ರಾಷ್ಟ್ರೀಯ, ಜನವರಿ 25, 2023: ಭಾರತದ ಪ್ರಮುಖ ಎನ್‌ಬಿಎಫ್‌ಸಿಗಳಲ್ಲಿ ಒಂದಾದ ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್, ಡಿಸೆಂಬರ್ 31, 2022 ರಂದು ಕೊನೆಗೊಂಡ ತ್ರೈಮಾಸಿಕಕ್ಕೆ ತನ್ನ ಆಡಿಟ್ ಮಾಡದ ಹಣಕಾಸಿನ ಫಲಿತಾಂಶಗಳನ್ನು ಪ್ರಕಟಿಸಿತು.
ಡಿಸೆಂಬರ್ 31, 2022 ರಂದು ಕೊನೆಗೊಂಡ ಒಂಬತ್ತು ತಿಂಗಳಿಗೆ ₹ 278 ಕೋಟಿಯ ತೆರಿಗೆಯ ನಂತರದ ನಿವ್ವಳ ಲಾಭವನ್ನು ಎನ್‌ಬಿಎಫ್‌ಸಿ ವರದಿ ಮಾಡಿದೆ. ಡಿಸೆಂಬರ್'21 ಗೆ ಹೋಲಿಸಿದರೆ ಕಂಪನಿಯ ಎಯುಎಂ ಡಿಸೆಂಬರ್ 22 ರಂತೆ 53% ವರ್ಷದಿಂದ ವರ್ಷದ ಬೆಳವಣಿಗೆಯನ್ನು ನೋಂದಾಯಿಸಿತು.
Q3 ಹಣಕಾಸು ವರ್ಷ23 ಫಲಿತಾಂಶಗಳ ಸಾರಾಂಶ:
• ಡಿಸೆಂಬರ್ 22 ರಂತೆ ಎಯುಎಂ ₹ 19,541 ಕೋಟಿ ಆಗಿದೆ, ಡಿಸೆಂಬರ್'21 ಕ್ಕಿಂತ ಹೆಚ್ಚಿನ 53% ಬೆಳವಣಿಗೆ
• ಡಿಸೆಂಬರ್ 22 ಕ್ಕೆ ಕೊನೆಗೊಳ್ಳಲಾದ ಒಂಬತ್ತು ತಿಂಗಳಿಗೆ ಒಟ್ಟು ಆದಾಯವು ₹ 2,925 ಕೋಟಿ ಆಗಿತ್ತು, ಹಿಂದಿನ ವರ್ಷದ ಸಂಬಂಧಿತ ಅವಧಿಗೆ ಹೋಲಿಸಿದರೆ 47% ಹೆಚ್ಚಾಗಿದೆ
• ಡಿಸೆಂಬರ್ 22 ನ್ನು ಕೊನೆಗೊಳಿಸಿದ ಒಂಬತ್ತು ತಿಂಗಳ ತೆರಿಗೆಯ ನಂತರದ ನಿವ್ವಳ ಲಾಭವು ಹಿಂದಿನ ವರ್ಷದ ಸಂಬಂಧಿತ ಅವಧಿಗೆ ₹ 58 ಕೋಟಿಗೆ ಹೋಲಿಸಿದರೆ ₹ 278 ಕೋಟಿಯಾಗಿತ್ತು
ಕಾರ್ಯಕ್ಷಮತೆಯ ಬಗ್ಗೆ ಮಾತನಾಡಿದ ಆಶಿಷ್ ಸಪ್ರಾ, ಸಿಇಒ, "ಕ್ಯು3 ಹಣಕಾಸು ವರ್ಷ 23 ರಲ್ಲಿ, ಪ್ರಾಡಕ್ಟ್‌ಗಳಾದ್ಯಂತ ಬಲವಾದ ವೇಗದಿಂದಾಗಿ ನಮ್ಮ ಬಿಸಿನೆಸ್ ಲೋನ್ ವಿತರಣೆಗಳಲ್ಲಿ ಬೆಳವಣಿಗೆಯನ್ನು ನೋಡಿದೆ. ಈ ಹಣಕಾಸು ವರ್ಷದಲ್ಲಿ ನಾವು ಇಲ್ಲಿಯವರೆಗೆ 2 ಮಿಲಿಯನ್‌ಗಿಂತ ಹೆಚ್ಚು ಗ್ರಾಹಕರನ್ನು ಸೇರಿಸಿದ್ದೇವೆ, ಇದು ನಮ್ಮ ಒಟ್ಟು ಗ್ರಾಹಕರನ್ನು ಸುಮಾರು 10 ಮಿಲಿಯನ್‌ಗೆ ತಂದು ನಿಲ್ಲಿಸುತ್ತದೆ.
