ಕೃಷಿಯು ಭಾರತದ ಆರ್ಥಿಕತೆಯ ಗಮನಾರ್ಹ ಭಾಗವಾಗಿದೆ. ಜೊತೆಗೆ, ಟ್ರ್ಯಾಕ್ಟರ್‌ಗಳು ರಾಷ್ಟ್ರದ ಆಧುನಿಕ ಆರ್ಥಿಕತೆಯ ಬೆನ್ನೆಲುಬಾಗಿವೆ. ಆದಾಗ್ಯೂ, ಟ್ರ್ಯಾಕ್ಟರ್ ಖರೀದಿಸುವುದು ರೈತರು ಮತ್ತು ಕೃಷಿ ಮಾಲೀಕರ ಪಾಲಿಗೆ ದೊಡ್ಡ ಹೂಡಿಕೆಯಾಗಿದೆ. ಅದನ್ನು ಖರೀದಿಸಲು ಬೇಕಾದ ಹಣವನ್ನು ಒಗ್ಗೂಡಿಸುವುದು ಅನೇಕ ರೈತರಿಗೆ ಕಷ್ಟದ ವಿಷಯವಾಗಿದೆ. ಇಲ್ಲಿಯೇ ಎನ್‌ಬಿಎಫ್‌ಸಿ ಟ್ರ್ಯಾಕ್ಟರ್ ಲೋನ್‌ಗಳು ಸಹಾಯಕ್ಕೆ ಬರುವುದು.
ಕೈಗೆಟಕುವ ಟ್ರ್ಯಾಕ್ಟರ್ ಲೋನ್‌ಗಾಗಿ ಹುಡುಕುತ್ತಿರುವ ರೈತರು ಮತ್ತು ಸಣ್ಣ ಬಿಸಿನೆಸ್ ಮಾಲೀಕರಿಗೆ ಬ್ಯಾಂಕಿಂಗೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿಗಳು) ಜನಪ್ರಿಯ ಆಯ್ಕೆಯಾಗಿವೆ. ಎನ್‌ಬಿಎಫ್‌ಸಿಗಳು ಹೆಚ್ಚು ಫ್ಲೆಕ್ಸಿಬಲ್ ಮತ್ತು ರೈತ-ಸ್ನೇಹಿ ಫೈನಾನ್ಸಿಂಗ್ ಅನ್ನು ಒದಗಿಸುತ್ತವೆ. ಅವು ಕೃಷಿ ಆದಾಯದ ಸೀಸನಲ್ ಸ್ವರೂಪವನ್ನು ಅರ್ಥ ಮಾಡಿಕೊಳ್ಳುತ್ತವೆ ಮತ್ತು ಕಸ್ಟಮೈಜ್ ಮಾಡಿದ ಸಾಲದ ಆಯ್ಕೆಗಳನ್ನು ಒದಗಿಸುತ್ತವೆ.
ಎನ್‌ಬಿಎಫ್‌ಸಿಗಳು ಎಂದರೇನು ಮತ್ತು ಅವುಗಳು ಇತರ ಹಣಕಾಸು ಸಂಸ್ಥೆಗಳಿಗಿಂತ ಹೇಗೆ ಭಿನ್ನವಾಗಿರುತ್ತವೆ?
ಎನ್‌ಬಿಎಫ್‌ಸಿಗಳು ಲೋನ್‌ಗಳು ಮತ್ತು ಇತರ ಹಣಕಾಸು ಸೇವೆಗಳನ್ನು ಒದಗಿಸುವ ಹಣಕಾಸು ಸಂಸ್ಥೆಗಳಾಗಿವೆ, ಆದರೆ ಬ್ಯಾಂಕಿಂಗ್ ಲೈಸೆನ್ಸ್ ಹೊಂದಿರುವುದಿಲ್ಲ. ಟಿವಿಎಸ್ ಕ್ರೆಡಿಟ್ ಕೂಡ ಭಾರತದಲ್ಲಿ ಟ್ರ್ಯಾಕ್ಟರ್ ಫೈನಾನ್ಸಿಂಗ್ ಆಯ್ಕೆಗಳನ್ನು ಒದಗಿಸುವ ಅಂತಹ ಒಂದು ಪರಿಣತ ಎನ್‌ಬಿಎಫ್‌ಸಿ ಆಗಿರುವುದರಿಂದ, ರೈತರಿಗೆ ಆದ್ಯತೆಯ ಆಯ್ಕೆಯಾಗಿದೆ.
