hamburger icon
<?$policy_img['alt']?>

ಗೌಪ್ಯತಾ ನೀತಿ

1.ಪರಿಚಯ

ಕೊನೆಯದಾಗಿ ಅಪ್ಡೇಟ್ ಆದ ದಿನಾಂಕ 5/03/2024.

ಈ ಡಾಕ್ಯುಮೆಂಟ್ ಪೂರ್ತಿಯಾಗಿ, "ನಾವು", "ನಮಗೆ", "ನಮ್ಮ", "ನಮ್ಮವು", "ಟಿವಿಎಸ್‌ಸಿಎಸ್” ಮತ್ತು "ಟಿವಿಎಸ್ ಕ್ರೆಡಿಟ್ ಸರ್ವೀಸಸ್" ಎಂಬ ಪದಗಳು ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್ ಅನ್ನು ಸೂಚಿಸುತ್ತವೆ. ಮತ್ತು "ನೀವು", "ನಿಮ್ಮ" ಮತ್ತು "ನಿಮ್ಮವು" ಎಂಬ ಪದಗಳು ನಿಮ್ಮನ್ನು ಸೂಚಿಸುತ್ತವೆ (ನಾವು ಉಲ್ಲೇಖಿಸುತ್ತಿರುವ ವ್ಯಕ್ತಿಯ ವೈಯಕ್ತಿಕ ಡೇಟಾ).

ನಿಮ್ಮ ಗೌಪ್ಯತೆಯು ನಮಗೆ ಅತ್ಯಂತ ಪ್ರಮುಖವಾಗಿದೆ. ನಿಮ್ಮ ಗೌಪ್ಯತೆಯನ್ನು ರಕ್ಷಿಸಲು ಮತ್ತು ನಿಮ್ಮ ವೈಯಕ್ತಿಕ ಡೇಟಾವನ್ನು ನಮ್ಮೊಂದಿಗೆ ರಕ್ಷಣಾತ್ಮಕವಾಗಿ ಇರಿಸಲು ನಾವು ಬದ್ಧರಾಗಿದ್ದೇವೆ. ಈ ಗೌಪ್ಯತಾ ನೀತಿಯು ನಾವು ಸಂಗ್ರಹಿಸುವ ಮತ್ತು ಪ್ರಕ್ರಿಯೆಗೊಳಿಸುವ ವೈಯಕ್ತಿಕ ಡೇಟಾದ ವಿವರಗಳು, ನಾವು ಅದನ್ನು ಹೇಗೆ ನಿರ್ವಹಿಸುತ್ತೇವೆ ಮತ್ತು ನಾವು ಅದನ್ನು ಬಳಸುವ ಉದ್ದೇಶಗಳನ್ನು ವಿವರಿಸುತ್ತವೆ. ನಿಮ್ಮ ವೈಯಕ್ತಿಕ ಡೇಟಾಗೆ ಸಂಬಂಧಿಸಿದ ನಮ್ಮ ಅಭ್ಯಾಸಗಳನ್ನು ಅರ್ಥಮಾಡಿಕೊಳ್ಳಲು ದಯವಿಟ್ಟು ಈ ಕೆಳಗಿನವುಗಳನ್ನು ಎಚ್ಚರಿಕೆಯಿಂದ ಓದಿ. ವೈಯಕ್ತಿಕ ಡೇಟಾ ಎಂದರೆ ಅಂತಹ ಡೇಟಾದ ಮೂಲಕ ಅಥವಾ ಅದಕ್ಕೆ ಸಂಬಂಧಿಸಿದಂತೆ ಗುರುತಿಸಬಹುದಾದ ವ್ಯಕ್ತಿಯ ಬಗ್ಗೆ ಯಾವುದೇ ಡೇಟಾ.

2. ನಾವು ಯಾವ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತೇವೆ, ಸ್ಟೋರ್ ಮಾಡುತ್ತೇವೆ ಮತ್ತು ಪ್ರಕ್ರಿಯೆಗೊಳಿಸುತ್ತೇವೆ?

ನಾವು ಸಂಗ್ರಹಿಸುವ, ಸ್ಟೋರ್ ಮಾಡುವ ಮತ್ತು ಪ್ರಕ್ರಿಯೆಯನ್ನು ಒಳಗೊಂಡಿರುವ ವೈಯಕ್ತಿಕ ಡೇಟಾದ ವರ್ಗಗಳು:

  • ಜನಸಂಖ್ಯೆ, ಗುರುತು ಮತ್ತು ಸಂಪರ್ಕ ಡೇಟಾ (ಉದಾಹರಣೆಗೆ, ಹೆಸರು, ಕೊನೆಯ ಹೆಸರು, ಹುಟ್ಟಿದ ದಿನಾಂಕ, ಇಮೇಲ್ ವಿಳಾಸ, ತಂದೆಯ ಹೆಸರು, ತಾಯಿಯ ಹೆಸರು, ವಿಳಾಸದ ಪುರಾವೆ, ಸಂಪರ್ಕ ಸಂಖ್ಯೆ, ಭಾಷೆ, ಉದ್ಯೋಗ, ರಾಜ್ಯ, ಪಿನ್ ಕೋಡ್‌ನೊಂದಿಗೆ ಭೌತಿಕ ವಿಳಾಸ, ವಯಸ್ಸು, ರಾಷ್ಟ್ರೀಯತೆ, ಸಂಗಾತಿಯ ಹೆಸರು, ವೈವಾಹಿಕ ಸ್ಥಿತಿ, ಲಿಂಗ, ಧರ್ಮ, ಜಾತಿ)
  • ದೃಢೀಕರಣ ಡೇಟಾ (ಉದಾ., ಸಹಿ ಪುರಾವೆ)
  • ವೈಯಕ್ತಿಕ ಗುರುತಿನ ಡಾಕ್ಯುಮೆಂಟ್‌ಗಳು (ಉದಾ., ಪ್ಯಾನ್ ಕಾರ್ಡ್, ವೋಟರ್ ಐಡಿ, ಪಾಸ್‌ಪೋರ್ಟ್, ಆಧಾರ್ ಕಾರ್ಡ್, ಜಿಎಸ್‌ಟಿಐಎನ್, ಡ್ರೈವಿಂಗ್ ಲೈಸೆನ್ಸ್, ರೇಷನ್ ಕಾರ್ಡ್ ಇತ್ಯಾದಿ)
  • ಹಣಕಾಸಿನ ಅಕೌಂಟ್ ವಿವರಗಳು (ಉದಾ., ಬ್ಯಾಂಕ್ ಅಕೌಂಟ್ ನಂಬರ್, ಬ್ಯಾಂಕ್ ಐಎಫ್ಎಸ್‌ಸಿಕೋಡ್, ಬ್ಯಾಂಕ್ ಸ್ಟೇಟ್ಮೆಂಟ್ ಮತ್ತು ಲೋನ್ ಅಗ್ರೀಮೆಂಟ್ ನಂಬರ್, ಕ್ರೆಡಿಟ್ ಬ್ಯೂರೋಗಳಿಂದ ಪಡೆದ ಡೇಟಾ, ಆದಾಯ, ಆದಾಯದ ಪುರಾವೆ (ಸಂಬಳದ ಸ್ಲಿಪ್ ಅಥವಾ ಫಾರ್ಮ್ 16 ಅಥವಾ ಆದಾಯದ ಲೆಕ್ಕಾಚಾರದೊಂದಿಗೆ ಐಟಿಆರ್ ಸೇರಿದಂತೆ)
  • ಶೈಕ್ಷಣಿಕ ಮತ್ತು ವೃತ್ತಿಪರ ಡೇಟಾ (ಉದಾ., ಉದ್ಯೋಗದಾತರ ಡೇಟಾ, ರೆಸ್ಯೂಮ್, ಮೂಲಭೂತ ಅರ್ಹತೆ, ಶೈಕ್ಷಣಿಕ ಅರ್ಹತೆ, ಅನುಭವ)
  • ಟಿವಿಎಸ್‌ಸಿಎಸ್ ಉದ್ಯೋಗಿ ಆರೋಗ್ಯ ಡೇಟಾ (ಉದಾಹರಣೆಗೆ, ವೈದ್ಯಕೀಯ ವರದಿಗಳು, ರಕ್ತದ ಗುಂಪು, ಎತ್ತರ, ತೂಕ)
  • ಆನ್ಲೈನ್ ಗುರುತಿಸುವಿಕೆಗಳು ಮತ್ತು ಇತರ ತಾಂತ್ರಿಕ ಡೇಟಾ (ಉದಾ., ಐಪಿ ವಿಳಾಸ, ಬ್ರೌಸರ್ ಪ್ರಕಾರ, ಡಿವೈಸ್ ಐಡೆಂಟಿಫೈಯರ್‌ಗಳು, ಅಕ್ಸೆಸ್ ಸಮಯ)
  • ಡಿವೈಸ್ ಮಾಹಿತಿ (ಉದಾಹರಣೆಗೆ, ನಿಮ್ಮ ಸ್ಟೋರೇಜ್, ಹಾರ್ಡ್‌ವೇರ್ ಮಾಡೆಲ್, ಆಪರೇಟಿಂಗ್ ಸಿಸ್ಟಮ್ ಮತ್ತು ಆವೃತ್ತಿ, ವಿಶಿಷ್ಟ ಡಿವೈಸ್ ಐಡೆಂಟಿಫೈಯರ್‌, ಮೊಬೈಲ್ ನೆಟ್ವರ್ಕ್ ಮಾಹಿತಿ ಮತ್ತು ನಮ್ಮ ಸೇವೆಗಳೊಂದಿಗೆ ಡಿವೈಸಿನ ಸಂವಹನದ ಬಗ್ಗೆ ಮಾಹಿತಿ)
  • ನಮ್ಮ ಮೊಬೈಲ್ ಅಪ್ಲಿಕೇಶನ್ ಅನುಮತಿಗಳ ಮೂಲಕ ಸಂಗ್ರಹಿಸಲಾದ ವೈಯಕ್ತಿಕ ಡೇಟಾ (ಉದಾ., ಕ್ಯಾಮರಾ, ಕಾಂಟಾಕ್ಟ್‌ಗಳು, ಲೊಕೇಶನ್ ಡೇಟಾ, ಸ್ಟೋರೇಜ್, ಫೋಟೋಗಳು, ಎಸ್ಎಂಎಸ್)
  • ಆಸ್ತಿ ಸಂಬಂಧಿತ ಡೇಟಾ (ಉದಾ., ವಿಐಎನ್, ಎಂಜಿನ್ ನಂಬರ್, ನೋಂದಣಿ ನಂಬರ್, ಮಾಡೆಲ್ ಪ್ರಕಾರ, ಚಾಸಿಸ್ ನಂಬರ್, ಮಾಡೆಲ್ ಕೋಡ್, ಮಾಡೆಲ್ ಹೆಸರು, ಯಾವುದೇ ಚರ ಅಥವಾ ಸ್ಥಿರ ಆಸ್ತಿಗೆ ಸಂಬಂಧಿಸಿದ ವಿವರಗಳು)
  • ಸಂವಹನಗಳ ವಿವರಗಳು (ಉದಾ., ಮೊಬೈಲ್ ನಂಬರ್, ಇಮೇಲ್‌ಗಳು, ಸಂಪರ್ಕ ಪಟ್ಟಿಗಳು)
  • ಜನರೇಟ್ ಮಾಡಲಾದ ಡೇಟಾ (ಉದಾ., ಲಾಗ್‌ಗಳು, ಟ್ರಾನ್ಸಾಕ್ಷನ್ ರೆಕಾರ್ಡ್‌ಗಳು)
  • ಕೆಲವು ವೈಯಕ್ತಿಕ ಡೇಟಾವನ್ನು ಹೊಂದಿರಬಹುದಾದ ಪ್ರಶಂಸಾಪತ್ರಗಳು. (ಉದಾಹರಣೆಗೆ, ಪೂರ್ಣ ಹೆಸರು, ನಗರ)

3. ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಹೇಗೆ ಮತ್ತು ಎಲ್ಲಿಂದ ಸಂಗ್ರಹಿಸುತ್ತೇವೆ?

ನಾವು ಈ ಕೆಳಗಿನ ವಿಧಾನಗಳಲ್ಲಿ ನಿಮ್ಮ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತೇವೆ:

  • ನೀವು ನಮ್ಮ ವೆಬ್‌ಸೈಟ್ ಅಥವಾ ಸಾಮಾಜಿಕ ಮಾಧ್ಯಮ ಪುಟಗಳಿಗೆ (ಫೇಸ್‌ಬುಕ್, ಲಿಂಕ್ಡ್ಇನ್, ಇನ್ಸ್ಟಾಗ್ರಾಮ್) ಭೇಟಿ ನೀಡಿದಾಗ ಮತ್ತು ನೋಂದಣಿ ಫಾರ್ಮ್ ಭರ್ತಿ ಮಾಡಿದಾಗ ಮತ್ತು "ನಮ್ಮನ್ನು ಸಂಪರ್ಕಿಸಿ" ಸೌಲಭ್ಯವನ್ನು ಬಳಸಿದಾಗ.
  • ನೀವು ನಮ್ಮ ಮೊಬೈಲ್ ಅಪ್ಲಿಕೇಶನ್ ಬಳಸಿದಾಗ.
  • ನೀವು ನಮ್ಮ ವೆಬ್‌ಸೈಟ್‌ಗಳ ಮೂಲಕ ನಮ್ಮೊಂದಿಗೆ ಸಂವಹನ ನಡೆಸಿದಾಗ ಅಥವಾ ಗ್ರಾಹಕ ಸಹಾಯ ಸೇರಿದಂತೆ ನಮ್ಮ ವೆಬ್‌ಸೈಟ್‌ಗಳಲ್ಲಿ ಸೇವೆಗಳನ್ನು ಬಳಸಿದಾಗ.
  • ನಮ್ಮ ವಾಟ್ಸಾಪ್ ಅಕೌಂಟ್ ಮೂಲಕ ನೀವು ನಮ್ಮೊಂದಿಗೆ ಸಂವಹನ ನಡೆಸಿದಾಗ.
  • ನಮ್ಮ ಮೂಲ ಪಾಲುದಾರರೊಂದಿಗೆ ನೀವು ಸಂವಹನ ನಡೆಸಿದಾಗ ಮತ್ತು ನಮ್ಮ ಪ್ರಾಡಕ್ಟ್‌ಗಳಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿದಾಗ.
  • ನಮ್ಮ ಮಾರ್ಕೆಟಿಂಗ್ ರೋಡ್‌ಶೋಗಳ ಸಮಯದಲ್ಲಿ ನೀವು ನಮಗೆ ಡೇಟಾವನ್ನು ಒದಗಿಸಿದಾಗ.
  • ರೆಫರಲ್ ಮೂಲಕ ನಿಮ್ಮ ಡೇಟಾವನ್ನು ನಮಗೆ ಒದಗಿಸಿದಾಗ.
  • ನೀವು ನಮ್ಮ ವೃತ್ತಿ ಅವಕಾಶದ ಪುಟದ ಮೂಲಕ ಟಿವಿಎಸ್ ಕ್ರೆಡಿಟ್ ಸರ್ವೀಸಸ್‌ನಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದಾಗ.
  • ಥರ್ಡ್ ಪಾರ್ಟಿಗಳು ಡೇಟಾವನ್ನು ಒದಗಿಸಿದಾಗ. (ಉದಾಹರಣೆಗೆ, ಕ್ರೆಡಿಟ್ ಬ್ಯೂರೋಗಳಿಂದ ಕ್ರೆಡಿಟ್ ಇತಿಹಾಸ)
  • ನಾವು ಸಾಲದ ಸೋರ್ಸಿಂಗ್ ಮಾಡಿದಾಗ.
  • ನೀವು ನಮ್ಮ ಗ್ರಾಹಕ ಸೇವಾ ಸಂಪರ್ಕ ಸಂಖ್ಯೆಗಳ ಮೂಲಕ ನಮ್ಮನ್ನು ಸಂಪರ್ಕಿಸಿದಾಗ.
  • ಆರ್‌ಬಿಐ ನೀಡಿದ ಕೆವೈಸಿ ನಿರ್ದೇಶನಗಳ ಭಾಗವಾಗಿ ನಿಮ್ಮ ಇತ್ತೀಚಿನ ಕೆವೈಸಿ ಡಾಕ್ಯುಮೆಂಟ್‌ಗಳನ್ನು ನಮಗೆ ಕಳುಹಿಸಿದಾಗ.
  • ನೀವು ಮೇಲೆ ಪಟ್ಟಿ ಮಾಡದ ಯಾವುದೇ ಇತರ ಡಿಜಿಟಲ್ ಅಥವಾ ಆಫ್‌ಲೈನ್ ಚಾನೆಲ್‌ನಲ್ಲಿ ನಮ್ಮೊಂದಿಗೆ ಸಂವಹನ ನಡೆಸಿದಾಗ.
  • ಜಿಎಸ್‌ಟಿಐಎನ್, ಅಕೌಂಟ್ ಅಗ್ರಿಗೇಟರ್‌ಗಳು, ರೆಫರೆನ್ಸ್‌ಗಳಂತಹ ವಿವಿಧ ಎಪಿಐ ಸಂಯೋಜನೆಗಳ ಮೂಲಕವೂ ನಾವು ಡೇಟಾವನ್ನು ಸಂಗ್ರಹಿಸುತ್ತೇವೆ.

4. ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಹೇಗೆ ಬಳಸುತ್ತೇವೆ?

ಈ ಕೆಳಗಿನ ಉದ್ದೇಶಗಳಿಗಾಗಿ ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಬಳಸುತ್ತೇವೆ:

