ನಾವು, ಟಿವಿಎಸ್ ಕ್ರೆಡಿಟ್‌ನಲ್ಲಿ, ಅರ್ಹತೆ-ಆಧಾರಿತ ಔಪಚಾರಿಕ ನೇಮಕಾತಿ ಪ್ರಕ್ರಿಯೆಯನ್ನು ಹೊಂದಿದ್ದೇವೆ. ನೇಮಕಾತಿ ಪ್ರಕ್ರಿಯೆಯ ಸಮಯದಲ್ಲಿ ಅರ್ಜಿದಾರರಿಂದ ನಾವು ಯಾವುದೇ ಶುಲ್ಕ ಅಥವಾ ಡೆಪಾಸಿಟ್ ಅನ್ನು ಎಂದಿಗೂ ಕೇಳುವುದಿಲ್ಲ. ವಂಚನೆಯ ಇಮೇಲ್‌ಗಳು/ಆಫರ್‌ಗಳನ್ನು ಕಳುಹಿಸಲು TVS ಕ್ರೆಡಿಟ್ ಡೊಮೇನ್ ಐಡಿಯನ್ನು ನಕಲು ಮಾಡುವ ವಂಚಕರ ಬಗ್ಗೆ ಎಚ್ಚರವಿರಲಿ. ಇನ್ನಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

Hamburger Menu Icon
products image

ಪತ್ರಿಕಾ ಪ್ರಕಟಣೆಗಳು

ವಿಶೇಷ ಒಳನೋಟಗಳು ಮತ್ತು ಮುಖ್ಯಾಂಶಗಳನ್ನು ಅನ್ವೇಷಿಸಿ

ಟಿವಿಎಸ್ ಕ್ರೆಡಿಟ್‌ನ "ಪ್ರಗತಿ ಪರ್ವ್" ಲೋನ್ ಮೇಳ ಬಲವಾದ ಗ್ರಾಹಕ ಸಂಪರ್ಕಗಳು ಮತ್ತು ತೊಡಗುವಿಕೆಯೊಂದಿಗೆ ಮುಗಿಯುತ್ತದೆ

ಪ್ರಕಟಣೆ: ಟಿವಿಎಸ್ ಕ್ರೆಡಿಟ್ ದಿನಾಂಕ: 17 | ಜುಲೈ | 2023

ಉತ್ತರ ಪ್ರದೇಶ, ಜುಲೈ 17, 2023: ಪ್ರಮುಖ ಹಣಕಾಸು ಸೇವಾ ಪೂರೈಕೆದಾರರಲ್ಲಿ ಒಂದಾದ ಟಿವಿಎಸ್ ಕ್ರೆಡಿಟ್, ಸೀತಾಪುರ, ಉತ್ತರ ಪ್ರದೇಶದ ಆರ್‌ಎಂಪಿ ಗ್ರೌಂಡ್‌ನಲ್ಲಿ ಜುಲೈ 6 ರಿಂದ ಜುಲೈ 9 ರವರೆಗೆ ನಡೆದ ಅದರ ಪ್ರಮುಖ ಲೋನ್ ಮೇಳ, "ಪ್ರಗತಿ ಪರ್ವ್" ಅನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ.

ಸೀತಾಪುರದ ಜನರಿಗೆ ತಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಲು ಮತ್ತು ಅವರ ಅಗತ್ಯಗಳ ಮೇಲೆ ಕೇಂದ್ರೀಕೃತ ಪರಿಹಾರಗಳನ್ನು ಒದಗಿಸುವ ಗುರಿಯನ್ನು ಲೋನ್ ಮೇಳ ಹೊಂದಿದೆ. ತ್ವರಿತ ಸಾಲದ ಅನುಮೋದನೆಗಳು ಮತ್ತು ಸುಲಭ ಅಪ್ಲಿಕೇಶನ್ ಪ್ರಕ್ರಿಯೆಗಳೊಂದಿಗೆ, ಕಂಪನಿಯು ಮೊಬೈಲ್ ಮತ್ತು ಗೃಹೋಪಯೋಗಿ ವಸ್ತುಗಳು, ಟೂ ವೀಲರ್ ಮತ್ತು ಟ್ರ್ಯಾಕ್ಟರ್ ಖರೀದಿಗಳಿಗೆ ಗರಿಷ್ಠ ಸಾಲಗಳನ್ನು ವಿತರಿಸಿತು.

ಈ ಕಾರ್ಯಕ್ರಮವು ಸಂವಾದಾತ್ಮಕ ಅಧಿವೇಶನಗಳು, ಮಾಹಿತಿಪೂರ್ಣ ಚರ್ಚೆಗಳು ಮತ್ತು ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸಿದ ಹತ್ತಿರದ ಪಟ್ಟಣಗಳು ಮತ್ತು ಹಳ್ಳಿಗಳಿಂದ ಹಾಜರಾದ 1000 ಕ್ಕೂ ಹೆಚ್ಚು ಜನರನ್ನು ಕೂಡ ಆಕರ್ಷಿಸಿತು.