ಎನ್‌ಬಿಎಫ್‌ಸಿಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಯಂತ್ರಿಸುತ್ತದೆ, ಆದರೆ ಸಾರ್ವಜನಿಕ ಡೆಪಾಸಿಟ್‌ಗಳನ್ನು ಸ್ವೀಕರಿಸುವುದಿಲ್ಲ. ಅವು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತವೆ ಮತ್ತು ತಮ್ಮ ಗ್ರಾಹಕ-ಕೇಂದ್ರಿತ ವಿಧಾನಕ್ಕೆ ಹೆಸರುವಾಸಿಯಾಗಿವೆ. ಎನ್‌ಬಿಎಫ್‌ಸಿಗಳು ರೈತರು, ಕೃಷಿ-ಬಿಸಿನೆಸ್ ಮಾಲೀಕರು ಮತ್ತು ಗ್ರಾಮೀಣ ಉದ್ಯಮಿಗಳಂತಹ ನಿರ್ದಿಷ್ಟ ಮಾರುಕಟ್ಟೆ ವಿಭಾಗಗಳಿಗೆ ಸೇವೆ ಒದಗಿಸುತ್ತವೆ.
ಎನ್‌ಬಿಎಫ್‌ಸಿಗಳು ಸಾಂಪ್ರದಾಯಿಕ ಕ್ರೆಡಿಟ್ ಸ್ಕೋರ್‌ಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುವ ನವೀನ ಸಾಲದ ಮಾದರಿಗಳಾಗಿವೆ. ಬದಲಾಗಿ, ಭೂ ಮಾಲೀಕತ್ವ, ಕೃಷಿ ಉತ್ಪನ್ನಗಳು ಮತ್ತು ಒಟ್ಟಾರೆ ಮರುಪಾವತಿ ಸಾಮರ್ಥ್ಯದಂತಹ ಪ್ರಾಯೋಗಿಕ ಹಣಕಾಸಿನ ಸೂಚಕಗಳ ಆಧಾರದ ಮೇಲೆ ಅವು ಸಾಲದ ಅರ್ಹತೆಯನ್ನು ಮೌಲ್ಯಮಾಪನ ಮಾಡುತ್ತವೆ. ಆದಾಯ ಅಥವಾ ಕ್ರೆಡಿಟ್ ಹಿಸ್ಟರಿಯ ಔಪಚಾರಿಕ ಪುರಾವೆಗಳ ಕೊರತೆಯಿಂದಾಗಿ ಬ್ಯಾಂಕ್ ಸಾಲಕ್ಕೆ ಅರ್ಹತೆ ಪಡೆಯದ ವ್ಯಕ್ತಿಗಳಿಗೆ ಇದು ಸುಲಭ ಆಯ್ಕೆಯಾಗಿದೆ.
ಡಾಕ್ಯುಮೆಂಟೇಶನ್ ಮತ್ತು ಸಾಲದ ಅನುಮೋದನೆಗಳಿಗೆ ಸಹಾಯ ಮಾಡಲು ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡುವ ಪ್ರತಿನಿಧಿಗಳ ಮುಖೇನ ಎನ್‌ಬಿಎಫ್‌ಸಿಗಳು ಹೆಚ್ಚು ಸ್ಥಳೀಯ ಉಪಸ್ಥಿತಿಯನ್ನು ಹೊಂದಿರುತ್ತವೆ. ಈ ಪ್ರಾಯೋಗಿಕ ವಿಧಾನವು ಸಂಘಟಿತ ಸಾಲ ನೀಡುವ ಸಂಸ್ಥೆಗಳು ಮತ್ತು ಗ್ರಾಮೀಣ ಆರ್ಥಿಕತೆಯ ನಡುವಿನ ಹಣಕಾಸಿನ ಅಂತರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ರೈತರು ಅನಗತ್ಯ ವಿಳಂಬಗಳಿಲ್ಲದೆ ಸಮಯಕ್ಕೆ ಸರಿಯಾಗಿ ಹಣಕಾಸಿನ ಬೆಂಬಲವನ್ನು ಪಡೆಯುವಂತೆ ನೋಡಿಕೊಳ್ಳುತ್ತದೆ.