  • ನೀವು ಸೇಲ್ಸ್ ಔಟ್ಲೆಟ್‌ನಲ್ಲಿ ಪ್ರಾಡಕ್ಟ್ ಖರೀದಿಸುವಾಗ ಸಾಲ ಅಥವಾ ಇಎಂಐ ಆಯ್ಕೆ ಮಾಡಿದಾಗ ಮತ್ತು ನಮ್ಮ ಎಂಪನೆಲ್ಡ್ ಡೀಲರ್‌ಗಳಿಗೆ ನಿಮ್ಮ ಮಾಹಿತಿಯನ್ನು ಒದಗಿಸಿದಾಗ.
  • ನೀವು ನಮ್ಮ ಸೇವೆಗಳಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿದರೆ, ಆನ್ಲೈನ್ ಅಥವಾ ಫಿಸಿಕಲ್ ಔಟ್ಲೆಟ್‌ನಲ್ಲಿ, ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತೇವೆ ಮತ್ತು ನಮ್ಮ ಎಂಪನೆಲ್ಡ್ ಡೀಲರ್‌ಗಳೊಂದಿಗೆ ಹಂಚಿಕೊಳ್ಳುತ್ತೇವೆ, ಅವರು ಸಾಲದ ಮೇಲೆ ಹೆಚ್ಚಿನ ವಿವರಗಳನ್ನು ಒದಗಿಸಲು ನಿಮ್ಮನ್ನು ಸಂಪರ್ಕಿಸುತ್ತಾರೆ.
  • ನೀವು ಅಸ್ತಿತ್ವದಲ್ಲಿರುವ ಗ್ರಾಹಕರಾಗಿದ್ದರೆ ಅಥವಾ ನಮ್ಮ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಸಾಲಕ್ಕೆ ಅಪ್ಲೈ ಮಾಡಲು ಬಯಸಿದರೆ, ಈ ಕೆಳಗಿನ ಉದ್ದೇಶಗಳಿಗಾಗಿ ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತೇವೆ:
    • ನೀವು ಬಳಸುವ ನಮ್ಮ ಅಪ್ಲಿಕೇಶನ್‌ನಲ್ಲಿ ನಿಮ್ಮ ಅಕೌಂಟ್ ಅಥವಾ ಮಾಹಿತಿಯನ್ನು ದೃಢೀಕರಿಸಲು.
    • ನಿಮ್ಮ ಸಾಲದ ಅಪ್ಲಿಕೇಶನನ್ನು ಸಮರ್ಥವಾಗಿ ಪ್ರಕ್ರಿಯೆಗೊಳಿಸಲು.
    • ಅಪಾಯದ ಮೌಲ್ಯಮಾಪನ ಮಾಡಲು, ಸಾಲ ಒದಗಿಸುವ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ವಂಚನೆಯನ್ನು ಪತ್ತೆಹಚ್ಚಲು ಮತ್ತು ತಡೆಗಟ್ಟಲು.
    • ತಾಂತ್ರಿಕ ಸೂಚನೆಗಳು, ಭದ್ರತಾ ಅಲರ್ಟ್‌ಗಳು, ಬೆಂಬಲ ಮತ್ತು ಆಡಳಿತಾತ್ಮಕ ಸಂದೇಶಗಳು ಸೇರಿದಂತೆ ನಿಮ್ಮ ಕೋರಿಕೆಯ ಮಾಹಿತಿ ಮತ್ತು ಸಹಾಯವನ್ನು ನೀಡಲು.
    • ಯಾವುದೇ ಅಲರ್ಟ್‌ಗಳು ಅಥವಾ ಅಪ್ಡೇಟ್‌ಗಳ ನೋಟಿಫಿಕೇಶನ್‌ಗಳನ್ನು ಒಳಗೊಂಡಂತೆ ನೀವು ಪಡೆದ ಅಸ್ತಿತ್ವದಲ್ಲಿರುವ ಪ್ರಾಡಕ್ಟ್‌ಗಳು ಮತ್ತು ಸೇವೆಗಳ ಬಗ್ಗೆ ನಿಮ್ಮೊಂದಿಗೆ ಸಂವಹನ ನಡೆಸಲು.
    • ನಮ್ಮ ಸೇವೆಗಳನ್ನು ಮೌಲ್ಯಮಾಪನ, ಅಭಿವೃದ್ಧಿ ಮತ್ತು ಸುಧಾರಿಸಲು.
    • ಮಾರುಕಟ್ಟೆ ಮತ್ತು ಪ್ರಾಡಕ್ಟ್ ವಿಶ್ಲೇಷಣೆ ಮತ್ತು ಮಾರುಕಟ್ಟೆ ಸಂಶೋಧನೆಗಾಗಿ.
    • ನೀವು ಆಸಕ್ತಿ ಹೊಂದಿರಬಹುದಾದ ನಮ್ಮ ಇತರ ಪ್ರಾಡಕ್ಟ್‌ಗಳು ಅಥವಾ ಸೇವೆಗಳ ಬಗ್ಗೆ ನಿಮಗೆ ಮಾಹಿತಿ ಕಳುಹಿಸಲು.
    • ಪ್ರತಿಕ್ರಿಯೆ ಪಡೆಯಲು ಮತ್ತು ವಿಚಾರಣೆಗಳು ಹಾಗೂ ದೂರುಗಳನ್ನು ನಿರ್ವಹಿಸಲು.
    • ಕಾನೂನು ಅಥವಾ ನಿಯಂತ್ರಕ ಅವಶ್ಯಕತೆಗಳನ್ನು ಅನುಸರಿಸಲು.
    • ಮರುಪಾವತಿ ರಿಮೈಂಡರ್‌ಗಳಿಗಾಗಿ ನಿಮ್ಮನ್ನು ಸಂಪರ್ಕಿಸಲು.
    • ನಿಮ್ಮ ದೂರುಗಳನ್ನು ಪರಿಹರಿಸಲು ನಿಮ್ಮನ್ನು ಸಂಪರ್ಕಿಸಲು.
    • ನಿಮ್ಮ ಅಸ್ತಿತ್ವದಲ್ಲಿರುವ ಸಾಲದ ಅಕೌಂಟ್‌ಗಳನ್ನು ನಿರ್ವಹಿಸಲು ಮತ್ತು ಸಾಲದ ಸೇವೆಯ ಕುರಿತು ನಿಮ್ಮನ್ನು ಅಪ್ಡೇಟ್ ಮಾಡಲು.
  • ನೀವು ಎಂಪನೆಲ್ಡ್ ಡೀಲರ್ ಆಗಿದ್ದರೆ, ಆನ್‌ಬೋರ್ಡಿಂಗ್ ಮತ್ತು ಪಾವತಿ ಉದ್ದೇಶಗಳಿಗಾಗಿ ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತೇವೆ.
  • ನೀವು ನಮ್ಮ ವೆಬ್‌ಸೈಟ್ ಅಥವಾ ಸೋಶಿಯಲ್ ಮೀಡಿಯಾ ಪೇಜ್‌ಗಳಿಗೆ ಭೇಟಿ ನೀಡಿದವರಾಗಿದ್ದರೆ, ನಿಮ್ಮ ಅನುಭವವನ್ನು ಉತ್ತಮಗೊಳಿಸಲು, ಕಂಟೆಂಟನ್ನು ಕಸ್ಟಮೈಜ್ ಮಾಡಲು ಮತ್ತು ಡಿಜಿಟಲ್ ಫೂಟ್‌ಪ್ರಿಂಟ್ ಟ್ರ್ಯಾಕ್ ಮಾಡಲು ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿಸುತ್ತೇವೆ.
  • ನೀವು ನಿರೀಕ್ಷಿತ ಉದ್ಯೋಗಿಯಾಗಿದ್ದರೆ, ಉದ್ಯೋಗ ಮೌಲ್ಯಮಾಪನ ಉದ್ದೇಶಗಳಿಗಾಗಿ ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಸಂಗ್ರಹಿಸುತ್ತೇವೆ.
  • ಟೆಲಿಫೋನ್ ಕರೆಗಳು ಸೇರಿದಂತೆ ನಿಮ್ಮ ಮತ್ತು ನಮ್ಮ ನಡುವಿನ ಯಾವುದೇ ಸಂವಹನಗಳನ್ನು ಕೂಡ ನಾವು ರೆಕಾರ್ಡ್ ಮಾಡಬಹುದು. ಗುರುತಿಸುವಿಕೆ, ತನಿಖೆ, ನಿಯಂತ್ರಕ, ವಂಚನೆ ತಡೆಗಟ್ಟುವಿಕೆ, ತರಬೇತಿ ಮತ್ತು ಗುಣಮಟ್ಟದ ಉದ್ದೇಶಗಳಿಗಾಗಿ ಮತ್ತು ನಮ್ಮ ಸೇವೆಗಳನ್ನು ವಿಶ್ಲೇಷಿಸಲು, ಮೌಲ್ಯಮಾಪನ ಮಾಡಲು ಮತ್ತು ಸುಧಾರಿಸಲು ನಿಮ್ಮ ಸೂಚನೆಗಳನ್ನು ನಾವು ಪರಿಶೀಲಿಸಲು ನಾವು ಈ ರೆಕಾರ್ಡಿಂಗ್‌ಗಳನ್ನು ಬಳಸುತ್ತೇವೆ.
  • ಭದ್ರತೆಗಾಗಿ ಮತ್ತು ಅಪರಾಧವನ್ನು ತಡೆಗಟ್ಟಲು ಮತ್ತು ಪತ್ತೆಹಚ್ಚಲು ನಾವು ಚಿತ್ರಗಳು ಅಥವಾ ಧ್ವನಿ ರೆಕಾರ್ಡಿಂಗ್‌ಗಳನ್ನು (ಅಥವಾ ಎರಡೂ) ಮೇಲ್ವಿಚಾರಣೆ ಮಾಡಲು ಮತ್ತು ಸಂಗ್ರಹಿಸಲು ನಮ್ಮ ಆವರಣದಲ್ಲಿನ ಮತ್ತು ಸುತ್ತಮುತ್ತಲಿನ ಸಿಸಿಟಿವಿ ಅನ್ನು ಬಳಸಬಹುದು.
  • ಮಾರ್ಕೆಟಿಂಗ್ ಮತ್ತು ಪ್ರಚಾರದ ಕ್ಯಾಂಪೇನ್‌ಗಳಿಗಾಗಿ ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಕೂಡ ಬಳಸುತ್ತೇವೆ.
  • ನಾವು ಸಾಲ ನೀಡುವ ಸೇವಾ ಪೂರೈಕೆದಾರರ ಮೂಲಕ ಕೂಡ ನಿಮ್ಮ ವೈಯಕ್ತಿಕ ಡೇಟಾವನ್ನು ಪಡೆಯಬಹುದು. ನಾವು ತೊಡಗಿಸಿಕೊಂಡಿರುವ ಎಲ್ಲಾ ಸಾಲ ನೀಡುವ ಸೇವಾ ಪೂರೈಕೆದಾರರ ಬಗ್ಗೆ ಮತ್ತು ಅವರು ತೊಡಗಿಸಿಕೊಂಡಿರುವ ಉದ್ದೇಶದೊಂದಿಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಲಿಂಕ್ ಮೇಲೆ ಕ್ಲಿಕ್ ಮಾಡಿTVS ಕ್ರೆಡಿಟ್ ಸೇವೆಗಳಿಂದ ತೊಡಗಿಸಿಕೊಂಡಿರುವ ಡಿಜಿಟಲ್ ಸಾಲ ಪಾಲುದಾರರು.

5. ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಯಾರೊಂದಿಗೆ ಹಂಚಿಕೊಳ್ಳುತ್ತೇವೆ?

ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಇವುಗಳಿಗೆ ಬಹಿರಂಗಪಡಿಸಬಹುದು:

  • ಬಿಸಿನೆಸ್ ಮತ್ತು ಕಾರ್ಯಾಚರಣೆಯ ಉದ್ದೇಶಗಳಿಗಾಗಿ ನಮ್ಮ ಪೋಷಕ ಕಂಪನಿ.
  • ನಮ್ಮ ಅಂಗಸಂಸ್ಥೆಗಳು ಅಥವಾ ಕಂಪನಿಗಳ ಗುಂಪು.
  • ನಮ್ಮ ಮೂಲ ಪಾಲುದಾರರು.
  • ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ಸಾಲದ ಅರ್ಹತೆ, ಅಂಡರ್‌ರೈಟಿಂಗ್ ಮತ್ತು ವಿತರಣೆಯ ನಂತರ ದಾಖಲೆಗಳ ಸಲ್ಲಿಕೆಗಾಗಿ ಕ್ರೆಡಿಟ್ ಬ್ಯೂರೋಗಳು.
  • ನಮಗೆ ಕಾರ್ಯನಿರ್ವಹಿಸುವ ಅಥವಾ ನಮಗೆ ಸೇವೆಗಳು ಅಥವಾ ಪ್ರಾಡಕ್ಟ್‌ಗಳನ್ನು ಒದಗಿಸುವ ಥರ್ಡ್ ಪಾರ್ಟಿ ಸೇವಾ ಪೂರೈಕೆದಾರರು.
  • ನಮ್ಮ ಪಾಲುದಾರರು.
  • ರೇಟಿಂಗ್ ಏಜೆನ್ಸಿಗಳು.

ಈ ಕೆಳಗಿನ ಸಂದರ್ಭಗಳಲ್ಲಿ ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಸಹ ಹಂಚಿಕೊಳ್ಳಬಹುದು:

  • ನ್ಯಾಯಾಲಯದ ಆದೇಶಗಳು ಅಥವಾ ಕಾನೂನು ಪ್ರಕ್ರಿಯೆಗೆ ಪ್ರತಿಕ್ರಿಯಿಸಲು ಅಥವಾ ನಮ್ಮ ಕಾನೂನು ಹಕ್ಕುಗಳನ್ನು ಸ್ಥಾಪಿಸಲು ಅಥವಾ ಕಾನೂನು ಕ್ಲೈಮ್‌ಗಳ ವಿರುದ್ಧ ರಕ್ಷಣೆ ನೀಡಲು.
  • ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಅನ್ನು ಇನ್ನೊಂದು ಕಂಪನಿಯಿಂದ ಸ್ವಾಧೀನಪಡಿಸಿಕೊಂಡರೆ ಅಥವಾ ವಿಲೀನಗೊಳಿಸಿದರೆ.
  • ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ಸಾಲದ ಮಾನ್ಯತೆಗಳನ್ನು ವರ್ಗಾಯಿಸಲು.
  • ಸಾಲ ಪಡೆಯುವ ಷರತ್ತುಗಳ ಭಾಗವಾಗಿ ಸಾಲದಾತರೊಂದಿಗೆ.

6. ಅಂತಾರಾಷ್ಟ್ರೀಯ ಡೇಟಾ ಟ್ರಾನ್ಸ್‌ಫರ್

ನಮ್ಮ ಡೇಟಾ ಕೇಂದ್ರಗಳು ಭಾರತದಲ್ಲಿ ನೆಲೆಗೊಂಡಿವೆ. ಈ ಗೌಪ್ಯತಾ ನೀತಿಯ ಪ್ರಕಾರ ನಾವು ವರ್ಗಾವಣೆ ಮಾಡುವ ಯಾವುದೇ ವೈಯಕ್ತಿಕ ಡೇಟಾವನ್ನು ರಕ್ಷಿಸಲಾಗುತ್ತದೆ.

7. ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಹೇಗೆ ಸುರಕ್ಷಿತಗೊಳಿಸುತ್ತೇವೆ?

ನಿಮ್ಮ ವೈಯಕ್ತಿಕ ಡೇಟಾವನ್ನು ನಮ್ಮ ಕಸ್ಟಡಿಯಲ್ಲಿ ರಕ್ಷಿಸಲು ನಾವು ಬದ್ಧರಾಗಿದ್ದೇವೆ. ಅನಧಿಕೃತ ಪ್ರವೇಶ, ಸ್ವರೂಪದಲ್ಲಿ ಬದಲಾವಣೆ, ಪ್ರಸರಣ ಮತ್ತು ಅಳಿಸುವಿಕೆಯಿಂದ ನಿಮ್ಮ ವೈಯಕ್ತಿಕ ಡೇಟಾವನ್ನು ರಕ್ಷಿಸಲು ಸೂಕ್ತವಾದ ಭೌತಿಕ, ತಾಂತ್ರಿಕ ಮತ್ತು ನಿರ್ವಹಣಾ ಸುರಕ್ಷತೆಗಳನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಸಮಂಜಸವಾದ ಹಂತಗಳನ್ನು ತೆಗೆದುಕೊಳ್ಳುತ್ತೇವೆ. ನಿಮ್ಮ ವೈಯಕ್ತಿಕ ಡೇಟಾದ ಗೌಪ್ಯತೆ ಮತ್ತು ಭದ್ರತೆಯನ್ನು ನಿರ್ವಹಿಸುವ ಪ್ರಾಮುಖ್ಯತೆಯ ಬಗ್ಗೆ ನಮ್ಮ ಉದ್ಯೋಗಿಗಳಿಗೆ ನಾವು ತರಬೇತಿ ನೀಡುತ್ತೇವೆ. ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಹಂಚಿಕೊಳ್ಳುವ ಥರ್ಡ್ ಪಾರ್ಟಿಗಳು ಸೂಕ್ತ ಒಪ್ಪಂದಗಳ ಅಡಿಯಲ್ಲಿ ಬರುತ್ತವೆ ಎಂಬುದನ್ನು ನಾವು ಖಚಿತಪಡಿಸುತ್ತೇವೆ ಮತ್ತು ನಮ್ಮ ನೀತಿಗಳಿಗೆ ಅನುಗುಣವಾಗಿ ನಿಮ್ಮ ವೈಯಕ್ತಿಕ ಡೇಟಾವನ್ನು ರಕ್ಷಿಸಲು ನಾವು ಸೂಕ್ತ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ.

8. ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಎಷ್ಟು ಸಮಯದವರೆಗೆ ಇರಿಸುತ್ತೇವೆ?

ಈ ಗೌಪ್ಯತಾ ನೀತಿಯಲ್ಲಿ ವಿವರಿಸಲಾದ ಉದ್ದೇಶಗಳನ್ನು ಪೂರೈಸಲು ಮತ್ತು ಕಾನೂನು ಅಥವಾ ನಿಯಂತ್ರಕ ಕಾರಣಗಳಿಗಾಗಿ ಅಗತ್ಯವಿರುವವರೆಗೆ ನಾವು ನಿಮ್ಮ ವೈಯಕ್ತಿಕ ಡೇಟಾವನ್ನು ಉಳಿಸಿಕೊಳ್ಳುತ್ತೇವೆ.

9. ನಾವು ಕುಕೀಗಳು ಮತ್ತು ಇತರ ಟ್ರ್ಯಾಕಿಂಗ್ ಕಾರ್ಯವಿಧಾನಗಳನ್ನು ಹೇಗೆ ಬಳಸಬಹುದು?

ನಿಮ್ಮ ಕುರಿತಾದ ಡೇಟಾ ಸಂಗ್ರಹಿಸಲು ನಮ್ಮ ವೆಬ್‌ಸೈಟ್‌ನಲ್ಲಿ ನಾವು ಕುಕೀಗಳು ಮತ್ತು ಇತರ ಟ್ರ್ಯಾಕಿಂಗ್ ಕಾರ್ಯವಿಧಾನಗಳನ್ನು ಬಳಸುತ್ತೇವೆ. ಟ್ರೆಂಡ್‌ಗಳು ಮತ್ತು ಅಂಕಿಅಂಶಗಳನ್ನು ವಿಶ್ಲೇಷಿಸಲು ನಾವು ಕುಕೀಗಳು ಮತ್ತು ಟ್ರ್ಯಾಕರ್‌ಗಳಿಂದ ಸಂಗ್ರಹಿಸಲಾದ ಡೇಟಾವನ್ನು ಬಳಸುತ್ತೇವೆ. ಇದು ನಿಮ್ಮ ವೆಬ್‌ಸೈಟ್ ಅನುಭವವನ್ನು ಉತ್ತಮಗೊಳಿಸಲು ಮತ್ತು ಕಸ್ಟಮೈಜ್ ಮಾಡಲು ಮತ್ತು ಉತ್ತಮ ವೆಬ್‌ಸೈಟ್ ಕಾರ್ಯಕ್ಷಮತೆಗಳಿಗಾಗಿ ಮತ್ತು ನಿಮಗೆ ವೈಯಕ್ತಿಕಗೊಳಿಸಿದ ಅನುಭವವನ್ನು ಒದಗಿಸಲು ನಮಗೆ ಸಹಾಯ ಮಾಡುತ್ತದೆ.

