಯ ವಾಹನಕ್ಕೆ ಹಣಕಾಸು ಒದಗಿಸಬಹುದಾದ ಬಳಸಿದ ಕಾರ್ ಡೀಲರ್‌ಗಳನ್ನು ಕಂಡುಕೊಳ್ಳಬಹುದು.
ಹೌದು, ಟಿವಿಎಸ್ ಕ್ರೆಡಿಟ್ ಆಕರ್ಷಕ ಸಾಲ/ಬಡ್ಡಿ ದರಗಳಲ್ಲಿ ಬಳಸಿದ ಕಾರುಗಳ ರಿಫೈನಾನ್ಸ್ ಸಾಧ್ಯವಾಗಿಸುತ್ತದೆ. ರಿಫೈನಾನ್ಸ್ ಮಾಡುವ ಮೂಲಕ, ನೀವು ನಿಮ್ಮ ಇಎಂಐ ಹೊರೆಯನ್ನು ಕಡಿಮೆ ಮಾಡಬಹುದು ಅಥವಾ ನಿಮ್ಮ ಸಾಲದ ಅವಧಿಯನ್ನು ವಿಸ್ತರಿಸಬಹುದು.
ನಮ್ಮ ಕಾರ್ ಮೌಲ್ಯಮಾಪನ ಸಾಧನದಿಂದ ನೀವು ಇಎಂಐ ಮೊತ್ತವನ್ನು ಲೆಕ್ಕ ಹಾಕಬಹುದು, ಇದು ವೆಹಿಕಲ್ ಲೋನ್ ಇಎಂಐ ಕ್ಯಾಲ್ಕುಲೇಟರ್ ಆಗಿ ಕೂಡ ಕೆಲಸ ಮಾಡುತ್ತದೆ.
ಟಿವಿಎಸ್ ಕ್ರೆಡಿಟ್‌ನ ಬಳಸಿದ ಕಾರ್ ಲೋನ್‌ಗಳ ಇಎಂಐ ಕ್ಯಾಲ್ಕುಲೇಟರ್ ಬಳಸಿಕೊಂಡು ನೀವು ನಿಮ್ಮ ಇಎಂಐ ಅನ್ನು ಲೆಕ್ಕ ಹಾಕಬಹುದು. ನಿಖರವಾದ ಮಾಸಿಕ ಇಎಂಐ ಅಂದಾಜು ಪಡೆಯಲು ಸಾಲದ ಮೊತ್ತ, ಕಾಲಾವಧಿ ಮತ್ತು ಬಡ್ಡಿ ದರವನ್ನು ನಮೂದಿಸಿ. ಇದು ನಿಮ್ಮ ಹಣಕಾಸನ್ನು ಯೋಜಿಸಲು ಮತ್ತು ನಿಮ್ಮ ಬಜೆಟ್‌ಗೆ ಸೂಕ್ತವಾದ ಲೋನ್ ಆಫರನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ
ಹೌದು, ಸೆಕೆಂಡ್-ಹ್ಯಾಂಡ್ ಕಾರ್ ಲೋನ್‌ನಲ್ಲಿ ಕಡಿಮೆ ಬಡ್ಡಿ ದರವನ್ನು ಪಡೆಯುವಲ್ಲಿ ನಿಮ್ಮ ಸಿಬಿಲ್ ಸ್ಕೋರ್ ಗಮನಾರ್ಹ ಪಾತ್ರವನ್ನು ವಹಿಸುತ್ತದೆ. ಉತ್ತಮ ಕ್ರೆಡಿಟ್ ಸ್ಕೋರ್‌ಗಳು (750 ಮತ್ತು ಅದಕ್ಕಿಂತ ಹೆಚ್ಚು) ಜವಾಬ್ದಾರಿಯುತ ಹಣಕಾಸಿನ ನಡವಳಿಕೆಯನ್ನು ಸೂಚಿಸುವ ಕಾರಣ ಅಂಥ ಸಾಲಗಾರರಿಗೆ ಸಾಲದಾತರು ಉತ್ತಮ ದರಗಳನ್ನು ನೀಡುತ್ತಾರೆ.