ರಾಷ್ಟ್ರೀಯ, ನವೆಂಬರ್ 04, 2022: ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್, ಭಾರತದ ಪ್ರಮುಖ ಎನ್‌ಬಿಎಫ್‌ಸಿಗಳಲ್ಲಿ ಒಂದಾಗಿದ್ದು, ಸೆಪ್ಟೆಂಬರ್ 30, 2022 ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು ಅರ್ಧ ವರ್ಷಕ್ಕೆ ತನ್ನ ಲೆಕ್ಕಪರಿಶೋಧನೆ ಮಾಡದ ಹಣಕಾಸು ಫಲಿತಾಂಶಗಳನ್ನು ಪ್ರಕಟಿಸಿದೆ.
ಎನ್‌ಬಿಎಫ್‌ಸಿ ಎಚ್1 ಹಣಕಾಸು ವರ್ಷ 23 ಕ್ಕೆ ₹ 179.54 ಕೋಟಿಯ ತೆರಿಗೆಯ ನಂತರ ನಿವ್ವಳ ಲಾಭವನ್ನು ವರದಿ ಮಾಡಿದೆ. ಸೆಪ್ಟೆಂಬರ್'22 ರಂತೆ ಕಂಪನಿಯ ಎಯುಎಂ ಮಾರ್ಚ್'22 ರಂತೆ ₹ 13,911 ಕೋಟಿಗೆ ಹೋಲಿಸಿದರೆ 25% ರಿಂದ ₹ 17,448 ಕೋಟಿಗೆ ಹೆಚ್ಚಾಗಿದೆ. ಕ್ವಾರ್ಟರ್2 ಹಣಕಾಸು ವರ್ಷ 23 ಕ್ಕೆ ಕಂಪನಿಯು ತೆರಿಗೆಯ ನಂತರದ ₹ 96.24 ಕೋಟಿಯ ಎಲ್ಲಾ ಸಮಯಕ್ಕಿಂತಲೂ ಹೆಚ್ಚಿನ ತ್ರೈಮಾಸಿಕ ನಿವ್ವಳ ಲಾಭವನ್ನು ವರದಿ ಮಾಡಿದೆ.
Q2 ಹಣಕಾಸು ವರ್ಷ23 ಫಲಿತಾಂಶಗಳ ಸಾರಾಂಶ:
• ತ್ರೈಮಾಸಿಕಕ್ಕೆ ಒಟ್ಟು ಆದಾಯ ₹ 962.34 ಕೋಟಿ ಆಗಿತ್ತು, ಕ್ವಾರ್ಟರ್2 ಹಣಕಾಸು ವರ್ಷ 22 ಗೆ ಹೋಲಿಸಿದರೆ 46% ಹೆಚ್ಚಳ
• ಸೆಪ್ಟೆಂಬರ್'22 ಪ್ರಕಾರ ಎಯುಎಂ ₹ 17,448 ಕೋಟಿ ಆಗಿದೆ
• ತ್ರೈಮಾಸಿಕಕ್ಕೆ ತೆರಿಗೆಯ ನಂತರ ನಿವ್ವಳ ಲಾಭವು ₹ 96.24 ಕೋಟಿಯಾಗಿತ್ತು, ಕ್ವಾರ್ಟರ್2 ಹಣಕಾಸು ವರ್ಷ 22 ರಲ್ಲಿ ₹ 26.41 ಕೋಟಿಗೆ ಹೋಲಿಸಿದರೆ, ಇದು 264% ಬೆಳವಣಿಗೆಯಾಗಿದೆ.
ಕಾರ್ಯನಿರ್ವಹಣೆಯ ಕುರಿತು ಪ್ರತಿಕ್ರಿಯಿಸಿದ ಸಿಇಒ ಶ್ರೀ ಆಶಿಶ್ ಸಪ್ರಾ, , “ಅರ್ಧ ವಾರ್ಷಿಕ 1 ಹಣಕಾಸು ವರ್ಷ23 ರಲ್ಲಿ, ನಮ್ಮ ವ್ಯಾಪಾರವು ಉತ್ತಮ ಮಾನ್ಸೂನ್ ಜೊತೆಗೆ ದೃಢವಾದ ಗ್ರಾಹಕರ ಭಾವನೆಯಿಂದ ಹೆಚ್ಚಾಗಿ ಆವೇಗವನ್ನು ಪಡೆದುಕೊಂಡಿದೆ. ಕ್ವಾರ್ಟರ್2 ಹಣಕಾಸು ವರ್ಷ23 ನಲ್ಲಿ ಟ್ರ್ಯಾಕ್ಟರ್ ಲೋನ್ ವಿತರಣೆಗಳು ಕ್ವಾರ್ಟರ್2 ಹಣಕಾಸು ವರ್ಷ22 ಗೆ ಸಂಬಂಧಿಸಿದಂತೆ 130% ರಷ್ಟು ಬೆಳೆದಿವೆ. ನಾವು ಅರ್ಧ ವಾರ್ಷಿಕ1 ಹಣಕಾಸು ವರ್ಷ23 ನಲ್ಲಿ 1.6 ಮಿಲಿಯನ್+ ಗ್ರಾಹಕರನ್ನು ಸೇರಿಸಿದ್ದೇವೆ, ನಮ್ಮ ಒಟ್ಟು ಗ್ರಾಹಕರ ಸಂಖ್ಯೆ ಈ ದಿನಾಂಕದವರೆಗೆ 9.4 ಮಿಲಿಯನ್+ ಗೆ ಬಂದಿದೆ. ಏಳು ರಾಜ್ಯಗಳಲ್ಲಿ ಹೊಸ ಮಾರುಕಟ್ಟೆಗಳನ್ನು