ಕ್ಯಾಮರಾ, ಕಾಂಟ್ಯಾಕ್ಟ್‌ಗಳು/ದೂರವಾಣಿ, ಕೋರ್ಸ್ (ನೆಟ್ವರ್ಕ್ ಆಧಾರಿತ) ಸ್ಥಳ, ಫೈನ್ (ಜಿಪಿಎಸ್) ಸ್ಥಳ, ಅಕೌಂಟ್‌ಗಳ ಪಟ್ಟಿ, ಬಾಹ್ಯ ಸ್ಟೋರೇಜ್ ಕಂಟೆಂಟ್‌ಗಳು, ಫೋಟೋ, ಎಸ್ಎಂಎಸ್ ಮುಂತಾದ ಅನುಮತಿಗಳನ್ನು ಬಳಸಿಕೊಂಡು ಮೊಬೈಲ್ ಅಪ್ಲಿಕೇಶನ್ ಮೂಲಕ ನಾವು ನಿಮ್ಮ ಬಗ್ಗೆ ವೈಯಕ್ತಿಕ ಡೇಟಾವನ್ನು ಸಂಗ್ರಹಿಸುತ್ತೇವೆ. ನಿಮ್ಮ ಐಒಎಸ್ ಮತ್ತು ಆಂಡ್ರಾಯ್ಡ್ ಡಿವೈಸ್‌ಗಳು ನಮ್ಮ ಆ್ಯಪ್‌ ಬಯಸುವ ಅನುಮತಿಗಳ ಬಗ್ಗೆ ನಿಮಗೆ ಸೂಚಿಸುತ್ತವೆ ಮತ್ತು ಅನುಮತಿಯನ್ನು ಒಪ್ಪಿಕೊಳ್ಳುವ ಅಥವಾ ನಿರಾಕರಿಸುವ ಆಯ್ಕೆಯನ್ನು ನಿಮಗೆ ಒದಗಿಸುತ್ತವೆ. ಮೊಬೈಲ್ ಅಪ್ಲಿಕೇಶನ್ ಮೂಲಕ ಕಾರ್ಯನಿರ್ವಹಣೆಗಳನ್ನು ಒದಗಿಸಲು ಅನುಮತಿಗಳ ಮೂಲಕ ಪಡೆದ ಡೇಟಾವನ್ನು ನಾವು ಬಳಸುತ್ತೇವೆ. ಮೊಬೈಲ್ ಅಪ್ಲಿಕೇಶನ್ ಮೂಲಕ ಕ್ರೆಡಿಟ್ ಅಂಡರ್‌ರೈಟಿಂಗ್ ಮತ್ತು ಕಾರ್ಯಕ್ಷಮತೆಗಳನ್ನು ಒದಗಿಸುವ ಉದ್ದೇಶಕ್ಕಾಗಿ ನಮ್ಮ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನಾವು ಕೆಲವು ಟ್ರ್ಯಾಕರ್‌ಗಳನ್ನು ಕೂಡ ಜೋಡಿಸಿದ್ದೇವೆ.

ನಮ್ಮ ಮೊಬೈಲ್ ಅಪ್ಲಿಕೇಶನ್ ಅನ್ನು ಅಕ್ಸೆಸ್ ಮಾಡುವಾಗ ಮೊಬೈಲ್ ಅನುಮತಿಗಳ ಬಳಕೆಗೆ ನೀವು ಸಮ್ಮತಿ ನೀಡಿದಲ್ಲಿ, ನಿಮ್ಮ ಮೊಬೈಲ್ ಡಿವೈಸಿನ ಸೆಟ್ಟಿಂಗ್‌ಗಳ ವಿಭಾಗದಿಂದ ನಿಮ್ಮ ಸಮ್ಮತಿಯನ್ನು ಹಿಂತೆಗೆದುಕೊಳ್ಳುವ ಆಯ್ಕೆಯನ್ನು ನೀವು ಹೊಂದಿದ್ದೀರಿ. ಅನೇಕ ಸಂದರ್ಭಗಳಲ್ಲಿ, ಅಂತಹ ರದ್ದುಗೊಳಿಸುವಿಕೆಯ ನಂತರ, ನೀವು ಮೊಬೈಲ್ ಅಪ್ಲಿಕೇಶನ್ನಿನ ಕೆಲವು ಫೀಚರ್‌ಗಳನ್ನು ಅಕ್ಸೆಸ್ ಮಾಡಲು ಅಥವಾ ನಮ್ಮ ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ಬಳಸುವುದನ್ನು ಮುಂದುವರೆಸಲು ಸಾಧ್ಯವಾಗದಿರಬಹುದು.

10. ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಯಾವ ಆಧಾರದ ಮೇಲೆ ಪ್ರಕ್ರಿಯೆಗೊಳಿಸುತ್ತೇವೆ?

ಈ ಕೆಳಗಿನವುಗಳಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚಿನದನ್ನು ಅವಲಂಬಿಸಿ ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಪ್ರಕ್ರಿಯೆಗೊಳಿಸುತ್ತೇವೆ:

  • ನಿರ್ದಿಷ್ಟ ಕಾರಣಗಳಿಗಾಗಿ ನಿಮ್ಮ ವೈಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿಸಲು ನೀವು ನಮಗೆ ಸಮ್ಮತಿ ನೀಡಿದ್ದೀರಿ.
  • ಕಾನೂನು ಜಾರಿ ಏಜೆನ್ಸಿಗಳು, ಸರ್ಕಾರಿ ಏಜೆನ್ಸಿಗಳು, ನಿಯಂತ್ರಕರು ಮುಂತಾದ ಇತರ ಪಾಲುದಾರರ ಕಡೆಗೆ ನಾವು ಹೊಂದಿರಬಹುದಾದ ಕಾನೂನು ಜವಾಬ್ದಾರಿಯನ್ನು ಅನುಸರಿಸಲು ಪ್ರಕ್ರಿಯೆಯು ಅಗತ್ಯವಾಗಿದೆ.
  • ಉದ್ಯೋಗದ ಉದ್ದೇಶಗಳಿಗಾಗಿ ಅಗತ್ಯವಿರುವ ಪ್ರಕ್ರಿಯೆಗಾಗಿ.
  • ನಮ್ಮ ಸಮಂಜಸವಾದ ಉದ್ದೇಶಗಳನ್ನು ಪೂರೈಸಲು ಅಗತ್ಯವಿರುವ ಪ್ರಕ್ರಿಯೆಗಾಗಿ. (ಉದಾಹರಣೆಗೆ, ಕ್ರೆಡಿಟ್ ಸ್ಕೋರಿಂಗ್, ಸಾಲದ ರಿಕವರಿ, ವಂಚನೆ ಸೇರಿದಂತೆ ಯಾವುದೇ ಕಾನೂನುಬಾಹಿರ ಚಟುವಟಿಕೆಯ ತಡೆಗಟ್ಟುವಿಕೆಗೆ ಮತ್ತು ಪತ್ತೆಹಚ್ಚಲು, ಮೌಲ್ಯಮಾಪನ ಮಾಡಲು, ನಮ್ಮ ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಸುಧಾರಿಸಲು)
  • ನಿಮ್ಮೊಂದಿಗೆ ಕಾರ್ಯಗತಗೊಳಿಸಲಾದ ಅಗ್ರೀಮೆಂಟ್ ಅಡಿಯಲ್ಲಿ ನಮ್ಮ ಅಗ್ರೀಮೆಂಟ್‌ನ ಜವಾಬ್ದಾರಿಯನ್ನು ಪೂರೈಸಲು ಪ್ರಕ್ರಿಯೆಯ ಅಗತ್ಯವಿದೆ ಮತ್ತು ಅದಕ್ಕಾಗಿ ನೀವು ಅಂತಹ ಅಗ್ರೀಮೆಂಟ್ ಅಡಿಯಲ್ಲಿ ಒಪ್ಪಿಗೆ ನೀಡುತ್ತೀರಿ.

11. ನಿಮ್ಮ ವೈಯಕ್ತಿಕ ಡೇಟಾಗೆ ಸಂಬಂಧಿಸಿದ ನಿಮ್ಮ ಹಕ್ಕುಗಳು ಯಾವುವು?

ನಮ್ಮೊಂದಿಗೆ ಇರುವ ನಿಮ್ಮ ವೈಯಕ್ತಿಕ ಮಾಹಿತಿಗೆ ಸಂಬಂಧಿಸಿದಂತೆ ನೀವು ಕೆಲವು ಹಕ್ಕುಗಳನ್ನು ಹೊಂದಿದ್ದೀರಿ ಮತ್ತು ಅವುಗಳನ್ನು ನಿಮಗೆ ಒದಗಿಸಲು ನಾವು ಬದ್ಧರಾಗಿದ್ದೇವೆ. ನಾವು ನಿಮ್ಮ ಹಕ್ಕುಗಳ ಪಟ್ಟಿಯನ್ನು ಒದಗಿಸಿದ್ದೇವೆ, ಆದರೂ ಅವುಗಳು ಪ್ರತಿ ಸಂದರ್ಭದಲ್ಲೂ ಯಾವಾಗಲೂ ಅನ್ವಯವಾಗುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.