ಎನ್‌ಬಿಎಫ್‌ಸಿಯಿಂದ ಟ್ರ್ಯಾಕ್ಟರ್ ಲೋನ್ ಪಡೆಯುವ ಪ್ರಮುಖ ಪ್ರಯೋಜನಗಳು
1.. ಫ್ಲೆಕ್ಸಿಬಲ್ ಅರ್ಹತಾ ಮಾನದಂಡ: ಅನೇಕ ರೈತರಿಗೆ ನಿಯಮಿತ ಆದಾಯ ಅಥವಾ ಬಲವಾದ ಕ್ರೆಡಿಟ್ ಹಿಸ್ಟರಿ ಇರುವುದಿಲ್ಲ. ಎನ್‌ಬಿಎಫ್‌ಸಿಗಳಿಂದ ಟ್ರ್ಯಾಕ್ಟರ್ ಲೋನ್ ಪಡೆಯುವ ಪ್ರಮುಖ ಪ್ರಯೋಜನಗಳಲ್ಲಿ ಒಂದೆಂದರೆ ಅವು ಸರಳ ಅರ್ಹತಾ ಮಾನದಂಡಗಳೊಂದಿಗೆ ಲೋನ್‌ಗಳನ್ನು ಒದಗಿಸುತ್ತವೆ, ಇದರಿಂದ ಹೆಚ್ಚಿನ ಸಂಖ್ಯೆಯ ರೈತರಿಗೆ ಟ್ರ್ಯಾಕ್ಟರ್‌ಗಳನ್ನು ಖರೀದಿಸುವುದು ಸಾಧ್ಯವಾಗುತ್ತದೆ. ಈ ಒಳಗೊಳ್ಳುವಿಕೆಯು ಸಣ್ಣ ಪ್ರಮಾಣದ ರೈತರು ಕೂಡ ತಮ್ಮ ಕೃಷಿ ಯಂತ್ರೋಪಕರಣಗಳನ್ನು ಅಪ್ಗ್ರೇಡ್ ಮಾಡಲು ಅನುವು ಮಾಡಿಕೊಡುತ್ತದೆ.
2.. ತ್ವರಿತ ಸಾಲ ಪ್ರಕ್ರಿಯೆ: ಬಿತ್ತನೆ ಮತ್ತು ಕೊಯ್ಲಿನ ಋತುಗಳಲ್ಲಿ ಸಮಯ ಮುಖ್ಯವಾಗಿದೆ. ಎನ್‌ಬಿಎಫ್‌ಸಿಗಳು ಲೋನ್‌ಗಳನ್ನು ವೇಗವಾಗಿ ಪ್ರಕ್ರಿಯೆಗೊಳಿಸುತ್ತವೆ. ಎನ್‌ಬಿಎಫ್‌ಸಿಯಿಂದ ಟ್ರ್ಯಾಕ್ಟರ್ ಲೋನ್‌ಗಳು ಕೆಲವು ದಿನಗಳ ಒಳಗೆ ಅನುಮೋದನೆಯಾಗುತ್ತದೆ. ಇದು ರೈತರು ತಮ್ಮ ಟ್ರ್ಯಾಕ್ಟರ್‌ಗಳನ್ನು ಸಮಯಕ್ಕೆ ಸರಿಯಾಗಿ ಪಡೆಯುವುದನ್ನು ಖಚಿತಪಡಿಸುತ್ತದೆ. ಈ ತ್ವರಿತ ಅನುಮೋದನೆಯು ರೈತರಿಗೆ ಕೃಷಿ ಕಾರ್ಯಾಚರಣೆಗಳಲ್ಲಿ ವಿಳಂಬಗಳನ್ನು ತಪ್ಪಿಸಲು ಮತ್ತು ಅವರ ಇಳುವರಿ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
3. ಕಸ್ಟಮೈಜ್ ಮಾಡಿದ ಇಎಂಐ ಆಯ್ಕೆಗಳು: ರೈತರು ಸೀಸನಲ್ ಗಳಿಕೆಗಳನ್ನು ಹೊಂದಿರುತ್ತಾರೆ, ಮತ್ತು ಎನ್‌ಬಿಎಫ್‌ಸಿಗಳು ಇದನ್ನು ಅರ್ಥ ಮಾಡಿಕೊಳ್ಳುತ್ತವೆ. ಅವರು ಈ ರೀತಿಯ ಮರುಪಾವತಿ ಆಯ್ಕೆಗಳನ್ನು ಒದಗಿಸುತ್ತಾರೆ:
– ಮಾಸಿಕ ಪಾವತಿಗಳ ಬದಲಾಗಿ ತ್ರೈಮಾಸಿಕ ಅಥವಾ ಅರ್ಧ-ವಾರ್ಷಿಕ ಇಎಂಐ ಗಳು, ದುರ್ಬಲ ಅವಧಿಗಳಲ್ಲಿ ಹಣಕಾಸಿನ ಹೊರೆಯನ್ನು ಕಡಿಮೆ ಮಾಡುತ್ತವೆ.
– ಬಲೂನ್ ಪಾವತಿಗಳು, ಇಲ್ಲಿ ಇಎಂಐಗಳು ಆರಂಭದಲ್ಲಿ ಕಡಿಮೆ ಇರುತ್ತವೆ ಮತ್ತು ಆದಾಯ ಸುಧಾರಿಸಿದ ನಂತರ ಹೆಚ್ಚಾಗುತ್ತವೆ, ಇದು ಉತ್ತಮ ಹಣಕಾಸಿನ ಯೋಜನೆಯನ್ನು ಅನುಮತಿಸುತ್ತದೆ.
