ನಾವು, ಟಿವಿಎಸ್ ಕ್ರೆಡಿಟ್‌ನಲ್ಲಿ, ಅರ್ಹತೆ-ಆಧಾರಿತ ಔಪಚಾರಿಕ ನೇಮಕಾತಿ ಪ್ರಕ್ರಿಯೆಯನ್ನು ಹೊಂದಿದ್ದೇವೆ. ನೇಮಕಾತಿ ಪ್ರಕ್ರಿಯೆಯ ಸಮಯದಲ್ಲಿ ಅರ್ಜಿದಾರರಿಂದ ನಾವು ಯಾವುದೇ ಶುಲ್ಕ ಅಥವಾ ಡೆಪಾಸಿಟ್ ಅನ್ನು ಎಂದಿಗೂ ಕೇಳುವುದಿಲ್ಲ. ವಂಚನೆಯ ಇಮೇಲ್‌ಗಳು/ಆಫರ್‌ಗಳನ್ನು ಕಳುಹಿಸಲು TVS ಕ್ರೆಡಿಟ್ ಡೊಮೇನ್ ಐಡಿಯನ್ನು ನಕಲು ಮಾಡುವ ವಂಚಕರ ಬಗ್ಗೆ ಎಚ್ಚರವಿರಲಿ. ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

hamburger icon
products image

ಪತ್ರಿಕಾ ಪ್ರಕಟಣೆಗಳು

ವಿಶೇಷ ಒಳನೋಟಗಳು ಮತ್ತು ಮುಖ್ಯಾಂಶಗಳನ್ನು ಅನ್ವೇಷಿಸಿ

ಟಿವಿಎಸ್ ಕ್ರೆಡಿಟ್ ತನ್ನ ಬೆಳವಣಿಗೆಯ ಪ್ಲಾನ್‌ಗಳನ್ನು ಉತ್ತೇಜಿಸಲು ಪ್ರೇಮ್‌ಜಿ ಇನ್ವೆಸ್ಟ್‌ನಿಂದ ₹ 480 ಕೋಟಿಗಳ ಬಂಡವಾಳವನ್ನು ಸಂಗ್ರಹಿಸುತ್ತದೆ

ಪ್ರಕಟಣೆ: ಟಿವಿಎಸ್ ಕ್ರೆಡಿಟ್ ದಿನಾಂಕ: 9 | ಜೂನ್ | 2023

ಚೆನ್ನೈ, ಜೂನ್ 9, 2023: ಟಿವಿಎಸ್ ಕ್ರೆಡಿಟ್ ಸರ್ವಿಸಸ್ ಲಿಮಿಟೆಡ್ ("ಟಿವಿಎಸ್ ಕ್ರೆಡಿಟ್" ಅಥವಾ "ಕಂಪನಿ"), ಭಾರತದ ಪ್ರಮುಖ ಎನ್‌ಬಿಎಫ್‌ಸಿ ಗಳಲ್ಲಿ ಒಂದಾಗಿದ್ದು, ಇಂದು ಇದು ಪ್ರೇಮ್‌ಜಿ ಇನ್ವೆಸ್ಟ್ ಮೂಲಕ ₹ 480 ಕೋಟಿಗಳ ಇಕ್ವಿಟಿ ಬಂಡವಾಳವನ್ನು ಯಶಸ್ವಿಯಾಗಿ ಸಂಗ್ರಹಿಸಿದೆ ಎಂದು ಘೋಷಿಸಿತು.

ವಹಿವಾಟಿನ ಭಾಗವಾಗಿ, ಪ್ರೇಮ್‌ಜಿ ಇನ್ವೆಸ್ಟ್ ಪ್ರಾಥಮಿಕ ಮತ್ತು ಎರಡನೇ ಹೂಡಿಕೆಯ ಸಂಯೋಜನೆಯ ಮೂಲಕ ₹ 737 ಕೋಟಿಗಳವರೆಗೆ ಟಿವಿಎಸ್ ಕ್ರೆಡಿಟ್‌ನಲ್ಲಿ 9.7% ಇಕ್ವಿಟಿ ಪಾಲುದಾರಿಕೆಯನ್ನು ಪಡೆಯುತ್ತದೆ.