  • ಮಾಹಿತಿಯ ಹಕ್ಕು: ನಿಮ್ಮ ವೈಯಕ್ತಿಕ ಡೇಟಾವನ್ನು ಹಂಚಿಕೊಳ್ಳಲಾದ ಎಲ್ಲಾ ಥರ್ಡ್ ಪಾರ್ಟಿಗಳ ಮಾಹಿತಿ ಮತ್ತು ಗುರುತುಗಳೊಂದಿಗೆ ನಮ್ಮಲ್ಲಿ ಇರುವ ನಿಮ್ಮ ವೈಯಕ್ತಿಕ ಡೇಟಾದ ದೃಢೀಕರಣ ಮತ್ತು ಸಾರಾಂಶವನ್ನು ಪಡೆಯುವ ಹಕ್ಕನ್ನು ನೀವು ಹೊಂದಿದ್ದೀರಿ.
  • ತಿದ್ದುಪಡಿ ಮಾಡುವ ಹಕ್ಕು: ನಮ್ಮಲ್ಲಿರುವ ನಿಮ್ಮ ವೈಯಕ್ತಿಕ ಡೇಟಾ ಸರಿಯಾಗಿಲ್ಲ ಎಂದು ನೀವು ಭಾವಿಸಿದರೆ ಅದನ್ನು ಸರಿಪಡಿಸುವಂತೆ ನಮ್ಮನ್ನು ಕೇಳುವ ಹಕ್ಕನ್ನು ನೀವು ಹೊಂದಿದ್ದೀರಿ. ಅಪೂರ್ಣ ಅಥವಾ ಹಳೆಯದು ಎಂದು ನೀವು ಭಾವಿಸುವ ನಿಮ್ಮ ವೈಯಕ್ತಿಕ ಡೇಟಾವನ್ನು ನವೀಕರಿಸಲು ನಮ್ಮನ್ನು ಕೇಳುವ ಹಕ್ಕನ್ನು ಸಹ ನೀವು ಹೊಂದಿದ್ದೀರಿ.
  • ಅಳಿಸುವ ಹಕ್ಕು: ಕೆಲವು ಸಂದರ್ಭಗಳಲ್ಲಿ ನಮ್ಮೊಂದಿಗೆ ಇರುವ ನಿಮ್ಮ ವೈಯಕ್ತಿಕ ಡೇಟಾವನ್ನು ಅಳಿಸಲು ನಮ್ಮನ್ನು ಕೇಳುವ ಹಕ್ಕನ್ನು ನೀವು ಹೊಂದಿದ್ದೀರಿ.
  • ಕುಂದುಕೊರತೆ ಪರಿಹಾರದ ಹಕ್ಕು: ಒಂದು ವೇಳೆ ನೀವು 7 ದಿನಗಳ ಒಳಗೆ ನಮ್ಮಿಂದ ಪ್ರತಿಕ್ರಿಯೆಯನ್ನು ಪಡೆಯದಿದ್ದರೆ ಡೇಟಾ ರಕ್ಷಣೆ ಮಂಡಳಿಯೊಂದಿಗೆ ದೂರನ್ನು ದಾಖಲಿಸುವ ಹಕ್ಕನ್ನು ನೀವು ಹೊಂದಿದ್ದೀರಿ.
  • ನಾಮಿನೇಟ್ ಮಾಡುವ ಹಕ್ಕು: ಸಾವಿನ ಸಂದರ್ಭದಲ್ಲಿ ಅಥವಾ ಅಸಮರ್ಥತೆಯ ಸಂದರ್ಭದಲ್ಲಿ ನಿಮ್ಮ ಪರವಾಗಿ ಕಾರ್ಯನಿರ್ವಹಿಸುವ ವ್ಯಕ್ತಿಯನ್ನು ಹೆಸರಿಸುವ ಹಕ್ಕನ್ನು ನೀವು ಹೊಂದಿದ್ದೀರಿ.
  • ಥರ್ಡ್ ಪಾರ್ಟಿಗಳಿಗೆ ಬಹಿರಂಗಪಡಿಸುವಿಕೆಯನ್ನು ನಿರ್ಬಂಧಿಸುವ ಹಕ್ಕು: ಕೆಲವು ಸಂದರ್ಭಗಳಲ್ಲಿ ಥರ್ಡ್ ಪಾರ್ಟಿಗಳಿಗೆ ನಿಮ್ಮ ವೈಯಕ್ತಿಕ ಡೇಟಾವನ್ನು ಬಹಿರಂಗಪಡಿಸುವುದನ್ನು ನಿರ್ಬಂಧಿಸುವ ಹಕ್ಕನ್ನು ನೀವು ಹೊಂದಿದ್ದೀರಿ.

ಪ್ರಕ್ರಿಯೆಯು ನಿಮ್ಮ ಸಮ್ಮತಿಯ ಆಧಾರದ ಮೇಲೆ ಇರುವಲ್ಲಿ, ಯಾವುದೇ ಸಮಯದಲ್ಲಿ ನಿಮ್ಮ ಸಮ್ಮತಿಯನ್ನು ಹಿಂತೆಗೆದುಕೊಳ್ಳುವ ಆಯ್ಕೆಯನ್ನು ನೀವು ಹೊಂದಿದ್ದೀರಿ. ನಿಮ್ಮ ಸಮ್ಮತಿಯನ್ನು ಹಿಂತೆಗೆದುಕೊಳ್ಳುವ ನಿಮ್ಮ ಕೋರಿಕೆಯನ್ನು ಸ್ವೀಕರಿಸಿದ ನಂತರ, ಹಿಂತೆಗೆದುಕೊಳ್ಳುವಿಕೆಯ ಪರಿಣಾಮಗಳನ್ನು ನಿಮಗೆ ತಿಳಿಸಲಾಗುತ್ತದೆ. ಅನೇಕ ಸಂದರ್ಭಗಳಲ್ಲಿ, ಅಂತಹ ಹಿಂತೆಗೆದುಕೊಳ್ಳುವಿಕೆಯ ನಂತರ, ನಮ್ಮ ಪ್ರಾಡಕ್ಟ್‌ಗಳು ಮತ್ತು ಸೇವೆಗಳನ್ನು ನಿಮಗೆ ನೀಡುವುದನ್ನು ಮುಂದುವರೆಸಲು ನಮಗೆ ಸಾಧ್ಯವಾಗುವುದಿಲ್ಲ.

ನಮ್ಮ ನಡುವಿನ ಚಾಲ್ತಿಯಲ್ಲಿರುವ ಒಪ್ಪಂದದ ಸಂಬಂಧದ ಅಡಿಯಲ್ಲಿ, ಸಮ್ಮತಿಯ ಹಿಂತೆಗೆದುಕೊಳ್ಳುವಿಕೆಯು ನಿಮ್ಮ ಎಲ್ಲಾ ಒಪ್ಪಂದದ ಬಾಧ್ಯತೆಗಳ ನೆರವೇರಿಕೆಯ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಅದಕ್ಕೆ ಸಂಬಂಧಿಸಿದಂತೆ ಮೂಲ ಒಪ್ಪಿಗೆಯನ್ನು ಒದಗಿಸಲಾಗಿದೆ.

ನಮ್ಮನ್ನು ಸಂಪರ್ಕಿಸಿ' ವಿಭಾಗದಲ್ಲಿ ನಿರ್ದಿಷ್ಟಪಡಿಸಿದ ವಿವರಗಳನ್ನು ಬಳಸಿಕೊಂಡು ನಮ್ಮನ್ನು ಸಂಪರ್ಕಿಸುವ ಮೂಲಕ ನಿಮ್ಮ ಸಮ್ಮತಿಯನ್ನು ನೀವು ಹಿಂತೆಗೆದುಕೊಳ್ಳಬಹುದು.

ನಿಮ್ಮ ಯಾವುದೇ ಹಕ್ಕುಗಳನ್ನು ಚಲಾಯಿಸಲು ವಿನಂತಿಯನ್ನು ಮಾಡಲು ನೀವು ಬಯಸಿದರೆ, ನಮ್ಮ ಗೌಪ್ಯತೆ ಅಭ್ಯಾಸಗಳ ಬಗ್ಗೆ ಯಾವುದೇ ಕಾಳಜಿಯನ್ನು ವ್ಯಕ್ತಪಡಿಸಲು ಅಥವಾ ಇತರ ಗೌಪ್ಯತೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು, 'ನಮ್ಮನ್ನು ಸಂಪರ್ಕಿಸಿ' ವಿಭಾಗದಲ್ಲಿ ನಿರ್ದಿಷ್ಟಪಡಿಸಿದ ವಿವರಗಳನ್ನು ಬಳಸಿಕೊಂಡು ನೀವು ನಮ್ಮನ್ನು ಸಂಪರ್ಕಿಸಬಹುದು. ಆದಾಗ್ಯೂ, ನೀವು ಟಿವಿಎಸ್ ಕ್ರೆಡಿಟ್ ಸರ್ವೀಸಸ್‌ನ ಅಸ್ತಿತ್ವದಲ್ಲಿರುವ ಅಥವಾ ಹಿಂದಿನ ಗ್ರಾಹಕರಾಗಿದ್ದರೆ, ಅನ್ವಯವಾಗುವ ಕಾನೂನುಗಳು ಮತ್ತು ನಿಬಂಧನೆಗಳ ಅಡಿಯಲ್ಲಿ ಒದಗಿಸಿದಂತೆ ಉಳಿಸಿಕೊಳ್ಳಲು ನಾವು ಕಾನೂನುಬದ್ಧವಾಗಿ ಬಾಧ್ಯತೆ ಹೊಂದಿರುವುದರಿಂದ ಒಪ್ಪಂದದ ಬಾಧ್ಯತೆಯ ಮುಕ್ತಾಯದ ನಂತರ ಅಂತಹ ಕನಿಷ್ಠ ಅವಧಿಗೆ ನಮ್ಮ ಸಿಸ್ಟಮ್‌ಗಳಿಂದ ನಿಮ್ಮ ವೈಯಕ್ತಿಕ ಡೇಟಾವನ್ನು ನಾವು ಅಳಿಸಲು ಸ್ಥಿತಿಯಲ್ಲಿರುವುದಿಲ್ಲ. ಅಲ್ಲದೆ, ನಡೆಯುತ್ತಿರುವ ಯಾವುದೇ ವ್ಯಾಜ್ಯದ ಉದ್ದೇಶಕ್ಕಾಗಿ ಅಂತಹ ಯಾವುದೇ ವೈಯಕ್ತಿಕ ಡೇಟಾವನ್ನು ಉಳಿಸಿಕೊಳ್ಳಲು ಅಗತ್ಯವಿದ್ದರೆ, ಅಂತಹ ದಾವೆಯನ್ನು ಮುಚ್ಚುವವರೆಗೆ ಅಳಿಸಲಾಗುವುದಿಲ್ಲ.

12. ಇತರ ವೆಬ್‌ಸೈಟ್‌ಗಳಿಗೆ ಲಿಂಕ್‌ಗಳು

ನಮ್ಮ ವೆಬ್‌ಸೈಟ್ ಇತರ ಸಂಸ್ಥೆಗಳ ವೆಬ್‌ಸೈಟ್‌ಗಳಿಗೆ ಲಿಂಕ್‌ಗಳನ್ನು ಹೊಂದಿರಬಹುದು. ಈ ಸಂಸ್ಥೆಯು ವೈಯಕ್ತಿಕ ಮಾಹಿತಿಯನ್ನು ಹೇಗೆ ಪ್ರಕ್ರಿಯೆಗೊಳಿಸುತ್ತದೆ ಎಂಬುದನ್ನು ಈ ಗೌಪ್ಯತಾ ನೀತಿಯು ಕವರ್ ಮಾಡುವುದಿಲ್ಲ. ನೀವು ಭೇಟಿ ನೀಡುವ ಇತರ ವೆಬ್‌ಸೈಟ್‌ಗಳ ಗೌಪ್ಯತಾ ನೀತಿಯನ್ನು ಓದುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.