– ಫ್ಲೆಕ್ಸಿಬಲ್ ಸಾಲದ ಅವಧಿ, ಮರುಪಾವತಿಗಳನ್ನು ಸುಲಭಗೊಳಿಸುತ್ತವೆ ಮತ್ತು ರೈತರಿಗೆ ಹಣಕಾಸಿನ ಸ್ಥಿರತೆಯನ್ನು ಖಚಿತಪಡಿಸುತ್ತವೆ.
4. ಕೈಗೆಟಕುವ ಬಡ್ಡಿ ದರಗಳು: ಟಿವಿಎಸ್ ಕ್ರೆಡಿಟ್ ನಂತಹ ಎನ್‌ಬಿಎಫ್‌ಸಿಗಳು ಇತರ ಎನ್‌ಬಿಎಫ್‌ಸಿಗಳಿಗೆ ಹೋಲಿಸಿದರೆ ಸ್ಪರ್ಧಾತ್ಮಕ ದರಗಳಲ್ಲಿ ಕೈಗೆಟಕುವ ಹೊಸ ಟ್ರ್ಯಾಕ್ಟರ್ ಲೋನ್‌ಗಳನ್ನು ಒದಗಿಸುತ್ತವೆ. ಬ್ಯಾಂಕ್ ಬಡ್ಡಿ ದರಗಳನ್ನು ಆರ್‌ಬಿಐ ನಿರ್ಧರಿಸುತ್ತದೆ, ಎನ್‌ಬಿಎಫ್‌ಸಿಗಳು ತಮ್ಮ ಬಡ್ಡಿ ದರಗಳನ್ನು ಸೆಟ್ ಮಾಡಲು ವಿಶಿಷ್ಟ ಮಾರ್ಗಸೂಚಿಗಳನ್ನು ಅನುಸರಿಸುತ್ತವೆ, ಇದು 8% ರಿಂದ 20% ಶ್ರೇಣಿಯ ಒಳಗೆ ಬದಲಾಗಬಹುದು. ಈ ದರಗಳು ಸಾಲಗಾರರ ಕ್ರೆಡಿಟ್ ಪ್ರೊಫೈಲ್, ಸಾಲ ಕಾಲಾವಧಿ, ಮರುಪಾವತಿ ಸಾಮರ್ಥ್ಯ, ಟ್ರ್ಯಾಕ್ಟರ್‌ನ ವಿಧ ಮತ್ತು ಮಾರುಕಟ್ಟೆ ಪರಿಸ್ಥಿತಿಗಳನ್ನು ಒಳಗೊಂಡಂತೆ ಹಲವಾರು ಅಂಶಗಳಿಂದ ಪ್ರಭಾವಿತವಾಗಿರುತ್ತವೆ. ಕೈಗೆಟಕುವ ಬಡ್ಡಿ ದರಗಳು ಒಟ್ಟಾರೆ ಪಾವತಿ ಹೊರೆಯನ್ನು ಕಡಿಮೆ ಮಾಡುತ್ತವೆ, ಇದು ರೈತರಿಗೆ ಅವರ ಹಣಕಾಸು ನಿರ್ವಹಿಸುವುದನ್ನು ಸುಲಭಗೊಳಿಸುತ್ತದೆ.
5. ಬಲವಾದ ಗ್ರಾಮೀಣ ಉಪಸ್ಥಿತಿ: ಟಿವಿಎಸ್ ಕ್ರೆಡಿಟ್ ಸೇರಿದಂತೆ ಅನೇಕ ಎನ್‌ಬಿಎಫ್‌ಸಿಗಳು, ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುವ ಮೂಲಕ ರೈತರಿಗೆ ಅಗತ್ಯವಿರುವ ಹಣಕಾಸಿನ ಸಹಾಯವನ್ನು ಖಚಿತಪಡಿಸುತ್ತವೆ. ಅವುಗಳ ಬ್ರಾಂಚ್‌ಗಳು ಮತ್ತು ಏಜೆಂಟ್‌ಗಳು ಮನೆಬಾಗಿಲಿಗೆ ಸೇವೆಗಳನ್ನು ಒದಗಿಸುವುದರಿಂದ ಸಾಲದ ಪ್ರಕ್ರಿಯೆ ತೊಂದರೆ ರಹಿತವಾಗಿರುತ್ತದೆ. ದೂರ ಪ್ರದೇಶಗಳಲ್ಲಿನ ರೈತರು ದೀರ್ಘ ಪ್ರಯಾಣ ಮಾಡದೆ ಅತ್ಯುತ್ತಮ ಹಣಕಾಸಿನ ಪರಿಹಾರಗಳನ್ನು ಅಕ್ಸೆಸ್ ಮಾಡಲು ಈ ವ್ಯಾಪಕವಾದ ಗ್ರಾಮೀಣ ನೆಟ್ವರ್ಕ್ ಸಹಾಯಕವಾಗಿದೆ.