ಹೊಸ ಮಾರುಕಟ್ಟೆಗಳಲ್ಲಿ ತನ್ನ ಗ್ರಾಹಕರ ನೆಲೆಯನ್ನು ವಿಸ್ತರಿಸಲು, ಚಾನೆಲ್ ಪಾಲುದಾರ ನೆಟ್ವರ್ಕ್ ಹೆಚ್ಚಿಸಲು ಮತ್ತು ಡಿಜಿಟೈಸೇಶನ್ ಪ್ರಯಾಣವನ್ನು ಮುಂದುವರಿಸಲು ಟಿವಿಎಸ್ ಕ್ರೆಡಿಟ್‌ನ ಪ್ರಯತ್ನಗಳನ್ನು ಮತ್ತಷ್ಟು ಬಲಪಡಿಸಲು ಪ್ರಾಥಮಿಕ ಬಂಡವಾಳವನ್ನು ಬಳಸಿಕೊಳ್ಳಲಾಗುತ್ತದೆ. ಈ ಬಂಡವಾಳದ ಸೇರ್ಪಡೆಯೊಂದಿಗೆ, ಅನುಕೂಲಕರ ಹಣಕಾಸು ಆಯ್ಕೆಗಳನ್ನು ಒದಗಿಸುವ ಮೂಲಕ ಬೆಳೆಯುತ್ತಿರುವ ಭಾರತದ ಆಕಾಂಕ್ಷೆಗಳನ್ನು ಪೂರೈಸುವ ತನ್ನ ಗುರಿಯನ್ನು ವೇಗಗೊಳಿಸುವ ಗುರಿಯನ್ನು ಕಂಪನಿಯು ಹೊಂದಿದೆ.

ಈ ಫಂಡಿಂಗ್ ಬಗ್ಗೆ ಟಿವಿಎಸ್ ಕ್ರೆಡಿಟ್‌ನ ಅಧ್ಯಕ್ಷರಾದ ಸುದರ್ಶನ್ ವೇಣು ಅವರು, "ಟಿವಿಎಸ್ ಕ್ರೆಡಿಟ್ ಅಸಾಧಾರಣ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದೆ, ಬಲವಾದ ಮತ್ತು ಲಾಭದಾಯಕ ಬೆಳವಣಿಗೆಯನ್ನು ಸಾಧಿಸಿದೆ. ಅಲ್ಪಾವಧಿಯಲ್ಲಿ, ನಮ್ಮ ಕಂಪನಿಯ ಮ್ಯಾನೇಜ್ಮೆಂಟ್ ಅಡಿಯಲ್ಲಿನ ಸ್ವತ್ತುಗಳು (ಎಯುಎಂ) ಬಲವಾದ ಬ್ಯಾಲೆನ್ಸ್ ಶೀಟ್‌ನಿಂದ ಬೆಂಬಲಿತವಾದ ₹ 20,000 ಕೋಟಿಗಳನ್ನು ಮೀರಿವೆ. ನಮ್ಮ ಪ್ರಯಾಣದ ಮುಂದಿನ ಹಂತವನ್ನು ಪ್ರಾರಂಭಿಸಿದಾಗ, ಹೊಸ ಗ್ರಾಹಕರನ್ನು ತಲುಪಲು ಮತ್ತು ಹೆಚ್ಚಿನ ಬೆಳವಣಿಗೆಯ ವೇಗವನ್ನು ಸಾಧಿಸಲು ಡಿಜಿಟೈಸೇಶನ್ ಅನ್ನು ಬಳಸುವುದರ ಮೇಲೆ ನಮ್ಮ ಗಮನ ಕೇಂದ್ರೀಕರಿಸುತ್ತದೆ. ಪ್ರೇಮ್‌ಜಿ ಇನ್ವೆಸ್ಟ್‌ಗೆ ನಾನು ತುಂಬಾ ಅಬಾರಿಯಾಗಿದ್ದೇನೆ ಮತ್ತು ಅವರನ್ನು ಪಾಲುದಾರನಾಗಿ ಹೊಂದಲು ಸಂತೋಷಪಡುತ್ತೇನೆ. ಭಾರತೀಯ ಗ್ರಾಹಕರ ಲ್ಯಾಂಡ್‍ಸ್ಕೇಪ್ ಮತ್ತು ಹಣಕಾಸು ಸೇವಾ ಉದ್ಯಮದ ಆಳವಾದ ತಿಳುವಳಿಕೆಯೊಂದಿಗೆ, ಪ್ರೇಮ್‌ಜಿ ಇನ್ವೆಸ್ಟ್ ಕಾರ್ಯತಂತ್ರದ ಮೌಲ್ಯವನ್ನು ತರುತ್ತದೆ ಮತ್ತು ನಮ್ಮ ಬೆಳವಣಿಗೆಯ ಯೋಜನೆಗಳನ್ನು ತ್ವರಿತಗೊಳಿಸುತ್ತದೆ.”

