ಉತ್ತರ ಪ್ರದೇಶ, ಜುಲೈ 09, 2023: ಪ್ರಮುಖ ಹಣಕಾಸು ಸೇವಾ ಪೂರೈಕೆದಾರರಲ್ಲಿ ಒಂದಾದ ಟಿವಿಎಸ್ ಕ್ರೆಡಿಟ್, 'ಟಿವಿಎಸ್ ಕ್ರೆಡಿಟ್ ಪ್ರಗತಿ ಪರ್ವ್' ಪ್ರಾರಂಭವನ್ನು ಘೋಷಿಸಿತು, ಇದು ಅದರ ಸಮಗ್ರ ಶ್ರೇಣಿಯ ಹಣಕಾಸು ಕೊಡುಗೆಗಳ ಮೂಲಕ ವ್ಯಕ್ತಿಗಳನ್ನು ಸಶಕ್ತಗೊಳಿಸುವ ಗುರಿಯನ್ನು ಹೊಂದಿರುವ ಪ್ರಮುಖ ಲೋನ್ ಮೇಳವಾಗಿದೆ. ಉತ್ತರ ಪ್ರದೇಶದ ಸೀತಾಪುರದ ಆರ್‌ಎಂಪಿ ಗ್ರೌಂಡ್‌ನಲ್ಲಿ ಜುಲೈ 6 ರಿಂದ ಜುಲೈ 9 ವರೆಗೆ ಲೋನ್ ಮೇಳ ನಡೆಯುತ್ತದೆ.
ಟಿವಿಎಸ್ ಕ್ರೆಡಿಟ್ ಪ್ರಗತಿ ಪರ್ವ್ ಟಿವಿಎಸ್ ಕ್ರೆಡಿಟ್‌ನ ವ್ಯಾಪಕ ಶ್ರೇಣಿಯ ಸಾಲದ ಪ್ರಾಡಕ್ಟ್‌ಗಳನ್ನು ಅನ್ವೇಷಿಸಲು ಅನನ್ಯ ವೇದಿಕೆಯನ್ನು ಒದಗಿಸುತ್ತದೆ. ಟೂ ವೀಲರ್ ಲೋನ್‌ಗಳು ಮತ್ತು ಟ್ರ್ಯಾಕ್ಟರ್ ಲೋನ್‌ಗಳಿಂದ ಹಿಡಿದು ಆನ್ಲೈನ್ ಪರ್ಸನಲ್ ಲೋನ್‌ಗಳು, ಕಮರ್ಷಿಯಲ್ ವೆಹಿಕಲ್ ಲೋನ್‌ಗಳು, ಕನ್ಸ್ಯೂಮರ್ ಲೋನ್‌ಗಳು, ಮೊಬೈಲ್ ಲೋನ್‌ಗಳು, ಇನ್ಸ್ಟಾಕಾರ್ಡ್ ಮತ್ತು ಬಳಸಿದ ಕಾರ್ ಲೋನ್‌ಗಳವರೆಗೆ, ಭಾಗವಹಿಸುವವರು ತಮ್ಮ ಆಕಾಂಕ್ಷೆಗಳು ಮತ್ತು ಕನಸುಗಳನ್ನು ನನಸಾಗಿಸಲು ವಿನ್ಯಾಸಗೊಳಿಸಲಾದ ಹಣಕಾಸಿನ ಪರಿಹಾರಗಳನ್ನು ಕಂಡುಕೊಳ್ಳುವ ಅವಕಾಶವನ್ನು ಹೊಂದಿರುತ್ತಾರೆ.
ಲೋನ್ ಮೇಳ ಹತ್ತಿರದ ಪಟ್ಟಣಗಳು ಮತ್ತು ಹಳ್ಳಿಗಳಿಂದ ಪಾಲ್ಗೊಳ್ಳುವವರನ್ನು ಆಕರ್ಷಿಸುವ, ಪ್ರಾಡಕ್ಟ್ ಪ್ರದರ್ಶನಗಳು, ತೊಡಗುವಿಕೆ ಚಟುವಟಿಕೆಗಳು, ಮಾಹಿತಿಪೂರ್ಣ ಅಧಿವೇಶನಗಳು ಮತ್ತು ಮೋಜು ಮತ್ತು ಮನರಂಜನೆಯೊಂದಿಗೆ ಆಕರ್ಷಕ ವೇದಿಕೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
“ಟಿವಿಎಸ್ ಕ್ರೆಡಿಟ್ ಪ್ರಗತಿ ಪರ್ವ್‌ನೊಂದಿಗೆ, ನಮ್ಮ ಗುರಿಯು ಅಸ್ತಿತ್ವದಲ್ಲಿರುವ ಮತ್ತು ಹೊಸ ಗ್ರಾಹಕರೊಂದಿಗೆ ಅರ್ಥಪೂರ್ಣ ಸಂಪರ್ಕಗಳನ್ನು ನಿರ್ಮಿಸುವುದು, ಅವರಿಗೆ ಉತ್ತಮ ಸಮರ್ಪಕ ಹಣಕಾಸಿನ ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ನಮ್ಮ ಪ್ರಾಡಕ್ಟ್‌ಗಳನ್ನು ಆಯ್ಕೆ ಮಾಡುವ ಪ್ರಯೋಜನಗಳನ್ನು ಪಡೆಯಲು ಅನುವು ಮಾಡಿಕೊಡುವುದು," ಎಂದು ಟಿವಿಎಸ್ ಕ್ರೆಡಿಟ್‌ನ ಸಿಎಂಒ ಚರಣದೀಪ್ ಸಿಂಗ್ ಹೇಳಿದರು.