6.. 90%* ವರೆಗೆ ಹಣಕಾಸು: ಟಿವಿಎಸ್ ಕ್ರೆಡಿಟ್ ಟ್ರ್ಯಾಕ್ಟರ್ ಲೋನ್‌ಗಳ ಮೇಲೆ 90%* ವರೆಗೆ ಫೈನಾನ್ಸಿಂಗ್ ಅನ್ನು ಒದಗಿಸುತ್ತದೆ, ನಿಮ್ಮ ಬಜೆಟ್‌ಗೆ ಒತ್ತಡವಿಲ್ಲದೆ ಸುಧಾರಿತ ಫೀಚರ್‌ಗಳೊಂದಿಗೆ ಹೊಸ ಟ್ರ್ಯಾಕ್ಟರ್ ಹೊಂದಲು ನಿಮಗೆ ಅನುವು ಮಾಡಿಕೊಡುತ್ತದೆ. ಈ ಹೆಚ್ಚಿನ ಲೋನ್-ಟು-ವ್ಯಾಲ್ಯೂ ಹಣಕಾಸು ರೈತರಿಗೆ ಹಣಕಾಸಿನ ಫ್ಲೆಕ್ಸಿಬಿಲಿಟಿಯನ್ನು ನಿರ್ವಹಿಸುವಾಗ ಸರಿಯಾದ ಸಲಕರಣೆಗಳಲ್ಲಿ ಹೂಡಿಕೆ ಮಾಡುವುದನ್ನು ಸುಲಭಗೊಳಿಸುತ್ತದೆ.
7. ಹೆಚ್ಚುವರಿ ಹಣಕಾಸಿನ ನೆರವು: ಟಿವಿಎಸ್ ಕ್ರೆಡಿಟ್‌ನಂತಹ ಕೆಲವು ಹಣಕಾಸುದಾರರು, ಬಳಸಿದ ಟ್ರ್ಯಾಕ್ಟರ್ ಲೋನ್‌ಗಳು, ಇನ್ಶೂರೆನ್ಸ್, ಕೃಷಿ ಸಲಕರಣೆ ಲೋನ್‌ಗಳು ಮತ್ತು ರಿಫೈನಾನ್ಸಿಂಗ್ ಆಯ್ಕೆಗಳಂತಹ ಹೆಚ್ಚುವರಿ ಹಣಕಾಸು ಸೇವೆಗಳನ್ನು ಕೂಡ ಒದಗಿಸುತ್ತಾರೆ. ಒಮ್ಮೆ ನೀವು ಅವರಿಂದ ಟ್ರ್ಯಾಕ್ಟರ್ ಲೋನ್‌ಗಳನ್ನು ತೆಗೆದುಕೊಂಡರೆ, ನಂತರದಲ್ಲಿ, ಯಾವುದೇ ಹೆಚ್ಚುವರಿ ಪ್ರಕ್ರಿಯೆಯಿಲ್ಲದೆ ಇತರ ಲೋನ್‌ಗಳನ್ನು ಪಡೆಯುವುದು ಸುಲಭವಾಗುತ್ತದೆ. ಈ ಹೆಚ್ಚುವರಿ ಬೆಂಬಲವು ರೈತರಿಗೆ ತಮ್ಮ ಹೂಡಿಕೆಗಳನ್ನು ಸುರಕ್ಷಿತಗೊಳಿಸಲು ಮತ್ತು ಅಗತ್ಯವಿರುವ ಸಲಕರಣೆಗಳಿಗೆ ಅಪ್ಗ್ರೇಡ್ ಮಾಡಲು ಸಹಾಯ ಮಾಡುತ್ತದೆ.