ಈ ಕಾರ್ಯಕ್ರಮದ ಬಗ್ಗೆ ಟಿವಿಎಸ್ ಕ್ರೆಡಿಟ್‌ನ ಸಿಎಂಒ ಚರಣದೀಪ್ ಸಿಂಗ್ ಮಾತನಾಡಿ, "ಪ್ರಗತಿ ಪರ್ವ್‌ಗಾಗಿ ಪಡೆದ ಅಗಾಧ ಪ್ರತಿಕ್ರಿಯೆಯಿಂದ ನಮಗೆ ಸಂತೋಷವಾಗಿದೆ. ಈ ಕಾರ್ಯಕ್ರಮವು ಬಲವಾದ ಸಂಪರ್ಕಗಳನ್ನು ಬೆಳೆಸಲು, ವೈವಿಧ್ಯಮಯ ಗ್ರಾಹಕರ ಅಗತ್ಯಗಳನ್ನು ಪರಿಣಾಮಕಾರಿಯಾಗಿ ಪೂರೈಸಲು ಅನುಗುಣವಾದ ಹಣಕಾಸಿನ ಪರಿಹಾರಗಳನ್ನು ಒದಗಿಸಲು ನಮ್ಮ ಬದ್ಧತೆಯನ್ನು ಬಲಪಡಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸಿದೆ ಎಂದರು.”

ಬುದ್ರಾಮ್ ಆಟೋ, ಕಿಸಾನ್ ಉಗ್ರೋ ಮಾರ್ಟ್, ಸೂರ್ಯವಂಶ್ & ಸನ್ಸ್, ಶ್ರೀ ಶ್ಯಾಮ್ ಟ್ರ್ಯಾಕ್ಟರ್ಸ್, ಪಂಜಾಬ್ ಟ್ರ್ಯಾಕ್ಟರ್ಸ್, ಕಿಸಾನ್ ಟ್ರ್ಯಾಕ್ಟರ್ಸ್, ಅವಧ್ ಎಲೆಕ್ಟ್ರಾನಿಕ್ಸ್, ಆರ್.ಕೆ ಟ್ರೇಡಿಂಗ್ ಮತ್ತು ಅಲ್ ಅಹಾದ್ ಮೊಬೈಲ್ ಪಾಯಿಂಟ್ ಸೇರಿದಂತೆ ಕಂಪನಿಯ ಡೀಲರ್ ಪಾಲುದಾರರು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ.

"ಟಿವಿಎಸ್ ಕ್ರೆಡಿಟ್‌ನ ಸಾಲದ ಕೊಡುಗೆಗಳು, ಆಕರ್ಷಕ ಸ್ಕೀಮ್‌ಗಳು ಮತ್ತು ಸುಲಭ ಹಣಕಾಸು ಆಯ್ಕೆಗಳೊಂದಿಗೆ, ಗ್ರಾಹಕರಿಗೆ ತಮ್ಮ ಆಕಾಂಕ್ಷೆಗಳನ್ನು ಸಾಧಿಸಲು ಸಹಾಯ ಮಾಡಿದೆ, ಇದರಿಂದಾಗಿ ನನ್ನ ಬಿಸಿನೆಸ್‌ನಲ್ಲಿ ಗಮನಾರ್ಹ ಹೆಚ್ಚಳವಾಗಿದೆ." ಎಂದು ಪ್ರಗತಿ ಪರ್ವ್‌ನಲ್ಲಿನ ಪಾಲುದಾರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ
ಟೂ ವೀಲರ್ ಲೋನ್‌ಗಳು, ಟ್ರ್ಯಾಕ್ಟರ್ ಲೋನ್‌ಗಳು, ಆನ್ಲೈನ್ ಪರ್ಸನಲ್ ಲೋನ್‌ಗಳು, ಬಳಸಿದ ಕಮರ್ಷಿಯಲ್ ವಾಹನ ಲೋನ್‌ಗಳು, ಮೊಬೈಲ್ ಲೋನ್‌ಗಳು, ಕನ್ಸ್ಯೂಮರ್ ಲೋನ್‌ಗಳು, ಇನ್ಸ್ಟಾಕಾರ್ಡ್, ತ್ರಿ ವೀಲರ್ ಲೋನ್‌ಗಳು ಮತ್ತು ಬಳಸಿದ ಕಾರು ಲೋನ್‌ಗಳನ್ನು ಒಳಗೊಂಡಂತೆ ಭಾರತದ ಬೆಳವಣಿಗೆಯ ಬೇಡಿಕೆಗಳನ್ನು ಪೂರೈಸಲು ಕಂಪನಿಯು ವಿಶಾಲ ಶ್ರೇಣಿಯ ಹಣಕಾಸು ಪ್ರಾಡಕ್ಟ್‌ಗಳನ್ನು ಒದಗಿಸುತ್ತದೆ.

ಅನುಬಂಧಗಳು:
ಲೋನ್ ಮೇಳ "ಪ್ರಗತಿ ಪರ್ವ್" ನ ಫೋಟೋಗಳು

Pragati Parv

ಮಾಧ್ಯಮ ಸಂಪರ್ಕಗಳು: ಟಿವಿಎಸ್ ಕ್ರೆಡಿಟ್

ರುಚಿಕಾ ರಾಣಾ
ಸೀನಿಯರ್ ಮ್ಯಾನೇಜರ್, ಬ್ರ್ಯಾಂಡಿಂಗ್ & ಕಮ್ಯುನಿಕೇಷನ್
ಮೊಬೈಲ್: +91 9910036860
ಇಮೇಲ್: ruchika.rana@tvscredit.com
ವೆಬ್:https://www.tvscredit.com


  • ಇದನ್ನು ಇಲ್ಲಿ ಹಂಚಿಕೊಳ್ಳಿ
  • Share it on Facebook
  • Share it on Twitter
  • Share it on Linkedin

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