“ಕೈಗೆಟುಕುವ ಮತ್ತು ನವೀನ ಹಣಕಾಸು ಪ್ರಾಡಕ್ಟ್‌ಗಳ ಶ್ರೇಣಿಗೆ ಸುಲಭವಾದ ಅಕ್ಸೆಸ್ ಒದಗಿಸುವ ಮೂಲಕ ಆರ್ಥಿಕ ಒಳಗೊಳ್ಳುವಿಕೆಯನ್ನು ಸುಗಮಗೊಳಿಸುವ ಟಿವಿಎಸ್ ಕ್ರೆಡಿಟ್‌ನ ಪ್ರಯಾಣದಲ್ಲಿ ಪಾಲುದಾರಿಕೆ ಹೊಂದಲು ನಮಗೆ ಸಂತೋಷವಾಗಿದೆ. ಟಿವಿಎಸ್ ಕ್ರೆಡಿಟ್ ತನ್ನ ಗ್ರಾಹಕರ ನೆಲೆಯನ್ನು ವಿಸ್ತರಿಸಲು ಮತ್ತು ಸಾಂಪ್ರದಾಯಿಕ ಹಣಕಾಸಿನಲ್ಲಿ ಒಳಗೊಂಡಿರುವ ಘರ್ಷಣೆಯನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಓಮ್ನಿ-ಚಾನೆಲ್ ವಿಧಾನದ ಮೂಲಕ ತಂತ್ರಜ್ಞಾನ ಮತ್ತು ಡಿಜಿಟಲ್ ಪಾಲುದಾರಿಕೆಗಳನ್ನು ಹತೋಟಿಗೆ ತರಲು ಪ್ರಸ್ತಾಪಿಸುತ್ತದೆ. ''ಕಂಪನಿಯು ತನ್ನ ಗುರುತಿನ ಮೂಲಕ ಉತ್ತಮ ಯಶಸ್ಸನ್ನು ಸಾಧಿಸುತ್ತದೆ ಮತ್ತು ಎಲ್ಲಾ ಪಾಲುದಾರರಿಗೆ ಗಮನಾರ್ಹ ಮೌಲ್ಯವನ್ನು ನಿರ್ಮಿಸುವುದನ್ನು ಮುಂದುವರಿಸುತ್ತದೆ ಎಂದು ನಮಗೆ ವಿಶ್ವಾಸವಿದೆ'' ಎಂದು ಪ್ರೇಮ್‌ಜಿ ಇನ್ವೆಸ್ಟ್‌ನ ಸಿಇಒ ಮತ್ತು ಮ್ಯಾನೇಜಿಂಗ್ ಪಾಲುದಾರ ಟಿಕೆ ಕುರಿಯನ್ ಹೇಳಿದರು.

ಒಳಗೊಳ್ಳುವ ಮತ್ತು ಕೈಗೆಟಕುವ ಕ್ರೆಡಿಟ್ ಆಯ್ಕೆಗಳನ್ನು ಒದಗಿಸುವ ಮೂಲಕ, ಟಿವಿಎಸ್ ಕ್ರೆಡಿಟ್ ವೈವಿಧ್ಯಮಯ ಸಾಮಾಜಿಕ-ಆರ್ಥಿಕ ಹಿನ್ನೆಲೆಗಳ ವ್ಯಕ್ತಿಗಳನ್ನು ಅವರ ಹಣಕಾಸಿನ ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತದೆ. ಕಂಪನಿಯು ಉತ್ತಮ ಕ್ರೆಡಿಟ್ ಗುಣಮಟ್ಟದೊಂದಿಗೆ ನಿರಂತರ ಬೆಳವಣಿಗೆಯನ್ನು ಸಾಧಿಸಿದೆ ಮತ್ತು ದೇಶಾದ್ಯಂತ 40,000+ ಟಚ್‌ಪಾಯಿಂಟ್‌ಗಳ ವಿಶಾಲ ನೆಟ್ವರ್ಕ್ ಮೂಲಕ ಸೇವೆ ಸಲ್ಲಿಸುವ 1 ಕೋಟಿಗಿಂತ ಹೆಚ್ಚು ಬಲವಾದ ಗ್ರಾಹಕರನ್ನು ನಿರ್ಮಿಸಿದೆ. ಎಫ್‌ವೈ23 ನಲ್ಲಿ, ಕಂಪನಿಯು ಹಿಂದಿನ ವರ್ಷಕ್ಕಿಂತ 48% ಬೆಳವಣಿಗೆಯನ್ನು ಪ್ರತಿನಿಧಿಸುವ ₹ 20,602 ಕೋಟಿಗಳ ಎಯುಎಂ ಅನ್ನು ವರದಿ ಮಾಡಿದೆ. ಕಂಪನಿಯು ಮುಂದಿನ ಕೆಲವು ವರ್ಷಗಳಲ್ಲಿ ತನ್ನ ಎಯುಎಂ ಅನ್ನು ₹ 50,000 ಕೋಟಿಗಳಿಗೆ ಬೆಳೆಸುವ ನಿರೀಕ್ಷೆ ಹೊಂದಿದೆ. ತನ್ನ ಬಲವಾದ ಫೌಂಡೇಶನ್, ಡಿಜಿಟಲ್ ಓರಿಯಂಟೇಶನ್ ಮತ್ತು ಕಾರ್ಯತಂತ್ರದ ಪಾಲುದಾರಿಕೆಗಳೊಂದಿಗೆ, ಕಂಪನಿಯು ಹಣಕಾಸಿನ ಒಳಗೊಳ್ಳುವಿಕೆ, ನಾವೀನ್ಯತೆಯನ್ನು ಚಾಲನೆ ಮಾಡುವುದು ಮತ್ತು ಅದರ ಪಾಲುದಾರರಿಗೆ ಮೌಲ್ಯವನ್ನು ನೀಡುವುದರ ಮೇಲೆ ಗಮನಹರಿಸುತ್ತದೆ.