ಹೋಲಿಕೆ: ಟ್ರ್ಯಾಕ್ಟರ್ ಲೋನ್‌ಗಳಿಗಾಗಿ ಎನ್‌ಬಿಎಫ್‌ಸಿ ವರ್ಸಸ್ ಬ್ಯಾಂಕ್
ವೈಶಿಷ್ಟ್ಯ | ಎನ್‌ಬಿಎಫ್‌ಸಿ | ಬ್ಯಾಂಕ್ |
ಅರ್ಹತೆ | ಫ್ಲೆಕ್ಸಿಬಲ್, ಯಾವುದೇ ಕ್ರೆಡಿಟ್ ಹಿಸ್ಟರಿ ಇಲ್ಲದಿದ್ದರೂ ಕೂಡ | ಕಟ್ಟುನಿಟ್ಟು, ಕ್ರೆಡಿಟ್ ಸ್ಕೋರ್ ಅಗತ್ಯವಿದೆ |
ಪ್ರಕ್ರಿಯೆಯ ಸಮಯ | ತ್ವರಿತ (ಕೆಲವು ದಿನಗಳು) | ನಿಧಾನ (ವಾರಗಳು) |
ಡಾಕ್ಯುಮೆಂಟೇಶನ್ | ಕನಿಷ್ಟತಮ | ವ್ಯಾಪಕ |
ಇಎಂಐ ಆಯ್ಕೆಗಳು | ರೈತರಿಗಾಗಿ ಕಸ್ಟಮೈಸ್ ಮಾಡಲಾಗಿದೆ | ಫಿಕ್ಸೆಡ್ ಮಾಸಿಕ ಇಎಂಐ ಗಳು |
ಬಡ್ಡಿ ದರಗಳು | ಸೆಂಟ್ರಲ್ ಬ್ಯಾಂಕ್ ನಿರ್ಧರಿಸಿರುವುದಲ್ಲ | ಆರ್‌ಬಿಐ ನಿಗದಿಪಡಿಸಿದೆ |
ಗ್ರಾಮೀಣ ತಲುಪುವಿಕೆ ವ್ಯಾಪ್ತಿ | ಬಲವಾದ, ಸ್ಥಳೀಯ ಶಾಖೆಗಳೊಂದಿಗೆ | ಅನುಮೋದಿಸಿದ್ದೇವೆ |
ಎನ್‌ಬಿಎಫ್‌ಸಿಯಿಂದ ಟ್ರ್ಯಾಕ್ಟರ್ ಲೋನ್‌ಗೆ ಅಪ್ಲೈ ಮಾಡುವ ಹಂತಗಳು
ಟಿವಿಎಸ್ ಕ್ರೆಡಿಟ್‌ನಂತಹ ಎನ್‌ಬಿಎಫ್‌ಸಿಗಳೊಂದಿಗೆ ಟ್ರ್ಯಾಕ್ಟರ್ ಲೋನ್‌ಗೆ ಅಪ್ಲೈ ಮಾಡುವುದು ಸುಲಭ ಮತ್ತು ಸರಳವಾಗಿದೆ. ನೀವು ಹೇಗೆ ಮುಂದುವರೆಯಬಹುದು ಎಂಬುದು ಇಲ್ಲಿದೆ:
1. ಅರ್ಹತೆ ಪರಿಶೀಲಿಸಿ:
– ರಾಷ್ಟ್ರೀಯತೆ: ಭಾರತೀಯ
- ವಯಸ್ಸು: 18 ರಿಂದ 65 ವರ್ಷಗಳು* (ಕೃಷಿ ಹಿನ್ನೆಲೆ) ಮತ್ತು 21 ರಿಂದ 65 ವರ್ಷಗಳು* (ವಾಣಿಜ್ಯ ಹಿನ್ನೆಲೆ)
- ಉದ್ಯೋಗ: ರೈತರು, ಕೃಷಿ-ಬಿಸಿನೆಸ್ ಮಾಲೀಕರು, ಭೂ ಮಾಲೀಕರು ಮತ್ತು ವಾಣಿಜ್ಯ ಹಿನ್ನೆಲೆ ಹೊಂದಿರುವ ವ್ಯಕ್ತಿಗಳು.
– ಉದ್ಯೋಗದ ಸ್ಥಿತಿ: ಸಕ್ರಿಯ
- ಉದ್ಯೋಗ ಸ್ಥಿರತೆ: ಕನಿಷ್ಠ 1 ವರ್ಷ
2. ಅಗತ್ಯ ದಾಖಲೆಗಳು:
ವಿಧ | ಡಾಕ್ಯುಮೆಂಟ್ |
KYC ಡಾಕ್ಯುಮೆಂಟ್‌ಗಳು | ವೋಟರ್ ಐಡಿ/ಡ್ರೈವಿಂಗ್ ಲೈಸೆನ್ಸ್/ಆಧಾರ್ ಕಾರ್ಡ್/ಪ್ಯಾನ್ ಕಾರ್ಡ್/ಪಾಸ್‌ಪೋರ್ಟ್‌ನ ಪ್ರತಿ |
ವಿಳಾಸದ ಪುರಾವೆ | ಪಡಿತರ ಚೀಟಿ/ಪಾಸ್‌ಪೋರ್ಟ್/ವಿದ್ಯುತ್ ಬಿಲ್ ಪ್ರತಿ |
ಆದಾಯದ ಪುರಾವೆ | ಸಾಲದ ಮರುಪಾವತಿಯನ್ನು ಬೆಂಬಲಿಸಲು |
ಅಸೆಟ್ ಡಾಕ್ಯುಮೆಂಟ್‌ಗಳು | ಭೂಮಿ ಮಾಲೀಕತ್ವ ಅಥವಾ ಯಾವುದೇ ಇತರ ಸ್ವತ್ತುಗಳು |
3. ಅಪ್ಲೈ ಮಾಡುವ ಹಂತಗಳು:
- ನಿಮ್ಮ ವಾಹನವನ್ನು ಆಯ್ಕೆಮಾಡಿ: ನೀವು ಯಾವ ಟ್ರ್ಯಾಕ್ಟರ್‌ಗೆ ಸಾಲ ಪಡೆಯಲು ಬಯಸುವಿರಿ ಎಂಬುದನ್ನು ನಿರ್ಧರಿಸಿ.
