ಬೆಂಗಳೂರು, 27 ಜನವರಿ 2025: ಭಾರತದ ಪ್ರಮುಖ ಎನ್‌ಬಿಎಫ್‌ಸಿಗಳಲ್ಲಿ ಒಂದಾದ ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್, ಡಿಸೆಂಬರ್ 31, 2024 ರಂದು ಕೊನೆಗೊಂಡ ತ್ರೈಮಾಸಿಕ ಮತ್ತು ಒಂಬತ್ತು ತಿಂಗಳಿಗೆ ತನ್ನ ಆಡಿಟ್ ಮಾಡದ ಹಣಕಾಸಿನ ಫಲಿತಾಂಶಗಳನ್ನು ಪ್ರಕಟಿಸಿದೆ, ಇದು ಕಂಪನಿಯ ದೃಢವಾದ ಬೆಳವಣಿಗೆ ಮತ್ತು ಹಣಕಾಸಿನ ಸ್ಥಿರತೆಯನ್ನು ಪ್ರತಿಬಿಂಬಿಸುತ್ತದೆ. ಡಿಸೆಂಬರ್ 31, 2024 ರಂದು ಕೊನೆಗೊಂಡ ಒಂಬತ್ತು ತಿಂಗಳಿಗೆ ₹541 ಕೋಟಿಯ ತೆರಿಗೆಯ ನಂತರದ ನಿವ್ವಳ ಲಾಭವನ್ನು ಎನ್‌ಬಿಎಫ್‌ಸಿ ವರದಿ ಮಾಡಿದೆ.
ಡಿಸೆಂಬರ್ 24 ರಂತೆ ಕಂಪನಿಯು ₹27,190 ಕೋಟಿ ಮೌಲ್ಯದ ನಿರ್ವಹಣೆಯಲ್ಲಿರುವ ಆಸ್ತಿಯನ್ನು (ಎಯುಎಂ) ವರದಿ ಮಾಡಿದೆ, ಡಿಸೆಂಬರ್ 23 ಕ್ಕೆ ಹೋಲಿಸಿದರೆ ಇದು 7% ವಾರ್ಷಿಕ ಬೆಳವಣಿಗೆಯನ್ನು ದಾಖಲಿಸಿದೆ.
ಕ್ವಾರ್ಟರ್3 ಹಣಕಾಸು ವರ್ಷ25 ಮುಖ್ಯಾಂಶಗಳು:
ಹಣಕಾಸು ವರ್ಷ25 ರ 9 ತಿಂಗಳ ಮುಖ್ಯಾಂಶಗಳು:
ಹಣಕಾಸು ವರ್ಷ 25 ರ 3 ನೇ ತ್ರೈಮಾಸಿಕದಲ್ಲಿ, ಹಬ್ಬದ ಉತ್ಸಾಹ, ಹೆಚ್ಚಿದ ಬಳಕೆ ಮತ್ತು ಆಕರ್ಷಕ ಗ್ರಾಹಕ ಆಫರ್‌ಗಳ ಕಾರಣದಿಂದ ಸಾಲದ ಬೇಡಿಕೆಯು ಹೆಚ್ಚಾಗಿದೆ. ಟಿವಿಎಸ್ ಕ್ರೆಡಿಟ್ ಈ ಅವಧಿಯಲ್ಲಿ ವಿಶೇಷವಾಗಿ ಕನ್ಸ್ಯೂಮರ್ ಲೋನ್‌ಗಳು ಮತ್ತು ವಾಹನ ಫೈನಾನ್ಸ್‌ನಲ್ಲಿ ಮಾರುಕಟ್ಟೆ ಪಾಲಿನಲ್ಲಿ ಸುಧಾರಣೆಯೊಂದಿಗೆ ಆರೋಗ್ಯಕರ ಬೆಳವಣಿಗೆಯನ್ನು ನೋಡಿದೆ. ಹಣಕಾಸು ವರ್ಷ 25 ರ 3 ನೇ ತ್ರೈಮಾಸಿಕದಲ್ಲಿ, ಟಿವಿಎಸ್ ಕ್ರೆಡಿಟ್ ತನ್ನ ಗ್ರಾಹಕರಲ್ಲಿ ಇದುವರೆಗಿನ ಅತ್ಯಧಿಕ ತ್ರೈಮಾಸಿಕ ಬೆಳವಣಿಗೆಯನ್ನು ಕಂಡಿದೆ, ದಾಖಲೆಯ16 ಲಕ್ಷ ಹೊಸ ಗ್ರಾಹಕರಿಗೆ ಸಾಲದ ಪ್ರಾಡಕ್ಟ್‌ಗಳನ್ನು ವಿತರಿಸುವ ಜೊತೆಗೆ, ಅದರ ಒಟ್ಟು ಗ್ರಾಹಕರ ಸಂಖ್ಯೆ ಸುಮಾರು 1.8 ಕೋಟಿಗೆ ತಲುಪಿದೆ.