ನೋಮುರಾ ಫೈನಾನ್ಶಿಯಲ್ ಅಡ್ವೈಸರಿ ಮತ್ತು ಜೆಎಂ ಫೈನಾನ್ಶಿಯಲ್ ಹಣಕಾಸು ಸಲಹೆಗಾರರಾಗಿ ಕಾರ್ಯ ನಿರ್ವಹಿಸಿದವು ಮತ್ತು ಖೈತಾನ್ & ಕಂಪನಿ ಟ್ರಾನ್ಸಾಕ್ಷನ್‌ನ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಿತು.

ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್ ಬಗ್ಗೆ:
ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್ ಆರ್‌ಬಿಐಯೊಂದಿಗೆ ನೋಂದಣಿಯಾದ ಪ್ರಮುಖ ಬ್ಯಾಂಕಿಂಗೇತರ ಹಣಕಾಸು ಕಂಪನಿಯಾಗಿದೆ. ಭಾರತದಾದ್ಯಂತ 40,000 ಕ್ಕೂ ಹೆಚ್ಚು ಟಚ್‌ಪಾಯಿಂಟ್‌ಗಳೊಂದಿಗೆ, ಕಂಪನಿಯು ಭಾರತೀಯರನ್ನು ದೊಡ್ಡ ಕನಸುಗಳನ್ನು ಕಾಣಲು ಮತ್ತು ತಮ್ಮ ಆಕಾಂಕ್ಷೆಗಳನ್ನು ಪೂರೈಸಲು ಸಶಕ್ತಗೊಳಿಸುವ ಗುರಿಯನ್ನು ಹೊಂದಿದೆ. ಟಿವಿಎಸ್ ಮೋಟಾರ್ ಕಂಪನಿ ಲಿಮಿಟೆಡ್‌ಗೆ ನಂಬರ್ ವನ್ ಫೈನಾನ್ಷಿಯರ್ ಆಗಿ ಮತ್ತು ಪ್ರಮುಖ ಟ್ರ್ಯಾಕ್ಟರ್ ಫೈನಾನ್ಷಿಯರ್‌ಗಳಲ್ಲಿ ಒಂದಾಗಿ, ಟಿವಿಎಸ್ ಕ್ರೆಡಿಟ್ ಬಳಸಿದ ಕಾರ್ ಲೋನ್‌ಗಳು, ಗೃಹೋಪಯೋಗಿ ವಸ್ತುಗಳ ಲೋನ್‌ಗಳು, ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್‌ಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಹೆಜ್ಜೆಗುರುತನ್ನು ಹೊಂದಿದೆ
ಲೋನ್‌ಗಳು ಮತ್ತು ಭದ್ರತೆ ರಹಿತ ಲೋನ್‌ಗಳ ವಿಭಾಗ. ದೃಢವಾದ ಹೊಸ-ಯುಗದ ತಂತ್ರಜ್ಞಾನಗಳು ಮತ್ತು ಡೇಟಾ ವಿಶ್ಲೇಷಣೆಯಿಂದ ಚಾಲಿತ, ಕಂಪನಿಯು ತನ್ನ 19,000+ ಉದ್ಯೋಗಿಗಳ ಸಹಾಯದಿಂದ 1 ಕೋಟಿಗಿಂತ ಹೆಚ್ಚು ಸಂತೃಪ್ತ ಗ್ರಾಹಕರಿಗೆ ಸೇವೆ ಸಲ್ಲಿಸಿದೆ.