13. ನಾವು ಈ ಪಾಲಿಸಿಯನ್ನು ಹೇಗೆ ಅಪ್ ಟು ಡೇಟ್ ಆಗಿ ಇರಿಸುತ್ತೇವೆ?

ಅದು ಅಪ್-ಟು-ಡೇಟ್ ಮತ್ತು ನಿಖರವಾಗಿದೆ ಎಂದು ಖಚಿತಪಡಿಸಿಕೊಳ್ಳಲು ನಾವು ನಿಯಮಿತವಾಗಿ ನಮ್ಮ ಗೌಪ್ಯತಾ ನೀತಿಯನ್ನು ಪರಿಶೀಲಿಸುತ್ತೇವೆ ಮತ್ತು ಅಪ್ಡೇಟ್ ಮಾಡುತ್ತೇವೆ. ಭವಿಷ್ಯದಲ್ಲಿ ಈ ಗೌಪ್ಯತಾ ನೀತಿಗೆ ನಾವು ಮಾಡಬಹುದಾದ ಯಾವುದೇ ಬದಲಾವಣೆಗಳನ್ನು ಈ ಪುಟದಲ್ಲಿ ಪೋಸ್ಟ್ ಮಾಡಲಾಗುತ್ತದೆ. ನಾವು ಈ ಗೌಪ್ಯತಾ ನೀತಿಯಲ್ಲಿ ಬದಲಾವಣೆಗಳನ್ನು ಪೋಸ್ಟ್ ಮಾಡಿದಾಗ, ನಾವು "ಕೊನೆಯ ಅಪ್ಡೇಟ್ ಮಾಡಿದ" ದಿನಾಂಕವನ್ನು ಪರಿಷ್ಕರಿಸುತ್ತೇವೆ.

14. ಟಿವಿಎಸ್‌ಸಿಎಸ್ ಕಾನೂನು ಹಕ್ಕುತ್ಯಾಗ ಎಂದರೇನು?

ಸೈಟ್ ಮೂಲಕ ಒದಗಿಸಲಾದ ಮಾಹಿತಿಯನ್ನು "ಇರುವಂತೆ" ಮತ್ತು "ಲಭ್ಯವಿರುವಂತೆ" ಒದಗಿಸಲಾಗುತ್ತದೆ. ನೀವು ಮಾಡುವ ಸೈಟ್ ಬಳಕೆಯು ನಿಮ್ಮ ಸ್ವಂತ ಅಪಾಯದಲ್ಲಿರುತ್ತದೆ ಎಂದು ನೀವು ಒಪ್ಪಿಕೊಳ್ಳುತ್ತೀರಿ. ಕಾನೂನು, ಟಿವಿಎಸ್‌ಸಿಎಸ್, ಅದರ ಅಧಿಕಾರಿಗಳು, ನಿರ್ದೇಶಕರು, ಉದ್ಯೋಗಿಗಳು ಮತ್ತು ಏಜೆಂಟ್‌ಗಳು ಸೈಟ್‌ಗೆ ಸಂಬಂಧಿಸಿದಂತೆ ಮತ್ತು ಅದರ ಬಳಕೆಗೆ ಸಂಬಂಧಿಸಿದಂತೆ ಸ್ಪಷ್ಟಪಡಿಸಿದ ಅಥವಾ ಸೂಚಿಸಿದ ಎಲ್ಲಾ ವಾರಂಟಿಗಳನ್ನು ನಿರಾಕರಿಸುತ್ತಾರೆ. ಟಿವಿಎಸ್‌ಸಿಎಸ್ ಅಳಿಸುವಿಕೆ, ತಪ್ಪು-ವಿತರಣೆ ಅಥವಾ ಸಂವಹನಗಳು, ವೈಯಕ್ತಿಕಗೊಳಿಸಿದ ಸೆಟ್ಟಿಂಗ್‌ಗಳು ಅಥವಾ ಇತರ ಡೇಟಾವನ್ನು ಸಂಗ್ರಹಿಸಲು ವಿಫಲವಾದ ಸಾಧ್ಯತೆಯ ವಿರುದ್ಧ ಯಾವುದೇ ಗ್ಯಾರಂಟಿ ನೀಡುವುದಿಲ್ಲ. ಸೈಟ್ ಅಥವಾ ಯಾವುದೇ ಹೈಪರ್‌ಲಿಂಕ್ ಮಾಡಲಾದ ವೆಬ್‌ಸೈಟ್ ಮೂಲಕ ಅಥವಾ ಯಾವುದೇ ಬ್ಯಾನರ್ ಅಥವಾ ಇತರ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಅಥವಾ ಮೂರನೇ ವ್ಯಕ್ತಿಯಿಂದ ಜಾಹೀರಾತು ಮಾಡಲಾದ ಅಥವಾ ನೀಡುವ ಯಾವುದೇ ಪ್ರಾಡಕ್ಟ್ ಅಥವಾ ಸೇವೆಗೆ ಟಿವಿಎಸ್‌ಸಿಎಸ್ ಖಾತರಿ ನೀಡುವುದಿಲ್ಲ, ಅನುಮೋದಿಸುವುದಿಲ್ಲ, ಖಾತರಿಪಡಿಸುವುದಿಲ್ಲ ಅಥವಾ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ ಮತ್ತು ಟಿವಿಎಸ್‌ಸಿಎಸ್ ಒಂದು ಪಕ್ಷವಾಗಿರುವುದಿಲ್ಲ ಅಥವಾ ನಿಮ್ಮ ಮತ್ತು ಮೂರನೇ ಪಕ್ಷದ ಹಣಕಾಸು ಸೇವಾ ಪೂರೈಕೆದಾರರ ನಡುವಿನ ಯಾವುದೇ ವಹಿವಾಟಿನ ಮೇಲ್ವಿಚಾರಣೆಗೆ ಯಾವುದೇ ರೀತಿಯಲ್ಲಿ ಜವಾಬ್ದಾರಿ ಹೊಂದಿರುವುದಿಲ್ಲ. ಯಾವುದೇ ಮಾಧ್ಯಮದ ಮೂಲಕ ಅಥವಾ ಯಾವುದೇ ಪರಿಸರದಲ್ಲಿ ಯಾವುದೇ ಹಣಕಾಸು ಸೇವೆಗಳನ್ನು ಪಡೆದುಕೊಳ್ಳುವಲ್ಲಿ, ನೀವು ನಿಮ್ಮ ಉತ್ತಮ ತೀರ್ಮಾನವನ್ನು ಬಳಸಬೇಕು ಮತ್ತು ಸೂಕ್ತವಾದಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಈ ಸೈಟ್‌ನ ವಿಷಯದ ನಿಖರತೆ, ಸಮರ್ಪಕತೆ, ಸಮಯೋಚಿತತೆ ಅಥವಾ ಸಂಪೂರ್ಣತೆ ಅಥವಾ ಈ ಸೈಟ್‌ಗೆ ಲಿಂಕ್ ಆಗಿರುವ ಯಾವುದೇ ಸೈಟ್‌ಗಳ ವಿಷಯದ ಬಗ್ಗೆ ಟಿವಿಎಸ್‌ಸಿಎಸ್ ಯಾವುದೇ ವಾರಂಟಿಗಳು ಅಥವಾ ಪ್ರಾತಿನಿಧ್ಯಗಳನ್ನು ನೀಡುವುದಿಲ್ಲ ಮತ್ತು ಯಾವುದೇ ದೋಷಗಳು, ಲೋಪಗಳು, ತಪ್ಪುಗಳು ಅಥವಾ ವಿಷಯದ ಅಸಮರ್ಪಕತೆಗಳು ಅಥವಾ ಯಾವುದರ ಮೇಲೆಯೂ ಆದ ಇತರ ಹಾನಿ ಅಥವಾ ಕೇಡುಗಳಿಗೆ ಯಾವುದೇ ಹೊಣೆಗಾರಿಕೆ ಅಥವಾ ಜವಾಬ್ದಾರಿಯನ್ನು ಹೊಂದಿರುವುದಿಲ್ಲ.

15. ಹೊಣೆಗಾರಿಕೆಯ ಮಿತಿ ಎಂದರೇನು?