ಉತ್ಪನ್ನದ ಕೊಡುಗೆಗಳು, ವಿತರಣೆ, ಡಿಜಿಟಲ್ ಪರಿವರ್ತನೆ, ಗ್ರಾಹಕರ ಅನುಭವ ಮತ್ತು ಕಾರ್ಯಾಚರಣೆಯ ದಕ್ಷತೆಯನ್ನು ವಿಸ್ತರಿಸಲು ಟಿವಿಎಸ್ ಕ್ರೆಡಿಟ್ ತನ್ನ ಬದ್ಧತೆಯಲ್ಲಿ ದೃಢವಾಗಿ ನಿಂತಿದೆ.
ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್ ಬಗ್ಗೆ:
ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್ ಅರ್‌ಬಿಐ ನೊಂದಿಗೆ ನೋಂದಣಿಯಾದ ಭಾರತದ ಪ್ರಮುಖ ಮತ್ತು ವೈವಿಧ್ಯಮಯ ಬ್ಯಾಂಕಿಂಗೇತರ ಹಣಕಾಸು ಕಂಪನಿಗಳಲ್ಲಿ ಒಂದಾಗಿದೆ. ಭಾರತದಾದ್ಯಂತ 49,300 ಕ್ಕೂ ಹೆಚ್ಚು ಟಚ್‌ಪಾಯಿಂಟ್‌ಗಳೊಂದಿಗೆ, ಕಂಪನಿಯು ಭಾರತೀಯರಿಗೆ ದೊಡ್ಡ ಕನಸುಗಳನ್ನು ಕಾಣಲು ಮತ್ತು ತಮ್ಮ ಆಕಾಂಕ್ಷೆಗಳನ್ನು ಪೂರೈಸಲು ಸಶಕ್ತಗೊಳಿಸುವ ಗುರಿಯನ್ನು ಹೊಂದಿದೆ. ಟಿವಿಎಸ್ ಮೋಟಾರ್ ಕಂಪನಿ ಲಿಮಿಟೆಡ್‌ಗೆ ನಂಬರ್ ಒನ್ ಫೈನಾನ್ಷಿಯರ್ ಆಗಿದೆ ಮತ್ತು ಪ್ರಮುಖ ಗೃಹೋಪಯೋಗಿ ಮತ್ತು ಮೊಬೈಲ್ ಫೋನ್ ಫೈನಾನ್ಷಿಯರ್‌ಗಳಲ್ಲಿ ಒಂದಾಗಿದೆ, ಟಿವಿಎಸ್ ಕ್ರೆಡಿಟ್ ಉಪಯೋಗಿಸಿದ ಕಾರು ಲೋನ್‌ಗಳು, ಟ್ರ್ಯಾಕ್ಟರ್ ಲೋನ್‌ಗಳು, ಉಪಯೋಗಿಸಿದ ಕಮರ್ಷಿಯಲ್ ವೆಹಿಕಲ್ ಲೋನ್‌ಗಳು ಮತ್ತು ಭದ್ರತೆ ರಹಿತ ಲೋನ್‌ಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಹೆಜ್ಜೆಗುರುತನ್ನು ಹೊಂದಿದೆ. ದೃಢವಾದ ಹೊಸ-ಯುಗದ ತಂತ್ರಜ್ಞಾನಗಳು ಮತ್ತು ಡೇಟಾ ವಿಶ್ಲೇಷಣೆಯಿಂದ ಚಾಲಿತ, ಕಂಪನಿಯು ಸುಮಾರು 1.8 ಕೋಟಿ ಸಂತೃಪ್ತ ಗ್ರಾಹಕರಿಗೆ ಸೇವೆ ಸಲ್ಲಿಸಿದೆ.
ಮಾಧ್ಯಮ ಸಂಪರ್ಕಗಳು:
ಪೌಲ್ ಎಬೆನೆಜರ್
ಮೊಬೈಲ್: +91 7397398709
ಇಮೇಲ್: paul.ebenezer@tvscredit.com