ಪ್ರವೇಶಿಸುವ ಮೂಲಕ ನಾವು ಕನ್ಸ್ಯೂಮರ್ ಲೋನ್‌ಗಳ ವ್ಯವಹಾರವನ್ನು ಹೆಚ್ಚಿಸಿದ್ದೇವೆ. ನಮ್ಮ ಪ್ರಮುಖ ಗಮನಹರಿಸುವ ಪ್ರದೇಶಗಳಲ್ಲಿ ಡಿಜಿಟೈಸೇಶನ್ ಒಂದಾಗಿರುವುದರಿಂದ, ಉತ್ತಮ ಗ್ರಾಹಕ ಅನುಭವವನ್ನು ಒದಗಿಸಲು ನಾವು ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದನ್ನು ಮುಂದುವರೆಸಿದ್ದೇವೆ. ಟೂ ವೀಲರ್ ಲೋನ್ ಬಿಸಿನೆಸ್‌ಗಾಗಿ ಕೇವಲ 2 ನಿಮಿಷಗಳಲ್ಲಿ ಲೋನ್ ಅನುಮೋದನೆಗಳನ್ನು ಪರಿಚಯಿಸುವುದರಿಂದ ನಮ್ಮ ಚಾನೆಲ್ ಪಾಲುದಾರರ ವಿಶ್ವಾಸವನ್ನು ಪಡೆಯಲು ನಮಗೆ ಸಹಾಯ ಮಾಡಿದೆ’’.
ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್ ಬಗ್ಗೆ:
ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್ ಆರ್‌ಬಿಐಯೊಂದಿಗೆ ನೋಂದಣಿಯಾದ ಪ್ರಮುಖ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಯಾಗಿದೆ. ಭಾರತದಾದ್ಯಂತ 31,000 ಕ್ಕೂ ಹೆಚ್ಚು ಟಚ್‌ಪಾಯಿಂಟ್‌ಗಳೊಂದಿಗೆ, ಕಂಪನಿಯು ಭಾರತೀಯರನ್ನು ದೊಡ್ಡ ಕನಸುಗಳನ್ನು ಕಾಣಲು ಮತ್ತು ತಮ್ಮ ಆಕಾಂಕ್ಷೆಗಳನ್ನು ಪೂರೈಸಲು ಸಶಕ್ತಗೊಳಿಸುವ ಗುರಿಯನ್ನು ಹೊಂದಿದೆ. ಟಿವಿಎಸ್ ಮೋಟಾರ್ ಲಿಮಿಟೆಡ್‌ಗೆ ನಂಬರ್ ಒನ್ ಫೈನಾನ್ಷಿಯರ್ ಮತ್ತು ಪ್ರಮುಖ ಟ್ರ್ಯಾಕ್ಟರ್ ಫೈನಾನ್ಷಿಯರ್‌ಗಳಲ್ಲಿ ಒಂದಾಗಿರುವ ಟಿವಿಎಸ್ ಕ್ರೆಡಿಟ್ ಬಳಸಿದ ಕಾರು ಲೋನ್‌ಗಳು, ಗೃಹೋಪಯೋಗಿ ವಸ್ತುಗಳ ಲೋನ್‌ಗಳು, ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್‌ಗಳು ಮತ್ತು ವ್ಯಾಪಾರ ಸಾಲಗಳ ವಿಭಾಗದಲ್ಲಿ ವೇಗವಾಗಿ ಬೆಳೆಯುತ್ತಿರುವ ಹೆಜ್ಜೆಗುರುತನ್ನು ಹೊಂದಿದೆ. ದೃಢವಾದ ಹೊಸ-ಯುಗದ ತಂತ್ರಜ್ಞಾನಗಳು ಮತ್ತು ಡೇಟಾ ವಿಶ್ಲೇಷಣೆಯಿಂದ ಚಾಲಿತ, ಕಂಪನಿಯು ತನ್ನ 17,000+ ಉದ್ಯೋಗಿಗಳ ಸಹಾಯದಿಂದ 9.4 ಮಿಲಿಯನ್‌ಗಿಂತ ಹೆಚ್ಚು ಸಂತುಷ್ಟ ಗ್ರಾಹಕರಿಗೆ ಸೇವೆ ಸಲ್ಲಿಸಿದೆ.
ರುಚಿಕಾ ರಾಣಾ
ಸೀನಿಯರ್ ಮ್ಯಾನೇಜರ್, ಸಾರ್ವಜನಿಕ ಸಂಬಂಧಗಳು ಮತ್ತು ಆಂತರಿಕ ಸಂವಹನಗಳು
ಮೊಬೈಲ್: +91 9910036860
ಇಮೇಲ್: ruchika.rana@tvscredit.com
ವೆಬ್:https://www.tvscredit.com
ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