ಯಾವುದೇ ಸಂದರ್ಭದಲ್ಲಿ ಟಿವಿಎಸ್‌ಸಿಎಸ್ ಅದರ ಅಧಿಕಾರಿಗಳು, ನಿರ್ದೇಶಕರು, ಉದ್ಯೋಗಿಗಳು ಅಥವಾ ಏಜೆಂಟರು, ಯಾವುದೇ ಪರೋಕ್ಷ, ಪ್ರಾಸಂಗಿಕ, ವಿಶೇಷ, ದಂಡನಾತ್ಮಕ ಅಥವಾ ಈ ಮುಂದಿನವುಗಳ ಪರಿಣಾಮವಾಗಿ ಉಂಟಾಗುವ ಹಾನಿಗಳಿಗೆ ನಿಮಗೆ ಜವಾಬ್ದಾರರಾಗಿರುವುದಿಲ್ಲ. ಯಾವುದೇ (i) ದೋಷಗಳು, ತಪ್ಪುಗಳು ಅಥವಾ ವಿಷಯದಲ್ಲಿ ನಿಖರತೆ ಇಲ್ಲದಿರುವುದು, (ii) ಸೈಟ್‌ಗೆ ನಿಮ್ಮ ಪ್ರವೇಶ ಮತ್ತು ಬಳಕೆಯಿಂದಾಗಿ ಯಾವುದರ ಮೇಲೆಯಾದರೂ ಯಾವುದೇ ಸ್ವರೂಪದ ವೈಯಕ್ತಿಕ ಗಾಯ ಅಥವಾ ಆಸ್ತಿ ಹಾನಿ, (iii) ನಮ್ಮ ಸುರಕ್ಷಿತ ಸರ್ವರ್‌ಗಳಿಗೆ ಮತ್ತು/ಅಥವಾ ಯಾವುದೇ ಮತ್ತು ಎಲ್ಲಾ ವೈಯಕ್ತಿಕ ಮಾಹಿತಿ ಮತ್ತು/ಅಥವಾ ಅದರಲ್ಲಿ ಸಂಗ್ರಹವಾಗಿರುವ ಹಣಕಾಸಿನ ಮಾಹಿತಿಗೆ ಯಾವುದೇ ಅನಧಿಕೃತ ಪ್ರವೇಶ ಅಥವಾ ಬಳಕೆ, (iv) ಸೈಟ್‌ಗೆ ಅಥವಾ ಸೈಟ್‌ನಿಂದ ಪ್ರಸರಣದ ಯಾವುದೇ ಅಡಚಣೆ ಅಥವಾ ನಿಲುಗಡೆ, (iv) ಯಾವುದೇ ಬಗ್‌ಗಳು, ವೈರಸ್‌ಗಳು, ಟ್ರೋಜನ್ ಹಾರ್ಸ್‌ಗಳು, ಅಥವಾ ಅಂತಹವುಗಳನ್ನು ಯಾವುದೇ ಮೂರನೇ ವ್ಯಕ್ತಿಯಿಂದ ಸೈಟ್‌ಗೆ ಅಥವಾ ಸೈಟ್ ಮೂಲಕ ರವಾನಿಸಲಾಗಿರುವುದು, (v) ಯಾವುದೇ ವಿಷಯದಲ್ಲಿ ಯಾವುದೇ ದೋಷಗಳು ಅಥವಾ ಲೋಪಗಳು, (vi)ಬಳಕೆದಾರರ ಸಲ್ಲಿಕೆಗಳು ಅಥವಾ ಯಾವುದೇ ಮೂರನೇ ವ್ಯಕ್ತಿಯ ಮಾನಹಾನಿಕರ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ನಡವಳಿಕೆ, (vii) ಸೈಟ್‌ನ ಯಾವುದೇ ಭಾಗದ ನಿಮ್ಮ ಬಳಕೆ, ಅಥವಾ ಬಳಸಲು ಅಸಮರ್ಥತೆ ಅಥವಾ ಸೈಟ್ ಮೂಲಕ ಲಭ್ಯವಾಗುವಂತೆ ಮಾಡಿದ, ಪೋಸ್ಟ್ ಮಾಡಿದ, ಇಮೇಲ್ ಮಾಡಿದ, ರವಾನಿಸಿದ ಅಥವಾ ಯಾವುದೇ ವಿಷಯವನ್ನು ಬಳಸುವುದರಿಂದ ಉಂಟಾದ ಯಾವುದೇ ರೀತಿಯ ಹಾನಿ ಅಥವಾ ನಷ್ಟ, ವಾರಂಟಿ, ಒಪ್ಪಂದ, ಒತ್ತಾಯ ಅಥವಾ ಯಾವುದೇ ಇತರ ಕಾನೂನು ಸಿದ್ಧಾಂತವನ್ನು ಆಧರಿಸಿಯಾಗಿರಬಹುದು ಮತ್ತು ಅಂತಹ ಹಾನಿಗಳ ಸಾಧ್ಯತೆಯ ಬಗ್ಗೆ ಕಂಪನಿಯು ಸಲಹೆ ನೀಡಿದ್ದರೂ ಅಥವಾ ಇಲ್ಲದಿದ್ದರೂ ಹೊಣೆಗಾರಿಕೆಯ ಮೇಲಿನ ಮಿತಿಯು ಅನ್ವಯವಾಗುವ ನ್ಯಾಯವ್ಯಾಪ್ತಿಯಲ್ಲಿ ಕಾನೂನಿನಿಂದ ಅನುಮತಿಸಲಾದ ಪೂರ್ಣ ಪ್ರಮಾಣದಲ್ಲಿ ಅನ್ವಯಿಸುತ್ತದೆ.

16. ವಿವಾದ ಪರಿಹಾರದ ವಿಧಾನ ಯಾವುದು?

ಟಿವಿಎಸ್‌ಸಿಎಸ್ ಮತ್ತು ನಿಮ್ಮ ನಡುವಿನ ಈ ಒಪ್ಪಂದದಿಂದ ಉದ್ಭವಿಸುವ ಎಲ್ಲಾ ವಿವಾದಗಳು, ವ್ಯತ್ಯಾಸಗಳು, ಹಕ್ಕುಗಳು ಮತ್ತು ಪ್ರಶ್ನೆಗಳು ಮತ್ತೊಂದೆಡೆ, ಈ ನಿರ್ದಿಷ್ಟ ಉಲ್ಲೇಖಗಳು ಅಥವಾ ಇಲ್ಲಿ ಒಳಗೊಂಡಿರುವ ಅಥವಾ ಈ ಉಲ್ಲೇಖಗಳಿಗೆ ಸಂಬಂಧಿಸಿದ ಅಥವಾ ಉದ್ಭವಿಸುವ ಯಾವುದನ್ನಾದರೂ ಸ್ಪರ್ಶಿಸುವುದು ಮತ್ತು ಇದಕ್ಕೆ ಸಂಬಂಧಪಟ್ಟಂತೆ ಮಧ್ಯಸ್ಥಿಕೆ ಮತ್ತು ಸಮನ್ವಯ ಕಾಯ್ದೆ 1996 ಅಡಿಯಲ್ಲಿ ಟಿವಿಎಸ್‌ಸಿಎಸ್ ನಿಂದ ನೇಮಕಗೊಳ್ಳುವ ಏಕೈಕ ಮಧ್ಯಸ್ಥಗಾರನಿಗೆ ಉಲ್ಲೇಖಿಸಲಾಗುತ್ತದೆ. ಟಿವಿಎಸ್‌ಸಿಎಸ್ ನಲ್ಲಿ ನೋಂದಣಿ ಸಮಯದಲ್ಲಿ ಬಳಕೆದಾರರು ಒದಗಿಸಿದ ಇಮೇಲ್ ಐಡಿ ಯಲ್ಲಿ ಪ್ರತಿಕ್ರಿಯಿಸಿದವರಿಗೆ ಆರ್ಬಿಟ್ರೇಟರ್‌ನಿಂದ ಇಮೇಲ್ ಮೂಲಕ ಯಾವುದೇ ಸೂಚನೆಯನ್ನು ಬಳಕೆದಾರರಿಗೆ ಸಾಕಷ್ಟು ಸೂಚನೆ ಎಂದು ಪರಿಗಣಿಸಲಾಗುತ್ತದೆ. ಮಧ್ಯಸ್ಥಿಕೆ ಕಾರ್ಯವಿಧಾನಗಳ ವೆಚ್ಚಗಳು ಮತ್ತು ಖರ್ಚುಗಳನ್ನು ಬಳಕೆದಾರರು ಭರಿಸಬೇಕು. ಮಧ್ಯಸ್ಥಿಕೆಯ ಸ್ಥಳವು ಚೆನ್ನೈನಲ್ಲಿರುತ್ತದೆ. ಏಕೈಕ ಮಧ್ಯಸ್ಥಗಾರರಿಂದ ನೀಡಲಾದ ಅವಾರ್ಡ್ ಪಾರ್ಟಿಗಳ ಮೇಲೆ ಅಂತಿಮವಾಗಿರುತ್ತದೆ ಮತ್ತು ಬದ್ಧವಾಗಿರುತ್ತದೆ.

17. ನೀವು ನಮ್ಮನ್ನು ಹೇಗೆ ಸಂಪರ್ಕಿಸಬಹುದು?

ಗೌಪ್ಯತೆಗೆ ಸಂಬಂಧಿಸಿದ ಯಾವುದೇ ಹೆಚ್ಚಿನ ಪ್ರಶ್ನೆಗಳು ಮತ್ತು ದೂರುಗಳಿಗಾಗಿ, ಈ ಕೆಳಗಿನ ವಿಳಾಸದಲ್ಲಿ ನಮಗೆ ಬರೆಯುವ ಮೂಲಕ ನೀವು ನಮ್ಮನ್ನು ಸಂಪರ್ಕಿಸುತ್ತೀರಿ:
gdpo@tvscredit.com

ಯಾವುದೇ ಕುಂದುಕೊರತೆ ಪರಿಹಾರ ಅಥವಾ ಎಸ್ಕಲೇಶನ್‌ಗಳಿಗಾಗಿ, ನೀವು ಈ ಕೆಳಗಿನ ವಿಳಾಸದಲ್ಲಿ ನಮ್ಮನ್ನು ಸಂಪರ್ಕಿಸಬಹುದು:
ಕುಂದುಕೊರತೆ ಪರಿಹಾರ ಅಧಿಕಾರಿ (ಶ್ರೀ ಚರಣದೀಪ್ ಸಿಂಗ್ ಚಾವ್ಲಾ)
gro@tvscredit.com
ಟಿವಿಎಸ್ ಕ್ರೆಡಿಟ್ ಸರ್ವೀಸಸ್ ಲಿಮಿಟೆಡ್.
ನಂಬರ್ 29, ಜಯಲಕ್ಷ್ಮೀ ಎಸ್ಟೇಟ್,
3ನೇ ಫ್ಲೋರ್, ಹ್ಯಾಡೋಸ್ ರೋಡ್,
ನುಂಗಂಬಕ್ಕಂ,
ಚೆನ್ನೈ – 600034

ಇತ್ತೀಚಿನ ಅಪ್ಡೇಟ್‌ಗಳು ಮತ್ತು ಆಫರ್‌ಗಳಿಗಾಗಿ ಸೈನ್ ಅಪ್ ಮಾಡಿ

ವಾಟ್ಸಾಪ್

ಆ್ಯಪ್ ಡೌನ್ಲೋಡ್ ಮಾಡಿ

ಸಂಪರ್ಕದಲ್ಲಿರಿ