ರೂಪಾ ಸಂಪತ್ ಕುಮಾರ್ ಅಕೌಂಟಿಂಗ್ ಪರಿವರ್ತನೆಗಳು, ಟ್ರೆಜರಿ ಮ್ಯಾನೇಜ್ಮೆಂಟ್, ಸಂಸ್ಥೆಯನ್ನು ಕಟ್ಟುವುದು, ಆಡಳಿತ ಮತ್ತು ಪಾಲುದಾರರ ತೊಡಗುವಿಕೆಯನ್ನು ನಿರ್ವಹಿಸುವಲ್ಲಿ ಪರಿಣತಿ ಹೊಂದಿರುವ ಅನುಭವಿ ಹಣಕಾಸು ವೃತ್ತಿಪರರಾಗಿದ್ದಾರೆ.
ರೂಪಾ ಅವರು ಚಾರ್ಟರ್ಡ್ ಅಕೌಂಟೆಂಟ್ ಆಗಿದ್ದು, ಭಾರತದಲ್ಲಿ 20 ವರ್ಷಗಳ ಅನುಭವವನ್ನು ಹೊಂದಿದ್ದಾರೆ ಮತ್ತು ಯು.ಎಸ್.ಎ ಯಲ್ಲಿ ಪ್ರಮಾಣೀಕೃತ ಪಬ್ಲಿಕ್ ಅಕೌಂಟೆಂಟ್ ಆಗಿದ್ದರು. ಈ ಮೊದಲು, ಅವರು ಹಿಂದುಜಾ ಹೌಸಿಂಗ್ ಫೈನಾನ್ಸ್ ಮತ್ತು ಹಿಂದುಜಾ ಲೇಲ್ಯಾಂಡ್ ಫೈನಾನ್ಸ್ ಲಿಮಿಟೆಡ್ನಲ್ಲಿ ಹಣಕಾಸಿನ ಮುಖ್ಯಸ್ಥರಾಗಿದ್ದರು, ಅಲ್ಲಿ ಅವರು ಹಣಕಾಸು ಮತ್ತು ಟ್ರಜರಿಯನ್ನು ನಿರ್ವಹಿಸಿದ್ದರು. ಅವರು ಪ್ರೈಸ್ ವಾಟರ್ಹೌಸ್ (ಪಿಡಬ್ಲ್ಯೂಸಿ) ಮತ್ತು ಐಸಿಐಸಿಐ ಬ್ಯಾಂಕಿನೊಂದಿಗೆ ಕೂಡ ಕೆಲಸ ಮಾಡಿದ್ದಾರೆ.