ಶ್ರೀ ಆರ್ ಗೋಪಾಲನ್ ಅವರು ಭಾರತದಲ್ಲಿ ಹಣಕಾಸು ವಲಯದ ಅಭಿವೃದ್ಧಿಗೆ ಗಮನಾರ್ಹವಾಗಿ ಕೊಡುಗೆ ನೀಡಿದ ಜ್ಞಾನವನ್ನು ಹೊಂದಿರುವ ಮತ್ತು ಸಾಧಿಸಿದ ವ್ಯಕ್ತಿಯಾಗಿದ್ದಾರೆ. ಅವರು ತನ್ನ ವೃತ್ತಿಜೀವನದಲ್ಲಿ ಹಲವಾರು ಗಮನಾರ್ಹ ಸ್ಥಾನಗಳನ್ನು ನಿರ್ವಹಿಸಿರುವ ಅನುಭವಿ ವ್ಯಕ್ತಿಯಾಗಿದ್ದಾರೆ. ಅವರು ಪ್ರಸ್ತುತ ಸಾರ್ವಜನಿಕ ಉದ್ಯಮಗಳ ಆಯ್ಕೆ ಮಂಡಳಿಯ (ಪಿಇಎಸ್ಬಿ) ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಇದು ಪ್ರಧಾನ ಮಂತ್ರಿಗಳ ನಿಯಂತ್ರಣದಡಿಯಲ್ಲಿ ಬರುತ್ತದೆ. ಪಿಇಎಸ್ಬಿ ಯಲ್ಲಿನ ತನ್ನ ಪಾತ್ರಕ್ಕೆ ಮೊದಲು, ಶ್ರೀ ಗೋಪಾಲನ್ ಅವರು ಜುಲೈ 2012 ರಲ್ಲಿ ನಿವೃತ್ತಿ ಆಗುವವರೆಗೆ ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಅವರ ಕಾಲಾವಧಿಯಲ್ಲಿ, ಅವರು G-20 ಸಭೆಗಳು, ಎಡಿಬಿ, ವರ್ಲ್ಡ್ ಬ್ಯಾಂಕ್ ಮತ್ತುಐಎಂಎಫ್ ಸಭೆಗಳು ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವನ್ನು ಪರಿಣಾಮಕಾರಿಯಾಗಿ ಪ್ರತಿನಿಧಿಸಿದರು. ಅವರು ಬಂಡವಾಳ ಮಾರುಕಟ್ಟೆಗಳ ಕಾರ್ಯನಿರ್ವಹಣೆಗೆ ಹಲವಾರು ಬದಲಾವಣೆಗಳನ್ನು ತಂದಿದ್ದಾರೆ ಮತ್ತು ಮೂಲಸೌಕರ್ಯದಲ್ಲಿ ಹೊಸ ಪಾಲಿಸಿ ಕ್ರಮಗಳನ್ನು ಪರಿಚಯಿಸಿದ್ದಾರೆ. ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಮೊದಲು, ಶ್ರೀ ಗೋಪಾಲನ್ ಅವರು ಬ್ಯಾಂಕಿಂಗ್, ಇನ್ಶೂರೆನ್ಸ್ ಮತ್ತು ಪಿಂಚಣಿ ಸುಧಾರಣೆಗಳನ್ನು ಮೇಲ್ವಿಚಾರಣೆ ಮಾಡಿದ ಹಣಕಾಸು ಸಚಿವಾಲಯದ ಹಣಕಾಸು ಇಲಾಖೆಯ ಕಾರ್ಯದರ್ಶಿಯ ಪಾತ್ರವನ್ನು ನಿರ್ವಹಿಸಿದ್ದರು. ಈ ಸ್ಥಾನದಲ್ಲಿ, ಅವರು ಪಾಲಿಸಿ ಮಾರ್ಗಸೂಚಿಗಳು, ಕಾನೂನು ಮತ್ತು ಇತರ ಆಡಳಿತಾತ್ಮಕ ಬದಲಾವಣೆಗಳ ಮೂಲಕ ಸಾರ್ವಜನಿಕ ವಲಯದ ಬ್ಯಾಂಕುಗಳು (ಪಿಎಸ್ಬಿ ಗಳು), ಇನ್ಶೂರೆನ್ಸ್ ಕಂಪನಿಗಳು ಮತ್ತು ಅಭಿವೃದ್ಧಿ ಹಣಕಾಸು ಸಂಸ್ಥೆಗಳನ್ನು (ಡಿಎಫ್ಐ ಗಳು) ಬೆಂಬಲಿಸಿದ್ದಾರೆ, ಅವುಗಳ ಕಾರ್ಯಕ್ಷಮತೆಯನ್ನು ಮೇಲ್ವಿಚಾರಣೆ ಮಾಡಿದ್ದಾರೆ ಮತ್ತು ಎನ್ಬಿಎಫ್ಸಿ ಗಳು, ಖಾಸಗಿ ಬ್ಯಾಂಕುಗಳು ಮತ್ತು ವಿದೇಶಿ ಬ್ಯಾಂಕುಗಳಿಗೆ ನೀತಿಗಳನ್ನು ರೂಪಿಸಿದ್ದಾರೆ. ಅವರು ಉದ್ಯಮ, ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳ ನಡುವೆ ಸಮನ್ವಯತೆ ನಿರ್ವಹಿಸಿದ್ದಾರೆ ಮತ್ತು ಟ್ರೇಡ್ ಸಮಾಲೋಚನೆಗಳಿಗಾಗಿ ಡಬ್ಲ್ಯೂಟಿಒ ನ ವಿವಿಧ ಸಚಿವಾಲಯ ಸಭೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಶ್ರೀ ಗೋಪಾಲನ್ ಅವರು ಬೋಸ್ಟನ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಉನ್ನತ ಪದವಿಯನ್ನು ಪಡೆದಿದ್ದಾರೆ ಮತ್ತು ಜಾನ್ ಎಫ್. ಕೆನಡಿ ಸ್ಕೂಲ್ ಆಫ್ ಗವರ್ನ್ಮೆಂಟ್, ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತ ಮತ್ತು ಮ್ಯಾನೇಜ್ಮೆಂಟ್ನಲ್ಲಿ ಉನ್ನತ ಪದವಿಯನ್ನು ಪಡೆದಿದ್ದಾರೆ.