ಟಿವಿಎಸ್ ಕ್ರೆಡಿಟ್ ಪ್ರಗತಿ ಪರ್ವ್ ಎಲ್ಲರಿಗೂ ಮುಕ್ತವಾಗಿದೆ, ಮತ್ತು ಆಸಕ್ತ ವ್ಯಕ್ತಿಗಳು ನಮೂದಿಸಿದ ದಿನಾಂಕಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 7 ರ ನಡುವೆ ಕಾರ್ಯಕ್ರಮಕ್ಕೆ ಹಾಜರಾಗಬಹುದು.
ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್ ಬಗ್ಗೆ:
ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್ ಆರ್‌ಬಿಐಯೊಂದಿಗೆ ನೋಂದಣಿಯಾದ ಭಾರತದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಲ್ಲಿ ಒಂದಾಗಿದೆ. ಭಾರತದಾದ್ಯಂತ 40,000 ಕ್ಕೂ ಹೆಚ್ಚು ಟಚ್‌ಪಾಯಿಂಟ್‌ಗಳೊಂದಿಗೆ, ಕಂಪನಿಯು ಭಾರತೀಯರನ್ನು ದೊಡ್ಡ ಕನಸುಗಳನ್ನು ಕಾಣಲು ಮತ್ತು ತಮ್ಮ ಆಕಾಂಕ್ಷೆಗಳನ್ನು ಪೂರೈಸಲು ಸಶಕ್ತಗೊಳಿಸುವ ಗುರಿಯನ್ನು ಹೊಂದಿದೆ. ಟಿವಿಎಸ್ ಮೋಟಾರ್ ಕಂಪನಿ ಲಿಮಿಟೆಡ್‌ಗೆ ನಂಬರ್ 1 ಫೈನಾನ್ಶಿಯರ್ ಆಗಿರುವುದರಿಂದ ಮತ್ತು ಪ್ರಮುಖ ಟ್ರ್ಯಾಕ್ಟರ್ ಫೈನಾನ್ಶಿಯರ್‌ಗಳಲ್ಲಿ ಒಂದಾಗಿರುವುದರಿಂದ, ಟಿವಿಎಸ್ ಕ್ರೆಡಿಟ್ ಬಳಸಿದ ಕಾರ್ ಲೋನ್‌ಗಳು, ಗೃಹೋಪಯೋಗಿ ವಸ್ತುಗಳ ಲೋನ್‌ಗಳು, ಬಳಸಿದ ಕಮರ್ಷಿಯಲ್ ವೆಹಿಕಲ್ ಲೋನ್‌ಗಳು ಮತ್ತು ಭದ್ರತೆ ರಹಿತ ಲೋನ್‌ಗಳ ವಿಭಾಗದಲ್ಲಿ ವೇಗವಾಗಿ ಬೆಳೆಯುತ್ತಿರುವ ಹೆಜ್ಜೆಗುರುತನ್ನು ಹೊಂದಿದೆ. ದೃಢವಾದ ಹೊಸ-ಯುಗದ ತಂತ್ರಜ್ಞಾನಗಳು ಮತ್ತು ಡೇಟಾ ವಿಶ್ಲೇಷಣೆಯಿಂದ ಚಾಲಿತ, ಕಂಪನಿಯು 1.1 ಕೋಟಿಗಿಂತ ಹೆಚ್ಚು ಸಂತೃಪ್ತ ಗ್ರಾಹಕರಿಗೆ ಸೇವೆ ನೀಡಿದೆ.
ರುಚಿಕಾ ರಾಣಾ
ಸೀನಿಯರ್ ಮ್ಯಾನೇಜರ್, ಬ್ರ್ಯಾಂಡಿಂಗ್ & ಕಮ್ಯುನಿಕೇಷನ್
ಮೊಬೈಲ್: +91 9910036860
ಇಮೇಲ್: ruchika.rana@tvscredit.com
ವೆಬ್:https://www.tvscredit.com
ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