ನಾವು ವರ್ಧಿತ ಗ್ರಾಹಕರ ಅನುಭವವನ್ನು ಒದಗಿಸುವುದನ್ನು ಮುಂದುವರೆಸುತ್ತೇವೆ ಮತ್ತು ಹೊಸ ಮಾರುಕಟ್ಟೆಗಳಲ್ಲಿ ನಮ್ಮ ಹೆಜ್ಜೆಗುರುತನ್ನು ವಿಸ್ತರಿಸುತ್ತೇವೆ.”
ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್ ಬಗ್ಗೆ:
ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್ ಆರ್‌ಬಿಐಯೊಂದಿಗೆ ನೋಂದಣಿಯಾದ ಪ್ರಮುಖ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಯಾಗಿದೆ. ಭಾರತದಾದ್ಯಂತ 31,000 ಕ್ಕೂ ಹೆಚ್ಚು ಟಚ್‌ಪಾಯಿಂಟ್‌ಗಳೊಂದಿಗೆ, ಕಂಪನಿಯು ಭಾರತೀಯರನ್ನು ದೊಡ್ಡ ಕನಸುಗಳನ್ನು ಕಾಣಲು ಮತ್ತು ತಮ್ಮ ಆಕಾಂಕ್ಷೆಗಳನ್ನು ಪೂರೈಸಲು ಸಶಕ್ತಗೊಳಿಸುವ ಗುರಿಯನ್ನು ಹೊಂದಿದೆ. ಟಿವಿಎಸ್ ಮೋಟಾರ್ ಲಿಮಿಟೆಡ್‌ಗೆ ನಂಬರ್ ವನ್ ಫೈನಾನ್ಷಿಯರ್ ಆಗಿ ಮತ್ತು ಪ್ರಮುಖ ಟ್ರ್ಯಾಕ್ಟರ್ ಫೈನಾನ್ಷಿಯರ್‌ಗಳಲ್ಲಿ ಒಂದಾಗಿ, ಟಿವಿಎಸ್ ಕ್ರೆಡಿಟ್ ಬಳಸಿದ ಕಾರ್ ಲೋನ್‌ಗಳು, ಗೃಹೋಪಯೋಗಿ ವಸ್ತುಗಳ ಲೋನ್‌ಗಳು, ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್‌ಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಹೆಜ್ಜೆಗುರುತನ್ನು ಹೊಂದಿದೆ
ಮತ್ತು ಭದ್ರತೆ ರಹಿತ ಲೋನ್‌ಗಳ ವಿಭಾಗ. ದೃಢವಾದ ಹೊಸ-ಯುಗದ ತಂತ್ರಜ್ಞಾನಗಳು ಮತ್ತು ಡೇಟಾ ವಿಶ್ಲೇಷಣೆಯಿಂದ ಚಾಲಿತ, ಕಂಪನಿಯು ತನ್ನ 17,000+ ಉದ್ಯೋಗಿಗಳ ಸಹಾಯದಿಂದ ಸುಮಾರು 10 ಮಿಲಿಯನ್ ಸಂತುಷ್ಟ ಗ್ರಾಹಕರಿಗೆ ಸೇವೆ ಸಲ್ಲಿಸಿದೆ.
ರುಚಿಕಾ ರಾಣಾ
ಸೀನಿಯರ್ ಮ್ಯಾನೇಜರ್, ಬ್ರ್ಯಾಂಡಿಂಗ್ & ಕಮ್ಯುನಿಕೇಷನ್
ಮೊಬೈಲ್: +91 9910036860
ಇಮೇಲ್: ruchika.rana@tvscredit.com
ವೆಬ್:https://www.tvscredit.com/
ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