ಅನಂತಕೃಷ್ಣನ್ ಆರ್ ಅವರು ಉತ್ಸಾಹಿ ಮತ್ತು ಅನುಭವಿ ಹಣಕಾಸು ಸೇವಾ ವೃತ್ತಿಪರರಾಗಿದ್ದು, ವಿವಿಧ ಭೌಗೋಳಿಕ ಪ್ರದೇಶಗಳು ಮತ್ತು ವಿಭಾಗಗಳಲ್ಲಿ ರಿಟೇಲ್ ಕನ್ಸ್ಯೂಮರ್ ಸಾಲ ನೀಡುವಿಕೆಯಲ್ಲಿ 25 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಆರಂಭದಿಂದ ಅವರು ಟಿವಿಎಸ್ ಕ್ರೆಡಿಟ್ನ ಭಾಗವಾಗಿದ್ದಾರೆ, ಚಿಲ್ಲರೆ ಮತ್ತು ಕನ್ಸ್ಯೂಮರ್ ಬಿಸಿನೆಸ್ ಕ್ರೆಡಿಟ್ ಮುಖ್ಯಸ್ಥರಾಗಿ ಮತ್ತು ಲಾಭದಾಯಕ ಬಿಸಿನೆಸ್ನ ವರ್ಟಿಕಲ್ಗಳ ಸ್ಥಾಪನೆ, ಸ್ಕೇಲಿಂಗ್ ಆಪರೇಶನ್ಗಳು, ನಮ್ಮ ಪೋರ್ಟ್ಪೋಲಿಯೋವನ್ನು ಬೆಳೆಸುವುದು ಮತ್ತು ನಮ್ಮ ಹೆಜ್ಜೆಗುರುತನ್ನು ವಿಸ್ತರಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶ್ರೀ ಅನಂತಕೃಷ್ಣನ್ ಅವರು ನಮ್ಮ ಕ್ರೆಡಿಟ್ ಮತ್ತು ರಿಸ್ಕ್ ಪ್ರಕ್ರಿಯೆಗಳು ಮತ್ತು ಕಾರ್ಯಾಚರಣೆಗಳನ್ನು ಉತ್ತಮಗೊಳಿಸಿದ್ದಾರೆ, ಕ್ರಾಸ್-ಸೆಲ್ಲಿಂಗ್ ಮತ್ತು ಡಿಜಿಟಲ್ ಫಸ್ಟ್ ಬಿಸಿನೆಸ್ಗಳನ್ನು ಉತ್ತೇಜಿಸಿದ್ದಾರೆ.
ಟಿವಿಎಸ್ ಕ್ರೆಡಿಟ್ನಲ್ಲಿ, ಶ್ರೀ ಅನಂತಕೃಷ್ಣನ್ ವಿವಿಧ ಪ್ರಾಡಕ್ಟ್ ಕೆಟಗರಿಗಳಲ್ಲಿ ಬಿಸಿನೆಸ್ ಸ್ಕೇಲ್-ಅಪ್ಗಳನ್ನು ನಿರ್ವಹಿಸಿದ್ದಾರೆ ಅವುಗಳೆಂದರೆ - ಟೂ ವೀಲರ್ ಲೋನ್ಗಳು, ತ್ರಿ ವೀಲರ್ ಲೋನ್ಗಳು, ಗೃಹೋಪಯೋಗಿ ವಸ್ತುಗಳ ಲೋನ್ಗಳು, ಬಳಸಿದ ಕಾರು ಲೋನ್ಗಳು ಮತ್ತು ಪರ್ಸನಲ್ ಲೋನ್ಗಳು. ಟಿವಿಎಸ್ ಕ್ರೆಡಿಟ್ಗೆ ಸೇರುವ ಮೊದಲು, ಅವರು ಬಜಾಜ್ ಫಿನ್ಸರ್ವ್ ಮತ್ತು ಚೋಲಾ ಡಿಬಿಎಸ್ ನೊಂದಿಗೆ ಸಹಭಾಗಿಯಾಗಿದ್ದರು. ಅವರು ಭಾರತೀಯರ್ ವಿಶ್ವವಿದ್ಯಾಲಯದಿಂದ ಎಂಬಿಎ ಮತ್ತು ಗ್ರೇಟ್ ಲೇಕ್ಸ್ ಮತ್ತು ಎಕ್ಸ್ಎಲ್ಆರ್ಐ ನಿಂದ ವಿಶ್ಲೇಷಣಾ ಪ್ರಮಾಣಪತ್ರವನ್ನು ಹೊಂದಿದ್ದಾರೆ.