- ಅಗತ್ಯ ವಿವರಗಳನ್ನು ಸಲ್ಲಿಸಿ: ಅಗತ್ಯ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿ ಮತ್ತು ನಿಮ್ಮ ಸಾಲಕ್ಕೆ ಅನುಮೋದನೆ ಪಡೆಯಿರಿ.
- ಸಾಲ ಮಂಜೂರಾತಿ: ಟಿವಿಎಸ್ ಕ್ರೆಡಿಟ್ ಅಪ್ಲಿಕೇಶನ್‌ಗಳನ್ನು ತ್ವರಿತವಾಗಿ ಪ್ರಕ್ರಿಯೆಗೊಳಿಸುತ್ತದೆ. ನಿಮ್ಮ ಸಾಲವನ್ನು ತ್ವರಿತವಾಗಿ ವಿತರಿಸಲು ಸೇಲ್ಸ್ ಎಕ್ಸಿಕ್ಯೂಟಿವ್‌ನಿಂದ ಕರೆ ಪಡೆಯುತ್ತೀರಿ.
ತಿಳಿದುಕೊಂಡಿರುವುದು ಉತ್ತಮ
ಎನ್‌ಬಿಎಫ್‌ಸಿಯಿಂದ ಟ್ರ್ಯಾಕ್ಟರ್ ಲೋನ್ ತೆಗೆದುಕೊಳ್ಳುವ ಮೊದಲು ಅಥವಾ ನಂತರ, ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ಪ್ರಮುಖ ವಿಷಯಗಳು ಇಲ್ಲಿವೆ:
- ಗುಪ್ತ ಶುಲ್ಕಗಳು: ಸಾಲದ ಒಪ್ಪಂದಕ್ಕೆ ಸಹಿ ಮಾಡುವ ಮೊದಲು ಯಾವಾಗಲೂ ಪ್ರಕ್ರಿಯಾ ಶುಲ್ಕಗಳು, ಮುಂಗಡ ಪಾವತಿ ದಂಡಗಳು ಮತ್ತು ತಡವಾದ ಪಾವತಿ ಶುಲ್ಕಗಳನ್ನು ಪರಿಶೀಲಿಸಿ. ಟಿವಿಎಸ್ ಕ್ರೆಡಿಟ್‌ನಲ್ಲಿ, ನಾವು ಯಾವುದೇ ಗುಪ್ತ ಶುಲ್ಕಗಳಿಲ್ಲದ, ಹೆಚ್ಚು ಪಾರದರ್ಶಕವಾದ ಮತ್ತು ಸುಲಭವಾಗಿ ಅಪ್ಲೈ ಮಾಡಬಹುದಾದ ಹೊಸ ಟ್ರ್ಯಾಕ್ಟರ್ ಲೋನ್‌ಗಳನ್ನು ಒದಗಿಸುತ್ತೇವೆ.
- ಸರ್ಕಾರಿ ಸಬ್ಸಿಡಿಗಳು: ಟ್ರ್ಯಾಕ್ಟರ್ ಫೈನಾನ್ಸಿಂಗ್‌ಗಾಗಿ ರೈತರಿಗೆ ಸಹಾಯ ಮಾಡಲು ಸರ್ಕಾರವು ವಿವಿಧ ಸಬ್ಸಿಡಿಗಳು ಮತ್ತು ಸ್ಕೀಮ್‌ಗಳನ್ನು ಒದಗಿಸುತ್ತದೆ. ನಿಮ್ಮ ಸಾಲದ ಹೊರೆಯನ್ನು ಕಡಿಮೆ ಮಾಡಲು ನೀವು ಯಾವುದೇ ಸಹಾಯಕ್ಕೆ ಅರ್ಹರಾಗಿದ್ದೀರಾ ಎಂದು ಪರಿಶೀಲಿಸಿ.