ಪ್ರೇಮ್‌ಜಿ ಇನ್ವೆಸ್ಟ್ ಪರಿಚಯ:
ಪ್ರೇಮ್‌ಜಿ ಇನ್ವೆಸ್ಟ್ (ಪಿಐ) ಪ್ರಾಥಮಿಕವಾಗಿ ಅಜೀಮ್ ಪ್ರೇಮ್‌ಜಿ ಫೌಂಡೇಶನ್‌ನ ಜನಪ್ರೀತಿಯುಳ್ಳ ತೊಡಗುವಿಕೆಗಳನ್ನು ಬೆಂಬಲಿಸುತ್ತದೆ, ಇದು ಸಮಾಜದಲ್ಲಿ ಕಡಗಣನೆಗೆ ಒಳಪಟ್ಟ ಮತ್ತು ಸೇವಾ ವಂಚಿತರ ಜೀವನವನ್ನು ಸುಧಾರಿಸಲು ಸಹಾಯ ಮಾಡುವ ಲಾಭರಹಿತ ಸಂಸ್ಥೆಯಾಗಿದೆ. ಪಿಐ ಭಾರತ ಮತ್ತು ವಿದೇಶಗಳಲ್ಲಿ ಹೂಡಿಕೆ ಮಾಡುತ್ತದೆ. ಉದಯೋನ್ಮುಖ ಮತ್ತು ಹಾನಿರಕಾರಕವಲ್ಲದ ತಂತ್ರಜ್ಞಾನಗಳನ್ನು ಬೆಂಬಲಿಸುವುದು ಮತ್ತು ದೇಶದಲ್ಲಿ ಉದ್ಯಮಶೀಲತೆಯ ಮನೋಭಾವವನ್ನು ಪೋಷಿಸುವುದು ಪಿಐನ ಧ್ಯೇಯವಾಗಿದೆ. ಉತ್ಪಾದಕತೆಯನ್ನು ಸುಧಾರಿಸುವಲ್ಲಿ ತಂತ್ರಜ್ಞಾನದ ಪರಿವರ್ತಕ ಪಾತ್ರದಲ್ಲಿ ಇದು ಬಲವಾಗಿ ನಂಬಿಕೆ ಹೊಂದಿದೆ, ಇದು ಸಾಮಾಜಿಕ ಉತ್ತೇಜನದ ಮೇಲೆ ಪರಿಣಾಮ ಬೀರುತ್ತದೆ. ಹಣಕಾಸು ಸೇವೆಗಳು, ತಂತ್ರಜ್ಞಾನ, ಗ್ರಾಹಕ ಮತ್ತು ಆರೋಗ್ಯ ರಕ್ಷಣೆಯು ಪಿಐ ಹೂಡಿಕೆ ಮಾಡುವ ಪ್ರಮುಖ ಪ್ರದೇಶಗಳಾಗಿವೆ.

ಹೆಚ್ಚಿನ ಯಾವುದೇ ಪ್ರಶ್ನೆಗಳಿಗೆ, ದಯವಿಟ್ಟು ನಮ್ಮ ಕಾರ್ಪೊರೇಟ್ ಸಂವಹನ ತಂಡದ ಇಮೇಲ್ ಐಡಿ corporatecomms@tvscredit.com ಗೆ ಮೇಲ್ ಮಾಡಿ

ಮಾಧ್ಯಮ ಸಂಪರ್ಕಗಳು: ಟಿವಿಎಸ್ ಕ್ರೆಡಿಟ್

ರುಚಿಕಾ ರಾಣಾ
ಸೀನಿಯರ್ ಮ್ಯಾನೇಜರ್, ಬ್ರ್ಯಾಂಡಿಂಗ್ & ಕಮ್ಯುನಿಕೇಷನ್
ಮೊಬೈಲ್: +91 9910036860
ಇಮೇಲ್: ruchika.rana@tvscredit.com
ವೆಬ್:https://www.tvscredit.com/


  • ಇದನ್ನು ಇಲ್ಲಿ ಹಂಚಿಕೊಳ್ಳಿ

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