- ಇನ್ಶೂರೆನ್ಸ್ ಕವರೇಜ್: ಅನಿರೀಕ್ಷಿತ ಹಾನಿಗಳು, ಕಳ್ಳತನ ಅಥವಾ ನೈಸರ್ಗಿಕ ವಿಕೋಪಗಳ ವಿರುದ್ಧ ರಕ್ಷಿಸಲು ನಿಮ್ಮ ಟ್ರ್ಯಾಕ್ಟರ್‌ಗೆ ಇನ್ಶೂರೆನ್ಸ್ ಮಾಡುವುದನ್ನು ಪರಿಗಣಿಸಿ.
- ಸೀಸನಲ್ ಮರುಪಾವತಿ ಆಯ್ಕೆಗಳು: ನಿಮ್ಮ ಆದಾಯವು ಸೀಸನಲ್ ಆಗಿದ್ದರೆ, ಸುಗಮ ಮರುಪಾವತಿಯನ್ನು ಖಚಿತಪಡಿಸಿಕೊಳ್ಳಲು ಸಾಲದಾತರೊಂದಿಗೆ ಕಸ್ಟಮೈಜ್ ಮಾಡಿದ ಇಎಂಐ ಪ್ಲಾನ್‌ಗಳನ್ನು ಚರ್ಚಿಸಿ.
- ಉತ್ತಮ ಕ್ರೆಡಿಟ್ ರೆಕಾರ್ಡ್ ನಿರ್ವಹಿಸುವುದು: ಸಮಯಕ್ಕೆ ಸರಿಯಾಗಿ ಟ್ರ್ಯಾಕ್ಟರ್ ಲೋನ್ ಮರುಪಾವತಿಸುವುದು ನಿಮ್ಮ ಕ್ರೆಡಿಟ್ ಅರ್ಹತೆಯನ್ನು ಸುಧಾರಿಸುತ್ತದೆ, ಭವಿಷ್ಯದಲ್ಲಿ ಉತ್ತಮ ಹಣಕಾಸಿನ ಪ್ರಾಡಕ್ಟ್‌ಗಳನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.
ಟ್ರ್ಯಾಕ್ಟರ್ ಲೋನ್‌ಗಳಿಗೆ ಅತ್ಯುತ್ತಮ ಎನ್‌ಬಿಎಫ್‌ಸಿಗಳನ್ನು ಆಯ್ಕೆ ಮಾಡುವುದರ ಪ್ರಯೋಜನಗಳು ಅನೇಕ. ಸುಲಭ ಅರ್ಹತಾ ಮಾನದಂಡ, ತ್ವರಿತ ಅನುಮೋದನೆಗಳು ಮತ್ತು ಫ್ಲೆಕ್ಸಿಬಲ್ ಮರುಪಾವತಿ ಆಯ್ಕೆಗಳೊಂದಿಗೆ, ಎನ್‌ಬಿಎಫ್‌ಸಿಗಳು ರೈತರಿಗೆ ಟ್ರ್ಯಾಕ್ಟರ್ ಮಾಲೀಕತ್ವ ಹೊಂದುವುದನ್ನು ಸರಳಗೊಳಿಸುತ್ತವೆ. ಪ್ರತಿಯೊಬ್ಬ ರೈತರೂ ಹಣಕಾಸಿನ ಒತ್ತಡವಿಲ್ಲದೆ ಆಧುನಿಕ ಯಂತ್ರೋಪಕರಣಗಳನ್ನು ಅಕ್ಸೆಸ್ ಮಾಡಲು ಅನುಕೂಲವಾಗುವಂತೆ ನಾವು ಪ್ರತಿಯೊಬ್ಬರಿಗೂ ಸೂಕ್ತವಾಗುವ ಹಣಕಾಸಿನ ಪರಿಹಾರಗಳನ್ನು ಒದಗಿಸುತ್ತೇವೆ.
ನೀವು ಕೈಗೆಟಕುವ ಟ್ರ್ಯಾಕ್ಟರ್ ಲೋನ್‌ಗಾಗಿ ಹುಡುಕುತ್ತಿದ್ದರೆ, ಟಿವಿಎಸ್ ಕ್ರೆಡಿಟ್‌ನಲ್ಲಿ ಲಭ್ಯವಿರುವ ಆಯ್ಕೆಗಳನ್ನು ಅನ್ವೇಷಿಸಿ ಮತ್ತು ಯಾವುದೇ ತೊಂದರೆಯಿಲ್ಲದೆ ನಿಮ್ಮ ಎಲ್ಲಾ ಕೃಷಿ ಅಗತ್ಯಗಳನ್ನು ಪೂರೈಸಿಕೊಳ್ಳಿ.